ಭಾರತದಲ್ಲಿ (India) ಅನೇಕ ಕಾರು (Car Company) ಉತ್ಪಾದನಾ ಕಂಪನಿಗಳಿವೆ. ಆದರೂ ದೇಶದಲ್ಲಿ ಹಲವಾರು ವಿದೇಶೀಯ ಕಂಪನಿಯಿಂದ ಬಿಡುಗಡೆಯಾದಂತಹ ಕಾರುಗಳೇ ಮಾರಾಟವಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 2 ಶತಕೋಟಿ ಡಾಲರ್ಗಿಂತಲೂ ಅಧಿಕ ನಷ್ಟ ಅನುಭವಿಸಿದ ಬಳಿಕ, ಅಮೇರಿಕ (America) ಮೂಲದ ಕಾರು ತಯಾರಿಕಾ ಕಂಪನಿ ಫೋರ್ಡ್ (Ford) ಭಾರತದಲ್ಲಿ ಕಳೆದ ವರ್ಷ ಸ್ಥಗಿತಗೊಂಡಿದೆ. ಈ ಕಂಪನಿ ಭಾರತದಲ್ಲಿ ಸ್ಥಗಿತಗೊಂಡ ವರದಿ ಬೆನ್ನಲ್ಲೇ ಕಂಪನಿಯ ಫೋರ್ಡ್ ಇಕೋಸ್ಪೋರ್ಟ್ ಕಾರೊಂದು ರಸ್ತೆ ಮೇಲೆ ಕಂಡು ಬಂದಿದೆ.
ಇದೀಗ ಫೋರ್ಡ್ ಕಂಪನಿಯ ಕಾರುಗಳ ಉತ್ಪಾದನೆ ಸದ್ಯಕ್ಕೆ ಭಾರತದಲ್ಲಿ ನಿಲ್ಲಿಸಲಾಗಿತ್ತು. ಆದರೆ ಸದ್ದಿಲ್ಲದೆ ಕಂಪನಿಯ ಕಾರು ರಸ್ತೆ ಮೇಲೆ ಕಂಡು ಬಂದಿದ್ದು, ಇದು ಫೋರ್ಡ್ ಇಕೋಸ್ಪೋರ್ಟ್ ಎಂಬ ಹೆಸರನ್ನು ಹೊಂದಿದೆ.
ಫೋರ್ಡ್ ಕಂಪನಿಯ ಕಾರು ಬಿಡುಗಡೆಯಾಗುತ್ತಾ?
ಭಾರತದಲ್ಲಿ ಕಾರುಗಳನ್ನು ತಯಾರಿಸುವುದನ್ನು ನಿಲ್ಲಿಸುವ ಮೊದಲು, ಫೋರ್ಡ್ ಕಂಪನಿ ಇಕೋಸ್ಪೋರ್ಟ್ಗಾಗಿ ಫೇಸ್ಲಿಫ್ಟ್ ಅನ್ನು ಪರಿಚಯಿಸಲು ಯೋಜಿಸಿತ್ತು. ಈಗ ಅದೇ ಯೋಜನೆಯಂತೆ ರಸ್ತೆಗಳಲ್ಲಿ ಟೆಸ್ಟ್ ಡ್ರೈವ್ ನಡೆಸಲಾದ ಫೋರ್ಡ್ ಕಂಪನಿಯ ಕಾಂಪ್ಯಾಕ್ಟ್ ಎಸ್ಯುವಿಯ ಫೇಸ್ಲಿಫ್ಟೆಡ್ ಆವೃತ್ತಿಯು ಬಿಡುಗಡೆಗೆ ಸಿದ್ಧವಾಗಿದೆ ಎಂದು ವರದಿಗಳು ಹೇಳುತ್ತಿವೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಇಂಡಿಗೋ ಬಂಪರ್ ಗಿಫ್ಟ್, ಟಿಕೆಟ್ ಬೆಲೆ ಜಸ್ಟ್ 2023 ರೂಪಾಯಿ ಮಾತ್ರ!
ಫೋರ್ಡ್ ಇಕೋಸ್ಪೋರ್ಟ್ ಕಾರಿನ ಚಿತ್ರವನ್ನು ಫೇಸ್ಬುಕ್ನಲ್ಲಿ ಫೋರ್ಡ್ ಇಕೋಸ್ಪೋರ್ಟ್ ಕ್ಲಬ್ ಇಂಡಿಯಾ ಹಂಚಿಕೊಂಡಿದೆ. ಒಂದು ವರ್ಷದ ಹಿಂದೆ ಕಾರಿನ ಬಗ್ಗame ವರದಿಗಳು ಬಂದಂತೆ ಇದೀಗ ಫೋಟೋಗಳು ಸದ್ಯ ವರದಿಗಳನ್ನು ನಿಜವಾಗಿಸಿದೆ.
ಕಾರಿನಲ್ಲಿ ಹೊಸತೇನಿದೆ?
ಹಿಂದಿನ ಮಾದರಿಗಿಂತ ಕೊಂಚ ಭಿನ್ನವಾಗಿರುವ ಫೋರ್ಡ್ ಇಕೋಸ್ಪೋರ್ಟ್ನ ಗ್ರಿಲ್ ಭಾಗ ಸಾಕಷ್ಟು ವಿಶಾಲವಾಗಿದೆ ಮತ್ತು ಮಧ್ಯದಲ್ಲಿ ಫೋರ್ಡ್ ಲೋಗೋದೊಂದಿಗೆ ಕಪ್ಪಾಗಿದೆ.
ಹೆಡ್ಲ್ಯಾಂಪ್ಗಳು ಉತ್ತಮವಾಗಿದ್ದು, ಫಾಗ್ ಲ್ಯಾಂಪ್ ಹೌಸಿಂಗ್ ಸಹ ಉತ್ತಮ ಫೀಚರ್ ಹೊಂದಿದೆ. ಹೊಸ ಫೀಚರ್ಗಳ ಜೊತೆ ಕೆಲವು ಹಳೆಯ ಫೀಚರ್ಗಳು ಸಹ ಕಾರಿನಲ್ಲಿ ಮಿಶ್ರಣವಾಗಿವೆ.
ಖಾಸಗಿ ಖರೀದಿದಾರರಿಗೆ ಮಾರಾಟವಾಗಿದೆಯೇ?
ಬಿಡುಗಡೆ ಮಾಡಿರುವ ಚಿತ್ರದಲ್ಲಿ ಈ ಕಾಂಪ್ಯಾಕ್ಟ್ SUV ರಿಜಿಸ್ಟರ್ ಬೋರ್ಡ್ ಅನ್ನು ಸಹ ಹೊಂದಿದೆ, ಹೀಗಾಗಿ ಇದನ್ನು ಅದಾಗ್ಲೇ ಖಾಸಗಿ ಖರೀದಿದಾರರಿಗೆ ಮಾರಾಟ ಮಾಡಲಾಗಿದೆ ಎಂದು ಕೆಲವರು ಊಹೆ ಮಾಡಿದ್ದಾರೆ.
ಫೋರ್ಡ್ ಇಕೋಸ್ಪೋರ್ಟ್ ಕಾರಿನ ವಿಶೇಷತೆಗಳು
ಭಾರತದಲ್ಲಿ ಫೋರ್ಡ್ ಕಂಪನಿ ಕಾರು ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿ ಅದಾಗ್ಲೇ ವರ್ಷಗಳು ಉರುಳಿವೆ. 2020ರ ವೇಳೆಗೆ 5 ಮಿಲಿಯನ್ ಕಾರು ಉತ್ಪಾದನಾ ಗುರಿ ಸಾಧಿಸಿ ಅಮೇರಿಕ ಚೀನಾ ಬಳಿಕ ಮೂರನೇ ಸ್ಥಾನಕ್ಕೆ ಏರುವ ನಿರೀಕ್ಷೆ ಹೊಂದಿದ್ದ ಭಾರತ ಕೋವಿಡ್ ಕಾರಣ ಕೇವಲ 3 ಮಿಲಿಯನ್ ಕಾರು ಉತ್ಪಾದನೆಗೆ ಸೀಮಿತವಾಯಿತು.
ಫೋರ್ಡ್ ಗುಜರಾತ್ ಹಾಗು ಚೆನ್ನೈನಲ್ಲಿರುವ ಉತ್ಪಾದನಾ ಘಟಕಗಳನ್ನು ಮುಚ್ಚಿದ್ದು, ಸುಮಾರು 4000 ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಫೋರ್ಡ್ ಭಾರತದಲ್ಲಿ ಸುಮಾರು 391 ಶೋರೂಮ್ ಮತ್ತು 170 ಡೀಲರ್ಗಳನ್ನು ಹೊಂದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ