Gold And Silver Rate on March 5, 2022: ಇತ್ತೀಚೆಗೆ ದೇಶದಲ್ಲಿ ಬಂಗಾರ (Gold), ಬೆಳ್ಳಿ (Silver) ದರದಲ್ಲಿ (Price) ಭಾರಿ ಏರುಪೇರು ಉಂಟಾಗುತ್ತಿದೆ. ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಯುದ್ಧದ (War) ಪರಿಣಾಮ, ಭಾರತದ ಷೇರುಪೇಟೆಯಲ್ಲಿ (Share Market) ಅಲ್ಲೋಲ ಕಲ್ಲೋಲ - ಮುಂತಾದ ಕಾರಣಗಳಿಂದ ಈ ವ್ಯತ್ಯಾಸಗಳಾಗುತ್ತಿದೆ ಎನ್ನಲಾಗುತ್ತಿದೆ. ಇದೇ ರೀತಿ ದೇಶದಲ್ಲಿಂದು ಚಿನ್ನದ ಬೆಲೆಯಲ್ಲಿ (Gold Price) ಏರಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,300 ರೂ. ಇದ್ದದ್ದು ಇಂದು 47,700 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,600 ರೂ. ಇದ್ದದ್ದು 52,040 ರೂ. ಆಗಿದೆ. ಬೆಳ್ಳಿಯ ದರದಲ್ಲೂ ಇಂದು ವ್ಯತ್ಯಾಸವಾಗಿದೆ. ಹಾಗಿದ್ರೆ ಬೆಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ (City) ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದನ್ನು ವಿವರವಾಗಿ ನೋಡೋಣ..
ಬೆಂಗಳೂರಿನಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 52,040 ರೂ.
ಇಂದು ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಏರಿಕೆಯಾಗಿದೆ. ಇಂದು 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 52,040 ರೂಪಾಯಿ ಆಗಿದೆ. ಇನ್ನು ಮಂಗಳೂರಿನಲ್ಲಿ 52,040 ರೂಪಾಯಿ ಇದ್ದರೆ, ಮೈಸೂರಿನಲ್ಲೂ ಇದೇ ಬೆಲೆಯಿದೆ. ಇನ್ನು 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ 47,700 ರೂಪಾಯಿ ಆಗಿದೆ.
ಉಳಿದ ಮಹಾನಗರಗಳಲ್ಲಿ ಇಂದಿನ ಚಿನ್ನದ ದರ
ಇನ್ನು ಉಳಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಪ್ರಮುಖವಾಗಿ ಚೆನ್ನೈನಲ್ಲಿ 53,270 ರೂ, ಮುಂಬೈ- 52,040 ರೂ, ದೆಹಲಿ- 52,040 ರೂ, ಕೊಲ್ಕತ್ತಾ- 52,040 ರೂ, ಹೈದರಾಬಾದ್- 52,040 ರೂ, ಕೇರಳ- 52,040 ರೂಪಾಯಿ ಹಾಗೂ ಪುಣೆಯಲ್ಲಿ 52,110 ರೂಪಾಯಿ ಬೆಲೆ ಇದೆ.
ಇದನ್ನೂ ಓದಿ: Multibagger Stock: ಕೇವಲ 1 ಲಕ್ಷ ರೂ. ಹೂಡಿಕೆ ಮಾಡಿದ್ರೆ ₹1.80 ಕೋಟಿ ನಿಮ್ಮದು: ಮಿಲಿಯನೇರ್ ಆಗುವ ದಾರಿ ಇಲ್ಲಿದೆ
ಮಹಾನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ನ ಚಿನ್ನದ ಬೆಲೆಯಲ್ಲೂ ಏರಿಕೆಯಾಗಿದೆ. ಚೆನ್ನೈ- 48,830 ರೂ, ಮುಂಬೈ- 47,700 ರೂ, ದೆಹಲಿ- 47,700 ರೂ, ಕೊಲ್ಕತ್ತಾ- 47,700 ರೂ, ಹೈದರಾಬಾದ್- 47,700 ರೂ, ಕೇರಳ- 47,700 ರೂ ಹಾಗೂ ಪುಣೆಯಲ್ಲಿ 47,750 ರೂಪಾಯಿ ಬೆಲೆ ಇದೆ.
ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ.
ಇಂದಿನ ಬೆಳ್ಳಿಯ ದರ ಹೀಗಿದೆ
ಬೆಳ್ಳಿ ಬೆಲೆಯಲ್ಲಿ ನಿನ್ನೆಗಿಂತ ಇಂದು ಕೂಡ ಮತ್ತೆ ಏರಿಕೆಯಾಗಿದೆ. ನಿನ್ನೆಗಿಂತ ಇಂದು 1 ಕೆಜಿ ಬೆಳ್ಳಿಗೆ 700 ರೂ. ಏರಿಕೆಯಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿ ದರ 67,300 ರೂ. ಇದ್ದುದು ಇಂದು 68,000 ರೂ. ಆಗಿದೆ.
ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರುರಿನಲ್ಲಿ ಒಂದು ಕೆಜಿ ಬೆಳ್ಳಿಗೆ 72,500 ರೂಪಾಯಿ ದರವಿದೆ. ಇನ್ನು ಮೈಸೂರು- 72,500 ರೂ., ಮಂಗಳೂರು- 72,500 ರೂ., ಮುಂಬೈ- 68,000 ರೂ, ಚೆನ್ನೈ- 72,500 ರೂ, ದೆಹಲಿ- 68,000 ರೂ, ಹೈದರಾಬಾದ್- 72,500 ರೂಪಾಯಿ ಹಾಗೂ ಕೊಲ್ಕತ್ತಾದಲ್ಲಿ 68,000 ರೂಪಾಯಿ ಬೆಲೆ ತಲುಪಿದೆ.
ಇದನ್ನೂ ಓದಿ: Money Control: ಕೈಯಲ್ಲಿ ಯಾಕೋ ದುಡ್ಡು ನಿಲ್ತಿಲ್ವಾ? ಹೀಗ್ ಮಾಡಿ ಆಮೇಲೆ ಮ್ಯಾಜಿಕ್ ನೋಡಿ..
ಸೂಚನೆ - ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ