Saving Money: ಏನೇ ಮಾಡಿದ್ರೂ ಹಣ ಸೇವ್​ ಮಾಡೋಕೆ ಆಗ್ತಲ್ವಾ? ಇದನ್ನು ಟ್ರೈ ಮಾಡಿ, ಆಮೇಲೆ ಮ್ಯಾಜಿಕ್​ ನೋಡಿ!

ಹಣ ಸುಲಭವಾಗಿ ನಿರ್ವಹಿಸುವವರು ಈ ಕಾಲದಲ್ಲಿ ಸ್ಮಾರ್ಟ್‌ ಜನರು ಎಂದು ಕರೆಸಿಕೊಳ್ಳುತ್ತಾರೆ. ನಿಮ್ಮ ಇಚ್ಛೆಗಳು ಮತ್ತು ಜೀವನಶೈಲಿಯಲ್ಲಿ ರಾಜಿ ಮಾಡಿಕೊಳ್ಳದೆಯೇ ನಿಮ್ಮ ಜೀವನವನ್ನು ಬಜೆಟ್‌ಗೆ ಅನುಗುಣವಾಗಿ ನಿರ್ವಹಿಸಲು ಇಲ್ಲಿವೆ 5 ಸಲಹೆಗಳು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಾವೆಲ್ಲರೂ ಹೆಚ್ಚು ಹೆಚ್ಚು ಹಣವನ್ನು (Money) ಸಂಪಾದಿಸಲು ಬಯಸುತ್ತೇವೆ ಮತ್ತು ಅದಕ್ಕಾಗಿಯೇ ನಮ್ಮಲ್ಲಿ ಅನೇಕರು ಹಗಲು ರಾತ್ರಿ ಶ್ರಮಿಸುತ್ತೇವೆ. ಉತ್ತಮ ಜೀವನಶೈಲಿಯನ್ನು (Good Lifestyle) ನಡೆಸಲು, ಹೆಚ್ಚಿನ ಹಣದ ಅಗತ್ಯವಿದೆ. ಅನೇಕ ಜನರು ಬಹಳಷ್ಟು ಹಣವನ್ನು ಸಂಪಾದಿಸುತ್ತಾರೆ. ಆದರೆ ಎಷ್ಟು ಹಣವನ್ನು ಸಂಪಾದನೆ (Earning) ಮಾಡುತ್ತಾರೋ ಅದಕ್ಕಿಂತ ಹೆಚ್ಚಿನ ಹಣವನ್ನು ಖರ್ಚು (Spend) ಮಾಡುವವರೇ ಇಂದಿನ ಕಾಲದಲ್ಲಿ ಹೆಚ್ಚಿದ್ದಾರೆ. ನಾವು ಹೇಗೆ ಹಣ ಉಳಿತಾಯ (Money Saving) ಮಾಡಿ, ನಮ್ಮ ಬಜೆಟ್‌ಗೆ (Budget) ಅನುಗುಣವಾಗಿ ಖರ್ಚು ಮಾಡಬೇಕು? ಎಂಬುದಕ್ಕೆ ನಾವಿಲ್ಲಿ ಕೆಲವು ಸಲಹೆಗಳನ್ನು ನಿಮಗಾಗಿ ನೀಡುತ್ತಿದ್ದೇವೆ.

ಈಗ ಪ್ರಚಲಿತವಾಗಿರುವ ಒಂದು ಮಾತೆಂದರೆ ಅದು ನಗರದಲ್ಲಿ ವಾಸ ಮಾಡುತ್ತಿರುವ ಯುವಕರಿಗೆ ʼನಗರದಲ್ಲಿರುವ ಬಡವರುʼ ಅಂದರೆ ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡುವವರು ಎಂಬ ಮಾತನ್ನು ಈಗ ಎಲ್ಲೆಡೆ ಕೇಳುತ್ತಲೇ ಇರುತ್ತೆವೆ. ನಮ್ಮ ಬಜೆಟ್‌ ಎಷ್ಟಿದೆಯೋ ಅಷ್ಟರಲ್ಲಿ ಜೀವನ ನಡೆಸುವುದು ಕಷ್ಟವೇ? ಇದಕ್ಕೆ ಉತ್ತರ ಇಲ್ಲ. ಏಕೆಂದರೆ ನಮ್ಮ ಬಜೆಟ್‌ನಲ್ಲಿ ತಿಂಗಳ ಖರ್ಚನ್ನು ಸುಲಭವಾಗಿ ನಿರ್ವಹಿಸಬಹುದು. ಅದಕ್ಕೆ ನೀವು ಮಾಡಬೇಕಿರುವುದು ನಿಮ್ಮ ಆದಾಯ ಮತ್ತು ವೆಚ್ಚಗಳನ್ನು ಒಂದು ಕಡೆ ಲೆಕ್ಕ ಹಾಕಿ, ಖರ್ಚು ತೂಗಿಸುವುದು ಒಂದು ಕಲೆ.

ಇದನ್ನು ಸುಲಭವಾಗಿ ನಿರ್ವಹಿಸುವವರು ಈ ಕಾಲದಲ್ಲಿ ಸ್ಮಾರ್ಟ್‌ ಜನರು ಎಂದು ಕರೆಸಿಕೊಳ್ಳುತ್ತಾರೆ. ನಿಮ್ಮ ಇಚ್ಛೆಗಳು ಮತ್ತು ಜೀವನಶೈಲಿಯಲ್ಲಿ ರಾಜಿ ಮಾಡಿಕೊಳ್ಳದೆಯೇ ನಿಮ್ಮ ಜೀವನವನ್ನು ಬಜೆಟ್‌ಗೆ ಅನುಗುಣವಾಗಿ ನಿರ್ವಹಿಸಲು ಇಲ್ಲಿವೆ 5 ಸಲಹೆಗಳು.

ಬಜೆಟ್‌ಗೆ ಅನುಗುಣವಾಗಿ ಬುದ್ದಿವಂತಿಕೆಯಿಂದ ಹಣ ನಿರ್ವಹಣೆಗೆ 5 ಸಲಹೆಗಳು ಇಲ್ಲಿವೆ:
ನಿಮ್ಮ ಆದಾಯದ ಬಗ್ಗೆ ಎಚ್ಚರವಿರಲಿ
ನಿಮ್ಮ ಆದಾಯದ ಮೂಲಗಳನ್ನು ತಿಳಿದುಕೊಳ್ಳುವುದು ಮತ್ತು ಅದರ ಬಗ್ಗೆ ಸರಿಯಾಗಿ ಗಮನಹರಿಸುವುದು ಬಹಳ ಮುಖ್ಯ. ಕೆಲವು ಸಲ ನಿಮಗೆ ಅರೆಕಾಲಿಕ ಕೆಲಸದಿಂದ ಅಥವಾ ಮಾಸಿಕ ಭತ್ಯೆಯಿಂದ ಬಂದಿದ್ದರೆ, ಅದು ಎಲ್ಲಿಂದ ಬಂದ ಹಣ ಎಂಬುದನ್ನು ತಿಳಿದುಕೊಳ್ಳುವುದು ನಿಮ್ಮ ಖರ್ಚಿನ ಮೇಲೆ ಹಿಡಿತ ಸಾಧಿಸಲು ಅನುಕೂಲವಾಗುತ್ತದೆ. ನಿಮ್ಮ ಬಜೆಟ್‌ ನಿರ್ವಹಿಸಲು ಒಂದು ಪ್ರತ್ಯೇಕ ಪುಸ್ತಕ ಇರಿಸುವುದು ಸೂಕ್ತವಾಗಿದೆ.

ಇದನ್ನೂ ಓದಿ:  New Rule: ಆ ಯೋಜನೆಯಲ್ಲಿರುವವರಿಗೆ ಬಿಗ್​ ಶಾಕ್, ಅಕ್ಟೋಬರ್ 1ರಿಂದ ಹೊಸ ನಿಯಮ!

ನಿಮ್ಮ ಗಳಿಕೆಯಲ್ಲಿ ಉಳಿತಾಯಕ್ಕೆ ಇರಲಿ 30% ಹಣ
ನಿಮ್ಮ ಆದಾಯ ಏನೇ ಇರಲಿ, ನಿಮ್ಮ ಒಟ್ಟು ಆದಾಯದ 30 % ರಷ್ಟು ಹಣವನ್ನು ಉಳಿತಾಯ ಖಾತೆಗೆ ವರ್ಗಾಯಿಸುವದನ್ನು ರೂಢಿಸಿಕೊಳ್ಳಿ. ಉಳಿದ ಹಣವನ್ನು ನಿಮ್ಮ ತಿಂಗಳ ಖರ್ಚಿಗೆ ಬಳಸಿ.

ಗಮನವಿಟ್ಟು ಖರ್ಚು ಮಾಡಿ
ನಮ್ಮ ದೈನಂದಿನ ಜೀವನದಲ್ಲಿ ನಾವೆಲ್ಲರೂ ಉಳಿಸುವುದಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡುತ್ತೇವೆ. ನಾವೆಲ್ಲರೂ ಆ ಶಾಪಿಂಗ್ ಎಂಬ ಖರ್ಚು ಮಾಡುವ ಮಾರ್ಗಕ್ಕೆ ಜೋತು ಬಿದ್ದಿದ್ದೇವೆ. ಶಾಪಿಂಗ್‌ ಮಾಲ್‌ನಲ್ಲಿ ನಾವು ನೋಡಿದ ಮತ್ತು ಇಷ್ಟಪಟ್ಟ ಎಲ್ಲವನ್ನೂ ಅಕ್ಷರಶಃ ಖರೀದಿ ಮಾಡಿ ನಮ್ಮ ಎಲ್ಲ ಹಣವನ್ನು ಖರ್ಚು ಮಾಡಿಕೊಂಡು ಬರುತ್ತೆವೆ.

ನಿಮಗೆ ಶಾಪಿಂಗ್‌ ಮಾಡುವುದು ಇಷ್ಟವಿದ್ದರೂ ಸಹ, ಅಗತ್ಯ ಇರುವುದನ್ನು ಮಾತ್ರ ಖರೀದಿ ಮಾಡಿ. ಅನವಶ್ಯಕ ವಸ್ತುಗಳ ಖರೀದಿ ನಿಮ್ಮ ಆರ್ಥಿಕ ವೆಚ್ಚಕ್ಕೆ ಕಾರಣವಾಗುತ್ತದೆ.

ಆರ್ಥಿಕ ಗುರಿಗಳನ್ನು ಇರಿಸಿಕೊಳ್ಳಿ
ಆರ್ಥಿಕ ಗುರಿಗಳನ್ನು ಇರಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಗುರಿಗಳನ್ನು ಇಟ್ಟುಕೊಳ್ಳುವುದು ನಿಮ್ಮ ಜೀವನಶೈಲಿಯನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಬಜೆಟ್‌ಗೆ ಅನುಗುಣವಾಗಿ ಜೀವನ ನಡೆಸಲು ನಿಮ್ಮನ್ನು ಪ್ರೇರೇಪಿಸಲು ಇದು ಉತ್ತಮ ಮಾರ್ಗವಾಗಿದೆ.

ಇದನ್ನೂ ಓದಿ:  Tata Steel Bonus News: ಈ ಉದ್ಯೋಗಿಗಳಿಗೆ ಭರ್ಜರಿ ಬೋನಸ್, ಇಂದೇ ಇವರ ಖಾತೆ ಸೇರಲಿದೆ 5 ಲಕ್ಷ ರೂಪಾಯಿ!

ಉದಾಹರಣೆಗೆ - ಮನೆಯಲ್ಲಿ ತಯಾರಿಸಿದ ಆಹಾರವನ್ನು ತಿನ್ನುವ ಗುರಿಯನ್ನು ಇರಿಸಿಕೊಳ್ಳುವುದರಿಂದ, ಆರ್ಡರ್ ಮಾಡಿದ ಆಹಾರಕ್ಕಾಗಿ ಖರ್ಚು ಮಾಡುವ ಬದಲು ಹಣವನ್ನು ಉಳಿಸಲು ಸಹಾಯ ಮಾಡುತ್ತದೆ.

ಸುರಕ್ಷಿತ ಜೀವನಶೈಲಿ
ನಿಮ್ಮ ಹಣದ ಮೇಲೆ ನಿಯಂತ್ರಣವನ್ನು ಹೊಂದಿರುವುದು ಹೆಚ್ಚು ಆತ್ಮವಿಶ್ವಾಸ ಮತ್ತು ಸ್ವತಂತ್ರವಾಗಿ ಜೀವನ ನಡೆಸಲು ಸಹಾಯವಾಗುತ್ತದೆ. ಇದು ನಿಮಗೆ ಅಲ್ಪಾವಧಿಯ ಸಮಯಕ್ಕೆ ಸಹಾಯ ಮಾಡದೇ ಇದ್ದರೂ ಸಹ, ಆದರೆ ದೀರ್ಘಾವಧಿಯ ನಿಮ್ಮ ಭವಿಷ್ಯವನ್ನು ಯೋಜಿಸಲು ಸೂಕ್ತವಾಗಿ ಸಹಾಯ ಮಾಡುತ್ತದೆ.
Published by:Ashwini Prabhu
First published: