• Home
  • »
  • News
  • »
  • business
  • »
  • Jackfruit Business: ಬ್ಯಾಂಕ್ ಉದ್ಯೋಗಿಯ ಕೈ ಹಿಡಿದ ಕೃಷಿ: ಹಲಸಿನ ಹಣ್ಣಿನಿಂದ ಇವರಿಗಾದ ಲಾಭ ಎಷ್ಟು ಗೊತ್ತೆ?

Jackfruit Business: ಬ್ಯಾಂಕ್ ಉದ್ಯೋಗಿಯ ಕೈ ಹಿಡಿದ ಕೃಷಿ: ಹಲಸಿನ ಹಣ್ಣಿನಿಂದ ಇವರಿಗಾದ ಲಾಭ ಎಷ್ಟು ಗೊತ್ತೆ?

ಹಲಸಿನ ಹಣ್ಣು

ಹಲಸಿನ ಹಣ್ಣು

ಸಾಧನೆ ಮಾಡುವ ಮನಸ್ಸು ಹಾಗೂ ಶ್ರಮ ವಹಿಸಿ ದುಡಿಯುವ ಸಾಮರ್ಥ್ಯ ಇದ್ದರೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ ಅನ್ನೋದ್ರಲ್ಲಿ ಡೌಟೇ ಇಲ್ಲ. ಇಲ್ಲೊಬ್ಬರು ಬ್ಯಾಂಕ್‌ ಉದ್ಯೋಗಿ ಹಲಸಿನ ಹಣ್ಣಿನ ಕೃಷಿ ಮಾಡಿ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ.

  • Share this:

ಕೃಷಿಯಲ್ಲಿ ಆಸಕ್ತಿ ಇದ್ದರೆ ಬೇಕಾದ್ದನ್ನು ಸಾಧಿಸಬಹುದು. ಈ ವಿಸ್ತಾರವಾದ ಕ್ಷೇತ್ರದಲ್ಲಿ ಸಾಕಷ್ಟು ಪ್ರಯೋಗಗಳಿಗೆ (Experiment) ಅವಕಾಶ ಇದೆ. ಜೊತೆಗೆ ಸಾಕಷ್ಟು ವೈವಿಧ್ಯಮಯ (Different) ಕೆಲಸಕ್ಕೂ ಇಲ್ಲಿ ಸಾಕಷ್ಟು ಬೇಡಿಕೆಗಳಿವೆ. ಹಾಗಾಗಿ ಇಲ್ಲಿ ಸಾಧನೆ ಮಾಡುವ ಮನಸ್ಸು ಹಾಗೂ ಶ್ರಮ (Effort) ವಹಿಸಿ ದುಡಿಯುವ ಸಾಮರ್ಥ್ಯ ಇದ್ದರೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ ಅನ್ನೋದ್ರಲ್ಲಿ ಡೌಟೇ (Doubt) ಇಲ್ಲ. ಇಲ್ಲೊಬ್ಬರು ಬ್ಯಾಂಕ್‌ ಉದ್ಯೋಗಿ ಹಲಸಿನ ಹಣ್ಣಿನ ಕೃಷಿ (Agreculture) ಮಾಡಿ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ.


100 ಹಲಸಿನ ಮರಗಳಿಂದ ಸಾಕಷ್ಟು ಆದಾಯ


ಹೌದು ಕೇರಳದ ಇಡುಕ್ಕಿಯಲ್ಲಿ ಬ್ಯಾಂಕ್‌ ನ ಉದ್ಯೋಗಿಯಾಗಿದ್ದ ಕೊಚ್ಚುಮುಟ್ಟಮ್‌ ಸನ್ನಿ ಎಂಬುವವರೇ ಈ ಸಾಧನೆ ಮಾಡಿದವರು. ಅಷ್ಟಕ್ಕೂ ಅವರು ಕೆಲಸ ಮಾಡ್ತಾ ಇದ್ದುದು ಬ್ಯಾಂಕ್‌ ನಲ್ಲಿ. ಸಾಕಷ್ಟು ವರ್ಷ ಇದೇ ಕೆಲಸ ಮಾಡಿದ್ದ ಸನ್ನಿ ಅವರಿಗೆ ಯಾಕೆ ತಾವು ಕೃಷಿಯತ್ತ ಮುಖ ಮಾಡಬಾರದು ಎಂದೆನಿಸಿತು. ತಮ್ಮ ರೂಟೀನ್‌ ಬ್ಯಾಂಕ್‌ ಕೆಲಸದಿಂದ ಬ್ರೇಕ್‌ ತೆಗೆದುಕೊಂಡು ಹಲಸಿನ ಕೃಷಿ ಯನ್ನು ಸಣ್ಣದಾಗಿ ಶುರು ಮಾಡಿಕೊಂಡರು. 6 ವರ್ಷಗಳ ಹಿಂದೆ ಈ ಕೃಷಿ ಆರಂಭಿಸಿದ ಸನ್ನಿ ಅವರ ಬಳಿ ಈಗ 100 ಹಲಸಿನ ಹಣ್ಣಿನ ಮರಗಳಿವೆ. ಆ ಮರಗಳಿಂದ ಬರುವ ಹಲಸಿನ ಫಲವನ್ನು ಮಾರಾಟ ಮಾಡಿ ತನ್ನ ಬ್ಯಾಂಕ್‌ ನೌಕರಿಗಿಂತ ಹೆಚ್ಚು ಗಳಿಸುತ್ತಿದ್ದಾರೆ.


ಹಲಸಿನ ಜೊತೆಗೆ ವೈವಿಧ್ಯಮಯ ಕೃಷಿ


ಸನ್ನಿ ಅವರ ಬಳಿ 5 ಎಕರೆ ಭೂಮಿಯಿದ್ದು ಅಲ್ಲಿ ಸಾಕಷ್ಟು ಹಲಸಿನ ಹಣ್ಣಿನ ಮರಗಳನ್ನು ಬೆಳೆಸಿದ್ದಾರೆ. ಕಳೆದ ವರ್ಷ ಆ ಮರಗಳೆಲ್ಲ ಫಲ ನೀಡಲು ಆರಂಭಿಸಿದ್ದು ಅವುಗಳನ್ನು ಮಾರಾಟ ಮಾಡಿ ಸಾಕಷ್ಟು ಲಾಭ ಪಡೆಯುತ್ತಿದ್ದಾರೆ. ಇನ್ನು ವಿಶೇಷವೆಂದ್ರೆ ಈ ಭೂಮಿಯಲ್ಲಿ ಕೇವಲ ಹಲಸಿನ ಮರಗಳನ್ನು ಬೆಳೆಸಿದ್ದು ಮಾತ್ರವಲ್ಲದೇ ಇನ್ನೂ ಹಲವಾರು ವಿಧದ ಕೃಷಿಯನ್ನು ಸನ್ನಿ ಮಾಡುತ್ತಿದ್ದಾರೆ.


ಇದನ್ನೂ ಓದಿ: ಈ 27 ದಾಖಲೆಗಳನ್ನು ಆಧಾರ್ ನವೀಕರಣಕ್ಕಾಗಿ ನೀಡಬಹುದು, ಅವುಗಳು ಯಾವುದೆಂದು ತಿಳಿದುಕೊಳ್ಳಿ


ಫಿಶ್‌ ಪಾರ್ಮಿಂಗ್‌, ಜೇನು ಸಾಕಾಣಿಕೆ, ಮೇಕೆ ಸಾಕಾಣಿಕೆ, ಕೋಕಾ ಬೆಳೆಯುವುದು ಅಷ್ಟಲ್ಲದೇ, ಬಾಳೆಹಣ್ಣು, ಕಾಳುಮೆಣಸು, ಅರಿಶಿಣ, ಶುಂಠಿಯನ್ನೂ ಅವರು ಬೆಳೆಯುತ್ತಾರೆ. ಎಲ್ಲ ಕಾಲದಲ್ಲೂ ಈ ಬೆಳೆಯಿಂದ ತಮಗೆ ಆದಾಯ ಬರುವಂತೆ ವೈವಿಧ್ಯಮಯ ಕೃಷಿ ಮಾಡಿದ್ದಾರೆ ಸನ್ನಿ. ಕೇವಲ ತರಕಾರಿ ಹಣ್ಣುಗಳ ಹೊರತಾಗಿಯೂ ಇನ್ನಷ್ಟು ವಿಶಿಷ್ಟ ಬೆಳೆಗಳನ್ನು ಬೆಳೆಯಲು ಸನ್ನಿ ಇಷ್ಟಪಡುತ್ತಾರೆ. ಅವರು ಔಷಧಿಯುಕ್ತ ಬೆಳೆಗಳನ್ನು ಬೆಳೆಯುವಲ್ಲಿಯೂ ಶ್ರಮ ವಹಿಸುತ್ತಿದ್ದಾರೆ.


ಔಷಧಿ ಬೆಳೆಗಳು


ಔಷಧಿ ಬೆಳೆಗಳಾದ ಅಲೋವೆರಾ, ಕಾಡು ಅರಿಶಿಣ (ಕಸ್ತುರಿ ಮಂಜಲ), ಕಪ್ಪು ಅರಿಶಿಣ ಮುಂತಾದ ಬೆಳೆಗಳನ್ನೂ ಅವರು ಬೆಳೆಯುತ್ತಿದ್ದಾರೆ. ಇನ್ನು ರಬ್ಬರ್‌ ಬೆಳೆಗಳನ್ನೂ ಅವರು ಬೆಳೆಯೋದಿಕ್ಕೆ ಸ್ಥಳಗಳನ್ನು ಕಂಡುಕೊಂಡಿದ್ದಾರೆ. ಇನ್ನು ಸನ್ನಿ ಅವರ ಪ್ರಕಾರ ಅವರ ಪತ್ನಿ ತ್ರೇಸಿಯಮ್ಮ ಹಾಗೂ ಮಗ ಡೇನಿಯಲ್‌ ತನ್ನ ಸಾಧನೆಗೆ ಆಧಾರ ಸ್ಥಂಭಗಳು. ಸದಾ ಬೆಂಬಲವಾಗಿ ನಿಂತಿರುವ ಪತ್ನಿ ಹಾಗೂ ಮಗನಿಗೆ ಅವರು ಧನ್ಯವಾದ ಅರ್ಪಿಸ್ತಾರೆ.


ಮಗನಾದ ಬಾಲ ರೈತ


ಇನ್ನು ವಿಶೇಷವೆಂದರೆ ಸನ್ನಿ ಅವರ ಮಗ ಡೇನಿಯಲ್‌ ಉತ್ತಮ ಬಾಲ ರೈತನಾಗಿ ಆಯ್ಕೆಯಾಗಿದ್ದಾನೆ. ಆತ ಕಲಿಯುತ್ತಿರುವ ಮುಲ್ಲರಿಂಗಡ್‌ ಹೈಸ್ಕೂಲ್‌ ನಲ್ಲಿ ಬಾಲ ರೈತನಾಗಿ ಆಯ್ಕೆಯಾಗಿ ಸಾಧನೆ ಮಾಡಿದ್ದಾನೆ. ಕೆಲವರಿಗೆ ಜೀವನದಲ್ಲಿ ಮಾಡಿದ್ದೇ ಕೆಲಸವನ್ನು ಮಾಡೋಕೆ ಬೇಸರ. ಹೊಸದೇನನ್ನಾದರೂ ಟ್ರೈ ಮಾಡೋಣ ಅಂತ ಮನಸ್ಸು ತುಡಿಯುತ್ತಿರುತ್ತೆ. ಅಂಥವರು ಏನಾದರಾಗಲಿ ಎಂದು ಹೊಸದರ ಅನ್ವೇಷಣೆಯಲ್ಲಿ ತೊಡಗ್ತಾರೆ.


ಇದನ್ನೂ ಓದಿ: 13 ಜಿಲ್ಲೆಗಳಲ್ಲಿ ಪೆಟ್ರೋಲ್‌ ಬೆಲೆ ಇಳಿಕೆ, ಡೀಸೆಲ್‌ ದರ ಎಷ್ಟಿದೆ?


ಕೆಲವೊಬ್ಬರಿಗೆ ಅದು ಕೈ ಸುಟ್ಟರೆ ಇನ್ನೂ ಕೆಲವರಿಗೆ ಅಂಥ ಹೊಸದರ ಅನ್ವೇಷಣೆಯೇ ಕೈ ಹಿಡಿಯುತ್ತದೆ. ಇತ್ತೀಚಿಗೆ ಸಾಕಷ್ಟು ಜನರು ಕೈತುಂಬಾ ಸಂಬಳ ಬರುವ ಐಟಿ ಕೆಲಸಗಳನ್ನೇ ಬಿಟ್ಟು ಕೃಷಿಯಲ್ಲಿ ತೊಡಗಿದ ಉದಾಹರಣೆಗಳಿವೆ. ಕೃಷಿಯಲ್ಲೂ ಹೊಸತನವಿದ್ದರೆ ವೈಟ್‌ ಕಾಲರ್‌ ಜಾಬ್‌ ಗಿಂತ ಹೆಚ್ಚಿಗೆ ಗಳಿಸಬಹುದು ಅನ್ನೋದಕ್ಕೆ ಸನ್ನಿಯೇ ಸಾಕ್ಷಿ.

First published: