• Home
  • »
  • News
  • »
  • business
  • »
  • iPhone 13: ಫೆಸ್ಟಿವಲ್​ ಆಫರ್​ ಮಿಸ್​ ಆಯ್ತು ಅಂತ ಫೀಲ್​ ಮಾಡ್ಕೋಬೇಡಿ! ಈಗಲೂ 48 ಸಾವಿರಕ್ಕೆ ಖರೀದಿಸಿ ಐಫೋನ್​ 13

iPhone 13: ಫೆಸ್ಟಿವಲ್​ ಆಫರ್​ ಮಿಸ್​ ಆಯ್ತು ಅಂತ ಫೀಲ್​ ಮಾಡ್ಕೋಬೇಡಿ! ಈಗಲೂ 48 ಸಾವಿರಕ್ಕೆ ಖರೀದಿಸಿ ಐಫೋನ್​ 13

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಬ್ಬದ ಡೀಲ್ ಗಳು ಮತ್ತು ರಿಯಾಯಿತಿಗಳನ್ನು ನೀವು ತಪ್ಪಿಸಿಕೊಂಡಿದ್ದರೆ, ನಿಮ್ಮ ನೆಚ್ಚಿನ ಸ್ಮಾರ್ಟ್‌ಫೋನ್ ಅನ್ನು ಖರೀದಿಸಿ ಮನೆಗೆ ತರುವ ಅವಕಾಶ ಇಲ್ಲಿದೆ ನೋಡಿ.

  • Share this:

‘ಮೊನ್ನೆನೆ ದೀಪಾವಳಿ (Deepavali) ಹಬ್ಬ ಮುಗೀತು, ಛೇ.. ಅವಾಗಲೇ ನಮಗೆ ಇಷ್ಟವಾದ ಐಫೋನ್ 13 (iPhone 13) ಅನ್ನ ಖರೀದಿಸಬೇಕಿತ್ತು ನೋಡಿ, ಒಳ್ಳೆ ಡಿಸ್ಕೌಂಟ್ (Discount) ಸಿಗುತ್ತಿತ್ತು’ ಅಂತ ಐಫೋನ್ ಪ್ರಿಯ (iPhone Lovers) ರಿಗೆ ಈಗ ಅನ್ನಿಸುವುದಕ್ಕೆ ಶುರುವಾಗಿರುತ್ತದೆ ಅಂತ ಹೇಳಬಹುದು. ಆದರೆ ಇದನ್ನ ನೆನಪಿಸಿಕೊಂಡು ಐಫೋನ್ ಪ್ರಿಯರು ತುಂಬಾ ಬೇಸರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಬಿಡಿ. ಏಕೆಂದರೆ ಸ್ಮಾರ್ಟ್‌ಫೋನ್ (Smartphones) ಡೀಲ್ ಗಳು ಮತ್ತೆ ಗ್ರಾಹಕರಿಗಾಗಿ ಬಂದಿವೆ ನೋಡಿ. ಹಬ್ಬದ ಡೀಲ್ ಗಳು ಮತ್ತು ರಿಯಾಯಿತಿಗಳನ್ನು ನೀವು ತಪ್ಪಿಸಿಕೊಂಡಿದ್ದರೆ, ನಿಮ್ಮ ನೆಚ್ಚಿನ ಸ್ಮಾರ್ಟ್‌ಫೋನ್ ಅನ್ನು ಖರೀದಿಸಿ ಮನೆಗೆ ತರುವ ಅವಕಾಶ ಇಲ್ಲಿದೆ ನೋಡಿ.


ಸ್ಮಾರ್ಟ್‌ಫೋನ್ ಗಳ ವಿಷಯಕ್ಕೆ ಬಂದಾಗ, ಐಫೋನ್ 13 ಈ ವರ್ಷ ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಹ್ಯಾಂಡ್‌ಸೆಟ್ ಎಂದು ತೋರುತ್ತದೆ. ಇ-ಕಾಮರ್ಸ್ ದೈತ್ಯರಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ತಮ್ಮ ವಾರ್ಷಿಕ ಹಬ್ಬದ ಮಾರಾಟದಲ್ಲಿ ಐಫೋನ್ 13 ಸಿರೀಸ್ ಗೆ ಭಾರಿ ಬೇಡಿಕೆಗೆ ಸಾಕ್ಷಿಯಾದವು.


ಮೊದಲ ಬಾರಿ ಐಫೋನ್ ಖರೀದಿಸುತ್ತಿರುವವರಿಗೆ ಉತ್ತಮ ಅವಕಾಶ


2021 ರಲ್ಲಿ ಆಪಲ್ ಅನಾವರಣಗೊಳಿಸಿದ ಈ ಸ್ಮಾರ್ಟ್‌ಫೋನ್ ಅನ್ನು ಇ-ಟೇಲರ್ ಗಳು ಭಾರಿ ಬೆಲೆ ಇಳಿಕೆಯೊಂದಿಗೆ ನೀಡಿದ್ದಾರೆ, ಇದು ಹೆಚ್ಚಾಗಿ ಎಂಆರ್‌ಪಿ ಮೇಲಿನ ರಿಯಾಯಿತಿಗಳು, ಬೃಹತ್ ವಿನಿಮಯ ರಿಯಾಯಿತಿ ದರಗಳು ಮತ್ತು ಬ್ಯಾಂಕ್ ಕೊಡುಗೆಗಳನ್ನು ಸಹ ಒಳಗೊಂಡಿದೆ. ಆದಾಗ್ಯೂ, ಮೊದಲ ಬಾರಿಗೆ ಯಾರಾದರೂ ಐಫೋನ್ ಅನ್ನು ಖರೀದಿಸಲು ಯೋಜಿಸುತ್ತಿದ್ದರೆ ಇದು ಸರಿಯಾದ ಸಮಯ ಅಂತ ಹೇಳಬಹುದು.


ಫ್ಲಿಪ್‌ಕಾರ್ಟ್ ನಲ್ಲಿ ಐಫೋನ್ 13 ನ ಬೆಲೆ ನೋಡಿ..


ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಐಫೋನ್ 13 ಸಿರೀಸ್ ನಲ್ಲಿ ಕೆಲವು ಆಸಕ್ತಿದಾಯಕ ಡೀಲ್ ಗಳನ್ನು ನೀಡುತ್ತಿದೆ. ಬೇಸ್ ವೇರಿಯಂಟ್ ನ 128 ಜಿಬಿ ಮಾದರಿಯ ಬೆಲೆ 69,900 ರೂಪಾಯಿಯಾಗಿದೆ. ಆದಾಗ್ಯೂ, ಫ್ಲಿಪ್‌ಕಾರ್ಟ್ ನಲ್ಲಿ ಈ ಸಾಧನವನ್ನು 65,999 ರೂಪಾಯಿಗೆ ಖರೀದಿಸಬಹುದು.


ಇದನ್ನೂ ಓದಿ:ಮತ್ತಷ್ಟು ದುಬಾರಿಯಾಯ್ತು ಕಿಯಾ, ಈ ಕಾರು ಬೇಕಂದ್ರೆ 1 ವರ್ಷಕ್ಕಿಂತ ಹೆಚ್ಚು ಕಾಯಬೇಕು!


ಇದಲ್ಲದೆ, ಇ-ಕಾಮರ್ಸ್ ಪೋರ್ಟಲ್ 17,500 ರೂಪಾಯಿಗಳವರೆಗೆ ವಿನಿಮಯ ರಿಯಾಯಿತಿಯನ್ನು ಸಹ ನೀಡುತ್ತಿದೆ. ಎಕ್ಸ್ಚೇಂಜ್ ಡಿಸ್ಕೌಂಟ್ ಗಳೊಂದಿಗೆ, ಬೆಲೆ 48,499 ರೂಪಾಯಿಗೆ ಇಳಿಯುತ್ತದೆ. ಫ್ಲಿಪ್‌ಕಾರ್ಟ್ ಆಯ್ದ ಕಾರ್ಡ್ ಗಳ ಮೇಲೆ ಕ್ಯಾಶ್‌ಬ್ಯಾಕ್ ಆಯ್ಕೆಗಳನ್ನು ಸಹ ನೀಡುತ್ತಿದೆ, ಇದು ಬೆಲೆಯನ್ನು 1,500 ರೂಪಾಯಿಗಳವರೆಗೆ ಕಡಿಮೆ ಮಾಡುತ್ತದೆ. ಐಫೋನ್ 13, 6.1-ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್ಪ್ಲೇಯನ್ನು ಹೊಂದಿದ್ದು, ಎ 15 ಬಯೋನಿಕ್ ಚಿಪ್‌ಸೆಟ್ ನಿಂದ ಚಾಲಿತವಾಗಿದೆ.


ಐಫೋನ್ ಎಸ್ಇ 3 ನ ವೈಶಿಷ್ಟ್ಯತೆ, ಬೆಲೆಯ ಬಗ್ಗೆ ತಿಳಿಯಿರಿ


ಏತನ್ಮಧ್ಯೆ, ಈ ವರ್ಷ ಬಿಡುಗಡೆಯಾದ ಐಫೋನ್ ಎಸ್ಇ 3 ಬೆಲೆ ಈಗ ಇ-ಕಾಮರ್ಸ್ ಸೈಟ್ ಆದ ಫ್ಲಿಪ್‌ಕಾರ್ಟ್ ನಲ್ಲಿ ಭಾರಿ ಇಳಿಕೆಯಾಗಿದೆ. ಐಫೋನ್ ಎಸ್ಇ 3 ನ ಬೆಲೆ ತುಂಬಾನೇ ಕಡಿಮೆ ಆಗಿದ್ದು, 49,900 ರೂಪಾಯಿಗಳ ಬೆಲೆಯ 128 ಜಿಬಿ ಮಾದರಿಯು 47,990 ರೂಪಾಯಿಗೆ ಖರೀದಿಸಬಹುದು ಮತ್ತು ಗ್ರಾಹಕರು 17,500 ರೂಪಾಯಿಗಳವರೆಗೆ ವಿನಿಮಯ ರಿಯಾಯಿತಿಯನ್ನು ಸಹ ಇದರ ಮೇಲೆ ಪಡೆಯಬಹುದು.


ಇದನ್ನೂ ಓದಿ: Starbucks ಹುಟ್ಟು ಹಾಕಿದವರಿಗೂ ಬೆಂಗಳೂರಿನ ದೋಸೆಯೇ ಇಷ್ಟವಂತೆ, ಅವ್ರ ಫೇವರಿಟ್ ರೆಸ್ಟೊರೆಂಟ್ ಇದೇ ನೋಡಿ


ಇನ್ನೂ ಎಕ್ಸ್ಚೇಂಜ್ ಡಿಸ್ಕೌಂಟ್ ನೊಂದಿಗೆ ಈ ಐಫೋನ್ ನ ಬೆಲೆಯು 30,490 ರೂಪಾಯಿಗೆ ಇಳಿಯುತ್ತದೆ. ಐಫೋನ್ ಎಸ್ಇ 3 ಯು 4.7 ಇಂಚಿನ ರೆಟಿನಾ ಎಚ್‌ಡಿ ಡಿಸ್ಪ್ಲೇಯನ್ನು ಹೊಂದಿದ್ದು, ಎ 15 ಬಯೋನಿಕ್ ಚಿಪ್‌ಸೆಟ್ ನೊಂದಿಗೆ ಚಾಲಿತವಾಗಿದೆ. ಇನ್ನೂ ಇದರ ಕ್ಯಾಮೆರಾ ವೈಶಿಷ್ಟ್ಯತೆಯ ಬಗ್ಗೆ ಮಾತನಾಡುವುದಾದರೆ, ಐಫೋನ್ ಎಸ್ಇ 3 ಸುಮಾರು 12 ಮೆಗಾ ಪಿಕ್ಸಲ್ ರಿಯರ್ ಕ್ಯಾಮೆರಾ ಮತ್ತು 7 ಮೆಗಾ ಪಿಕ್ಸಲ್ ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ.

Published by:ವಾಸುದೇವ್ ಎಂ
First published: