Loan: ಹಬ್ಬದ ಶಾಪಿಂಗ್‌ಗಾಗಿ ಸಾಲ ಪಡೆದಿದ್ರೆ ಅದನ್ನು ಸುಲಭವಾಗಿ ಮರುಪಾವತಿಸಲು ಇಲ್ಲಿದೆ ಕೆಲವೊಂದು ಟಿಪ್ಸ್..

ಬಡ್ಡಿ ವೆಚ್ಚ ಕಡಿಮೆ ಮಾಡಿಕೊಂಡು ಇಎಮ್‌ಐ ಹೊರೆ ಕಡಿಮೆ ಮಾಡಲು ಈ ಸಲಹೆಗಳು ಖಂಡಿತ ಸಹಕಾರಿಯಾಗಲಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

ಹಬ್ಬದ ಸೀಸನ್‌ಗಳಲ್ಲಿ (Festival Season) ಖರ್ಚುವೆಚ್ಚಗಳು ತುಸು ಹೆಚ್ಚಾಗಿಯೇ ಇರುತ್ತವೆ. ಅದೂ ಅಲ್ಲದೆ ಹಬ್ಬದ ಸಮಯಗಳಲ್ಲಿ ಬೇರೆ ಬೇರೆ ಶಾಪ್‌ಗಳು, ರೀಟೇಲ್ ತಾಣಗಳು ನೀಡುವ ಆಫರ್‌ಗಳಿಗಾಗಿ ಕೂಡ ಜನ ಕಾಯುತ್ತಿರುತ್ತಾರೆ. ಏಕೆಂದರೆ ಈ ಸಮಯದಲ್ಲಿ ಶಾಪಿಂಗ್ ನಡೆಸಿದರೆ ರಿಯಾಯಿತಿ ದರದಲ್ಲಿ (Discount Rate) ಉತ್ತಮ ವಸ್ತುಗಳು ದೊರೆಯುವುದು ಮಾತ್ರವಲ್ಲದೆ ಹಣ ಉಳಿಸ ಬಹುದಾಗಿದೆ. ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು (Debit and Credit Card) ಬಳಸಿ ಕೂಡ ಜನರು ಶಾಪಿಂಗ್ ಮಾಡುತ್ತಾರೆ. ಈ ಸಮಯದಲ್ಲಿ ಇಎಮ್‌ಐ ಸೌಲಭ್ಯ ಪಡೆದುಕೊಂಡು ಕಂತಿನ ರೂಪದಲ್ಲಿ (instalment) ಖರೀದಿಸಿದ ವಸ್ತುವಿಗೆ ಪಾವತಿ ಮಾಡಿದರೆ ಸಾಕಾಗುತ್ತದೆ. ಇನ್ನು ಕೆಲವರು ಹಬ್ಬದ ಸಮಯದ ಖರೀದಿಗಾಗಿ ಸಾಕಷ್ಟು ಹಣ ಕೈಯಲ್ಲಿಲ್ಲದಿದ್ದರೆ ವೈಯಕ್ತಿಕ ಸಾಲಗಳನ್ನು ಪಡೆದುಕೊಳ್ಳುತ್ತಾರೆ.


ನಿಮ್ಮ ಬಡ್ಡಿದರ ಕಡಿಮೆ ಮಾಡಿಕೊಂಡು ಇಎಮ್‌ಐಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಅತಿ ಅಗತ್ಯವಾಗಿದ್ದು ಸಾಲ ಮರುಪಾವತಿಗಳ ಸಮಯದಲ್ಲಿ ನೀವು ವಿಫಲರಾಗುವುದಿಲ್ಲ. ನಿಮ್ಮ ಬಡ್ಡಿ ವೆಚ್ಚ ಕಡಿಮೆ ಮಾಡಿಕೊಂಡು ಇಎಮ್‌ಐ ಹೊರೆ ಕಡಿಮೆ ಮಾಡಲು ಈ ಸಲಹೆಗಳು ಖಂಡಿತ ಸಹಕಾರಿಯಾಗಲಿದೆ.


ಕ್ರೆಡಿಟ್ ಕಾರ್ಡ್ ಲೋನ್‌ಗಳಲ್ಲಿ ಸಣ್ಣ ಕಾಲಾವಧಿ ಆರಿಸಿ:


ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಖರೀದಿ ಮಾಡುವುದು ಉತ್ತಮವಾಗಿದ್ದರೂ ಸಣ್ಣ ಇಎಮ್‌ಐಗಳನ್ನು ಆಯ್ಕೆಮಾಡುವುದು ಉತ್ತಮವಾಗಿದೆ. ಆದಷ್ಟು 12 ತಿಂಗಳಿಗಿಂತ ಕಡಿಮೆ ಅವಧಿಯ ಲೋನ್‌ಗಳನ್ನು ಆರಿಸಿ. ಇಂತಹ ಲೋನ್‌ಗಳ ಬಡ್ಡಿದರವು ಅಧಿಕವಾಗಿದ್ದರೂ, ನೀವು ಕಡಿಮೆ ಅವಧಿ ಆರಿಸಿಕೊಂಡಷ್ಟು ಬಡ್ಡಿದರವು ಕಡಿಮೆಯಾಗಿರುತ್ತದೆ. ಮೂರು ತಿಂಗಳು ಇಲ್ಲವೇ ಆರು ತಿಂಗಳ ಇಎಮ್‌ಐ ಕಾಲಾವಧಿ ಆರಿಸಿದರೆ ಸಾಮಾನ್ಯವಾಗಿ ಈ ಕಾಲಾವಧಿಗಳು ವೆಚ್ಚರಹಿತ ಇಎಮ್‌ಐಗಳಾಗಿರುತ್ತದೆ.


ಲೋನ್ ಸಂಯೋಜಿಸುವುದು:


ಇಎಮ್‌ಐ ಮುಖಾಂತರ ಖರೀದಿಸಿದ ನಂತರ ಲೋನ್ ಅವಧಿಯನ್ನು ಸಣ್ಣರೂಪದಲ್ಲಿರಿಸಿಕೊಂಡು (3 ಅಥವಾ 6 ತಿಂಗಳು) ಲೋನ್‌ಗಳನ್ನು ಸಂಯೋಜಿಸಿಕೊಂಡು ಒಂದೇ ಲೋನ್‌ ರೂಪದಲ್ಲಿ ಪಾವತಿಸಬಹುದಾಗಿದೆ. ಉದಾ. ನೀವು 1.5 ಲಕ್ಷಗಳ ಖರೀದಿ ಮಾಡಿದ್ದೀರಿ ಹಾಗೂ ಇದನ್ನು ನೀವು 2 ವರ್ಷಗಳ ಇಎಮ್‌ಐನಂತೆ ಮಾರ್ಪಡಿಸಿಕೊಂಡಿದ್ದೀರಿ. ಈ ಸಮಯದಲ್ಲಿ 2 ವರ್ಷಗಳಿಗೆ ನಿಮ್ಮ ಬಡ್ಡಿದರವು ಸುಮಾರು 25,000-30,000 ಸಾವಿರವಾಗಿರುತ್ತದೆ. ನೀವು ಈ ಲೋನ್‌ಗಳ ಮೇಲೆ 18% ಬಡ್ಡಿ ಪಾವತಿಸುತ್ತೀರಿ. ಅದೂ ಅಲ್ಲದೆ ನೀವು ಪ್ರಕ್ರಿಯೆ ಶುಲ್ಕ ಹಾಗೂ ಜಿಎಸ್‌ಟಿಯನ್ನು ಬಡ್ಡಿಯ ಮೇಲೆ ಪಾವತಿಸಬೇಕಾಗುತ್ತದೆ


ನಿಮ್ಮ ಬಡ್ಡಿಯ ಹೊರೆ ಕಡಿಮೆ ಮಾಡಲು ನೀವು ಎರಡು ವರ್ಷಗಳ ವೈಯಕ್ತಿಕ ಸಾಲ ಆಯ್ಕೆ ಮಾಡಿಕೊಳ್ಳಬಹುದು. ನೀವು 12% ಅಥವಾ ಅದಕ್ಕೂ ಕಡಿಮೆ ದರದ ಬಡ್ಡಿಯನ್ನು ಪಡೆದುಕೊಳ್ಳುತ್ತೀರಿ ಹಾಗೂ ಎಲ್ಲಾ ಕ್ರೆಡಿಟ್ ಕಾರ್ಡ್ ಲೋನ್‌ಗಳನ್ನು ಮರುಪಾವತಿಸಬಹುದು. ಹೀಗೆ ಮಾಡುವುದರಿಂದ ಎರಡು ವರ್ಷಗಳಿಗೆ ನೀವು 5-8,000 ಬಡ್ಡಿದರ ಉಳಿಸಬಹುದು ಹಾಗೂ ಬಡ್ಡಿದರ ಉಳಿಸಲು ಮರುಪಾವತಿ ಕೂಡ ಸುಲಭವಾಗಿರುತ್ತದೆ.


ಇದನ್ನು ಓದಿ: Flipkart Diwali Sell: ಕೇವಲ 500 ರೂಗೆ ಸಿಗಲಿದೆ ದುಬಾರಿ ಬೆಲೆಯ ಈ Smart Watch

ಬ್ಯಾಲೆನ್ಸ್ ಟ್ರಾನ್ಸ್‌ಫರ್:


ಇಂತಹ ಸನ್ನಿವೇಶದಲ್ಲಿ ನೀವು ಅನುಸರಿಸಬಹುದಾದ ಇನ್ನೊಂದು ವಿಧಾನವೆಂದರೆ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಆಗಿದೆ. ನೀವು ಹೆಚ್ಚಿನ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ ನೀವು ಬಾಕಿ ಉಳಿದಿರುವ ಬ್ಯಾಲೆನ್ಸ್ ಅನ್ನು ಒಂದು ಕಾರ್ಡ್‌ನಿಂದ ಇನ್ನೊಂದು ಕಾರ್ಡ್‌ಗೆ ವರ್ಗಾಯಿಸಬಹುದು ಹಾಗೂ ಕಡಿಮೆ ಬಡ್ಡಿ ದರಗಳಲ್ಲಿ ಮುಂದಿನ ಆರು ತಿಂಗಳೊಳಗೆ ಮೊತ್ತವನ್ನು ಮರುಪಾವತಿಸಬಹುದು. ಸಾಮಾನ್ಯವಾಗಿ ಬ್ಯಾಂಕುಗಳು ದೀರ್ಘಾವಧಿಯ ಇಎಮ್‌ಐಗಳಿಗಿಂತ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆಯ ಮೇಲೆ ಕಡಿಮೆ ಬಡ್ಡಿ ದರಗಳನ್ನು ವಿಧಿಸುತ್ತವೆ.


ಇದನ್ನು ಓದಿ: Smartphone Tips: ಮೊಬೈಲ್​ ಪದೇ ಪದೇ ಹ್ಯಾಂಗ್​ ಆಗುತ್ತಿದ್ಯಾ; ಈ 3 ಸೆಟ್ಟಿಂಗ್ಸ್​ ಬದಲಾಯಿಸಿ ಮಾಡಿ ಸಾಕು

ಇಎಮ್‌ಐ ಹೊರೆ ಕಡಿಮೆ ಮಾಡಲು ನೀವು ಇನ್ನೊಂದು ವಿಧಾನ ಅನುಸರಿಸಬಹುದು. ನೀವು ಈಗಾಗಲೇ ವೈಯಕ್ತಿಕ ಸಾಲ ಹೊಂದಿದ್ದರೆ ಹಾಗೂ ಆ ಸಾಲವು ಒಂದು ವರ್ಷಕ್ಕಿಂತ ಹಳೆಯದಾಗಿದ್ದರೆ ವೈಯಕ್ತಿಕ ಸಾಲವನ್ನು ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡುವ ಮೂಲಕ, ಈಗ ಇರುವ ಲೋನ್‌ನ ಬಡ್ಡಿದರ ಕಡಿಮೆಮಾಡಿಕೊಂಡು, ಕಡಿಮೆ ಬಡ್ಡಿ ದರದಲ್ಲಿ ಹೆಚ್ಚುವರಿ ಲೋನ್ ಅನ್ನು ಪಡೆದುಕೊಳ್ಳಬಹುದು. ವೈಯಕ್ತಿಕ ಸಾಲ ಬ್ಯಾಲೆನ್ಸ್ ಟ್ರಾನ್ಸ್‌ಫರ್‌ನಲ್ಲಿ ಬ್ಯಾಂಕ್‌ಗಳು ಕಡಿಮೆ ಬಡ್ಡಿದರದಲ್ಲಿ 300-400 ಮೂಲ ಪಾಯಿಂಟ್‌ಗಳನ್ನು ಒದಗಿಸುತ್ತವೆ.


ವಿಳಂಬ ಪಾವತಿಗಳನ್ನು ಮಾಡಬೇಡಿ:


ಯಾವುದೇ ವಿಧಾನವನ್ನು ನೀವು ಅನುಸರಿಸಿದರೂ ಸರಿಯಾದ ಸಮಯಕ್ಕೆ ಇಎಮ್‌ಐಗಳನ್ನು ಪಾವತಿಸುವುದನ್ನು ಮರೆಯದಿರಿ. ನೀವು ಪಾವತಿ ವಿಳಂಬ ಮಾಡಿದಂತೆ ಆರ್ಥಿಕ ಹೊರೆ ಹೆಚ್ಚಾಗುತ್ತಲೇ ಇರುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್‌ಗೆ ಹಾನಿಯನ್ನುಂಟು ಮಾಡಬಹುದು. ಲೋನ್‌ಗಳನ್ನು ಸರಿಯಾದ ಸಮಯಕ್ಕೆ ಮರುಪಾವತಿಸುವುದು ನಿಮಗೆ ಉತ್ತಮ ಕ್ರೆಡಿಟ್ ಸ್ಕೋರ್ ನಿರ್ವಹಿಸಲು ಸಹಕಾರಿಯಾಗಿರುತ್ತದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಕಡಿಮೆ ಬಡ್ಡಿದರಗಳಲ್ಲಿ ಲೋನ್ ತೆಗೆದುಕೊಳ್ಳಲು ಸಹಕಾರಿಯಾಗಿರುತ್ತದೆ.


Published by:Seema R
First published: