New Toll System: ಫಾಸ್ಟ್​ ಟ್ಯಾಗ್ ರದ್ದು? ಹೊಸ ಹೈಟೆಕ್ ಟೋಲ್ ಸಿಸ್ಟಮ್ ಪ್ರಯಾಣಿಕರಿಗೆ ಲಾಭವೋ ನಷ್ಟವೋ?

ಸದ್ಯ ಈ ವ್ಯವಸ್ಥೆ ಯುರೋಪ್ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆ ದೇಶಗಳಲ್ಲಿ ಸಾಕಷ್ಟು ಯಶಸ್ವಿಯಾಗಿದೆ ಎಂದು ವರದಿ ತಿಳಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ಕೇಂದ್ರ ಸರ್ಕಾರವು ಟೋಲ್ ಸಂಗ್ರಹಣೆಗೆ (Vehicle Tolls) ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ ಎಂದು ವರದಿಯಾಗಿದೆ. ವಾಹನಗಳಿಂದ ಟೋಲ್ ಸಂಗ್ರಹಿಸಲು ಬಳಸಲಾಗುವ ಫಾಸ್ಟ್​ ಟ್ಯಾಗ್ (FASTag) ವ್ಯವಸ್ಥೆಯನ್ನು ರದ್ದುಗೊಳಿಸಿ ಹೊಸ ವ್ಯವಸ್ಥೆಗೆ ಓಂಕಾರ ಹಾಕಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಸರ್ಕಾರವು ಈಗ ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ಬದಲಿಸಿ, ಟೋಲ್‌ಗಳನ್ನು ಸಂಗ್ರಹಿಸಲು (Toll Collection) ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆಯನ್ನು ಬಳಸುತ್ತದೆ. ಹೊಸ ವ್ಯವಸ್ಥೆಯ (New Toll System) ಪ್ರಾಯೋಗಿಕ ಯೋಜನೆಯನ್ನು ಈಗಾಗಲೇ ದೇಶಾದ್ಯಂತ ಕಾರ್ಯಗತಗೊಳಿಸಲಾಗುತ್ತಿದೆ ಎಂದು ದಿ ಸ್ಟೇಟ್ಸ್​ಮನ್ ಪತ್ರಿಕೆ ವರದಿ ಮಾಡಿದೆ. ಅಂದಹಾಗೆ ಈ ಹೊಸ ಯೋಜನೆ ದೇಶಾದ್ಯಂತ ಸುಮಾರು 1.37 ಲಕ್ಷ ವಾಹನಗಳನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.

    ಜಾರಿಗೊಳಿಸಲು ಉದ್ದೇಶಿಸಿರುವ ಹೊಸ ಯೋಜನೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಅಥವಾ ಎಕ್ಸ್‌ಪ್ರೆಸ್‌ವೇಗಳಲ್ಲಿ ಸಂಚರಿಸುವ ವಾಹನಗಳಿಗೆ ವಾಹನವು ಎಷ್ಟು ಕಿಲೋಮೀಟರ್‌ಗಳಷ್ಟು ಪ್ರಯಾಣಿಸುತ್ತದೆಯೋ ಅದಕ್ಕೆ ಅನುಗುಣವಾಗಿ ಟೋಲ್‌ಗಳನ್ನು ಕಡಿತಗೊಳಿಸಲಾಗುತ್ತದೆ. ಹೆದ್ದಾರಿಯಲ್ಲಿ ವಾಹನ ಹೆಚ್ಚು ಕಿಲೋಮೀಟರ್ ಹೋದಷ್ಟೂ ಹೆಚ್ಚು ಟೋಲ್ ವಿಧಿಸಲಾಗುತ್ತದೆ ಎಂದು ವರದಿಯಾಗಿದೆ.

    ಸದ್ಯ ಯೂರೋಪ್​ನ ದೇಶಗಳಲ್ಲಿ ಇದೆ ಈ ವ್ಯವಸ್ಥೆ
    ಸದ್ಯ ಈ ವ್ಯವಸ್ಥೆ ಯುರೋಪ್ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆ ದೇಶಗಳಲ್ಲಿ ಸಾಕಷ್ಟು ಯಶಸ್ವಿಯಾಗಿದೆ ಎಂದು ವರದಿ ತಿಳಿಸಿದೆ. ಅಸ್ತಿತ್ವದಲ್ಲಿರುವ ಫಾಸ್ಟ್ಯಾಗ್ ವಿಧಾನವನ್ನು ಬದಲಿಸಿ ಭಾರತದಲ್ಲಿ ಇದನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನಡೆ ನಡೆಸಿದೆ.

    ಪ್ರಸ್ತುತ ವ್ಯವಸ್ಥೆ ಹೀಗಿದೆ
    ಪ್ರಸ್ತುತ ಒಂದು ಟೋಲ್ ಕೇಂದ್ರದಿಂದ ಇನ್ನೊಂದು ಟೋಲ್ ಕೇಂದ್ರಕ್ಕೆ ಇರುವ ಅಂತರಕ್ಕೆ ಟೋಲ್ ಮೊತ್ತವನ್ನು ಪಾವತಿಸಲಾಗುತ್ತದೆ. ಇನ್ನು ಮುಂದೆ ಒಂದು ಕಿಲೋಮೀಟರ್ ಪ್ರಯಾಣಿಸಲು ಟೋಲ್ ವಿಧಿಸಲಾಗುತ್ತದೆ.

    ಇದನ್ನೂ ಓದಿ: LIC IPO Alert: ಯಾವುದೇ ತೊಂದರೆ ಇಲ್ಲದೇ ಎಲ್​ಐಸಿ ಐಪಿಒ ಅಪ್ಲೈ ಮಾಡೋಕೆ ಈ ನಿಯಮ ತಿಳಿಯಿರಿ

    ಈಗ ಪ್ರಯಾಣಿಕರು ಟೋಲ್‌ನ ಸಂಪೂರ್ಣ ಮೊತ್ತವನ್ನು ಪಾವತಿಸುತ್ತಾರೆ. ಮುಂದಿನ ಟೋಲ್ ನಿಲ್ದಾಣವನ್ನು ತಲುಪುವ ಮೊದಲು ಯಾರೊಬ್ಬರ ಪ್ರಯಾಣವು ಮಧ್ಯದಲ್ಲಿ ಎಲ್ಲೋ ಮುಗಿದಿದ್ದರೆ, ಇನ್ನೂ ವ್ಯಕ್ತಿಯು ಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಹೊಸ ವ್ಯವಸ್ಥೆಯು ವ್ಯಕ್ತಿಯು ಪ್ರಯಾಣಿಸಿದ ದೂರಕ್ಕೆ ಮಾತ್ರ ಹಣವನ್ನು ವಿಧಿಸುತ್ತದೆ. ಹೊಸ ವ್ಯವಸ್ಥೆಯಲ್ಲಿ, ವಾಹನವು ಸುಂಕದ ರಸ್ತೆಗೆ ಪ್ರವೇಶಿಸಿದ ತಕ್ಷಣ ತೆರಿಗೆ ಲೆಕ್ಕಾಚಾರವು ಪ್ರಾರಂಭವಾಗುತ್ತದೆ.

    ಹೊಸ ವ್ಯವಸ್ಥೆ vs ಫಾಸ್ಟ್‌ಟ್ಯಾಗ್‌: ಏನು ವ್ಯತ್ಯಾಸ?
    ಆದರೆ ಹೊಸ ಪ್ರಕ್ರಿಯೆ ಜಾರಿಗೊಳಿಸುವ ಮುನ್ನ ಸಾರಿಗೆ ನೀತಿಯನ್ನೂ ಬದಲಾಯಿಸುವ ಅಗತ್ಯವಿದೆ ಎಂದು ಪರಿಣಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಷ್ಯಾ ಮತ್ತು ದಕ್ಷಿಣ ಕೊರಿಯಾದ ಸಾರಿಗೆ ತಜ್ಞರು ಸಹ ಇದೇ ರೀತಿ ಮುಂಬರುವ ವ್ಯವಸ್ಥೆಗೆ ಕೆಲವು ಅಗತ್ಯ ಕ್ರಮಗಳನ್ನು ಸಿದ್ಧಪಡಿಸುತ್ತಿದ್ದಾರೆ.

    ಈ ಎರಡು ದೇಶಗಳಲ್ಲಿ ಕೈಗೊಳ್ಳಲಾಗುವ ಕ್ರಮಗಳ ವರದಿ ಮುಂದಿನ ಕೆಲವು ವಾರಗಳಲ್ಲಿ ಬಿಡುಗಡೆಯಾಗಬಹುದು. ರಷ್ಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ವರದಿ ಪರಿಶೀಲಿಸಿದ ನಂತರ ಭಾರತದಲ್ಲೂ ಈ ಕ್ರಮ ವೇಗ ಪಡೆಯಬಹುದು ಎನ್ನಲಾಗಿದೆ.

    ಇದನ್ನೂ ಓದಿ: SBI, HDFC ಮತ್ತು ICICI ಬ್ಯಾಂಕ್‌ಗಳ ಹೊಸ ಎಫ್‌ಡಿ ಬಡ್ಡಿದರ ಎಷ್ಟು? ಇಲ್ಲಿ ಚೆಕ್ ಮಾಡಿ

    ಫಾಸ್ಟ್​ ಟ್ಯಾಗ್ ವ್ಯವಸ್ಥೆಯನ್ನು ರದ್ದುಪಡಿಸುವ ಕುರಿತು ಸರ್ಕಾರ ಈವರೆಗೆ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ. ಆದರೂ ಸುಧಾರಿತ ಶುಲ್ಕ ಸಂಗ್ರಹ ವ್ಯವಸ್ಥೆ ರೂಪಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದೇ ಹೇಳಾಗುತ್ತಿದೆ. ಟೋಲ್ ಶುಲ್ಕವನ್ನು ವಿಧಿಸಲು ಉಪಗ್ರಹ ಆಧಾರಿತ ನ್ಯಾವಿಗೇಷನ್ ವ್ಯವಸ್ಥೆಯನ್ನು ಬಳಸುವ ಹೊಸ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಯೋಜಿಸುತ್ತಿದೆ ಎಂದು ಹಲವಾರು ಆನ್‌ಲೈನ್ ವರದಿಗಳು ಸೂಚಿಸಿವೆ.
    Published by:guruganesh bhat
    First published: