• Home
  • »
  • News
  • »
  • business
  • »
  • Savings Tips: ಜೀವನದಲ್ಲಿ ಸದಾ ನೆಮ್ಮದಿಯಾಗಿರೋಕೆ ಈ 5 ಸೂತ್ರಗಳನ್ನು ಫಾಲೋ ಮಾಡಿ!

Savings Tips: ಜೀವನದಲ್ಲಿ ಸದಾ ನೆಮ್ಮದಿಯಾಗಿರೋಕೆ ಈ 5 ಸೂತ್ರಗಳನ್ನು ಫಾಲೋ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೆಮ್ಮದಿಯಾಗಿ ಇರಬೇಕು ಅಂದ್ರೆ ಏನ್ ಮಾಡಬೇಕು ಅಂತ ಜೆರೋಧಾ ಎಂಬ ರಿಟೇಲ್‌ ಸ್ಟಾಕ್‌ ಬ್ರೋಕರ್‌ (Zerodha Retail Stock Broker) ಸಂಸ್ಥೆಯ ಸಿಇಓ ನಿತಿನ್‌ ಕಾಮತ್‌ (Nitin Kamath) ಹೇಳಿದ್ದಾರೆ.

  • Share this:

ವಯಸ್ಸಿನಲ್ಲೇ ಎಷ್ಟು ದುಡಿದು ಖರ್ಚು ಮಾಡಿದಾಗ ಹಣ (Money) ದ ಬಗ್ಗೆ ಅಷ್ಟಾಗಿ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ವಯಸ್ಸಾ(Age) ದ ಮೇಲೆ 10 ರೂಪಾಯಿ ಖರ್ಚು ಮಾಡೋದಕ್ಕೆ ಹಿಂದೆ-ಮುಂದೆ ನೋಡಬೇಕಾಗುತ್ತೆ. ಯಾಕೆಂದರೆ ವಯಸ್ಸಾದ ಬಳಿಕ ಕೈಯಲ್ಲಿ ಕೆಲಸ ಇರೋದಿಲ್ಲ. ದುಡಿಯುವಾಗ ಎಷ್ಟೇ ಕಷ್ಟ ಬಂದರೂ ಎದೆಯೊಡ್ಡಿ ನಿಲ್ಲುತ್ತೇವೆ. ರಿಟೈರ್ (Retire)​ ಆದ ಬಳಿಕವೂ ನೆಮ್ಮದಿ (Peace) ಯಿಂದ ಇರಬೇಕು ಅಂದರೆ ಏನು ಮಾಡಬೇಕೆಂದು ಹಲವರಿಗೆ ಗೊತ್ತಿಲ್ಲ. ಕೆಲವರು ವಯಸ್ಸಿನಲ್ಲಿದ್ದಾಗಲೇ ಉಳಿತಾಯ ಯೋಜನೆ (Savings Scheme) ಗಳಲ್ಲಿ ಹೂಡಿಕೆ ಮಾಡಿರುತ್ತಾರೆ. ಇನ್ನೂ ಕೆಲವರಿಗೆ ಪಿಂಚಣಿ (Pension) ಸಿಗುತ್ತಿರಬಹುದು. ಆದರೆ ನೆಮ್ಮದಿಯಾಗಿ ಇರಬೇಕು ಅಂದ್ರೆ ಏನ್ ಮಾಡಬೇಕು ಅಂತ ಜೆರೋಧಾ ಎಂಬ ರಿಟೇಲ್‌ ಸ್ಟಾಕ್‌ ಬ್ರೋಕರ್‌ (Zerodha Retail Stock Broker) ಸಂಸ್ಥೆಯ ಸಿಇಓ ನಿತಿನ್‌ ಕಾಮತ್‌ (Nitin Kamath) 5 ಸೂತ್ರಗಳ ಬಗ್ಗೆ ಹೇಳಿದ್ದಾರೆ.


ಈ ಕಾಲದಲ್ಲಿ 50 ವರ್ಷಕ್ಕೆ ರಿಟೈರ್​ಮೆಂಟ್ ಆದರೂ ಆಶ್ಚರ್ಯ ತರಿಸಲ್ಲ. ಮನುಷ್ಯನ ಆಯಸ್ಸು 80 ವರ್ಷ ಆದರೂ ಆಗಬಹುದು. ಹೀಗಾಗಿದ್ದಾಗ ರಿಟೈರ್​ಮೆಂಟ್​ ಬಳಿಕ ಜೀವನ ಸುಗಮವಾಗಿ ನಡೆಸಲು ನಿತನ್ ಕಾಮತ್​ ಹೇಳಿರುವ ಸೂತ್ರಗಳನ್ನು ಅಳವಡಿಸಿಕೊಳ್ಳಿ.


ನಿತಿನ್​ ಕಾಮತ್ ಪಂಚ ಸೂತ್ರ!


"ಹವಾಮಾನ ಬದಲಾವಣೆಯು ನಮ್ಮೆಲ್ಲರನ್ನೂ ಕೊಲ್ಲದಿದ್ದರೂ, ನಿವೃತ್ತಿ ಬಿಕ್ಕಟ್ಟು ಬಹುಶಃ 25 ವರ್ಷಗಳ ನಂತರ ಹೆಚ್ಚಿನ ದೇಶಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಹಿಂದಿನ ತಲೆಮಾರುಗಳು ದೀರ್ಘಾವಧಿಯ ರಿಯಲ್ ಎಸ್ಟೇಟ್ ಮತ್ತು ಇಕ್ವಿಟಿ ಬುಲ್ ಮಾರುಕಟ್ಟೆಗಳೊಂದಿಗೆ ಅದೃಷ್ಟವನ್ನು ಪಡೆದರು. ಅದು ನಿವೃತ್ತಿ ಕಾರ್ಪಸ್ ಅನ್ನು ರಚಿಸಲು ಸಹಾಯ ಮಾಡಿತು" ಎಂದು ನಿತಿನ್​ ಕಾಮತ್ ಟ್ವೀಟ್ ಮಾಡಿದ್ದಾರೆ.


1) ಸಾಲ ಮಾಡಿ ಏನನ್ನೂ ಖರೀದಿಸಬೇಡಿ!


ನಿತಿನ್​ ಕಾಮತ್​ ಹೇಳಿರುವ ಮೊದಲ ಸೂತ್ರ ಏನೆಂದರೆ, ಸುಖಾಸುಮ್ಮನೆ ಸಾಲ ಮಾಡಿ ಏನನ್ನೂ ಖರೀದಿ ಮಾಡಬೇಡಿ. ವಸ್ತುಗಳನ್ನು ಕೊಳ್ಳಲು ಸಾಲ ಮಾಡಬೇಡಿ. ಯಾರಿಂದೂ ಹಣವನ್ನೂ ಪಡೆಯಬೇಡಿ.


2) ಹಣ ಉಳಿಸಿ ಹೂಡಿಕೆ ಮಾಡಿ!


ನೀವು ಪ್ರಾಯದಲ್ಲೇ ಇರುವಾಗಲೇ ಸಂಬಳದಲ್ಲಿ ಸ್ವಲ್ಪ ಹಣವನ್ನು ಉಳಿಸಲು ಕಲಿಯಿರಿ. ಇಂಡೆಕ್ಸ್ ಫಂಡ್‌ಗಳು/ಇಟಿಎಫ್‌ಗಳ FDs/G-Secs ಮತ್ತು SIPಗಳಲ್ಲಿ ಹೂಡಿಕೆ ಮಾಡಿ. ಷೇರುಗಳಲ್ಲಿ ಹೂಡಿಕೆ ಮಾಡಿ ಎಂದಿದ್ದಾರೆ ನಿತಿನ್​ ಕಾಮತ್​​.


ಇದನ್ನೂ ಓದಿ: ಆನ್​ಲೈನ್​ನಲ್ಲಿ ಹೀಗೆ ಮ್ಯಾರೇಜ್​ ಲೋನ್​ಗೆ ಅಪ್ಲೈ ಮಾಡಿ, ತುಂಬಾ ಸುಲಭ!


3) ನಿಮಗೂ, ನಿಮ್ಮ ಕುಟುಂಬಸ್ಥರಿಗೂ ವಿಮೆ ಮಾಡಿಸಿ!


ಯಾವಾಗ ಏನೂ ಬೇಕಾದರೂ ಆಗಬಹುದು. ಹೀಗಾಗಿ ನಿಮಗಾಗಿ ಮತ್ತು ಕುಟುಂಬದ ಪ್ರತಿಯೊಬ್ಬರಿಗೂ ಸಮಗ್ರ ಆರೋಗ್ಯ ವಿಮಾ ಪಾಲಿಸಿಯನ್ನು ಪಡೆಯಿರಿ. ಮನೆಯ ಒಬ್ಬರು ಸದಸ್ಯರಿಗೆ ಆರೋಗ್ಯ ಸಮಸ್ಯೆ ಬಂದರೆ ನೀವೆಲ್ಲಾ ಉಳಿಸಿರುವ ಹಣವೂ ಖಾಲಿಯಾಗುತ್ತೆ. ಕೆಲಸ ಕೂಡ ಶಾಶ್ವತ ಅಲ್ಲ. ಹೀಗಾಗಿ ವಿಮಾ ಪಾಲಿಸಿ ಮಾಡಿಸಿ ಎಂದಿದ್ದಾರೆ ನಿತಿನ್​ ಕಾಮತ್​.


4) ಟರ್ಮ್ ಪಾಲಿಸಿ ಕೂಡ ಖರೀದಿಸಿ!


ನೀವು ಅವಲಂಬಿತರನ್ನು ಹೊಂದಿದ್ದರೆ, ನಿಮಗೆ ಏನಾದರೂ ಸಂಭವಿಸಿದರೆ ಅವರಿಗೆ ರಕ್ಷಣೆ ನೀಡಬೇಕು. ಸಾಕಷ್ಟು ರಕ್ಷಣೆಯೊಂದಿಗೆ ಟರ್ಮ್ ಪಾಲಿಸಿಯನ್ನು ಖರೀದಿಸಿ. ಕೆಟ್ಟ ಸಂದರ್ಭದಲ್ಲಿ, ಬ್ಯಾಂಕ್ ಎಫ್‌ಡಿಯಲ್ಲಿರುವ ಈ ಹಣವು ಅವರ ಹಣಕಾಸಿನ ಅಗತ್ಯಗಳನ್ನು ಪೂರೈಸಬೇಕು.


5) ಸಾಲ ತೆಗೆದುಕೊಳ್ಳಬೇಡಿ!


ಮೊದಲು ಸೂತ್ರ ಕೂಡ ಸಾಲ ತೆಗೆದುಕೊಳ್ಳಬೇಡಿ ಎಂದು ನಿತಿನ್​ ಕಾಮತ್​ ಹೇಳಿದ್ದಾರೆ. ಕೊನೆಯಲ್ಲೂ ಕೂಡ ಅದನ್ನೇ ಹೇಳಿದ್ದಾರೆ. ಯಾಕೆಂದರೆ ನಮ್ಮ ಜನಕ್ಕೆ ಸಾಲ ತೆಗೆದುಕೊಳ್ಳುವುದನ್ನು ನಿಲ್ಲಿಸುವುದು ಬಹಳ ಕಷ್ಟ ಎಂದಿದ್ದಾರೆ.


ಇದನ್ನೂ ಓದಿ: ಒಂದು ಯೋಜನೆಯಿಂದ 10 ಲಾಭ, ಸುಲಭವಾಗಿ 16 ಲಕ್ಷ ಹಣ ಗಳಿಸಬಹುದು!


ಯಾರು ಈ ನಿತಿನ್​ ಕಾಮತ್​!


10 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಬೆಂಗಳೂರಿನ ಜೆರೋಧಾ ಎಂಬ ರಿಟೇಲ್‌ ಸ್ಟಾಕ್‌ ಬ್ರೋಕರ್‌ ಸಂಸ್ಥೆ ಇದೀಗ ದೇಶದ ಅತಿ ದೊಡ್ಡ ಆನ್‌ಲೈನ್‌ ಷೇರು ಬ್ರೋಕರೇಜ್‌ ಕಂಪನಿಯಾಗಿ ಹೊರಹೊಮ್ಮಿದೆ.  ಅಪ್ಪಟ ಕನ್ನಡಿಗ ನಿತಿನ್‌ ಕಾಮತ್‌, ಅವರ ಸೋದರ ನಿಖಿಲ್‌ ಕಾಮತ್‌ ಸೇರಿ ಬೆಳೆಸಿದ ಜೆರೋಧಾ, ಹಲವು ಹೊಸ ದಾಖಲೆಗಳೊಂದಿಗೆ ಕಾರ್ಪೊರೇಟ್‌ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

Published by:ವಾಸುದೇವ್ ಎಂ
First published: