Electric Scooter Fire: ಎಲೆಕ್ಟ್ರಿಕ್ ಸ್ಕೂಟರ್​ಗಳಿಗೆ ಬೆಂಕಿ ಬೀಳ್ತಿರೋದಕ್ಕೆ ಕಾರಣ ಗೊತ್ತಾಯ್ತು!

ಎಲೆಕ್ಟ್ರಿಕ್ ಸ್ಕೂಟರ್​ಗಳಿಗೆ ಬೆಂಕಿ ತಗುಲಲು ಕಾರಣ ಕಂಡುಹಿಡಿಯಲು ಸಂಶೋಧನೆಯನ್ನೇ ಮಾಡಲಾಗುತ್ತಿದೆ. ಈ ಸಂಶೋಧನೆಯ ವರದಿ ಇನ್ನೇನು ಅಧಿಕೃತವಾಗಿಯೂ ಬಹಿರಂಗಗೊಳ್ಳಲಿದೆ. ಸದ್ಯ ಇಷ್ಟು ವಿಷಯ ರಿವೀಲ್ ಆಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗೆ ಆಹುತಿಯಾದ ವಿಡಿಯೋ ದ್ರಶ್ಯ

ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗೆ ಆಹುತಿಯಾದ ವಿಡಿಯೋ ದ್ರಶ್ಯ

 • Share this:
  ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್​ಗಳಿಗೆ ಬೆಂಕಿ ಬೀಳಲು (Electric Scooter Fire) ಕೊನೆಗೂ ಕಾರಣವೊಂದನ್ನು ಸಂಶೋಧನೆ ನಡೆಸಿ ಹುಡುಕಲಾಗಿದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ ಹಿಡಿಯಲು ದೋಷಯುಕ್ತ ಬ್ಯಾಟರಿ ಸೆಲ್‌ಗಳು ಮತ್ತು ಮಾಡ್ಯೂಲ್‌ಗಳು ಪ್ರಮುಖ ಕಾರಣವೆಂದು ಗುರುತಿಸಲಾಗಿದೆ ಎಂದು ಎರಡು ಸರ್ಕಾರಿ ಮೂಲಗಳು ತಿಳಿಸಿದ್ದಾಗಿ ರಾಯಿಟರ್ಸ್ ವರದಿ ಮಾಡಿದೆ. ಜಪಾನ್‌ನ ಸಾಫ್ಟ್‌ಬ್ಯಾಂಕ್ ಗ್ರೂಪ್‌ನಿಂದ (SoftBank Group) ಬೆಂಬಲಿತವಾಗಿರುವ ಓಲಾ ಎಲೆಕ್ಟ್ರಿಕ್ (Ola Electric) ಸೇರಿದಂತೆ ಮೂರು ಕಂಪನಿಗಳನ್ನು ಒಳಗೊಂಡ ಎಲೆಕ್ಟ್ರಿಕ್ ಸ್ಕೂಟರ್​ಗಳಲ್ಲಿ (E-Scooter Fire) ಬೆಂಕಿ ಕಾಣಿಸಿಕೊಂಡು ಘಟನೆಗಳನ್ನು ತನಿಖೆ ಮಾಡಲಾದ ನಂತರ ವರದಿ ಬಹಿರಂಗಗೊಂಡಿದೆ ಎಂದು ತಿಳಿದುಬಂದಿದೆ.

  ಅದರಲ್ಲೂ ಏಪ್ರಿಲ್‌ ತಿಂಗಳಲ್ಲಿ ದೇಶದ ಅತಿ ಹೆಚ್ಚು ಮಾರಾಟವಾದ ಇ-ಸ್ಕೂಟರ್ ತಯಾರಕ ಕಂಪನಿ ಓಲಾ ಪ್ರಕರಣದಲ್ಲಿ ಬ್ಯಾಟರಿ ಸೆಲ್‌ಗಳು ಮತ್ತು ಬ್ಯಾಟರಿ ನಿರ್ವಹಣಾ ವ್ಯವಸ್ಥೆಯಲ್ಲಿ ಸಮಸ್ಯೆ ಕಂಡುಬಂದಿದೆ ಎಂದು ವರದಿಯ ಮೂಲವೊಂದು ತಿಳಿಸಿದೆ.

  ಶೇಕಡಾ 80 ರಷ್ಟು ಮಾರುಕಟ್ಟೆಯ ಪಾಲು ಗಳಿಸುವ ಗುರಿ
  ಭಾರತದ ಇ-ಸ್ಕೂಟರ್‌ಗಳು ಮತ್ತು ಇ-ಬೈಕ್‌ಗಳ ಮಾರುಕಟ್ಟೆಯು 2030 ರ ವೇಳೆಗೆ ಒಟ್ಟು ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇಕಡಾ 80 ರಷ್ಟನ್ನು ಒಳಗೊಂಡಿರುತ್ತವೆ ಎಂದು ವರದಿಗಳು ಸೂಚಿಸುತ್ತವೆ. ಸದ್ಯ ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್​ಗಳ ಪಾಲು ಶೇಕಡಾ 2 ರಷ್ಟಿದೆ.

  ಕಾರ್ಬನ್ ನ್ಯೂಟ್ರಾಲಿಟಿ ಗುರಿಗೆ ಅಪಾಯ
  ಆದರೆ ಎಲೆಕ್ಟ್ರಿಕ್ ಸ್ಕೂಟರ್​ಗಳಿಗೆ ಬೆಂಕಿ ತಗುಲಿದ ಪ್ರಕರಣಗಳು ಸುರಕ್ಷತೆಯ ಮೇಲಿನ ಕಾಳಜಿಯು ಗ್ರಾಹಕರ ವಿಶ್ವಾಸವನ್ನು ಅಪಾಯಕ್ಕೆ ತಳ್ಳುತ್ತಿದೆ. ಇದು ಭಾರತದ ಕಾರ್ಬನ್ ನ್ಯೂಟ್ರಾಲಿಟಿಗೆ ಸಂಬಂಧಿಸಿದ ಗುರಿಗಳ ಹಳಿ ತಪ್ಪಿಸುವ ಅಪಾಯವೂ ಇದೆ.

  ಎಲೆಕ್ಟ್ರಿಕ್ ಸ್ಕೂಟರ್​ಗಳಿಗೆ ಬೆಂಕಿ ತಗುಲಿದ ಕಾರಣ ಕಂಡುಹಿಡಿಯಲು ಹೆಚ್ಚಿನ ತಪಾಸಣೆ ಮಾಡಲು ಸರ್ಕಾರವು ಮೂರು ಕಂಪನಿಗಳಿಂದ ಬ್ಯಾಟರಿಗಳ ಮಾದರಿಗಳನ್ನು ತೆಗೆದುಕೊಂಡಿದೆ. ಅಂತಿಮ ತನಿಖಾ ವರದಿಯನ್ನು ಸುಮಾರು ಎರಡು ವಾರಗಳಲ್ಲಿ ನಿರೀಕ್ಷಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

  ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳು
  ಏಪ್ರಿಲ್ 19ರ ಮಂಗಳವಾರ ರಾತ್ರಿ ಮನೆಯಲ್ಲಿ ಚಾರ್ಜಿಂಗ್‌ಗಾಗಿ ಇಟ್ಟಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನ ಡಿಟ್ಯಾಚೇಬಲ್ ಬ್ಯಾಟರಿ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದರು. ಓಲಾ, ಓಕಿನಾವಾ ಮತ್ತು ಪ್ಯೂರ್ ಇವಿಗಳಂತಹ ದ್ವಿಚಕ್ರ ಎಲೆಕ್ಟ್ರಿಕ್ ವಾಹನಗಳು ಬೆಂಕಿಗೆ ಆಹುತಿಯಾಗಿರುವ ಪ್ರಕರಣಗಳು ದಾಖಲಾಗಿದ್ದವು. ಕಳೆದ ಒಂದು ತಿಂಗಳಿನಿಂದ, ದಾಖಲಾಗುತ್ತಿರುವ ಹಲವಾರು ಬೆಂಕಿ ಘಟನೆಗಳು ಎಲೆಕ್ಟ್ರಿಕ್ ವಾಹನಗಳೊಂದಿಗೆ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

  ಇದನ್ನೂ ಓದಿ: Explained: ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಏಕೆ ಬೆಂಕಿ ಬೀಳ್ತಿದೆ?

  ಇ-ಸ್ಕೂಟರ್‌ಗಳಲ್ಲಿ ಏಕೆ ಬೆಂಕಿ ಕಾಣಿಸಿಕೊಳ್ಳುತ್ತಿದೆ?
  ಭಾರತದಲ್ಲಿ ಇ-ಸ್ಕೂಟರ್ಗಳು ಏಕೆ ಬೆಂಕಿಗೆ ಆಹುತಿಯಾಗುತ್ತಿವೆ ಎಂಬುವುದನ್ನು ತಿಳಿದುಕೊಳ್ಳಲು ಮೊದಲು ಅವುಗಳ ಬ್ಯಾಟರಿ ಬಗ್ಗೆ ತಿಳಿದುಕೊಳ್ಳಬೇಕು. ಎಲೆಕ್ಟ್ರಿಕ್ ಕಾರುಗಳಿಂದ ಹಿಡಿದು ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ಗಳವರೆಗೆ, ಲಿಥಿಯಂ-ಐಯಾನ್ (ಲಿ-ಐಯಾನ್) ಬ್ಯಾಟರಿಗಳು ಇಂದು ಅತ್ಯಂತ ಜನಪ್ರಿಯ ಬ್ಯಾಟರಿ ಪ್ರಕಾರವಾಗಿದ್ದು, ಪ್ರಪಂಚದಾದ್ಯಂತ ಲಕ್ಷಾಂತರ ಗ್ರಾಹಕ ಎಲೆಕ್ಟ್ರಾನಿಕ್ಸ್‌ಗಳಿಗೆ ಶಕ್ತಿ ತುಂಬುತ್ತಿವೆ.

  ಇದನ್ನೂ ಓದಿ: EV Charging Stations: ಎಲೆಕ್ಟ್ರಿಕ್ ವಾಹನಗಳನ್ನು ಎಲ್ ಬೇಕಾದ್ರೂ ಚಾರ್ಜ್ ಮಾಡಿ! ಕರ್ನಾಟಕದಲ್ಲೇ 1000 ಚಾರ್ಜಿಂಗ್ ಸ್ಟೇಶನ್ ಶುರು

  ಹೇಗೆ ಕೆಲಸ ಮಾಡುತ್ತೆ ಗೊತ್ತೇ?
  ಆನೋಡ್ ಮತ್ತು ಕ್ಯಾಥೋಡ್ ಲಿಥಿಯಂ ಸಂಗ್ರಹವಾಗಿರುವ ಸ್ಥಳವಾಗಿದೆ. ಆದರೆ ಎಲೆಕ್ಟ್ರೋಲೈಟ್ ಧನಾತ್ಮಕ ಆವೇಶದ ಲಿಥಿಯಂ ಅಯಾನುಗಳನ್ನು ಆನೋಡ್‌ನಿಂದ ಕ್ಯಾಥೋಡ್‌ಗೆ ಮತ್ತು ಪ್ರತಿಯಾಗಿ ವಿಭಜಕದ ಮೂಲಕ ಒಯ್ಯುತ್ತದೆ. ಲಿಥಿಯಂ ಅಯಾನುಗಳ ಚಲನೆಯು ಆನೋಡ್‌ನಲ್ಲಿ ಉಚಿತ ಎಲೆಕ್ಟ್ರಾನ್‌ಗಳನ್ನು ಸೃಷ್ಟಿಸುತ್ತದೆ.
  Published by:guruganesh bhat
  First published: