Budget 2023: ಮೋದಿ ಸರ್ಕಾರದ ಅಮೃತ ಕಾಲದ ಬಜೆಟ್, ಘೋಷಣೆಯಾಗಿರುವ ಐದು ಅತಿದೊಡ್ಡ ಸಂದೇಶಗಳಿವು!

ಕೇಂದ್ರ ಬಜೆಟ್ ಮುಖ್ಯಾಂಶಗಳು

ಕೇಂದ್ರ ಬಜೆಟ್ ಮುಖ್ಯಾಂಶಗಳು

ಮುಂದಿನ ಚುನಾವಣೆಗೆ ದೇಶವು ಸಿದ್ಧಗೊಳ್ಳುತ್ತಿರುವ ಸಂದರ್ಭದಲ್ಲಿ ಹಾಗೂ ವಿವಿಧ ರಾಜ್ಯಗಳಲ್ಲಿ ಚುನಾವಣೆಗಳು ಆರಂಭಗೊಳ್ಳುವ ಸನ್ನಾಹದಲ್ಲಿರುವಾಗ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಬೆಂಬಲಿಸಿದ ದೇಶದ ಜನತೆಗಾಗಿ ಹಾಗೂ ಅವರ ಕಲ್ಯಾಣಕ್ಕಾಗಿ ಮೋದಿ ಸರಕಾರ ಪ್ರತಿಯೊಂದನ್ನು ಮಾಡಿದೆ.

ಮುಂದೆ ಓದಿ ...
  • Trending Desk
  • 3-MIN READ
  • Last Updated :
  • Share this:

ಈ ಬಾರಿಯ 2023 ರ ಯೂನಿಯನ್ ಬಜೆಟ್ (Union Budget 2023) ಬಡವರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಿದ ಜನಪರ ಬಜೆಟ್ ಆಗಿ ಮೂಡಿಬಂದಿದೆ ಎಂಬುದು ಹೆಚ್ಚಿನವರ ನಂಬಿಕೆಯಾಗಿದೆ. ಇದಕ್ಕೆ ಕಾರಣ ಬಡವರಿಗಾಗಿ ಪ್ರಮುಖ ಯೋಜನೆಗಳಾದ ವಸತಿ ಯೋಜನೆ, ಕುಡಿಯುವ ನೀರಿನ (Drinking Water) ಯೋಜನೆ ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ (Ayushman Bharat Yojana) ವಿಮಾ ಯೋಜನೆಗಳ ಹಂಚಿಕೆಯಲ್ಲಿ ಗಮನಾರ್ಹ ಹೆಚ್ಚಳ, ಆದಿವಾಸಿಗಳಿಗೆ ರೂ 15,000 ಕೋಟಿ ಹೊಸ ಯೋಜನೆ, ಮತ್ತು ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಹೊಸ ತೆರಿಗೆ ಪದ್ಧತಿಯಲ್ಲಿ ಸಡಿಲಿಕೆ ಹೀಗೆ 2023 ರ ಅಮೃತ್ ಕಾಲ ಬಜೆಟ್ ಮೋದಿ ಸರಕಾರದ ಪ್ರಮುಖ ಸಂದೇಶಗಳನ್ನು ಪ್ರಕಟಿಸಿದೆ.


ಬಜೆಟ್ ಘೋಷಣೆಗಳು


ಮುಂದಿನ ಚುನಾವಣೆಗೆ ದೇಶವು ಸಿದ್ಧಗೊಳ್ಳುತ್ತಿರುವ ಸಂದರ್ಭದಲ್ಲಿ ಹಾಗೂ ವಿವಿಧ ರಾಜ್ಯಗಳಲ್ಲಿ ಚುನಾವಣೆಗಳು ಆರಂಭಗೊಳ್ಳುವ ಸನ್ನಾಹದಲ್ಲಿರುವಾಗ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಬೆಂಬಲಿಸಿದ ದೇಶದ ಜನತೆಗಾಗಿ ಹಾಗೂ ಅವರ ಕಲ್ಯಾಣಕ್ಕಾಗಿ ಮೋದಿ ಸರಕಾರ ಪ್ರತಿಯೊಂದನ್ನು ಮಾಡಿದೆ.


ಹೊಸ ತೆರಿಗೆ ಪದ್ಧತಿಯಲ್ಲಿನ ಸಡಿಲಿಕೆಗಳು ಮಧ್ಯಮ ಹಾಗೂ ಕಡಿಮೆ ಆದಾಯಗಳನ್ನು ಹೊಂದಿರುವವರಿಗೆ ಹಾಗೂ ವಿನಾಯಿತಿಗಳನ್ನು ಪಡೆಯದವರಿಗೆ ಅನ್ವಯಿಸುತ್ತದೆ.


ಮನೆ, ನೀರು, ಔಷಧ!


ಸರ್ಕಾರವು 2024 ರಲ್ಲಿ ಪೂರ್ಣಗೊಳಿಸಲು ಉದ್ದೇಶವನ್ನಿಟ್ಟುಕೊಂಡಿರುವ ಬಡವರಿಗಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಅತಿದೊಡ್ಡ ಹೆಚ್ಚಳವಾಗಿದೆ ಮತ್ತು ಯೋಜನೆಗೆ 79,950 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಇದು 2022-23 ರಲ್ಲಿ 48,000 ಕೋಟಿ ರೂ.ಗಳಿಂದ 66% ದಷ್ಟು ಹೆಚ್ಚಾಗಿದೆ. 2024ರ ವೇಳೆಗೆ ಸುಮಾರು ರೂ 2.94 ಕೋಟಿ ಬಡವರು ಮನೆ ಪಡೆಯುವ ಗುರಿ ಹೊಂದಿದ್ದು, ಅದರಲ್ಲಿ ರೂ 2.12 ಕೋಟಿ ಮನೆಗಳನ್ನು ಪೂರ್ಣಗೊಳಿಸಿ ಬಡವರಿಗೆ ಹಸ್ತಾಂತರಿಸಲಾಗಿದೆ.


ಇದನ್ನೂ ಓದಿ: 'ನಿರ್ಮಲ' ಲೆಕ್ಕಾಚಾರದಲ್ಲಿ ಸಿಕ್ಕಿದ್ದೇನು? ಯಾರಿಗೆ ಸಿಹಿ, ಯಾರಿಗೆ ಕಹಿ? ಇಲ್ಲಿವೆ ಬಜೆಟ್ ಹೈಲೈಟ್ಸ್


ಇನ್ನೊಂದು ದೊಡ್ಡ ಉದ್ದೇಶವನ್ನು ಜಲ ಜೀವನ್ ಯೋಜನೆಯ ಮೇಲೆ ಹೊಂದಿದೆ. ಅದರ ಮೇಲೆ 2023-24 ರಲ್ಲಿ 70,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು ಏಕೆಂದರೆ ಈ ಯೋಜನೆಯು 2024 ರಲ್ಲಿ ಪೂರ್ಣಗೊಳ್ಳುವ ಗುರಿಯನ್ನು ಹೊಂದಿದೆ ಮತ್ತು ದೇಶದ ಎಲ್ಲಾ 20 ಕೋಟಿ ಕುಟುಂಬಗಳು ಒಂದೇ ನಲ್ಲಿಯಿಂದ ಶುದ್ಧ ಕುಡಿಯುವ ನೀರನ್ನು ಪಡೆಯುವ ಗುರಿಯನ್ನು ಹೊಂದಿದೆ.


ಕಳೆದ ವರ್ಷದ ಬಜೆಟ್‌ನಲ್ಲಿ 60,000 ಕೋಟಿ ರೂ.ಗಳಿಂದ ಹಂಚಿಕೆಯನ್ನು ಹೆಚ್ಚಿಸಲಾಗಿದೆ. 2019 ರಲ್ಲಿ ಕೇವಲ ಮೂರು ಕೋಟಿಯಿಂದ ಇಲ್ಲಿಯವರೆಗೆ 11 ಕೋಟಿ ಮನೆಗಳಿಗೆ ಕುಡಿಯುವ ನೀರು ಒದಗಿಸಲಾಗಿದೆ. ಈ ಯೋಜನೆಯು 2024 ರಲ್ಲಿ ಬಿಜೆಪಿಗೆ ಪ್ರಯೋಜನಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.


ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ!


ಬಜೆಟ್‌ನಲ್ಲಿ ಮೂರನೇ ಪ್ರಮುಖ ಉದ್ದೇಶವು ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಲ್ಲಿದೆ. ಕಳೆದ ಬಜೆಟ್‌ನಲ್ಲಿ 6,457 ಕೋಟಿ ರೂ.ಗಳಿಂದ 7,200 ಕೋಟಿ ರೂ.ಗೆ ಏರಿಸಲಾಗಿದೆ. ಈ ಯೋಜನೆಯಡಿ ಇದುವರೆಗೆ ದೇಶದ ಸುಮಾರು 4.5 ಕೋಟಿ ಬಡವರು ಉಚಿತ ಆರೋಗ್ಯ ವಿಮೆಯನ್ನು ಪಡೆದಿದ್ದಾರೆ.


ಪಿಎಂ-ಕಿಸಾನ್ ಅಡಿಯಲ್ಲಿ 11.4 ಕೋಟಿ ರೈತರಿಗೆ ಇದುವರೆಗೆ 2.2 ಲಕ್ಷ ಕೋಟಿ ರೂಪಾಯಿಗಳ ನಗದು ವರ್ಗಾವಣೆಯ ನಂತರ ಈ ಹಣಕಾಸು ವರ್ಷಕ್ಕೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ರೂ 60,000 ಕೋಟಿಗಳನ್ನು ನಿಗದಿಪಡಿಸಲಾಗಿದೆ.ಆದಾಗ್ಯೂ, ಸರ್ಕಾರವು 2022-23 ರಲ್ಲಿ ಪರಿಷ್ಕೃತ ಅಂದಾಜಿನಲ್ಲಿ 84,900 ಕೋಟಿ ರೂ.ಗಳಿಂದ MGNREGA ಮೇಲಿನ ಹಂಚಿಕೆಯನ್ನು ಈ ವರ್ಷದ ಬಜೆಟ್‌ನಲ್ಲಿ 60,000 ಕೋಟಿ ರೂ.ಗೆ ಗಮನಾರ್ಹವಾಗಿ ಕಡಿಮೆ ಮಾಡಿದೆ.


ಬುಡಕಟ್ಟು ಜನಾಂಗಗಳ ಕ್ಷೇಮಾಭಿವೃದ್ಧಿ


ಪರಿಶಿಷ್ಟ ಜಾತಿಗಳು (ಎಸ್‌ಸಿ) ಮತ್ತು ಬುಡಕಟ್ಟು ಜನಾಂಗದ ಮತದಾರರ ಕ್ಷೇತ್ರಗಳ ಮೇಲೆಯೂ ಬಜೆಟ್ ಸ್ಪಷ್ಟ ಗಮನಹರಿಸಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ PMPVTG (ಪ್ರಧಾನಿ ಅವರ ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳು) ಅಭಿವೃದ್ಧಿಗಾಗಿ ರೂ 15,000 ಕೋಟಿ ಘೋಷಿಸಿದೆ.


ನಿರ್ದಿಷ್ಟ ಬುಡಕಟ್ಟು ಗುಂಪುಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಮೂಲಭೂತ ಸೌಲಭ್ಯಗಳೊಂದಿಗೆ ಅವರ ವಾಸಸ್ಥಾನಗಳನ್ನು ಅಭಿವೃದ್ಧಿಗೊಳಿಸುವುದಾಗಿ ಹಣಕಾಸು ಸಚಿವರು ತಿಳಿಸಿದ್ದಾರೆ.


ಹೊಸ ತೆರಿಗೆ ಪದ್ಧತಿ


ಹೊಸ ತೆರಿಗೆ ಪದ್ಧತಿಯಲ್ಲಿ ಘೋಷಿಸಲಾದ ರಿಯಾಯಿತಿಗಳು ಕಡಿಮೆ ಅಥವಾ ಮಧ್ಯಮ ಆದಾಯವನ್ನು ಗಳಿಸುವ ಮತ್ತು ಯಾವುದೇ ವಿನಾಯಿತಿಗಳನ್ನು ಪಡೆಯಲು ಬಯಸದ ಯುವ ಮತದಾರರನ್ನು ಆಕರ್ಷಿಸುವ ನಿರೀಕ್ಷೆಯಿದೆ.


ಹಳೆಯ ತೆರಿಗೆ ಆಡಳಿತದ ಅಡಿಯಲ್ಲಿ, 80C, ಭವಿಷ್ಯ ನಿಧಿ ಮತ್ತು ವಸತಿ ಸಾಲದ ಅಸಲು ಮತ್ತು ಬಡ್ಡಿ ಪಾವತಿಗಳಂತಹ ವಿನಾಯಿತಿಗಳನ್ನು ಇನ್ನೂ ಪಡೆಯಬಹುದಾಗಿದೆ. ಹಳೆಯ ತೆರಿಗೆ ಪಾವತಿದಾರರು ಹೊಸ ಬಗೆಯ ಪಾವತಿ ವಿಧಾನಕ್ಕೆ ಹೊಂದಿಕೊಳ್ಳುವಂತೆ ಮನವಿ ಮಾಡುವುದು ಮೋದಿ ಸರಕಾರದ ಸವಲಾಗಿದೆ. ಈ ವರ್ಷದಿಂದ ಹೊಸ ತೆರಿಗೆ ಪದ್ಧತಿಯನ್ನು ಅನ್ವಯಿಸಲಾಗಿದೆ.

Published by:ವಾಸುದೇವ್ ಎಂ
First published: