Zerodha: ತವರು ದೇಶದಲ್ಲಿಯೇ ವಿದ್ಯಾಭ್ಯಾಸ ಮಾಡಿ, ಝೆರೋಧಾ ಸಹ-ಸಂಸ್ಥಾಪಕರ ಸಲಹೆ!

ನಿಖಿಲ್​ ಕಾಮತ್​

ನಿಖಿಲ್​ ಕಾಮತ್​

ವಿದೇಶಕ್ಕೆ ಹೋಗುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿರುವ ನಿಖಿಲ್‌, ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳನ್ನು ತಮ್ಮ ಟ್ವಿಟರ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

  • Trending Desk
  • 2-MIN READ
  • Last Updated :
  • Share this:

ವಿದೇಶಕ್ಕೆ (Foriegn) ಹೋಗಿ ಅಭ್ಯಾಸ ಮಾಡುವ ಭಾರತೀಯ ವಿದ್ಯಾರ್ಥಿಗಳ (Indian Students) ಸಂಖ್ಯೆ ಹೆಚ್ಚಳವಾಗಿದೆ. ಉನ್ನತ ಮಟ್ಟದ ಶಿಕ್ಷಣ (Education) ಸಲುವಾಗಿ, ಪ್ರತಿಷ್ಠೆಯ ಸಂಕೇತವಾಗಿ, ವಿದೇಶದಲ್ಲಿ ಓದಿದರೆ ಒಳ್ಳೆಯ ಸಂಬಳದ ವೇತನ (Salary Pacakge) ಸಿಗುತ್ತದೆ ಎಂಬ ದೃಷ್ಟಿಕೋನದಿಂದ ವಿದೇಶಕ್ಕೆ ಹೋಗುವವರ ಸಂಖ್ಯೆ ಪ್ರತಿವರ್ಷ ಏರಿಕೆ ಕಾಣುತ್ತಿದೆ. ಹೀಗೆ ಶಿಕ್ಷಣಕ್ಕಾಗಿ ಹೋಗುವ ಭಾರತೀಯ ವಿದ್ಯಾರ್ಥಿಗಳಿಗೆ, ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ (Zerodha co-founder Nikhil Kamat) ಒಂದು ಸಲಹೆ ನೀಡಿದ್ದಾರೆ.


ಭಾರತೀಯ ವಿದ್ಯಾರ್ಥಿಗಳಿಗೆ ನಿಖಿಲ್‌ ಕಾಮತ್‌ ಕಿವಿಮಾತು


ವಿದೇಶಕ್ಕೆ ಹೋಗುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿರುವ ನಿಖಿಲ್‌, ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳನ್ನು ತಮ್ಮ ಟ್ವಿಟರ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಹೀಗೆ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ಭಾರತೀಯ ವಿದ್ಯಾರ್ಥಿಗಳು ನಮ್ಮ ದೇಶದಲ್ಲಿ ಸ್ಥಾಪಿಸಲಾದ ಹೊಸ, ಸುಧಾರಿತ ವಿಶ್ವವಿದ್ಯಾಲಯಗಳನ್ನು ಒಮ್ಮೆ ಪರಿಶೀಲಿಸಿ ನೋಡಬೇಕು ಎಂದು ವಿದ್ಯಾರ್ಥಿಗಳಿಗೆ ತವರು ದೇಶದಲ್ಲಿಯೇ ವಿದ್ಯಾಭ್ಯಾಸ ಮಾಡಿ ಎಂಬ ಸಲಹೆ ನೀಡಿದ್ದಾರೆ.


ಹೀಗೆ ಹೇಳುವುದಕ್ಕೂ ಇದೇ ಕಾರಣ!


ಬಡ್ಡಿದರಗಳು ಹೆಚ್ಚುತ್ತಿವೆ, ಇದು ಮತ್ತಷ್ಟು ಆರ್ಥಿಕ ಹೊರೆಯನ್ನು ಸೃಷ್ಟಿಸುತ್ತದೆ. ಅಲ್ಲದೇ ವಿದೇಶದಲ್ಲಿ ಟೆಕ್‌ ವಲಯದಲ್ಲಿ ಉದ್ಯೋಗಿಗಳ ಸಾಮೂಹಿಕ ವಜಾಗೊಳಿಸುವಿಕೆ ಹೆಚ್ಚಾಗುತ್ತಿದೆ. ಈ ಎಲ್ಲಾ ಕಾರಣಗಳನ್ನು ಪರಿಗಣಿಸಿ ನೋಡುವುದಾದರೆ ವಿದೇಶಕ್ಕೆ ಹೋಗುವ ಬದಲು ಭಾರತದಲ್ಲಿಯೇ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮುಂದುವರೆಸಬಹುದು ಎಂದಿದ್ದಾರೆ.


"ಭಾರತದಲ್ಲಿ ಉನ್ನತ ಮಟ್ಟದ ವಿಶ್ವವಿದ್ಯಾಲಯಗಳಿವೆ"


ಭಾರತದಲ್ಲಿ ಉನ್ನತ ಮಟ್ಟದ ವಿಶ್ವವಿದ್ಯಾಲಯಗಳಿವೆ. ವಿದೇಶಕ್ಕೆ ಹೋಗಿ ಓದ ಬಯಸುವ ವಿದ್ಯಾರ್ಥಿಗಳು ಭಾರತದಲ್ಲಿ ಆರಂಭಗೊಂಡ ಹೊಸ ವಿಶ್ವವಿದ್ಯಾಲಯಗಳನ್ನು ಮರುಪರಿಶೀಲಿಸಬೇಕು, ಈ ವಿವಿಗಳು ಮಹತ್ತರವಾಗಿ ಸುಧಾರಿಸಿದೆ. ಮತ್ತು ಭಾರತದಲ್ಲಿಯೇ ಓದುವುದು ನಿಮಗೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ ಎಂದು ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಭಾರತೀಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.


ಅಂಕಿ-ಅಂಶಗಳ ವರದಿ ಹಂಚಿಕೊಂಡ ನಿಖಿಲ್!


ಟ್ವೀಟ್‌ನಲ್ಲಿ, ನಿಖಿಲ್‌ ಕಾಮತ್ ಇನ್‌ವೆಸ್ಟಿವೈಸ್ ಸಂಗ್ರಹಿಸಿದ ಇನ್ಫೋಗ್ರಾಫಿಕ್ ಅನ್ನು ಹಂಚಿಕೊಂಡಿದ್ದಾರೆ. 2018 ರಿಂದ 2022 ರವರೆಗೆ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ವಲಸೆ ಹೋದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 45% (44.87%) ಹೆಚ್ಚಾಗಿದೆ ಎಂದು ಅಂಕಿಅಂಶಗಳು ತೋರಿಸಿದೆ.


ಸರ್ಕಾರದ ಅಂಕಿಅಂಶಗಳನ್ನು ಉಲ್ಲೇಖಿಸಿರುವ ಇನ್ವೆಸ್ಟಿವೈಸ್ ಪ್ರಕಾರ, ಸುಮಾರು 7.5 ಲಕ್ಷ ಭಾರತೀಯ ವಿದ್ಯಾರ್ಥಿಗಳು ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ. 2021 ರಲ್ಲಿ ಕೊರೋನಾ ಕಾರಣ ಈ ಅಂಕಿಅಂಶದಲ್ಲಿ ಇಳಿಕೆ ಕಂಡುಬಂದಿತ್ತು. ಅದನ್ನು ಹೊರತುಪಡಿಸಿದರೆ ಎಲ್ಲಾ ವರ್ಷಗಳಲ್ಲಿ ವಿದೇಶಕ್ಕೆ ಹೋಗುವ ಭಾರತೀಯರ ಸಂಖ್ಯೆ ಹೆಚ್ಚಿದೆ ಎಂದು ಅಂಕಿಅಂಶ ತೋರಿಸಿದೆ.


ಇದನ್ನೂ ಓದಿ: South Mumbai ನಲ್ಲಿ ಬಹುಕೋಟಿ ಮನೆಗಳನ್ನು ಹೊಂದಿರುವ 5 ಭಾರತೀಯ ಬಿಲಿಯನೇರ್‌ಗಳಿವ್ರು!


ವಿದ್ಯಾರ್ಥಿ ವೀಸಾದಲ್ಲಿ ವಿದೇಶಕ್ಕೆ ಪ್ರಯಾಣಿಸುವ ವಿದ್ಯಾರ್ಥಿಗಳ ಸಂಖ್ಯೆಯು ಏರಿಕೆಯಾಗಿದ್ದು, 2022 ರಲ್ಲಿ ಸುಮಾರು 6.5 ಲಕ್ಷ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಇತರ ದೇಶಗಳಿಗೆ ಪ್ರಯಾಣಿಸಿದ್ದಾರೆ ಎಂಬುದು ತಿಳಿದುಬಂದಿದೆ. ಈ ಪ್ರಮಾಣವು ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ದಾಖಲಾಗಿರುವ ಸಂಖ್ಯೆಯನ್ನು ಮೀರಿದೆ ಎಂದು ಬ್ಯೂರೋ ಆಫ್ ಇಮಿಗ್ರೇಷನ್ (BoI) ಈ ಹಿಂದೆ ವರದಿ ಮಾಡಿತ್ತು.


ಯುಎಸ್‌ಗೆ ಹೋಗುವವ ಸಂಖ್ಯೆ ಹೆಚ್ಚಳ


ಜೊತೆಗೆ ಇನ್ವೆಸ್ಟಿವೈಸ್ ವರದಿಯು 2022 ರಲ್ಲಿ ಭಾರತೀಯ ವಿದ್ಯಾರ್ಥಿಗಳು ಹೆಚ್ಚಾಗಿ ಯುನೈಟೆಡ್ ಸ್ಟೇಟ್ಸ್ (190, 512) ಗೆ ವಿದ್ಯಾಭ್ಯಾಸಕ್ಕೆ ತೆರಳಿದ್ದಾರೆ. ಇದು ಅತ್ಯಂತ ಜನಪ್ರಿಯ ತಾಣವಾಗಿ ಹೊರಹೊಮ್ಮಿದೆ, ನಂತರ ಉತ್ತರ ನೆರೆಯ ಕೆನಡಾ (185,955). ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆ ಎಂದು ತಿಳಿಸಿದೆ.



ಭಾರತ ಸರ್ಕಾರ ಕೂಡ ವಿದ್ಯಾರ್ಥಿಗಳಿಗೆ ಕೈಗೆಟಕುವ ವೆಚ್ಚದಲ್ಲಿ ವಿದೇಶಿ ಅರ್ಹತೆಗಳನ್ನು ನೀಡಲು ಮತ್ತು ಭಾರತವನ್ನು ಜಾಗತಿಕ ಅಧ್ಯಯನ ತಾಣವನ್ನಾಗಿ ಮಾಡಲು ಯೋಜನೆಗಳನ್ನು ರೂಪಿಸಿಕೊಂಡಿದೆ. ಕೆಲವು ವಿದೇಶಿ ವಿಶ್ವವಿದ್ಯಾಲಯಗಳು ಈಗಾಗ್ಲೇ ಭಾರತೀಯ ವಿವಿಗಳ ಜೊತೆ ಸಹಭಾಗಿತ್ವ ಹೊಂದಿವೆ ಎನ್ನಲಾಗಿದೆ.

Published by:ವಾಸುದೇವ್ ಎಂ
First published: