Petrol Diesel Price: ಪೆಟ್ರೋಲ್ ಲೀಟರ್​ಗೆ 9.5 ರೂ, ಡೀಸೆಲ್ 7 ರೂ ಇಳಿಕೆ: ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ

FM Nirmala Sitharaman: ಪೆಟ್ರೋಲ್ ದರ (Petrol Price) ಲೀಟರ್‌ಗೆ ₹9.5 ಮತ್ತು ಡೀಸೆಲ್‌ಗೆ ₹7 ಇಳಿಕೆ ಆಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಘೋಷಣೆ ಮಾಡಿದ್ದಾರೆ.

ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್

  • Share this:
    ನಾವು ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು (Central Excise Duty On Petrol) ಲೀಟರ್‌ಗೆ ₹ 8 ಮತ್ತು ಡೀಸೆಲ್‌ಗೆ (Central Excise Duty On Diesel)₹ 6 ರಷ್ಟು ಕಡಿಮೆ ಮಾಡುತ್ತಿದ್ದೇವೆ. ಇದರಿಂದ ಪೆಟ್ರೋಲ್ ದರ (Petrol Price) ಲೀಟರ್‌ಗೆ ₹9.5 ಮತ್ತು ಡೀಸೆಲ್‌ಗೆ ₹7 ಇಳಿಕೆ ಆಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಘೋಷಣೆ ಮಾಡಿದ್ದಾರೆ. ದೆಹಲಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಸುಮಾರು 9 ಕೋಟಿ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ (ಒಟ್ಟು 12 ಸಿಲಿಂಡರ್‌ಗಳವರೆಗೆ) 200 ರೂಪಾಯಿ ಸಬ್ಸಿಡಿಯನ್ನು (LPG Subsidy) ಕೇಂದ್ರ ಸರ್ಕಾರ ಶನಿವಾರ ಘೋಷಿಸಿದೆ. 

    ಇಂದಿನ ಪೆಟ್ರೋಲ್ ಡೀಸೆಲ್ ಬೆಲೆಯ ವಿವರ ಇಲ್ಲಿದೆ
    ಉಕ್ರೇನ್ (Ukraine) ಯುದ್ಧದ ಹಿನ್ನೆಲೆ ಜಾಗತಿಕ ಕಚ್ಚಾತೈಲ (Crude Oil) ಬೆಲೆ ಕೆಲವು ದಿನಗಳಿಂದ ಏರಿಕೆಯಾಗುತ್ತಲೇ ಇದೆ. 100ರ ಗಡಿ ದಾಟಿ ಹೊರಟಿರುವ ಇಂಧನ ಬೆಲೆಗಳು ವಾಹನ ಸವಾರರಿಗೆ ಬರೆ ಎಳೆದಂತಾಗಿದೆ. ಆದರೆ ಇದೀಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಡಿರುವ ಘೋಷಣೆಯಿಂದ ಸ್ವಲ್ಪ ನಿರಾಳವಾದಂತಾಗಿದೆ.



    ನಿನ್ನೆಗೆ ಹೋಲಿಸಿದರೆ ಇಂದು ಬೆಲೆ ವ್ಯತ್ಯಾಸವಾಗಿಲ್ಲ
    ನಿನ್ನೆಗೆ ಹೋಲಿಸಿದರೆ ರಾಜ್ಯದಲ್ಲಿ ಬಹುತೇಕ ಇಂದು ಇಂಧನ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ (Petrol Diesel Price) ದರಗಳು ಅತಿಶಯವಾದ ಏರಿಳಿತಗಳಿಲ್ಲದೆ ಸ್ಥಿರವಾಗಿವೆ. ಕಳೆದ ನಾಲ್ಕು ವಾರದಿಂದಲೂ ಯಥಾಸ್ಥಿತಿ ಕಾಯ್ದುಕೊಂಡಿವೆ. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಇಂಧನ ಬೆಲೆ ಸ್ಥಿರವಾಗಿದೆ.

    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ

    ಬಾಗಲಕೋಟೆ - ರೂ. 111.58 (00)
    ಬೆಂಗಳೂರು - ರೂ. 111.09 (00)
    ಬೆಂಗಳೂರು ಗ್ರಾಮಾಂತರ - ರೂ. 111.40 (0.24ಪೈಸೆ ಏರಿಕೆ)
    ಬೆಳಗಾವಿ - ರೂ. 111.77 (0.30 ಪೈಸೆ ಏರಿಕೆ)
    ಬಳ್ಳಾರಿ - ರೂ. 112.73 ( 0.52 ಪೈಸೆ ಇಳಿಕೆ)
    ಬೀದರ್ - ರೂ. 112.24 (0.27 ಪೈಸೆ ಏರಿಕೆ)
    ವಿಜಯಪುರ - ರೂ. 110.89 (0.08 ಪೈಸೆ ಏರಿಕೆ)
    ಚಾಮರಾಜನಗರ - ರೂ. 111.04 (0.14 ಪೈಸೆ ಇಳಿಕೆ)
    ಚಿಕ್ಕಬಳ್ಳಾಪುರ - ರೂ. 111.54 (0.02 ಪೈಸೆ ಇಳಿಕೆ)
    ಚಿಕ್ಕಮಗಳೂರು - ರೂ. 112.62 (0.40 ಪೈಸೆ ಏರಿಕೆ)
    ಚಿತ್ರದುರ್ಗ - ರೂ. 113.08 (0.57 ಪೈಸೆ ಏರಿಕೆ)
    ದಕ್ಷಿಣ ಕನ್ನಡ - ರೂ. 110.29 (0.08 ಪೈಸೆ ಇಳಿಕೆ)
    ದಾವಣಗೆರೆ - ರೂ. 113.15 (0.58 ಪೈಸೆ ಏರಿಕೆ)
    ಧಾರವಾಡ - ರೂ. 110.96 (0.13 ಪೈಸೆ ಏರಿಕೆ)
    ಗದಗ - ರೂ. 111.88 (00)
    ಕಲಬುರಗಿ - ರೂ. 111.24 (0.20 ಪೈಸೆ ಏರಿಕೆ)
    ಹಾಸನ - ರೂ. 111.36 (0.20 ಪೈಸೆ ಏರಿಕೆ)
    ಹಾವೇರಿ - ರೂ. 111.71 (00)
    ಕೊಡಗು - ರೂ. 112.34 (0.31 ಪೈಸೆ ಇಳಿಕೆ)
    ಕೋಲಾರ - ರೂ. 111.03 (0.07 ಪೈಸೆ ಏರಿಕೆ)
    ಕೊಪ್ಪಳ - ರೂ. 111.99 (16 ಪೈಸೆ ಇಳಿಕೆ)
    ಮಂಡ್ಯ - ರೂ. 110.90 (16 ಪೈಸೆ ಏರಿಕೆ)
    ಮೈಸೂರು - ರೂ. 110.90 (0.03 ಇಳಿಕೆ)
    ರಾಯಚೂರು - ರೂ. 111.86 (0.26 ಇಳಿಕೆ)
    ರಾಮನಗರ - ರೂ. 111.40 (0.19 ಪೈಸೆ ಏರಿಕೆ)
    ಶಿವಮೊಗ್ಗ - ರೂ. 112.31 (0.59 ಇಳಿಕೆ)
    ತುಮಕೂರು - ರೂ. 111.52( 0.45 ಪೈಸೆ ಇಳಿಕೆ)
    ಉಡುಪಿ - ರೂ. 110.99 (44 ಪೈಸೆ ಏರಿಕೆ )
    ಉತ್ತರ ಕನ್ನಡ - ರೂ. 111.14 (00)
    ಯಾದಗಿರಿ - ರೂ. 111.54 (0.35 ಇಳಿಕೆ)

    ಇದನ್ನೂ ಓದಿ: Ola Uber: ಓಲಾ, ಉಬರ್​ ಕಂಪನಿಗಳಿಗೆ ಶಾಕ್, ಇನ್ಮೇಲೆ ಆಟೊ, ಕ್ಯಾಬ್ ಬುಕ್ ಮಾಡಬಹುದೇ?

    ಪೆಟ್ರೋಲ್, ಡೀಸೆಲ್ ಕೊಂಚ ಮಟ್ಟಿಗೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಬೆಂಗಳೂರು (Bengaluru) ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರಗಳು ಅತಿಶಯವಾದ ಏರಿಳಿತಗಳಿಲ್ಲದೆ ಸ್ಥಿರವಾಗಿವೆ. ವಿಶೇಷವಾಗಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಇಂಧನ ಬೆಲೆ ಸ್ಥಿರವಾಗಿದೆ.

    ಇದನ್ನೂ ಓದಿ: Traffic Rule: ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದರೆ 2 ಸಾವಿರ ದಂಡ ಪಾವತಿಸಲು ರೆಡಿಯಾಗಿ!

    ಜಾಗತಿಕವಾಗಿ ಎಲ್ಲಾ ಉತ್ಪನ್ನಗಳ ಬೆಲೆ ಗಗನಕ್ಕೇರಿವೆ. ಸಾಮಾಜಿಕ, ಆರ್ಥಿಕ, ಅಂತಾರಾಷ್ಟ್ರೀಯ ಬೆಳವಣಿಗೆಗಳು ಇಂಧನದ ಬೆಲೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಈ ಬೆಲೆ ಏರಿಕೆ ಶ್ರೀಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುತ್ತಿದೆ.
    Published by:guruganesh bhat
    First published: