PM Narendra Modi: ಪ್ರಧಾನಿ ಮೋದಿ 8 ವರ್ಷಗಳಲ್ಲಿ ಅಭಿವೃದ್ಧಿಗೆ ಖರ್ಚು ಮಾಡಿದ ಹಣ ಎಷ್ಟು? ಅಂಕಿ ಅಂಶ ನೋಡಿ
2004ರಿಂದ 2014 ರವರೆಗಿನ ಅಭಿವೃದ್ಧಿ ವೆಚ್ಚಗಳಿಗೆ ಕೇವಲ 49.2 ಲಕ್ಷ ಕೋಟಿ ಹಣವನ್ನು ಖರ್ಚು ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಂದಿನ ಯುಪಿಎ ಸರ್ಕಾರದ ಅಂಕಿ ಅಂಶಗಳನ್ನು ಸಹ ತೆರೆದಿಟ್ಟಿದ್ದಾರೆ.
ದೆಹಲಿ: 2014ರಿಂದ 2022 ರ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನೇತೃತ್ವದ ಕೇಂದ್ರ ಸರ್ಕಾರವು 90.9 ಲಕ್ಷ ಕೋಟಿ ಹಣವನ್ನು ಅಭಿವೃದ್ಧಿ ವೆಚ್ಚಗಳಿಗೆ ವಿನಿಯೋಗಿಸಿದೆ ಎಂದು ಕೇಂದ್ರ ಹಣಕಸುಚ ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ತಿಳಿಸಿದ್ದಾರೆ. ಆದರೆ 2004ರಿಂದ 2014 ರವರೆಗಿನ ಅಭಿವೃದ್ಧಿ ವೆಚ್ಚಗಳಿಗೆ ಕೇವಲ 49.2 ಲಕ್ಷ ಕೋಟಿ ಹಣವನ್ನು ಖರ್ಚು ಮಾಡಲಾಗಿದೆ. ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ನ (RBI) ಅಂಕಿಅಂಶಗಳು ತೋರಿಸುತ್ತವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಂದಿನ ಯುಪಿಎ ಸರ್ಕಾರದ (UPA Government) ಅಂಕಿ ಅಂಶಗಳನ್ನು ತೆರೆದಿಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮಾಡಿದ ವೆಚ್ಚದಲ್ಲಿ ಆಹಾರ, ಇಂಧನ ಮತ್ತು ರಸಗೊಬ್ಬರ ಸಬ್ಸಿಡಿಗಾಗಿ ಇದುವರೆಗೆ 24.85 ಲಕ್ಷ ಕೋಟಿ ಮತ್ತು ಬಂಡವಾಳ ಸೃಷ್ಟಿಗೆ 26.3 ಲಕ್ಷ ಕೋಟಿ ಹಣವನ್ನು ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದರು. ಯುಪಿಎ ಆಡಳಿತದ 10 ವರ್ಷಗಳಲ್ಲಿ ಕೇವಲ 13.9 ಲಕ್ಷ ಕೋಟಿ ಮಾತ್ರ ಸಬ್ಸಿಡಿಗಾಗಿ ಖರ್ಚು ಮಾಡಲಾಗಿತ್ತು ಎಂದು ಅಂಕಿ ಅಂಶಗಳನ್ನು ಹೋಲಿಸಿ ಮಾಹಿತಿ ನೀಡಿದ್ದಾರೆ.
ಅಬಕಾರಿ ಸುಂಕ ಕಡಿತದ ಸಂಪೂರ್ಣ ಹೊರೆ ಕೇಂದ್ರ ಸರ್ಕಾರದ್ದು ನವೆಂಬರ್ 2021 ಮತ್ತು ಮೇ 2022 ರಲ್ಲಿ ಎರಡು ಅಬಕಾರಿ ಸುಂಕ ಕಡಿತದ ಸಂಪೂರ್ಣ ಹೊರೆಯನ್ನು ಕೇಂದ್ರವು ಭರಿಸುತ್ತಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಭಾನುವಾರ ( ಮೇ 22) ಖಚಿತಪಡಿಸಿದ್ದಾರೆ.
ಮೂಲ ಅಬಕಾರಿ ಸುಂಕ (BED), ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED), ರಸ್ತೆ ಮತ್ತು ಮೂಲಸೌಕರ್ಯ ಸೆಸ್ (RIC) ಮತ್ತು ಕೃಷಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೆಸ್ (AIDC) ಒಟ್ಟಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ರೂಪಿಸುತ್ತದೆ ಎಂದು ಹಣಕಾಸು ಸಚಿ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.
ಅಬಕಾರಿ ಸುಂಕವನ್ನು ರಾಜ್ಯಗಳ ಜೊತೆ ಕೇಂದ್ರ ಸರ್ಕಾರವು ಹಂಚಿಕೊಳ್ಳಬಹುದಾಗಿದೆ. ಆದರೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED), ರಸ್ತೆ ಮತ್ತು ಮೂಲಸೌಕರ್ಯ ಸೆಸ್ಗಳನ್ನು ಹಂಚಿಕೊಳ್ಳಲಾಗದು ಎಂದು ಅವರು ಸರಣಿ ಟ್ವೀಟ್ಗಳಲ್ಲಿ ತಿಳಿಸಿದ್ದಾರೆ.
₹ 2,20,000 ಕೋಟಿ ಪರಿಣಾಮ ಸುಂಕ ಕಡಿತವು ಕೇಂದ್ರ ಸರ್ಕಾರದ ಮೇಲೆ ವರ್ಷಕ್ಕೆ 1,00,000 ಕೋಟಿ ಹೊರೆಯಾಗಿ ಪರಿಣಾಮ ಬೀರುತ್ತದೆ. ಆದರೆ ನವೆಂಬರ್ 2021 ರಲ್ಲಿ ಸುಂಕ ಕಡಿತವು ಸರ್ಕಾರಕ್ಕೆ ವರ್ಷಕ್ಕೆ 20,000 ಕೋಟಿಗಳಷ್ಟು ಪರಿಣಾಮ ಬೀರಿತ್ತು ಎಂದು ಅವರು ಹೇಳಿದರು. ಈ ಎರಡು ಸುಂಕ ಕಡಿತದಿಂದಾಗಿ ಕೇಂದ್ರ ಸರ್ಕಾರದ ಒಟ್ಟು ಆದಾಯದ ವರ್ಷಕ್ಕೆ ₹ 2,20,000 ಕೋಟಿ ಪರಿಣಾಮ ಬೀರಲಿದೆ ಎಂದು ಅವರು ತಿಳಿಸಿದ್ದಾರೆ.
ಪೆಟ್ರೋಲ್ ಮೇಲೆ ಲೀಟರ್ಗೆ 8 ರೂ. ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರ್ಗೆ 6 ರೂ. ಅಬಕಾರಿ ಸುಂಕ ಕಡಿತವು ಸಂಪೂರ್ಣವಾಗಿ ರಸ್ತೆ ಮತ್ತು ಮೂಲಸೌಕರ್ಯ ಸೆಸ್ನಡಿ (RIC) ತರಲಾಗಿದೆ ಎಂದು ಅವರು ಹೇಳಿದರು. ನವೆಂಬರ್ 2021 ರಲ್ಲಿಯೂ ಸಹ, ಪೆಟ್ರೋಲ್ನಲ್ಲಿ ಲೀಟರ್ಗೆ 5 ರೂ. ಮತ್ತು ಡೀಸೆಲ್ನಲ್ಲಿ ಲೀಟರ್ನ ಮೇಲೆ 10 ರೂ. ಕಡಿತವನ್ನು ಸಂಪೂರ್ಣವಾಗಿ ಆರ್ಐಸಿಯಲ್ಲಿ ಮಾಡಲಾಗಿತ್ತು ಎಂದು ಅವರು ತಿಳಿಸಿದರು. ಆದರೆ ರಾಜ್ಯಗಳೊಂದಿಗೆ ಹಂಚಿಕೊಳ್ಳಬಹುದಾದ ಮೂಲ ಅಬಕಾರಿ ಸುಂಕವನ್ನು ಮುಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ