ಯಾವುದೇ ಗ್ಯಾರಂಟಿ ಇಲ್ಲದೇ ರೈತರಿಗೆ ಸಿಗಲಿದೆ 1.60 ಲಕ್ಷ ರೂ. ಸಾಲ: ಹೇಗೆ ಅಂತೀರಾ? ಇಲ್ಲಿದೆ ಉತ್ತರ

ರೈತರಿಗೆ ಸಾಲ ಯಾರು ಕೊಡ್ತಾರೆ ಅಂತ ಹಲವರು ಹೇಳುತ್ತಾರೆ. ಆದ್ರೆ ಕೇಂದ್ರ ಸರ್ಕಾರ ರೈತರಿಗೆ ಸಾಲ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಯೋಜನೆಯೇ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Pashu kisan credit card scheme)

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜೀವನದಲ್ಲಿ ಏನಾದ್ರು ವ್ಯವಹಾರ (Business) ಮಾಡಲು ಹಣದ (Finance) ಅವಶ್ಯಕತೆ ಮೊದಲ ಬೇಕು. ಒಂದು ವೇಳೆ ನಿಮ್ಮ ಬಳಿಯಲ್ಲಿ ಹಣ (Money) ಇಲ್ಲದಿದ್ರೆ ಸಾಲ ಮಾಡಬೇಕು. ಸಾಲಕ್ಕೆ ಏನಾದ್ರೂ ಗ್ಯಾರಂಟಿ ನೀಡಬೇಕಾಗುತ್ತದೆ, ಹೊಸ ವ್ಯವಹಾರ ಆರಂಭಿಸುವ ಜನರಿಗೆ ಸರ್ಕಾರಗಳು ರಿಯಾಯ್ತಿ ದರದಲ್ಲಿ ಸಾಲವನ್ನು (Loan) ನೀಡುತ್ತವೆ. ಇದೀಗ ಅಂತಹವುದೇ ಒಂದು ವಿಶೇಷ ಯೋಜನೆ ಜೊತೆ ನಿಮ್ಮ ಬಳಿ ಬಂದಿದ್ದೇವೆ. ಹೌದು, ರೈತರಿಗೆ ಸಾಲ ಯಾರು ಕೊಡ್ತಾರೆ ಅಂತ ಹಲವರು ಹೇಳುತ್ತಾರೆ. ಆದ್ರೆ ಕೇಂದ್ರ ಸರ್ಕಾರ ರೈತರಿಗೆ ಸಾಲ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಯೋಜನೆಯೇ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Pashu kisan credit card scheme)

ರೈತರ ಆದಾಯ ದ್ವಿಗುಣಗೊಳಿಸಲು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಮೋದಿ ಸರ್ಕಾರ (Modi Government) ಆರಂಭಿಸಿದೆ. ಪಶು ಕಿಸಾನ್ ಕ್ರೆಡಿಟ್ ಕಾರ್ಡ್‌ನ (Pashu kisan credit card scheme) ನಿಯಮಗಳು ಮೋದಿ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ KCC) ಯೋಜನೆಯನ್ನು ಹೋಲುತ್ತವೆ. ಈ ಯೋಜನೆ ಅಡಿಯಲ್ಲಿ ಹಸು, ಎಮ್ಮೆ, ಕುರಿ, ಮೇಕೆ ಮತ್ತು ಕೋಳಿ ಸಾಕಣೆಗೆ ಗರಿಷ್ಠ 3 ಲಕ್ಷ ರೂ. ಸಿಗಲಿದೆ.  ಇದರಲ್ಲಿ 1.60 ಲಕ್ಷ ರೂ.ವರೆಗಿನ ಮೊತ್ತವನ್ನು ತೆಗೆದುಕೊಳ್ಳುವುದಕ್ಕೆ ಯಾವುದೇ ಗ್ಯಾರಂಟಿ ನೀಡಬೇಕಾಗಿಲ್ಲ.

ಎಲ್ಲಾ ಅರ್ಹ ಅರ್ಜಿದಾರರು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ ಎಂದು ಬ್ಯಾಂಕರ್‌ಗಳ ಸಮಿತಿಯು ಸರ್ಕಾರಕ್ಕೆ ಭರವಸೆ ನೀಡಿದೆ. ಈ ಯೋಜನೆಯ ಬಗ್ಗೆ ಮಾಹಿತಿಗಾಗಿ ಬ್ಯಾಂಕ್‌ಗಳು ಶಿಬಿರಗಳನ್ನೂ ಆಯೋಜಿಸಬೇಕು.

ಇದನ್ನೂ ಓದಿ:  Kanyadana Policy: ಅದ್ಧೂರಿಯಾಗಿ ಮಗಳ ಮದ್ವೆ ಮಾಡೋ ಪ್ಲಾನ್ ಇದೆಯಾ? ನಿತ್ಯ ಜಮೆ ಮಾಡಿ 121 ರೂಪಾಯಿ

ಪಶುವೈದ್ಯರು ಪಶು ಆಸ್ಪತ್ರೆಗಳಲ್ಲಿ ವಿಶೇಷ ಹೋರ್ಡಿಂಗ್‌ಗಳನ್ನು ಹಾಕುವ ಮೂಲಕ ಯೋಜನೆಯ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು. ರಾಜ್ಯದಲ್ಲಿ ಸುಮಾರು 16 ಲಕ್ಷ ಕುಟುಂಬಗಳು ಹಾಲುಣಿಸುವ ಪ್ರಾಣಿಗಳನ್ನು ಹೊಂದಿದ್ದು, ಅವುಗಳ ಟ್ಯಾಗ್ ಮಾಡಲಾಗುತ್ತಿದೆ.

ಹಸು, ಎಮ್ಮೆಗೆ ಎಷ್ಟು ಹಣ ಸಿಗುತ್ತದೆ?

  • ಹಸುವಿಗೆ 40,783 ರೂ.ನೀಡುವ ನಿಬಂಧನೆ ಇದೆ.

  • ಎಮ್ಮೆಗೆ 60,249 ರೂ. ಇದು ಪ್ರತಿ ಎಮ್ಮೆಗೆ ಇರುತ್ತದೆ.

  • ಕುರಿ ಮತ್ತು ಮೇಕೆಗೆ 4,063 ರೂ.

  • ಕೋಳಿ (ಮೊಟ್ಟೆ ಇಡುವ) 720 ರೂ ಸಾಲ ನೀಡಲಾಗುವುದು.


ಯಾರಿಗೆಲ್ಲ ಈ ಕಾರ್ಡ್ ಸಿಗುತ್ತೆ?

  • ಅರ್ಜಿದಾರರು ಹರಿಯಾಣ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

  • ಅರ್ಜಿದಾರರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿಯನ್ನು ಹೊಂದಿರಬೇಕು.

  • ಮೊಬೈಲ್ ಸಂಖ್ಯೆ.

  • ಪಾಸ್ಪೋರ್ಟ್ ಗಾತ್ರದ ಫೋಟೋಗಳನ್ನ ನೀಡಬೇಕು


ರೈತರು ಪಡೆಯುವ ಸಾಲಕ್ಕೆ ಎಷ್ಟು ಬಡ್ಡಿ?

ಸಾಮಾನ್ಯವಾಗಿ ಎಲ್ಲ ಬ್ಯಾಂಕ್ ಗಳು ಶೇ.7ರ ಬಡ್ಡಿ ದರದಲ್ಲಿ  ನೀಡುತ್ತವೆ. ಆದರೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ, ಜಾನುವಾರು ಮಾಲೀಕರು ಕೇವಲ 4 ಪ್ರತಿಶತ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಕೇಂದ್ರ ಸರ್ಕಾರದಿಂದ ಶೇ.3ರಷ್ಟು ರಿಯಾಯಿತಿ ನೀಡಲು ಅವಕಾಶವಿದೆ. ಸಾಲದ ಮೊತ್ತವು ಗರಿಷ್ಠ ರೂ.3 ಲಕ್ಷದವರೆಗೆ ಇರುತ್ತದೆ.

ಇದನ್ನೂ ಓದಿ:  ಕಡಿಮೆ ದರದಲ್ಲಿ ಮನೆ ಖರೀದಿಗೆ ಅವಕಾಶ ನೀಡಲಿದೆ Bank Of Baroda: ನೀವು ಮಾಡಬೇಕಾಗಿರೋದು ಇಷ್ಟೇ

ಸಾಲ ಪಡೆಯುವುದು ಹೇಗೆ?

ಈ ಯೋಜನೆಯಡಿಯಲ್ಲಿ ಮಾಡಿದ ಪಶು ಕ್ರೆಡಿಟ್ ಕಾರ್ಡ್ ಪಡೆಯಲು ಬಯಸುವ ಹರಿಯಾಣ ರಾಜ್ಯದ ಆಸಕ್ತ ಫಲಾನುಭವಿಗಳು ತಮ್ಮ ಹತ್ತಿರದ ಬ್ಯಾಂಕ್‌ಗೆ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ನೀವು ಬ್ಯಾಂಕ್‌ಗೆ ತೆಗೆದುಕೊಂಡು ಹೋಗಬೇಕು. ಅಲ್ಲಿ ನೀವು ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.

ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ನಂತರ, ನೀವು KYC (Know Your Customer) ಅನ್ನು ಮಾಡಬೇಕಾಗಿದೆ. KYC ಗಾಗಿ, ರೈತರು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಕಾರ್ಡ್ ಮತ್ತು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರವನ್ನು ಒದಗಿಸಬೇಕಾಗುತ್ತದೆ.

ಜಾನುವಾರು ಕ್ರೆಡಿಟ್ ಕಾರ್ಡ್ ಪಡೆಯಲು, ಬ್ಯಾಂಕ್‌ನಿಂದ KYC ಮತ್ತು ಅರ್ಜಿ ನಮೂನೆಯ ಪರಿಶೀಲನೆಯ ನಂತರ ನೀವು 1 ತಿಂಗಳೊಳಗೆ ಪಶು ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ.
Published by:Mahmadrafik K
First published: