Retire Rich: ನಿವೃತ್ತಿ ಆದಾಗ ನಿಮ್ಮ ಬಳಿ ಕೋಟಿ ಹಣ ಇರ್ಬೇಕು ಅಂದ್ರೆ ಈ ರೀತಿ ಉಳಿಸಬೇಕು, ಫುಲ್ ಪ್ಲಾನ್ ಇದೆ ನೋಡಿ

Tips to get crores when you retire: ‘ತಲೆಯಲ್ಲಿ ಬಿಳಿ ಕೂದಲು ಹೊಳೆಯುವಾಗ ಜೇಬಿನಲ್ಲಿ ಬಂಗಾರದ ನಾಣ್ಯಗಳು ಝುಣಗುಡಬೇಕು’ ಎಂಬ ಮಾತಿನಂತೆ ಇಳಿ ವಯಸ್ಸು ಪ್ರಾರಂಭವಾಗುವಾಗ ನಿಮ್ಮ ಕೈಯಲ್ಲಿ ಹಣವಿರಬೇಕು. ಆದ ಕಾರಣ ಮೊದಲ ಸಂಬಳ ಪಡೆಯುವ ದಿನದಿಂದಲೇ ನಿವೃತ್ತಿ ಬದುಕಿಗೆಂದು ಒಂದಿಷ್ಟು ಹಣವನ್ನು ಉಳಿತಾಯ ಅಥವಾ ಹೂಡಿಕೆ ಮಾಡಿ ಸರಿಯಾಗಿ ಪ್ಲಾನ್ ಮಾಡಿದ್ರೆ ರಿಟೈರ್ ಆಗುವಾಗ ನಿಮ್ಮ ಬಳಿ ಕೋಟಿಗಟ್ಟಲೆ ಹಣ ಇರುತ್ತದೆ. ಹೇಗೆ ಮಾಡೋದು? ಇಲ್ಲಿದೆ ವಿವರ...

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    Best Retirement Plan: ಅರವತ್ತರ ನಂತರ ನಿವೃತ್ತಿ ಜೀವನ ಆರಂಭ. ನಮ್ಮ ವೃತ್ತಿ ಜೀವನದಲ್ಲಿ ನಿವೃತ್ತಿ ಹೊಂದುವುದು ಅಂದ್ರೆ ಅದು ಜೀವನದ ಸಂಧ್ಯಾಕಾಲದ ಆರಂಭ ಎಂದೇ ಹೇಳಬಹುದು. ವೃತ್ತಿ ಜೀವನ (Employment) ಕೊನೆಗೊಳ್ಳುವುದರೊಂದಿಗೆ ನಿಯಮಿತ ಆದಾಯದ ಮೂಲಗಳು ಸಹ ಬತ್ತಿ ಹೋಗಿರುತ್ತವೆ. ಜೊತೆಜೊತೆಗೆ ಆರೋಗ್ಯವು (Health) ಕೂಡ ಕ್ಷೀಣಿಸುತ್ತಾ ಹೋಗುತ್ತದೆ. ಅಲ್ಲದೆ ವ್ಯಕ್ತಿಗೆ ನಿವೃತ್ತಿಯ ನಂತರ ಸಂಬಳ (Salary) ಬರುವುದಿಲ್ಲ. ಈ ಹಿನ್ನೆಲೆ ಅವರಿಗೆ ಪಿಂಚಣಿ ಇದ್ದರೆ ಅದೇ ಆದಾಯ. ಅಥವಾ ಪಿಎಫ್‌ ಹಣ ಉಳಿಸಿಕೊಂಡಿದ್ದರೆ ಅದೇ ಅವರಿಗೆ ವಯಸ್ಸಾದ ಬಳಿಕ ಅವರು ಖರ್ಚು ಮಾಡಬಹುದಾದ ಹಣ. ಹೀಗಾಗಿ ನಿವೃತ್ತಿ ಬಳಿಕ ನಿಮ್ಮ ಜೀವನ ಉತ್ತಮವಾಗಿರಬೇಕೆಂದರೆ ಬ್ಯಾಂಕ್ ಬ್ಯಾಲೆನ್ಸ್ (Bank Balance) ಚೆನ್ನಾಗಿರುವುದು ಅಗತ್ಯ. ‘ತಲೆಯಲ್ಲಿ ಬಿಳಿ ಕೂದಲು ಹೊಳೆಯುವಾಗ ಜೇಬಿನಲ್ಲಿ ಬಂಗಾರದ ನಾಣ್ಯಗಳು ಝುಣಗುಡಬೇಕು’ ಎಂಬ ಮಾತಿನಂತೆ ಇಳಿ ವಯಸ್ಸು ಪ್ರಾರಂಭವಾಗುವಾಗ ನಿಮ್ಮ ಕೈಯಲ್ಲಿ ಹಣವಿರಬೇಕು (Lots of Money). ಆದ ಕಾರಣ ಮೊದಲ ಸಂಬಳ ಪಡೆಯುವ ದಿನದಿಂದಲೇ ನಿವೃತ್ತಿ ಬದುಕಿಗೆಂದು ಒಂದಿಷ್ಟು ಹಣವನ್ನು ಉಳಿತಾಯ ಅಥವಾ ಹೂಡಿಕೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡರೆ ವೃದ್ಧಾಪ್ಯದಲ್ಲಿ ಯಾರಿಗೂ ಹೊರೆಯಾಗದೆ ಆರ್ಥಿಕ ಸ್ವಾವಲಂಬನೆಯ ಜೀವನ ನಡೆಸಬಹುದು.

    ಉಳಿತಾಯ ಯೋಜನೆ ಬೇಗ ಶುರುಮಾಡಿ

    ನಿವೃತ್ತಿಗೂ ಮೊದಲು ನಾವು ಎಷ್ಟು ಬೇಗ ಉಳಿತಾಯವನ್ನು ಮಾಡುತ್ತೇವೋ ಅಷ್ಟು ಹಣ ನಮಗೆ ಉಳಿತಾಯವಾಗುತ್ತದೆ. ಹೀಗಾಗಿ ನೀವು ನಿಮ್ಮ ನಿವೃತ್ತಿ ವೇಳೆಗೆ 1ಕೋಟಿ ಅಥವಾ 2 ಕೋಟಿ ಹಣ ವನ್ನು ನಮ್ಮ ನಿವೃತ್ತಿಯ ವೇಳೆಗೆ ಪಡೆಯಬೇಕು ಎಂದುಕೊಂಡಿದ್ದರೆ, ಶೇ.5ರಷ್ಟು ಹಣದುಬ್ಬರದ ನಡುವೆಯೂ 20ರಿಂದ 25 ವರ್ಷಗಳ ಅವಧಿಯಲ್ಲಿ 30ರಿಂದ 38 ಲಕ್ಷ ಹಣವನ್ನು ಹೂಡಿಕೆ ಮಾಡಿದ್ರೆ ನಿವೃತ್ತಿ ವೇಳೆಗೆ 1ಕೋಟಿ ಅಥವಾ 2 ಕೋಟಿ ಹಣವನ್ನು ಸಂಪಾದನೆ ಮಾಡಬಹುದಾಗಿದೆ.

    ಸಣ್ಣ ವಯಸ್ಸಲ್ಲಿ ಆರಂಭಿಸಿ

    ಇನ್ನು 20, 25 ಅಥವಾ 30 ವರ್ಷಗಳ ನಂತರ 12 ಶೇಕಡಾ ಬೆಳವಣಿಗೆಯ ದರದಲ್ಲಿ 5 ಕೋಟಿ ರೂಪಾಯಿ ಹಣವನ್ನು ನಿವೃತ್ತಿ ವೇಳೆಗೆ ಪಡೆಯಲು ಎಷ್ಟು ಹೂಡಿಕೆ ಮಾಡಬೇಕು ಅನ್ನೋದನ್ನ ನಾವು ನೋಡೋದಾದ್ರೆ..

    1) 20 ವರ್ಷಗಳ ನಂತರ ನಾವು 5 ಕೋಟಿ ಹಣ ಸಂಪಾದನೆ ಮಾಡಬೇಕು ಅಂದ್ರೆ ಮಾಸಿಕವಾಗಿ 50,000 ರೂ ಹಣ ಉಳಿತಾಯ ಮಾಡುವ ಅಗತ್ಯವಿದೆ..

    2) ಇನ್ನು 25 ವರ್ಷಗಳ ನಂತರ 5 ಕೋಟಿ ರೂ ಉಳಿತಾಯ ಮಾಡಲು ಮಾಸಿಕವಾಗಿ 26,500 ರೂ ಉಳಿಸಬೇಕಿದೆ.

    ಇದನ್ನೂ ಓದಿ: Post Office Savings: ಪೋಸ್ಟ್ ಆಫೀಸಿನ ಈ ಯೋಜನೆಗಳಲ್ಲಿ ಹಣ ಹೂಡಿದ್ರೆ ಕೆಲವೇ ವರ್ಷಗಳಲ್ಲಿ ಡಬಲ್ ಹಣ ವಾಪಸ್ ಗ್ಯಾರಂಟಿ!

    3) 30 ವರ್ಷಗಳ ನಂತರ 5 ಕೋಟಿ ರೂ ಉಳಿತಾಯ ಅಗತ್ಯವಿದ್ರೆ ಮಾಸಿಕವಾಗಿ 14,250ರೂ ಹಣ ಉಳಿಸ ಬೇಕಿದೆ.

    4) ಇನ್ನು ಮಾಸಿಕ ರೂ 14250, ರೂ 26500, ರೂ 50,000 ಉಳಿತಾಯ ಮಾಡುವ ಮೂಲಕ, 20, 25 ಮತ್ತು 30 ವರ್ಷಗಳಲ್ಲಿ ಸುಮಾರು 5 ಕೋಟಿ ರೂಪಾಯಿಗಳನ್ನು ಸಂಗ್ರಹಿಸಬಹುದಾಗಿದೆ.

    SIP ಮಾಸಿಕ ಹೂಡಿಕೆ ಯೋಜನೆ

    ಇನ್ನು ನಿವೃತ್ತಿ ವೇಳೆಗೆ ಉತ್ತಮ ಲಾಭ ಪಡೆಯಬೇಕು ಎಂಬ ನಿರೀಕ್ಷೆ ಇದ್ದವರು ನೀವು ಈಕ್ವಿಟಿ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ ಆರಂಭಿಸಬಹುದು ಮತ್ತು ನಿವೃತ್ತಿಗೆ ನಿಯಮಿತವಾಗಿ ಉಳಿತಾಯ ಮಾಡಬಹುದು.ಇನ್ನು ಸಿಪ್‌ ಅಥವಾ ವ್ಯವಸ್ಥಿತ ಹೂಡಿಕೆ ಯೋಜನೆಯು ಹೂಡಿಕೆದಾರರಿಗೆ, ಮ್ಯೂಚುವಲ್‌ ಫಂಡ್‌ಗಳಲ್ಲಿ ನಿಯಮಿತವಾಗಿ ಹೂಡಿಕೆ ಮಾಡುವ ಮೂಲಕ ದೀರ್ಘಾವಧಿಗೆ ಉತ್ತಮ ಸಂಪತ್ತನ್ನು ಪಡೆಯಲು ಸಹಾಯಕವಾಗುತ್ತದೆ.

    ಇದನ್ನೂ ಓದಿ: Post Office Savings: ದಿನಕ್ಕೆ 100 ರೂ ಉಳಿಸಿ, 5 ವರ್ಷಗಳಲ್ಲಿ 20 ಲಕ್ಷ ಪಡೆಯಿರಿ; ಪೋಸ್ಟ್ ಆಫೀಸಿನ ಈ ಯೋಜನೆ ಬಗ್ಗೆ ಗೊತ್ತಾ?

    ದೀರ್ಘಕಾಲೀನ ಹಣಕಾಸು ಗುರಿಗಳನ್ನು ಈಡೇರಿಸಲು ಇದು ಸಹಕಾರಿಯಾಗಿದೆ.. ಇನ್ನು ಸಿಪ್‌ನಿಂದ ನಿಮ್ಮ ಹೂಡಿಕೆಯ ಖರೀದಿಯ ಸರಾಸರಿ ವೆಚ್ಚ ತಗ್ಗುತ್ತದೆ. ಗರಿಷ್ಠ ಪ್ರತಿಫಲ ಪಡೆಯಲು ನೆರವಾಗುತ್ತದೆ. ಮಾರುಕಟ್ಟೆ ಪರಿಸ್ಥಿತಿಯನ್ನು ಲೆಕ್ಕಿಸದೆ ನಿಯಮಿತವಾಗಿ ಮ್ಯೂಚುವಲ್‌ ಫಂಡ್‌ ಯುನಿಟ್‌ಗಳನ್ನು ಕೊಳ್ಳುವಾಗ, ಮಾರುಕಟ್ಟೆ ಸೂಚ್ಯಂಕ ಇಳಿದಿದ್ದಾಗ ಹೆಚ್ಚು ಯುನಿಟ್‌ಗಳು ನಿಮ್ಮದಾಗುತ್ತದೆ. ಹೀಗಾಗಿ ನಿವೃತ್ತಿ ವೇಳೆಗೆ, 2 ರಿಂದ 5ಕೋಟಿ ಹಣ ಸಂಪಾದನೆ ಮಾಡಬೇಕು ಅಂದರೆ, ನಮ್ಮ ಉಳಿತಾಯ ಈಗಿನಿಂದಲೇ ಪ್ರಾರಂಭವಾಗಬೇಕು.

    (ವರದಿ- ವಾಸುದೇವ್. ಎಂ)
    Published by:Soumya KN
    First published: