70 ಶತಕೋಟಿ ಡಾಲರ್ ಸಂಗ್ರಹಿಸಲು Flipkart IPO ಸಜ್ಜು! ಬಿಡುಗಡೆ ಯಾವಾಗ?

Flipkart 2021 ರಲ್ಲಿ ಭಾರತೀಯ ಪ್ರಯಾಣ ಬುಕಿಂಗ್ ವೆಬ್‌ಸೈಟ್ ಕ್ಲಿಯರ್‌ಟ್ರಿಪ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಅಷ್ಟೇ ಅಲ್ಲದೇ ಈ ವಾರ ಔಷಧಿಗಳು ಮತ್ತು ಇತರ ಆರೋಗ್ಯ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡಲು "ಆರೋಗ್ಯ +" ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ.

ಫ್ಲಿಪ್​ಕಾರ್ಟ್​

ಫ್ಲಿಪ್​ಕಾರ್ಟ್​

 • Share this:
  LIC IPO ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿರುವ ಸಂದರ್ಭದಲ್ಲೇ  ಇನ್ನೊಂದು ಬೃಹತ್ ಕಂಪನಿಯ ಐಪಿಒ ಬಿಡುಗಡೆಯ ಸುಳಿವು ಸದ್ದು ಮಾಡುತ್ತಿದೆ. ಭಾರತದ  ಒಂದು ಮಟ್ಟಿಗೆ ಪ್ರವರ್ಧಮಾನಕ್ಕೆ ಬಂದಿರುವ, ಇನ್ನೂ ಬೃಹತ್ ಪ್ರಮಾಣದಲ್ಲಿ ಭಾರತೀಯ ಮಾರುಕಟ್ಟೆಯನ್ನು (Indian Market)ಕಂಪನಿಯ ಐಪಿಒ ಬಿಡುಗಡೆ ಕುರಿತು ಸುದ್ದಿಯೊಂದು ಹೊರಬಿದ್ದಿದೆ. Amazon.com Inc ನೊಂದಿಗೆ ಸ್ಪರ್ಧಿಸುತ್ತಿರುವ Flipkart  IPO ಬಿಡುಗಡೆಯ ಮೂಲಕ ಬರೋಬ್ಬರಿ 70 ಶತಕೋಟಿ ಡಾಲರ್ ಸಂಗ್ರಹಿಸಲು ಮುಂದಾಗುತ್ತಿದೆ ಎಂದು ವರದಿಯಾಗಿದೆ. ಈಮುನ್ನ ಇದೇ ಫ್ಲಿಪ್​ಕಾರ್ಟ್ ಐಪಿಒ ಬಿಡುಗಡೆಯ ಮೂಲಕ 50 ಶತಕೋಟಿ ಡಾಲರ್ ಸಂಗ್ರಹ ಗುರಿ ಹೊಂದಿತ್ತು ಎಂದು ವರಿಯಾಗಿತ್ತು. ಆದರೆ ಈಗ ಫ್ಲಿಪ್​ಕಾರ್ಟ್ ಐಪಿಒ ಬಿಡುಗಡೆಯ ಮೂಲಕ ತನ್ನ ಹಣ ಸಂಗ್ರಹದ ಗುರಿಯನ್ನು ಹೆಚ್ಚಿಸಿಕೊಂಡಿದೆ.

  ಫ್ಲಿಪ್​ಕಾರ್ಟ್ IPO ಮಹತ್ವ ಪಡೆಯಲು ಮುಖ್ಯ ಕಾರಣವೆಂದರೆ ಫ್ಲಿಪ್‌ಕಾರ್ಟ್‌ ತನ್ನ ಎರಡು ಹೊಸ ವ್ಯವಹಾರಗಳ ಮೇಲೆ ಭವಿಷಯದಲ್ಲಿ ಕೇಂದ್ರೀಕರಿಸುವ ಯೋಜನೆಯನ್ನು ಹೊಂದಿದೆ. ಈಮೂಲಕ ಕಂಪನಿಯ ಸೇವೆಗಳನ್ನು ಇನ್ನಷ್ಟು ವಿಸ್ತರಿಸುವ ಗುರಿಯನ್ನು ಫ್ಲಿಪ್​ಕಾರ್ಟ್ ಹೊಂದಿದೆ. ಇದು ಫ್ಲಿಪ್​ಕಾರ್ಟ್ ಕಂಪನಿಯ ಮೌಲ್ಯಮಾಪನಗಳನ್ನು ಹೆಚ್ಚಿಸಲು ಕಾರಣವಾಗಿದೆ. ಫ್ಲಿಪ್​ಕಾರ್ಟ್ ವಿಸ್ತರಿಸಲು ಬಯಸುತ್ತಿರುವ ಎರಡು ಕ್ಷೇತ್ರಗಳೆಂದರೆ ಆನ್‌ಲೈನ್ ಆರೋಗ್ಯ ಸೇವೆ ಮತ್ತು ಪ್ರಯಾಣ ಬುಕಿಂಗ್ ಕ್ಷೇತ್ರಗಳು ಎಂದು ವರದಿಯಾಗಿದೆ.

  ಏನೆಲ್ಲ ವಿಸ್ತರಣೆ ಆಗಲಿದೆ?
  ಫ್ಲಿಪ್‌ಕಾರ್ಟ್‌ನ ಯೋಜನೆಗಳ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳು ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದ ಉಂಟಾದ ಜಾಗತಿಕ ಮಾರುಕಟ್ಟೆಯ ಪ್ರಕ್ಷುಬ್ಧತೆಯು ತನ್ನ ಐಪಿಒ ಬಿಡುಗಡೆಯ ಸಮಯವನ್ನು ಮರುಪರಿಶೀಲಿಸುವಂತೆ ಮಾಡಿದೆ ಎಂದು ವರದಿಗಳು ತಿಳಿಸಿವೆ.

  Flipkart 2021 ರಲ್ಲಿ ಭಾರತೀಯ ಪ್ರಯಾಣ ಬುಕಿಂಗ್ ವೆಬ್‌ಸೈಟ್ ಕ್ಲಿಯರ್‌ಟ್ರಿಪ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಅಷ್ಟೇ ಅಲ್ಲದೇ ಈ ವಾರ ಔಷಧಿಗಳು ಮತ್ತು ಇತರ ಆರೋಗ್ಯ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡಲು "ಆರೋಗ್ಯ +" ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ.

  ವಾಲ್‌ಮಾರ್ಟ್ CFO ಬ್ರೆಟ್ ಬಿಗ್ಸ್ ಏನಂದಿದ್ದಾರೆ?
  ಪ್ರಯಾಣ ಬುಕಿಂಗ್ ವ್ಯವಹಾರವು ಫ್ಲಿಪ್​ಕಾರ್ಟ್​ಗೆ ಈಗಾಗಲೇ ಉತ್ತಮ ವಹಿವಾಟಿನ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

  IPO ನ ಬಿಡುಗಡೆಯಾಗುವ ಸಮಯದ ಬಗ್ಗೆ ವಾಲ್‌ಮಾರ್ಟ್ CFO ಬ್ರೆಟ್ ಬಿಗ್ಸ್ ಡಿಸೆಂಬರ್‌ನಲ್ಲಿ ನಡೆದ ವಿಶ್ಲೇಷಕರ ಸಮಾವೇಶದಲ್ಲಿ ಫ್ಲಿಪ್‌ಕಾರ್ಟ್‌ನ ವ್ಯವಹಾರವು "ನಾವು ಅಂದುಕೊಂಡಂತೆ ಬಹುತೇಕ ನಿಖರವಾಗಿ ಕಾರ್ಯನಿರ್ವಹಿಸುತ್ತಿದೆ. ಐಪಿಒ ಬಿಡುಗಡೆಗೂ ಕಂಪನಿ ಉತ್ಸುಕವಾಗಿದೆ. ಐಪಿಒ ಬಿಡುಗಡೆ ನಮ್ಮ ಪ್ರಮುಖ ಕಾರ್ಯಸೂಚಿಗಳಲ್ಲಿ ಒಂದಾಗಿದೆ ಎಂದು ಪರೋಕ್ಷವಾಗಿ ಫ್ಲಿಪ್​ಕಾರ್ಟ್ ಐಪಿಒ ಬಿಡುಗಡೆ ಬಗ್ಗೆ ಸೂಚನೆ ನೀಡಿದ್ದಾರೆ. ಮೂಲಗಳ ಪ್ರಕಾರ ಐಪಿಒ ಬಿಡುಗಡೆ ಪಟ್ಟಿಯನ್ನು  2023 ರ ಆರಂಭ ಅಥವಾ ಮಧ್ಯದವರೆಗೆ ಯೋಜಿಸಲಾಗಿದೆ.

  ಇದನ್ನೂ ಓದಿ: Multibagger stock: ಬರೋಬ್ಬರಿ 7 ಸಾವಿರ ಪಟ್ಟು ಲಾಭ! ಯಾವ ಷೇರು ಇದು?

  ವಾಲ್‌ಮಾರ್ಟ್ ಫ್ಲಿಪ್‌ಕಾರ್ಟ್‌ನಲ್ಲಿ ಸುಮಾರು 77% ಪಾಲನ್ನು 2018 ರಲ್ಲಿ ಸುಮಾರು $16 ಶತಕೋಟಿಗೆ ಸ್ವಾಧೀನಪಡಿಸಿಕೊಂಡಿದೆ. ಕಳೆದ ವರ್ಷವಷ್ಟೇ, Flipkart $3.6 ಶತಕೋಟಿ ಹಣವನ್ನು ಒಂದು ಸುತ್ತಿನಲ್ಲೇ ಸಂಗ್ರಹಿಸಿದ್ದು, ಇದು $37.6 ಶತಕೋಟಿ ಮೌಲ್ಯವನ್ನು ಗಳಿಕೆ ಮಾಡಿಕೊಟ್ಟಿದೆ.

  ಕಳೆ ವರ್ಷ ನಡೆಸಿದ ನಿಧಿ ಸಂಗ್ರಹವು ಕಂಪನಿಯ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಲು ಸಹಾಯ ಮಾಡಿತ್ತು. ಹೀಗಾಗಿ ಫ್ಲಿಪ್​ಕಾರ್ಟ್ ತನ್ನ ವ್ಯವಹಾರಗಳ ವಿಸ್ತರಣೆಗಾಗಿ ಇದೀಗ ಸಾಕಷ್ಟು ಹಣವನ್ನು ಹೊಂದಿದೆ. ಅಂದರೆ ಈ ಹಂತದಲ್ಲಿ IPO ಬಿಡುಗಡೆ ಮಾಡುವ ಅಗತ್ಯವಿಲ್ಲ ಎಂದು ಮೂಲವೊಂದು ತಿಳಿಸಿದೆ.

  ಇದನ್ನೂ ಓದಿ: ಮಕ್ಕಳೂ e-Shram ಯೋಜನೆ ಅಡಿ ನೋಂದಾಯಿಸಿಕೊಳ್ಳಬಹುದೇ? ಏನೆಲ್ಲ ಪ್ರಯೋಜನ ಸಿಗುತ್ತೆ?

  60 ಕ್ಕೂ ಹೆಚ್ಚು ಕಂಪನಿಗಳು 2021 ರಲ್ಲಿ ಭಾರತದಲ್ಲಿ ತಮ್ಮ ಮಾರುಕಟ್ಟೆಗೆ ಪದಾರ್ಪಣೆ ಮಾಡಿವೆ. ಇವುಗಳಲ್ಲಿ ಒಟ್ಟು $13.7 ಶತಕೋಟಿಗಿಂತ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಿವೆ. ಇದು ಹಿಂದಿನ ಮೂರು ವರ್ಷಗಳಿಗಿಂತ ಹೆಚ್ಚಾಗಿದ್ದು ದಾಖಲೆಯನ್ನೇ ಸೃಷ್ಟಿಸಿದೆ.
  Published by:guruganesh bhat
  First published: