ಹಲವು ದಿನಗಳಿಂದ ಟ್ವಿಟರ್ (Twitter) ಹಾಗೂ ಎಲಾನ್ ಮಸ್ಕ್ (Elon Musk) ನಡುವೆ ನಡೆಯುತ್ತಿದ್ದ ಅನಿಶ್ಚಿತತೆಗೆ ತೆರೆ ಬಿದ್ದಿದ್ದು, ವಿಶ್ವದ ಅತಿ ಶ್ರೀಮಂತ ವ್ಯಕ್ತಿ (Richest person in the world) ಎಲಾನ್ ಮಸ್ಕ್ ಟ್ವಿಟರ್ ಅನ್ನು ಖರೀದಿಸಿದ್ದಾರೆ. ಹೌದು, ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ (Micro blogging platform) ಅನ್ನು 44 ಬಿಲಿಯನ್ ಅಮೆರಿಕ ಡಾಲರ್ (US Dollar) ಅಂದರೆ ಭಾರತೀಯ ರೂಪಾಯಿ (Indian Rupees) ಲೆಕ್ಕದಲ್ಲಿ ಬರೋಬ್ಬರಿ 3.36 ಲಕ್ಷ ಕೋಟಿ ರೂಪಾಯಿಗೆ ಎಲಾನ್ ಮಸ್ಕ್ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ. ಎಲಾನ್ ಮಸ್ಕ್ ಒಡೆತನದ ಘಟಕವು ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಪ್ರತಿ ಷೇರಿಗೆ (Shares) 54.20 ಡಾಲರ್ ಅನ್ನು ನಗದು ರೂಪದಲ್ಲಿ ನೀಡಿದೆ. ಸುಮಾರು 44 ಬಿಲಿಯನ್ ಡಾಲರ್‌ಗೆ ಟ್ವಿಟ್ಟರ್ ಅನ್ನು ಎಲಾನ್ ಮಸ್ಕ್ ಖರೀದಿಸಿದ್ದಾರೆ.
ಟ್ವಿಟರ್ ಖರೀದಿಸಿದ ಎಲಾನ್ ಮಸ್ಕ್
" ಟ್ವಿಟರ್ ಮಂಡಳಿಯು ಮೌಲ್ಯ, ನಿಶ್ಚಿತತೆ ಮತ್ತು ಹಣಕಾಸಿನ ಮೇಲೆ ಉದ್ದೇಶಪೂರ್ವಕವಾಗಿ ಗಮನಹರಿಸುವುದರೊಂದಿಗೆ ಎಲಾನ್ ಮಸ್ಕ್ ಅವರ ಪ್ರಸ್ತಾಪವನ್ನು ನಿರ್ಣಯಿಸಲು ಚಿಂತನಶೀಲ ಮತ್ತು ಸಮಗ್ರ ಪ್ರಕ್ರಿಯೆಯನ್ನು ನಡೆಸಿತು. ಪ್ರಸ್ತಾವಿತ ವಹಿವಾಟು ಗಣನೀಯ ನಗದು ಪ್ರೀಮಿಯಂ ಅನ್ನು ತಲುಪಿಸುತ್ತದೆ ಮತ್ತು ಟ್ವಿಟರ್‌ನ ಷೇರುದಾರರಿಗೆ ಇದು ಉತ್ತಮ ಮಾರ್ಗವಾಗಿದೆ ಎಂದು ನಾವು ನಂಬುತ್ತೇವೆ” ಎಂದು ಟ್ವಿಟ್ಟರ್‌ನ ಸ್ವತಂತ್ರ ಮಂಡಳಿಯ ಮುಖ್ಯಸ್ಥ ಬ್ರೆಟ್ ಟೇಲರ್ ಹೇಳಿದ್ದಾರೆ.
ಪ್ರತಿ ಷೇರಿಗೆ 54.20 ಡಾಲರ್
ಇನ್ನು, ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡಿದ್ದು, ಈ ಹಿನ್ನೆಲೆ ಪ್ರಸ್ತುತ ಟ್ವಿಟ್ಟರ್ ಷೇರು ಹೊಂದಿರುವವರು ಪ್ರತಿ ಷೇರಿಗೆ 54.20 ಡಾಲರ್ ನಗದು ಹಣ ಪಡೆಯುತ್ತಾರೆ. ಇದು ಏಪ್ರಿಲ್ 1, 2022 ರಂದು Twitter ನ ಮುಕ್ತಾಯದ ಸ್ಟಾಕ್ ಬೆಲೆಗೆ 38% ಪ್ರೀಮಿಯಂ ಆಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Twitter: ಟ್ವಿಟ್ಟರ್‌ನಲ್ಲಿ ಖಾತೆ ನಿಷ್ಕ್ರೀಯಗೊಳಿಸಬೇಕಾ? ಹಾಗಿದ್ರೆ ನೀವು ಮಾಡಬೇಕಾಗಿರೋದು ಇಷ್ಟೇ...
ಖರೀದಿ ಬಗ್ಗೆ ಎಲಾನ್ ಮಸ್ಕ್ ಹೇಳಿದ್ದೇನು?
ಟ್ವಿಟರ್ ಖರೀದಿಸಿದ ಬಗ್ಗೆ ವಿಶ್ವದ ನಂ. 1 ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ " ಟ್ವಿಟರ್ ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುವ ಉದ್ದೇಶ ಮತ್ತು ಪ್ರಸ್ತುತತೆಯನ್ನು ಹೊಂದಿದೆ. ನಾನು ನಮ್ಮ ತಂಡಗಳ ಬಗ್ಗೆ ತುಂಬ ಹೆಮ್ಮೆ ಹೊಂದಿದ್ದೇನೆ, ಮತ್ತು ಅವರ ಕೆಲಸದಿಂದ ಸ್ಪೂರ್ತಿ ಹೊಂದಿದ್ದೇನೆ. ವಾಕ್ ಸ್ವಾತಂತ್ರ್ಯವು ಕಾರ್ಯನಿರ್ವಹಿಸುವ ಪ್ರಜಾಪ್ರಭುತ್ವದ ತಳಹದಿಯಾಗಿದೆ ಮತ್ತು ಟ್ವಿಟರ್ ಡಿಜಿಟಲ್ ಟೌನ್ ಸ್ಕ್ವೇರ್ ಆಗಿದ್ದು, ಅಲ್ಲಿ ಮಾನವೀಯತೆಯ ಭವಿಷ್ಯಕ್ಕೆ ಪ್ರಮುಖ ವಿಷಯಗಳು ಚರ್ಚೆಯಾಗುತ್ತವೆ" ಎಂದು ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.
ಎಲಾನ್ ಮಸ್ಕ್, ಸಿಇಒ ಪರಾಗ್ ಅಗರ್ವಾಲ್ ಹೇಳಿದ್ದೇನು?
ಇನ್ನೊಂದೆಡೆ, ಟ್ವಿಟರ್ ನ ಭಾರತೀಯ ಮೂಲದ ಸಿಇಒ ಪರಾಗ್ ಅಗರ್ವಾಲ್, "ಪ್ರಾಡಕ್ಟ್ (ಉತ್ಪನ್ನ)ವನ್ನು ಹೊಸ ವೈಶಿಷ್ಟ್ಯಗಳನ್ನು ಹೆಚ್ಚಿಸುವ ಮೂಲಕ, ನಂಬಿಕೆಯನ್ನು ಹೆಚ್ಚಿಸಲು ಅಲ್ಗಾರಿದಮ್‌ಗಳನ್ನು ಓಪನ್ ಸೋರ್ಸ್ ಮಾಡುವುದು, ಸ್ಪ್ಯಾಮ್ ಬಾಟ್‌ಗಳನ್ನು ಸೋಲಿಸುವುದು ಮತ್ತು ಎಲ್ಲಾ ಮನುಷ್ಯರನ್ನು ದೃಢೀಕರಿಸುವ ಮೂಲಕ ಟ್ವಿಟರ್ ಅನ್ನು ಹಿಂದೆಂದಿಗಿಂತಲೂ ಉತ್ತಮಗೊಳಿಸಲು ನಾನು ಬಯಸುತ್ತೇನೆ ಎಂದಿದ್ದಾರೆ.
ಇನ್ನು ಟ್ವಿಟರ್ ಪ್ರಚಂಡ ಸಾಮರ್ಥ್ಯವನ್ನು ಹೊಂದಿದೆ - ಅದನ್ನು ಅನ್‌ಲಾಕ್ ಮಾಡಲು ಕಂಪನಿ ಮತ್ತು ಬಳಕೆದಾರರ ಸಮುದಾಯದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: Elon Musk: ಇವರು ಟೆಸ್ಲಾ ಸಂಸ್ಥಾಪಕನಲ್ಲ ಎಂದ ಬೆಂಗಳೂರಿನ ವ್ಯಕ್ತಿಗೆ ಎಲೋನ್ ಮಸ್ಕ್ ಹೇಳಿದ್ದೇನು..?
ಟ್ವಿಟರ್ ಖರೀದಿಸಲು ಎಲಾನ್ ಮಸ್ಕ್ 25.5 ಬಿಲಿಯನ್ ಡಾಲರ್ ಸಂಪೂರ್ಣ ಬದ್ಧ ಸಾಲ ಮತ್ತು ಮಾರ್ಜಿನ್ ಲೋನ್ ಫೈನಾನ್ಸಿಂಗ್ ಅನ್ನು ಪಡೆದುಕೊಂಡಿದ್ದಾರೆ ಹಾಗೂ ಸರಿಸುಮಾರು 21 ಬಿಲಿಯನ್ ಅಮೆರಿಕ ಡಾಲರ್ ಈಕ್ವಿಟಿ ಬದ್ಧತೆಯನ್ನು ಒದಗಿಸುತ್ತಿದ್ದಾರೆ. ಈ ಮಧ್ಯೆ, ತನ್ನ ಮೊದಲ ತ್ರೈಮಾಸಿಕ ಆರ್ಥಿಕ ವರ್ಷ 2022 ಫಲಿತಾಂಶಗಳನ್ನು ಏಪ್ರಿಲ್ 28, 2022 ರಂದು ಮಾರುಕಟ್ಟೆ ತೆರೆಯುವ ಮೊದಲು ಬಿಡುಗಡೆ ಮಾಡಲು ಟ್ವಿಟ್ಟರ್ ಪ್ಲ್ಯಾನ್ ಮಾಡುತ್ತಿದೆ ಎಂದೂ ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ