Inflation: ಜೂನ್ ನಿಂದ ಬದಲಾಗ್ತಿವೆ ಈ 5 ನಿಯಮಗಳು; ಇದು ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರುತ್ತೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗೃಹ ಸಾಲದ ಮೇಲಿನ ಬಡ್ಡಿ (Home Loan Interest) ಹೆಚ್ಚಳ ಮಾಡಿದ್ರೆ, ಮೋಟಾರು ವಿಮೆ ಪ್ರಿಮಿಯಂ (Vehicele Insurance Premium) ದರ ಹೆಚ್ಚಳವಾಗಲಿದೆ. ಇವುಗಳ ಜೊತೆ ಹಲವು ದರ ಮತ್ತು ಶುಲ್ಕಗಳ ಮೊತ್ತ ಏರಿಕೆಯಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇನ್ನೂ ಮೂರು ದಿನಗಳಲ್ಲಿ ಮೇ (May) ತಿಂಗಳು ಕೊನೆಗೊಳ್ಳಲಿದೆ. ಜೂನ್ (June) ಮೊದಲ ದಿನದಿಂದಲೇ ಕೆಲವು ನಿಯಮಗಳು ಬದಲಾವಣೆಯಾಗುತ್ತಿದ್ದು, ಇದು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತಿವೆ. ಜೂನ್ 1 ರಿಂದ ಬದಲಾಗುವ ನಿಯಮಗಳನ್ನು ತಿಳಿದುಕೊಳ್ಳುವುದು ಪ್ರಮುಖವಾಗುತ್ತದೆ. ಈ ನಿಯಮಗಳ ನಿಮ್ಮ ಹಣಕಾಸಿನ ಬಜೆಟ್ (Finance Budget) ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗೃಹ ಸಾಲದ ಮೇಲಿನ ಬಡ್ಡಿ (Home Loan Interest) ಹೆಚ್ಚಳ ಮಾಡಿದ್ರೆ, ಮೋಟಾರು ವಿಮೆ ಪ್ರಿಮಿಯಂ (Vehicle Insurance Premium) ದರ ಹೆಚ್ಚಳವಾಗಲಿದೆ. ಇವುಗಳ ಜೊತೆ ಹಲವು ದರ ಮತ್ತು ಶುಲ್ಕಗಳ ಮೊತ್ತ ಏರಿಕೆಯಾಗುತ್ತಿದೆ.

ಎಸ್‌ಬಿಐನ ಗೃಹ ಸಾಲದ ಬಡ್ಡಿ ಹೆಚ್ಚಳ

ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ಗೃಹ ಸಾಲಗಳಿಗೆ ಬಾಹ್ಯ ಮಾನದಂಡ ಸಾಲ ದರವನ್ನು (ಇಬಿಎಲ್‌ಆರ್) ಹೆಚ್ಚಿಸಿದೆ. ಈಗ ಈ ಮಾನದಂಡದ ದರವು ಶೇಕಡಾ 0.40 ರಿಂದ ಶೇಕಡಾ 7.05 ಕ್ಕೆ ಏರಿದೆ.

ಅದೇ ರೀತಿ, ರೆಪೊ ಲಿಂಕ್ಡ್ ಲೆಂಡಿಂಗ್ ರೇಟ್ (RLLR) ಕೂಡ ಶೇ 0.40 ರಿಂದ ಶೇ 6.65 ಕ್ಕೆ ಏರಿಕೆಯಾಗಿದೆ. ಈ ಹಿಂದೆ ಈ ಎರಡೂ ದರಗಳು ಕ್ರಮವಾಗಿ ಶೇ.6.65 ಮತ್ತು ಶೇ.6.25ರಷ್ಟಿದ್ದವು. ಎಸ್‌ಬಿಐ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಹೆಚ್ಚಿದ ಬಡ್ಡಿದರಗಳು ಜೂನ್ 01 ರಿಂದ ಅನ್ವಯವಾಗಲಿದೆ. ಎಸ್‌ಬಿಐ ಸಹ ಕನಿಷ್ಠ ವೆಚ್ಚ ಆಧಾರಿತ ಸಾಲದ ದರವನ್ನು ಶೇಕಡಾ 0.10 ರಷ್ಟು ಹೆಚ್ಚಿಸಿದ್ದು, ಇದು ಮೇ 15 ರಿಂದ ಜಾರಿಗೆ ಬಂದಿದೆ.

ಇದನ್ನೂ ಓದಿ:  Amul Product: ಮಾರುಕಟ್ಟೆಗೆ ಬರಲಿದೆ ಅಮುಲ್ ಗೋಧಿ ಹಿಟ್ಟು; ಬೆಲೆ ಎಷ್ಟು ಗೊತ್ತಾ?

ಮೋಟಾರು ವಿಮೆ ಪ್ರೀಮಿಯಂ ದುಬಾರಿ

ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಇತ್ತೀಚಿನ ಅಧಿಸೂಚನೆಯ ಪ್ರಕಾರ, 1000 ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯದ ಕಾರುಗಳಿಗೆ ವಿಮಾ ಪ್ರೀಮಿಯಂ 2,094 ರೂ. ಆಗಲಿದೆ. ಕೋವಿಡ್‌ ಗೂ ಮುನ್ನ 2019-20ರಲ್ಲಿ 2,072 ರೂ. ಇತ್ತು. 1000 ಸಿಸಿಯಿಂದ 1500 ಸಿಸಿ ವರೆಗಿನ ಕಾರುಗಳಿಗೆ ವಿಮಾ ಕಂತು 3,416 ರೂ ಆಗುತ್ತಿದೆ. ಇದು ಮೊದಲು ರೂ 3,221 ಆಗಿತ್ತು.

ನಿಮ್ಮ ಕಾರಿನ ಎಂಜಿನ್ 1500 ಸಿಸಿಗಿಂತ ಹೆಚ್ಚಿದ್ದರೆ, ಈಗ ವಿಮಾ ಪ್ರೀಮಿಯಂ ರೂ 7,890 ಕ್ಕೆ ಇಳಿಯುತ್ತದೆ. ಈ ಹಿಂದೆ ಇದು 7,897 ರೂ.ಗಳಷ್ಟಿತ್ತು. ಸರ್ಕಾರವು 3 ವರ್ಷಗಳ ಏಕ ಪ್ರೀಮಿಯಂ ಅನ್ನು ಕೂಡ ಹೆಚ್ಚಿಸಿದೆ. ಇನ್ನು 1000ಸಿಸಿವರೆಗಿನ ಕಾರುಗಳಿಗೆ ರೂ.6,521, 1500ಸಿಸಿವರೆಗಿನ ಕಾರುಗಳಿಗೆ ರೂ.10,540 ಮತ್ತು 1500ಸಿಸಿ ಮೇಲ್ಪಟ್ಟ ಕಾರುಗಳಿಗೆ ರೂ.24,596 ವೆಚ್ಚವಾಗಲಿದೆ. ಅದೇ ರೀತಿ ದ್ವಿಚಕ್ರ ವಾಹನಗಳ ವಿಮಾ ಕಂತು ಕೂಡ ಹೆಚ್ಚಿಸಲಾಗಿದೆ.

ಚಿನ್ನದ ಹಾಲ್‌ ಮಾರ್ಕಿಂಗ್

ಎರಡನೇ ಹಂತದ ಕಡ್ಡಾಯ ಚಿನ್ನದ ಹಾಲ್‌ ಮಾರ್ಕಿಂಗ್ ಜೂನ್ 01 ರಿಂದ ಜಾರಿಗೆ ಬರಲಿದೆ. ಈಗ 256 ಹಳೆಯ ಜಿಲ್ಲೆಗಳನ್ನು ಹೊರತುಪಡಿಸಿ, 32 ಹೊಸ ಜಿಲ್ಲೆಗಳಲ್ಲಿಯೂ ಮೌಲ್ಯಮಾಪನ ಮತ್ತು ಹಾಲ್‌ ಮಾರ್ಕಿಂಗ್ ಕೇಂದ್ರಗಳು ಪ್ರಾರಂಭವಾಗಲಿವೆ. ಇದರ ನಂತರ, ಈ ಎಲ್ಲಾ 288 ಜಿಲ್ಲೆಗಳಲ್ಲಿ ಚಿನ್ನದ ಆಭರಣಗಳ ಹಾಲ್‌ಮಾರ್ಕ್ ಅನ್ನು ಕಡ್ಡಾಯಗೊಳಿಸಲಾಗುತ್ತದೆ.

ಈಗ ಈ ಜಿಲ್ಲೆಗಳಲ್ಲಿ 14, 18, 20, 22, 23 ಮತ್ತು 24 ಕ್ಯಾರೆಟ್‌ಗಳ ಆಭರಣಗಳನ್ನು ಮಾತ್ರ ಮಾರಾಟ ಮಾಡಬಹುದು. ಹಾಲ್‌ಮಾರ್ಕ್ ಇಲ್ಲದೆ ಅವುಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ.

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌

ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಗೆ ಈಗ ವಿತರಕರ ಶುಲ್ಕವಿರುತ್ತದೆ ಎಂದು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಹೇಳಿದೆ. ಈ ಶುಲ್ಕಗಳು ಜೂನ್ 15 ರಿಂದ ಅನ್ವಯವಾಗಲಿದೆ. ಬದಲಾವಣೆಯ ನಂತರ, ಪ್ರತಿ ತಿಂಗಳ ಮೊದಲ ಮೂರು ವಹಿವಾಟುಗಳು ಉಚಿತವಾಗಿರುತ್ತದೆ.

ನಾಲ್ಕನೇ ವಹಿವಾಟಿನಿಂದ ಪ್ರತಿ ಬಾರಿ 20 ರೂಪಾಯಿ ಮತ್ತು ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ. ನಗದು ಹಿಂಪಡೆಯುವಿಕೆ ಮತ್ತು ನಗದು ಠೇವಣಿ ಹೊರತುಪಡಿಸಿ, ಮಿನಿ ಸ್ಟೇಟ್‌ಮೆಂಟ್ ಹಿಂಪಡೆಯುವಿಕೆಯನ್ನು ಸಹ ವಹಿವಾಟಿನಲ್ಲಿ ಎಣಿಕೆ ಮಾಡಲಾಗುತ್ತದೆ. ಮಿನಿ ಸ್ಟೇಟ್‌ಮೆಂಟ್‌ ಗೆ ಶುಲ್ಕ 5 ರೂ ಮತ್ತು ಜಿಎಸ್‌ಟಿ ಆಗಿರುತ್ತದೆ.

ಇದನ್ನೂ ಓದಿ:  Cement Price Hike: ಒಂದು ತಿಂಗಳಲ್ಲಿ 55 ರೂ. ಏರಿಕೆ ಆಗಲಿದೆ ಸಿಮೆಂಟ್ ಬೆಲೆ

ಆಕ್ಸಿಸ್ ಬ್ಯಾಂಕ್ ಕನಿಷ್ಠ ಠೇವಣಿ ಮೊತ್ತ ಏರಿಕೆ

ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್ ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸುಲಭ ಉಳಿತಾಯ ಮತ್ತು ಸಂಬಳ ಕಾರ್ಯಕ್ರಮಗಳ ಖಾತೆಗಳಿಗೆ ಸರಾಸರಿ ಮಾಸಿಕ ಬ್ಯಾಲೆನ್ಸ್ ಮಿತಿಯನ್ನು 15,000 ರೂ.ನಿಂದ 25,000 ರೂ.ಗೆ ಹೆಚ್ಚಿಸಿದೆ. ಗ್ರಾಹಕರು ರೂ 1 ಲಕ್ಷ ಅವಧಿಯ ಠೇವಣಿ ಇರಿಸಿದರೆ, ನಂತರ ಅವರು ಈ ಷರತ್ತಿನಿಂದ ವಿನಾಯಿತಿ ಪಡೆಯುತ್ತಾರೆ.

ಅದೇ ರೀತಿ ಲಿಬರ್ಟಿ ಉಳಿತಾಯ ಖಾತೆಯ ಮಿತಿಯನ್ನು ಸಹ 15,000 ರೂ.ನಿಂದ 25,000 ರೂ.ಗೆ ಹೆಚ್ಚಿಸಲಾಗಿದೆ. ಗ್ರಾಹಕರು 25 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದರೆ, ಅವರು ಈ ಹೆಚ್ಚಳದ ಮಿತಿಯಿಂದ ವಿನಾಯಿತಿ ಪಡೆಯುತ್ತಾರೆ. ಈ ಎರಡೂ ಬದಲಾವಣೆಗಳು ಜೂನ್ 01 ರಿಂದ ಜಾರಿಗೆ ಬರುತ್ತವೆ.
Published by:Mahmadrafik K
First published: