Money Deposite: ವರ್ಷಕ್ಕೆ 20 ಲಕ್ಷಕ್ಕಿಂತ ಹೆಚ್ಚಿನ ಹಣ ಡೆಪಾಸಿಟ್ ಮಾಡ್ಬೇಕಾ? ಹಾಗಿದ್ರೆ ಈ ನಿಯಮಗಳು ಗಮನದಲ್ಲಿರಲಿ

ನಗದು ಠೇವಣಿ ಮಾಡುವಾಗ ವ್ಯಕ್ತಿಗಳು ಪ್ಯಾನ್ ವಿವರಗಳನ್ನು ಒದಗಿಸುವ ಮೊದಲು ದಿನಕ್ಕೆ ರೂ. 50,000 ಮಿತಿಯನ್ನು ಹೊಂದಿದ್ದರೂ, ಆದಾಯ ತೆರಿಗೆ ಇಲಾಖೆಯು ವಾರ್ಷಿಕ ಮಿತಿಯನ್ನು ನಿಗದಿಪಡಿಸಲಿಲ್ಲ. ಆದರೆ ಹೊಸ ನಿಯಮಗಳ ಅಡಿಯಲ್ಲಿ ಏನೇನಿದೆ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸರ್ಕಾರವು (Government) ಅಕ್ರಮ ಮತ್ತು ಲೆಕ್ಕಕ್ಕೆ ಇರದ ನಗದು ವಹಿವಾಟುಗಳಿಗೆ ಕಡಿವಾಣ ಹಾಕಲು ವರ್ಷದ ಆರಂಭದಲ್ಲಿ ನಗದು ಮಿತಿ, ನಿಯಮಗಳನ್ನು ತಿದ್ದುಪಡಿ ಮಾಡಿತ್ತು. ನಿಗದಿತ ಮಿತಿಗಿಂತ ಹೆಚ್ಚಿನ ಹಣವನ್ನು (Money) ಪಾವತಿಸುವುದು ಅಥವಾ ಸ್ವೀಕರಿಸುವುದು, ಪಾವತಿಸಿದ ಅಥವಾ ಸ್ವೀಕರಿಸಿದ ಮೊತ್ತದ ಶೇಕಡಾ 100 ರಷ್ಟು ಶಿಕ್ಷಾರ್ಹ ದಂಡವಾಗಿದೆ (Penalty) ಎಂದು ತಿಳಿಸಿತ್ತು. ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ನಿಗದಿಪಡಿಸಿದ ಹೊಸ ನಿಯಮಗಳು ಮತ್ತು ನಿಬಂಧನೆಗಳ ಅಡಿಯಲ್ಲಿ, ವರ್ಷಕ್ಕೆ ರೂ. 20 ಲಕ್ಷಕ್ಕಿಂತ ಹೆಚ್ಚು ಠೇವಣಿ ಮಾಡಲು ಬಯಸುವ ವ್ಯಕ್ತಿಗಳು ಈಗ ತಮ್ಮ ಪ್ಯಾನ್ ಕಾರ್ಡ್‌ನ (Pan card)  ವಿವರಗಳು ಮತ್ತು ಅವರ ಆಧಾರ್ ಕಾರ್ಡ್ ಅನ್ನು (Aadhaar Card) ಕಡ್ಡಾಯವಾಗಿ ನೀಡಬೇಕಾಗಿದೆ.

ಪ್ಯಾನ್ ವಿವರ ಮತ್ತು ಆಧಾರ್ ನಿಯಮ ವಿವರ ಕಡ್ಡಾಯ
ನಗದು ಠೇವಣಿ ಮಾಡುವಾಗ ವ್ಯಕ್ತಿಗಳು ಪ್ಯಾನ್ ವಿವರಗಳನ್ನು ಒದಗಿಸುವ ಮೊದಲು ದಿನಕ್ಕೆ ರೂ. 50,000 ಮಿತಿಯನ್ನು ಹೊಂದಿದ್ದರೂ, ಆದಾಯ ತೆರಿಗೆ ಇಲಾಖೆಯು ವಾರ್ಷಿಕ ಮಿತಿಯನ್ನು ನಿಗದಿಪಡಿಸಲಿಲ್ಲ. ಆದರೆ ಹೊಸ ನಿಯಮಗಳ ಅಡಿಯಲ್ಲಿ, ಒಂದೇ ಅಥವಾ ಬಹು ಬ್ಯಾಂಕ್‌ಗಳಲ್ಲಿ ಒಂದೇ ವರ್ಷದಲ್ಲಿ ದೊಡ್ಡ ಮೊತ್ತದ ಹಣವನ್ನು ಹಿಂಪಡೆಯುವಿಕೆ ಮತ್ತು ಠೇವಣಿಗಳನ್ನು ಟ್ರ್ಯಾಕ್ ಮಾಡಬಹುದಾದ ವಿವರಗಳನ್ನು ರಚಿಸಲು ಪ್ಯಾನ್ ಮತ್ತು ಆಧಾರ್ ವಿವರಗಳನ್ನು ನೀಡಬೇಕಿರುವ ನಿಯಮವನ್ನು ಠೇವಣಿದಾರರು ಅನುಸರಿಸಬೇಕಾಗುತ್ತದೆ.

“ಪ್ರತಿಯೊಬ್ಬ ವ್ಯಕ್ತಿಯು, ನಿರ್ದಿಷ್ಟಪಡಿಸಿದ ವಹಿವಾಟು ನಡೆಸುವ ಸಮಯದಲ್ಲಿ, ಅಂತಹ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಮತ್ತು ನಿರ್ದಿಷ್ಟಪಡಿಸಿದ ಪ್ರತಿಯೊಬ್ಬ ವ್ಯಕ್ತಿಯು ಸಂದರ್ಭಾನುಸಾರವಾಗಿ ತನ್ನ ಪ್ಯಾನ್‌ ಕಾರ್ಡ್‌ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ನೀಡಬೇಕು. ಅಂತಹ ದಾಖಲೆಯನ್ನು ಸ್ವೀಕರಿಸುವವರು ಆ ಸಂಖ್ಯೆಯು ಸರಿಯಾಗಿ ನಮೂದಾಗಿದೆ ಮತ್ತು ಅದನ್ನು ಸೂಕ್ತವಾಗಿ ದೃಢೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು ”ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು ಮೇ 10 ರ ತನ್ನ ನೋಟೀಸ್‌ನಲ್ಲಿ ತಿಳಿಸಿದೆ.

ಹಣದ ಅಪರಾಧಗಳ ಅಪಾಯವನ್ನು ಕಡಿಮೆ ಮಾಡಲು ಈ ಯೋಜನೆ 
ಪ್ಯಾನ್ ಕಾರ್ಡ್‌ ಹೊಂದಿರದ ವ್ಯಕ್ತಿಗಳು ದಿನಕ್ಕೆ ರೂ. 50,000 ಕ್ಕಿಂತ ಹೆಚ್ಚಿನ ಅಥವಾ ಆರ್ಥಿಕ ವರ್ಷದಲ್ಲಿ ರೂ. 20 ಲಕ್ಷಕ್ಕಿಂತ ಹೆಚ್ಚಿನ ಯಾವುದೇ ವಹಿವಾಟನ್ನು ನಮೂದಿಸುವ ಮೊದಲು ಕನಿಷ್ಠ ಏಳು ದಿನಗಳ ಮೊದಲು ಪ್ಯಾನ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಆದಾಯ ತೆರಿಗೆ ಇಲಾಖೆಯು ಇತರ ಕೇಂದ್ರ ಸರ್ಕಾರದ ಇಲಾಖೆಗಳೊಂದಿಗೆ ಕಳೆದ ಕೆಲವು ವರ್ಷಗಳಿಂದ ಹಣಕಾಸಿನ ವಂಚನೆ, ಅಕ್ರಮ ಹಣದ ವಹಿವಾಟು ಮತ್ತು ಇತರ ಹಣದ ಅಪರಾಧಗಳ ಅಪಾಯವನ್ನು ಕಡಿಮೆ ಮಾಡಲು ನಿಯಮಗಳನ್ನು ನವೀಕರಿಸುತ್ತಿದೆ ಮತ್ತು ತಿದ್ದುಪಡಿ ಮಾಡುತ್ತಿದೆ.

ಇದನ್ನೂ ಓದಿ:  Two Wheeler Loan: ಬೈಕ್​ ಲೋನ್​ ತಗೋಬೇಕು ಅಂತ ಇದ್ದೀರಾ? ಈ 20 ಬ್ಯಾಂಕ್​ಗಳಲ್ಲಿ ಕಡಿಮೆ ಬಡ್ಡಿ ಇದೆ ನೋಡಿ!

ಹೆಚ್ಚಿನ ಮೌಲ್ಯದ ವಹಿವಾಟುಗಳಲ್ಲಿ ನಗದು ಬಳಕೆಯನ್ನು ನಿರ್ಬಂಧಿಸಲು ರೂ. 2 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ನಗದು ಸ್ವೀಕರಿಸುವುದನ್ನು ಸರ್ಕಾರ ನಿಷೇಧಿಸಿದೆ. ಆದ್ದರಿಂದ, ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿ/ಹತ್ತಿರದ ಕುಟುಂಬದಿಂದಲೂ ಕೂಡ ರೂ. 2 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಸ್ವೀಕರಿಸಲು ಸಾಧ್ಯವಿಲ್ಲ.

ಗಂಭೀರ ಪರಿಣಾಮಗಳನ್ನು ಉಂಟುಮಾಡುವ ಕೆಲವು ನಗದು ವಹಿವಾಟುಗಳನ್ನು ನೋಡೋಣ:
ಕಪ್ಪುಹಣವನ್ನು ಎದುರಿಸಲು ಸರ್ಕಾರವು ನಗದು ವಹಿವಾಟಿನ ಮೇಲೆ ವಿವಿಧ ಮಿತಿಗಳನ್ನು ನಿಗದಿಪಡಿಸಿದೆ.

  • ಭಾರತದ ಆದಾಯ ತೆರಿಗೆ ಕಾನೂನುಗಳು ಯಾವುದೇ ಕಾರಣಕ್ಕೂ ರೂ. 2 ಲಕ್ಷಕ್ಕಿಂತ ಹೆಚ್ಚಿನ ನಗದು ವಹಿವಾಟುಗಳನ್ನು ನಿಷೇಧಿಸುತ್ತವೆ. ಉದಾಹರಣೆಗೆ, ನೀವು ಒಂದೇ ವಹಿವಾಟಿನಲ್ಲಿ ರೂ. 3 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಖರೀದಿಸಿದರೆ, ನೀವು ಚೆಕ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಬ್ಯಾಂಕ್ ವರ್ಗಾವಣೆ ಮೂಲಕ ಪಾವತಿ ಮಾಡಬೇಕು.

  • ನೀವು ಕುಟುಂಬದ ಯಾವುದೇ ಸದಸ್ಯರಿಂದ ಹಣವನ್ನು ಸ್ವೀಕರಿಸಿದರೂ ಕೂಡ ಈ ಮಾರ್ಗಸೂಚಿಗಳನ್ನು ಅನುಸರಿಸುವುದು ಕಡ್ಡಾಯ.

  • ಒಂದೇ ಸಂದರ್ಭದಲ್ಲಿ ಒಬ್ಬ ದಾನಿಯಿಂದ ರೂ. 2 ಲಕ್ಷಕ್ಕಿಂತ ಹೆಚ್ಚಿನ ನಗದು ಉಡುಗೊರೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಈ ನಿಯಮವನ್ನು ಉಲ್ಲಂಘಿಸಿ ರೂ. 2 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಸ್ವೀಕರಿಸುವವರು ಸ್ವೀಕರಿಸಿದ ಮೊತ್ತಕ್ಕೆ ಸಮಾನವಾದ ದಂಡವನ್ನು ಕಟ್ಟಬೇಕಾಗುತ್ತದೆ.

  • ಒಬ್ಬ ವ್ಯಕ್ತಿಯು ಹಣಕಾಸು ಸಂಸ್ಥೆ ಅಥವಾ ಸ್ನೇಹಿತರಿಂದ ನಗದು ಸಾಲವನ್ನು ತೆಗೆದುಕೊಂಡರೆ, ಒಟ್ಟು ಮೊತ್ತವು ರೂ. 20,000 ಮೀರುವಂತಿಲ್ಲ. ಅದೇ ನಿಯಮವು ಸಾಲ ಮರುಪಾವತಿಗೆ ಅನ್ವಯಿಸುತ್ತದೆ. ರೂ. 20,000 ಸಾಲದ ಮರುಪಾವತಿಯನ್ನು ಹಣಕಾಸು ಮಾರ್ಗದ ಮೂಲಕ ಮಾಡಬೇಕು.


ಇದನ್ನೂ ಓದಿ:  Money: ಕೇಂದ್ರ ಸರ್ಕಾರದಿಂದ ಅದ್ಭುತ ಅವಕಾಶ, ಉಚಿತವಾಗಿ 75 ಸಾವಿರ ಹಣ ನಿಮ್ಮದಾಗಿಸಿಕೊಳ್ಳಿ!

  • ಆಸ್ತಿ ವಹಿವಾಟಿನಲ್ಲಿ, ಅನುಮತಿಸಲಾದ ಗರಿಷ್ಠ ನಗದು ರೂ. 20,000 ಆಗಿದೆ. ಮಾರಾಟಗಾರನು ಮುಂಗಡವನ್ನು ಸ್ವೀಕರಿಸಿದರೂ ಸಹ ಮಿತಿಯು ಒಂದೇ ಆಗಿರುತ್ತದೆ.

  • ಸ್ವಯಂ ಉದ್ಯೋಗಿ ತೆರಿಗೆದಾರರ ವಿಷಯಕ್ಕೆ ಬಂದಾಗ, ಒಂದೇ ದಿನದಲ್ಲಿ ಒಬ್ಬ ವ್ಯಕ್ತಿಗೆ ನಗದು ರೂಪದಲ್ಲಿ ಪಾವತಿಸಿದರೆ ರೂ. 10,000 ಕ್ಕಿಂತ ಹೆಚ್ಚಿನ ವೆಚ್ಚವನ್ನು ಅವರು ಕ್ಲೈಮ್ ಮಾಡಲು ಸಾಧ್ಯವಿಲ್ಲ.

  • ನೀವು ತೆರಿಗೆ ಯೋಜನೆ ಮಾಡುವಾಗ ಆರೋಗ್ಯ ವಿಮೆಯನ್ನು ನಗದು ರೂಪದಲ್ಲಿ ಪಾವತಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ತೆರಿಗೆದಾರರು ತಮ್ಮ ವಿಮಾ ಪ್ರೀಮಿಯಂ ಅನ್ನು ನಗದು ರೂಪದಲ್ಲಿ ಪಾವತಿಸಿದರೆ, ಅವರು ಸೆಕ್ಷನ್ 80D ಕಡಿತದ ನಿಯಮಕ್ಕೆ ಅರ್ಹರಾಗಿರುವುದಿಲ್ಲ. ಇದನ್ನು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಮಾಡಬೇಕಾಗಿದೆ.

Published by:Ashwini Prabhu
First published: