Junio RuPay Card: ಮಕ್ಕಳಿಗೆ ಹೊಸ 'Debit card' ಪ್ರಾರಂಭಿಸಿದ ರುಪೇ ಪ್ಲಾಟ್‌ಫಾರ್ಮ್‌: ವೈಶಿಷ್ಟ್ಯಗಳು ಹೀಗಿವೆ..

Debit card: ಹೌದು, ಮಕ್ಕಳನ್ನು ಆದ್ಯತೆಯಾಗಿಟ್ಟುಕೊಂಡ ಫಿನ್‌ಟೆಕ್‌ ಸ್ಟಾರ್ಟ್ಅಪ್​ ಜ್ಯುನಿಯೋ (FinTech startup Junio) ರುಪೇ ಪ್ಲಾಟ್‌ಫಾರ್ಮ್‌ನಲ್ಲಿ ಚಿಕ್ಕ ಮಕ್ಕಳು ಮತ್ತು ಹದಿಹರೆಯದವರಿಗೆ ಸ್ಮಾರ್ಟ್ ಬಹುಪಯೋಗಿ ಕಾರ್ಡ್ ಬಿಡುಗಡೆ ಮಾಡಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಡೆಬಿಟ್‌ ಕಾರ್ಡ್ (Debit card)‌, ಕ್ರೆಡಿಟ್‌ ಕಾರ್ಡ್ (Credit card)‌ ಬಳಕೆ ಈಗ ಸಾಮಾನ್ಯವಾಗುತ್ತಿದ್ದು, ದೇಶದ ಬಹುತೇಕರ ಬಳಿ ಡೆಬಿಟ್‌ ಕಾರ್ಡ್‌ ಅಥವಾ ಎಟಿಎಂ (ATM) ಇದ್ದೇ ಇರುತ್ತದೆ. ಅದೇ ರಿತಿ ಹಲವರ ಬಳಿ ಕ್ರೆಡಿಟ್‌ ಕಾರ್ಡ್‌ ಕೂಡ ಇರುತ್ತದೆ. ಇದರಿಂದ ಶಾಪಿಂಗ್‌ ಮಾಲ್‌ಗಳಲ್ಲಿ, ಹೋಟೆಲ್‌ಗಳಲ್ಲಿ ಮುಂತಾದೆಡೆ ವಹಿವಾಟು ನಡೆಸಬಹುದು. ಆದರೆ, ಇದನ್ನು ಯುವಕರು ಹಾಗೂ ವಯಸ್ಕರು ಬಳಸುತ್ತಾರೆ. ಆದರೆ ಮಕ್ಕಳಿಗೆ ಈ ಕಾರ್ಡ್‌ಗಳನ್ನು ಕೊಡಲ್ಲ. ಮಕ್ಕಳು (Childrens) ಏನಾದ್ರೂ ಬೇಕು ಅಂದ್ರೆ ನಾವೇ ಅವರಿಗೆ ಅಂಗಡಿಯಲ್ಲಿ ಕೊಡಿಸುತ್ತೇವೆ. ಇಲ್ಲದಿದ್ದರೆ ಮನೆಯ ಸಮೀಪದ ಅಂಗಡಿಗೆ ಮಕ್ಕಳನ್ನ ಕಳಿಸುತ್ತೇವೆ. ಚಿಲ್ಲರೆ ಹಣ ಅಥವಾ ಪಾಕೆಟ್‌ ಮನಿ ಕೊಟ್ಟು ಮಕ್ಕಳ ಪೋಷಕರು ಕಳಿಸುತ್ತಾರೆ. ಆದರೀಗ, ಮಕ್ಕಳಿಗೂ ಬಹುಪಯೋಗಿ ಸ್ಮಾರ್ಟ್‌ ಡೆಬಿಟ್‌ ಕಾರ್ಡ್‌ ಬಿಡುಗಡೆ ಮಾಡಲಾಗಿದೆ.

    ಹೌದು, ಮಕ್ಕಳನ್ನು ಆದ್ಯತೆಯಾಗಿಟ್ಟುಕೊಂಡ ಫಿನ್‌ಟೆಕ್‌ ಸ್ಟಾರ್ಟ್ಅಪ್​ ಜ್ಯುನಿಯೋ (FinTech startup Junio) ರುಪೇ ಪ್ಲಾಟ್‌ಫಾರ್ಮ್‌ನಲ್ಲಿ ಚಿಕ್ಕ ಮಕ್ಕಳು ಮತ್ತು ಹದಿಹರೆಯದವರಿಗೆ ಸ್ಮಾರ್ಟ್ ಬಹುಪಯೋಗಿ ಕಾರ್ಡ್ ಬಿಡುಗಡೆ ಮಾಡಿದೆ.

    ಸ್ಟಾರ್ಟ್ಅಪ್ ಇಂದು 'ಜೂನಿಯೋ ರುಪೇ ಕಾರ್ಡ್' (Junio RuPay Card) ಅನ್ನು ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದ್ದು ಅದು ಅವರ ಆನ್‌ಲೈನ್ ಮತ್ತು ಆಫ್‌ಲೈನ್ ಖರೀದಿಗಳಿಗೆ ಡೆಬಿಟ್ ಕಾರ್ಡ್‌ನಂತೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿಕೆ ನೀಡಲಾಗಿದೆ. ಜೂನಿಯೋ ಕಾರ್ಡ್ ಮಕ್ಕಳಿಗೆ ಸುರಕ್ಷಿತ ಆಫ್‌ಲೈನ್ ಮತ್ತು ಆನ್‌ಲೈನ್ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ.

    ಇನ್ನು, ಜೂನಿಯೋ ರುಪೇ ಕಾರ್ಡ್ ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಜೂನಿಯೋದ ಸಹ-ಸಂಸ್ಥಾಪಕ ಅಂಕಿತ್ ಗೇರಾ “ಸಾಂಕ್ರಾಮಿಕ ರೋಗ ಹರಡಿದ ನಂತರ ಡಿಜಿಟಲ್ ಪಾವತಿಗಳು ಪ್ರಮುಖ ಹಂತ ತೆಗೆದುಕೊಂಡಿರುವುದರಿಂದ, ಜೂನಿಯೋ ಅಪ್ಲಿಕೇಶನ್ / ಕಾರ್ಡ್ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಗಮನಾರ್ಹ ಅಳವಡಿಕೆ ಕಂಡಿದೆ. ಅವರಿಗೆ ತೊಂದರೆ-ಮುಕ್ತ ಪಾವತಿ ಅನುಭವವನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ’’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    Read also: Money from RBI: ₹40 ಲಕ್ಷ ಕೊಡುತ್ತೆ ರಿಸರ್ವ್ ಬ್ಯಾಂಕ್, ಇಷ್ಟು ಮಾಡಿ ಸಾಕು!

    "ರುಪೇಯಿಂದ ಚಾಲಿತವಾಗಿ ಹೊಸದಾಗಿ ಪ್ರಾರಂಭಿಸಲಾದ ಜೂನಿಯೋ ಸ್ಮಾರ್ಟ್ ಕಾರ್ಡ್ ಯುವಕ - ಯುವತಿಯರಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಪಾವತಿಗಳನ್ನು ಸುಲಭವಾಗಿ ಮಾಡಲು ಅನುಮತಿಸುತ್ತದೆ. ರುಪೇ ಪ್ಲಾಟ್‌ಫಾರ್ಮ್‌ನ ದೃಢತೆ ಗಮನದಲ್ಲಿಟ್ಟುಕೊಂಡು ನಾವು ಈಗಾಗಲೇ ವ್ಯಾಪಾರಿ ನೆಟ್‌ವರ್ಕ್‌ನಾದ್ಯಂತ ಕಾರ್ಡ್‌ನ ಹೆಚ್ಚಿನ ಸ್ವೀಕಾರ ನೋಡುತ್ತಿದ್ದೇವೆ” ಎಂದು ಅವರು ಹೇಳಿದರು.



    ಇನ್ನು, “ಈ ಸ್ಮಾರ್ಟ್ ರುಪೇ ಕಾರ್ಡ್ ಚಿಕ್ಕ ಮಕ್ಕಳಿಗೆ ತಮ್ಮ ಪೋಷಕರ ಆಶ್ರಯದಲ್ಲಿ ಅವರ ವೆಚ್ಚಗಳನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ. ಈ ಕಾರ್ಡ್ ಯುವ ಹದಿಹರೆಯದವರಿಗೆ ತಮ್ಮ ಜೀವನದ ಆರಂಭಿಕ ಹಂತದಲ್ಲಿ ಡಿಜಿಟಲ್ ವಹಿವಾಟು ನಡೆಸಲು ಸಹ ಅಧಿಕಾರ ನೀಡುತ್ತದೆ ಎಂದು ನಾವು ನಂಬುತ್ತೇವೆ’’ ಎಂದು NPCIನ ಮುಖ್ಯ ಸಂಬಂಧ ನಿರ್ವಹಣೆ ಮತ್ತು ಪ್ರಮುಖ ಉಪಕ್ರಮಗಳ ನಳಿನ್ ಬನ್ಸಾಲ್ ಹೇಳಿದರು.

    Read also: Girlfriends: ಒಬ್ಬನಿಗೆ ಮಿನಿಮಮ್ 3 ಗರ್ಲ್​ಫ್ರೆಂಡ್ಸ್ ಇದಾರಂತೆ, ಈ ಊರಲ್ಲಿ ಎಲ್ರೂ ಹೀಗೇ!

    ಮಕ್ಕಳು ಮತ್ತು ಪೋಷಕರು ಜೂನಿಯೋ ಅಪ್ಲಿಕೇಶನ್‌ನಲ್ಲಿ ಸೈನ್-ಅಪ್ ಮಾಡಬಹುದು ಮತ್ತು ಶೂನ್ಯ ವಾರ್ಷಿಕ ಶುಲ್ಕಗಳೊಂದಿಗೆ ವರ್ಚುವಲ್ ಜೂನಿಯೊ ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸಬಹುದು. ಹೆಚ್ಚುವರಿಯಾಗಿ, ಮಕ್ಕಳು ಜೂನಿಯೋ ಪಾವತಿಗಳಲ್ಲಿ 7%ವರೆಗೆ ಕ್ಯಾಶ್‌ಬ್ಯಾಕ್ ಮತ್ತು ಇತರ ಪ್ರತಿಫಲ ಪ್ರಯೋಜನಗಳನ್ನು ಆನಂದಿಸಬಹುದು ಎಂದು ಹೇಳಿಕೆ ತಿಳಿಸಿದೆ.

    ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಆರೋಗ್ಯಕರ ಆರ್ಥಿಕ ಅಭ್ಯಾಸಗಳನ್ನು ಬೆಳೆಸುವುದು ಮತ್ತು ಆರ್ಥಿಕವಾಗಿ ಸ್ವತಂತ್ರ ವಯಸ್ಕರಾಗಿ ಬೆಳೆಯಲು ಸಹಾಯ ಮಾಡುವುದು ಕಂಪನಿಯ ಆಲೋಚನೆಯಾಗಿದೆ ಎಂದೂ ಕಂಪನಿ ತಿಳಿಸಿದೆ.
    Published by:Harshith AS
    First published: