Cryptocurrency: ಭಯೋತ್ಪಾದನಾ ಕೃತ್ಯಗಳಿಗೆ ಕ್ರಿಪ್ಟೊಕರೆನ್ಸಿ ಬಳಕೆ ಆಗಬಹುದು; ಸಚಿವೆ ನಿರ್ಮಲಾ ಸೀತಾರಾಮನ್

2022 ರ ಬಜೆಟ್‌ನಲ್ಲಿ ಘೋಷಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಭಾರತದ ಸ್ವಂತ ಡಿಜಿಟಲ್ ಕರೆನ್ಸಿಯನ್ನು ಪ್ರಾರಂಭಿಸಲು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದರು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

  • Share this:
ಭಾರತದಲ್ಲಿ ಈಗಾಗಲೇ ಅನಿಶ್ಚಿತವಾಗಿರುವ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯ (Cryptocurrency)  ಮೇಲೆ ಮತ್ತಷ್ಟು ಅನಿಶ್ಚಿತತೆಯ ಕರಿ ನೆರಳು ಕವಿಯುತ್ತಿದೆ.  ಭಾರತದಲ್ಲಿ ಕ್ರಿಪ್ಟೋ ಕರೆನ್ಸಿಗಳ ಅಧಿಕೃತತೆಯ ಕುರಿತು ಸೋಮವಾರ, ಏಪ್ರಿಲ್ 18 ರಂದು ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  (Finance Minister Nirmala Sitharaman) ಕ್ರಿಪ್ಟೋಕರೆನ್ಸಿಯ ಸುತ್ತ ಇರುವ ದೊಡ್ಡ ಅಪಾಯವೆಂದರೆ ಮನಿ ಲಾಂಡರಿಂಗ್ (Money laundering) ಮತ್ತು ಭಯೋತ್ಪಾದಕ ಶಕ್ತಿಗಳು (Terror financing) ಸಮಾಜದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಹಣಕಾಸಿಗಾಗಿ ಬಳಸುವ ಸಾಧ್ಯತೆ ಎಂದು ಆತಂಕ ವ್ಯಕ್ತಪಡಿಸಿದರು.  ಕ್ರಿಪ್ಟೋಕರೆನ್ಸಿಗಳಿಗೆ ತೆರಿಗಿ ವಿಧಿಸಿದರೂ ಇನ್ನೂ ಅಧಿಕೃತ ಹಣದ ಅವಕಾಶ ನೀಡದ ಹಿನ್ನೆಲೆಯಲ್ಲಿ ಅವರ ಹೇಳಿಕೆ ಮಹತ್ವ ಪಡೆದಿದೆ. 

ಅಂತರಾಷ್ಟ್ರೀಯ ಹಣಕಾಸು ನಿಧಿಯ ಸೆಮಿನಾರ್ ಒಂದರಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,  ಕ್ರಿಪ್ಟೋಕರೆನ್ಸಿಗಳನ್ನು ತಂತ್ರಜ್ಞಾನವನ್ನು ಬಳಸಿಕೊಂಡು ನಿಯಂತ್ರಣ ಮಾಡುವುದೊಂದೇ ಭವಿಷ್ಯದಲ್ಲಿ ಕೈಗೊಳ್ಳಬಹುದಾದ ಕ್ರಮವಾಗಿದೆ ಎಂದು ಭಾವಿಸಿರುವುದಾಗಿ ತಿಳಿಸಿದರು.

ಕೊವಿಡ್ ಬಂದಿದ್ದರಿಂದ ಡಿಜಿಟಲ್ ಹಣಕಾಸು ಬೆಳೆಯಿತು
ಡಿಜಿಟಲ್ ಜಗತ್ತಿನಲ್ಲಿ ಭಾರತದ ಕಾರ್ಯಕ್ಷಮತೆ ಮತ್ತು ಕಳೆದ ದಶಕದಲ್ಲಿ ಡಿಜಿಟಲ್ ಮೂಲಸೌಕರ್ಯ ಚೌಕಟ್ಟನ್ನು ನಿರ್ಮಿಸಲು ಸರ್ಕಾರದ ಪ್ರಯತ್ನಗಳನ್ನು ಸೀತಾರಾಮನ್ ವಿವರಿಸಿದರು. COVID-19 ಸಾಂಕ್ರಾಮಿಕ ಸಮಯದಲ್ಲಿ ಭಾರತದಲ್ಲಿ ಡಿಜಿಟಲ್ ಅಳವಡಿಕೆ ದರದ ಹೆಚ್ಚಳವನ್ನು ಒತ್ತಿಹೇಳಿದರು.

ದತ್ತಾಂಶ ಅಥವಾ ಅಂಕಿ ಅಂಶ ಹೇಳುವುದು ಹೀಗೆ
"ನಾನು 2019 ರ ದತ್ತಾಂಶಗಳನ್ನು ವಿವರಿಸುವುದಾದರೆ ಭಾರತದಲ್ಲಿ ಡಿಜಿಟಲ್ ಅಳವಡಿಕೆ ದರವು ಸುಮಾರು 85 ಶೇಕಡಾ ಆಗಿತ್ತು. ಆದರೆ ಜಾಗತಿಕವಾಗಿ, ಅದೇ ವರ್ಷ ಇದು ಕೇವಲ 64  ಶೇಕಡಾದ  ಸಮೀಪದಲ್ಲಿತ್ತು. ಆದ್ದರಿಂದ ಕೊವಿಡ್ ಸಾಂಕ್ರಾಮಿಕ ಸಮಯವು ಡಿಜಿಟಲ್ ಜಗತ್ತಿಗೆ ಭಾರತದ ಜನರನ್ನು ಪ್ರವೇಶಿಸಲು ಸಹಾಯ ಮಾಡಿತು. ಈ ಅವಧಿಯಲ್ಲಿ ಸಾಮಾನ್ಯ ಜನರು ಸಹ ಡಿಜಿಟಲ್ ಹಣಕಾಸು ಸೇವೆಗಳಿಗೆ ಒಗ್ಗಿಕೊಂಡಿದ್ದಾರೆ. ಇದು ವಾಸ್ತವದ ದತ್ತಾಂಶಗಳಲ್ಲೂ ಸಾಬೀತಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದರು.

ಇದನ್ನೂ ಓದಿ: Mushroom in AC farm: ಎಸಿ ರೂಮ್​ನಲ್ಲಿ ಅಣಬೆ ಕೃಷಿ! ವರ್ಷಕ್ಕೆ 50 ಲಕ್ಷ ಆದಾಯ

ಕ್ರಿಪ್ಟೋಕರೆನ್ಸಿ ಅಥವಾ ಬ್ಲಾಕ್‌ಚೈನ್ ಮತ್ತು ಫಿನ್‌ಟೆಕ್‌ಗೆ ಬಂದಾಗ ಭಾರತವು ಎಲ್ಲಾ ಆಯ್ಕೆಗಳನ್ನು ಮುಚ್ಚುತ್ತಿಲ್ಲ ಎಂದು ಮಾರ್ಚ್‌ನಲ್ಲಿ ನಡೆದ ಇಂಡಿಯಾ ಟುಡೆ ಕಾನ್ಕ್ಲೇವ್‌ನಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಭಾರತದಲ್ಲಿ ಕ್ರಿಪ್ಟೋಕರೆನ್ಸಿ ನಿಯಮಾವಳಿಗಳ ರಚನೆಯ ಬಗ್ಗೆ ಎಲ್ಲಾ ವಿವರಗಳನ್ನು ಒದಗಿಸುವ ವಿಷಯದ ಕುರಿತು ಕ್ಯಾಬಿನೆಟ್ ಟಿಪ್ಪಣಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಸೀತಾರಾಮನ್ ಹೇಳಿದ್ದರು.

ಸುಪ್ರೀಂಕೋರ್ಟ್ ಸಹ ಕಾಮೆಂಟ್ ಮಾಡಿದೆ
ಈಗಾಗಲೇ ಸುಪ್ರೀಂ ಕೋರ್ಟ್ ಕ್ರಿಪ್ಟೋಕರೆನ್ಸಿಯ ಬಗ್ಗೆ ಕಾಮೆಂಟ್ ಮಾಡಿದೆ. ಆರ್‌ಬಿಐ ಅಧಿಕೃತ ಕ್ರಿಪ್ಟೋಕರೆನ್ಸಿಯನ್ನು ಪರಿಚಯಿಸಬಹುದು. ಆದರೂ ನಮ್ಮ ಕಡೆಯಿಂದ, ನಾವು ಎಲ್ಲಾ ಇತರ ಆಯ್ಕೆಗಳನ್ನು ಸ್ಥಗಿತಗೊಳಿಸುತ್ತಿಲ್ಲ ಎಂಬುದು ನಮಗೆ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Loan Alert: 10 ಲಕ್ಷ ಸಾಲ ನೀಡುವ ಯೋಜನೆ ಬಂದ್; ಬದಲಿ ಯೋಜನೆ ಇಲ್ಲಿದೆ!

2022 ರ ಬಜೆಟ್‌ನಲ್ಲಿ ಘೋಷಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಭಾರತದ ಸ್ವಂತ ಡಿಜಿಟಲ್ ಕರೆನ್ಸಿಯನ್ನು ಪ್ರಾರಂಭಿಸಲು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದರು. ಕ್ರಿಪ್ಟೋ ಆಸ್ತಿಗಳ ಮೇಲಿನ ತೆರಿಗೆಯನ್ನು ಮೊದಲು ಜಾರಿಗೆ ತರಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದರು. ಭಾರತದಲ್ಲಿ ರಿಸರ್ವ್ ಬ್ಯಾಂಕ್ ಅಧಿಕೃತ ಕ್ರಿಪ್ಟೋ ಕರೆನ್ಸಿ ಬಿಡುಗಡೆ ಮಾಡುತ್ತದೆಯೋ ಅಥವಾ ಕ್ರಿಪ್ಟೋ ಕರೆನ್ಸಿಗಳಿಗೆ ಮಾನ್ಯತೆ ನಿರಾಕರಿಸಲಾಗುತ್ತದೆಯೋ ಎಂಬ ಕುರಿತೂ ಇನ್ನೂ ನೂರಕ್ಕೆ ನೂರು ಪ್ರತಿಶತಃ ಖಚಿತವಾಗಿಲ್ಲ.
Published by:guruganesh bhat
First published: