ದಕ್ಷಿಣ ಭಾರತದ (South India) ಹೆಚ್ಚಿನ ರಾಜ್ಯಗಳಲ್ಲಿ ತೆಂಗಿನ ಮರಗಳು ಸಾಮಾನ್ಯವಾಗಿರುತ್ತವೆ. ಪರಿಸರವನ್ನು ಸ್ವಚ್ಛವಾಗಿರಿಸುವ ತೆಂಗು ಸಿಹಿಯಾದ ಎಳನೀರು, ತೆಂಗಿನ ಕಾಯಿಯನ್ನು ಒದಗಿಸುವ ಕಲ್ಪವೃಕ್ಷ ಎಂದೇ ಹೆಸರುವಾಸಿ. ತೆಂಗಿನ ನಾರು ಹಾಗೂ ನಾರಿನ ಹಣ್ಣುಗಳು (Fruits) ಅನೇಕ ಪ್ರಯೋಜನಗಳನ್ನು ಹೊಂದಿವೆ. ಒಟ್ಟಿನಲ್ಲಿ ತೆಂಗಿನ ನಾರಿನಿಂದ ಚಿಪ್ಪಿನವರೆಗೆ ಮನುಷ್ಯನಿಗೆ ಅನೇಕ ವಿಧದಲ್ಲಿ ಪ್ರಯೋಜನಕಾರಿಯಾಗಿದೆ. ಇಂತಹುದೇ ತೆಂಗಿನ ಬಹುವಿಧ ಉತ್ಪನ್ನಗಳನ್ನು ಜೀವನೋಪಾಯ ಹಾಗೂ ಆದಾಯದ ರೂಪದಲ್ಲಿ ಮಾರ್ಪಡಿಸಿಕೊಂಡು ಮಹಿಳೆಯರಿಗೆ ಹಾಗೂ ರೈತರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಬೆಂಗಳೂರು ಮೂಲದ ಸ್ಟಾರ್ಟಪ್ ತೊಡಗಿಕೊಂಡಿದೆ. ಈ ಸ್ಟಾರ್ಟಪ್ (Start Up) ತಿಂಗಳಿಗೆ 4 ಲಕ್ಷ ರೂಪಾಯಿ ಆದಾಯವನ್ನು ಗಳಿಸುತ್ತಿದೆ.
ತೆಂಗಿನಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವ ತೆಂಗಿನ್ ಹೆಸರಿನ ಸ್ಟಾರ್ಟಪ್
ತೆಂಗಿನ ಹೆಸರಿನ ಸ್ಟಾರ್ಟಪ್ ತೆಂಗಿನಿಂದ ಬಹುವಿಧ ಖಾದ್ಯಗಳು, ತೆಂಗಿನೆಣ್ಣೆ, ಡಿಶ್ ಸ್ಕ್ರಬ್ಬರ್ ಮೊದಲಾದ ಉತ್ಪನ್ನಗಳನ್ನು ತಯಾರಿಸುತ್ತಿದೆ ಅಂತೆಯೇ 30 ವರ್ಷದ ಮಧು ಕಾರಗುಂಡ್ ಈ ಸ್ಟಾರ್ಟಪ್ ಹಿಂದಿರುವ ಶಕ್ತಿಯಾಗಿದ್ದಾರೆ.
ರೈತನ ಮಗನಾಗಿರುವ ಮಧು ಅವರು ರೈತರಿಗೆ ಸಹಾಯಮಾಡುವ ನಿಟ್ಟಿನಲ್ಲಿಯೇ ತಮ್ಮ ಸ್ಟಾರ್ಟಪ್ ಅನ್ನು ಆರಂಭಿಸಿರುವುದಾಗಿ ತಿಳಿಸಿದ್ದಾರೆ. ಬೆಳೆ ವಿಫಲತೆ, ಕಡಿಮೆ ಲಾಭ ಹಾಗೂ ಹವಾಮಾನ ಬದಲಾವಣೆಗೆ ಹಲವಾರು ರೈತರಿಗೆ ಸಂಕಷ್ಟನ್ನುಂಟುಮಾಡಿದೆ. ಹಾಗಾಗಿ ತೆಂಗಿನ ಉತ್ಪನ್ನಗಳಿಂದ ಅವರ ಬದುಕು ಹಸನಾಗಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಮಧು ತಿಳಿಸಿದ್ದಾರೆ.
ತೆಂಗಿನ ಕೃಷಿಯನ್ನು ಲಾಭದಾಯಕವಾಗಿಸುವುದು
ಕರ್ನಾಟಕದ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಹುಟ್ಟಿ ಬೆಳೆದ ಮಧು ತಮ್ಮ ತಂದೆಗೆ ಹೊಲಗಳಲ್ಲಿ ಸಹಾಯ ಮಾಡುತ್ತಾ ಬಾಲ್ಯವನ್ನು ಕಳೆದವರು.
ಕೃಷಿ ಕುಟುಂಬದಲ್ಲಿ ಬೆಳೆದವರಾದರೆ ನೀವು ರೈತರು ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡುತ್ತೀರಿ. ಮೊದಲನೆಯದಾಗಿ, ಹವಾಮಾನ ಬದಲಾವಣೆ ಮತ್ತು ಕೆಟ್ಟ ಮಳೆಯ ಮಾದರಿಗಳಿಂದ, ನೈಸರ್ಗಿಕವಾಗಿ ಯಾವುದನ್ನಾದರೂ ಬೆಳೆಯುವುದು ತುಂಬಾ ಕಷ್ಟ.
ಇದನ್ನೂ ಓದಿ: ವಾಹನ ಸವಾರರೇ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡೋ ಮುನ್ನ ಇಂದಿನ ತೈಲ ಬೆಲೆ ಗಮನಿಸಿ
ರೈತರಿಗೆ ಕೌಶಲ್ಯ ಹೆಚ್ಚಿಸಲು ಯಾವುದೇ ನೆರವು ಇಲ್ಲ, ಮತ್ತು ಮಾರುಕಟ್ಟೆಯ ಬಗ್ಗೆ ಜ್ಞಾನದ ಕೊರತೆಯು ನಷ್ಟಕ್ಕೆ ಕಾರಣವಾಗುತ್ತದೆ ಎಂಬುದು ಮಧು ಮಾತಾಗಿದೆ.
ರೈತರು ಎದುರಿಸುತ್ತಿರುವ ನಾನಾ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಗ್ರಾಮಕ್ಕೆ ಹೋಗಿ ತಮ್ಮ ಹೊಲದಲ್ಲಿ ಟೊಮೇಟೊ ಬೆಳೆದು ಉತ್ತಮ ಬೆಲೆ ಸಿಕ್ಕರೆ ಗ್ರಾಮದ ಇತರ ಪ್ರತಿಯೊಬ್ಬ ರೈತರು ಆ ಕೆಲಸ ಮಾಡಲು ಮುಂದಾಗುತ್ತಾರೆ.
ಇದು ಬೇಡಿಕೆ ಮತ್ತು ಪೂರೈಕೆಯ ಅಸಮತೋಲನವನ್ನು ಸೃಷ್ಟಿಸುತ್ತದೆ ಮತ್ತು ಯಾರೂ ಲಾಭ ಗಳಿಸುವುದಿಲ್ಲ. ರೈತರಿಗೆ ಈ ಜ್ಞಾನದ ಕೊರತೆಯಿದೆ ಮತ್ತು ಲಾಭವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳುತ್ತಾರೆ.
View this post on Instagram
ಮಾಸ್ಟರ್ ಆಫ್ ಕಂಪ್ಯೂಟರ್‌ನಲ್ಲಿ ಪದವಿ ಪೂರ್ಣಗೊಳಿಸಿದ ನಂತರ ಮಧು ತಮ್ಮ ವೃತ್ತಿ ಜೀವನವನ್ನು 2018 ರಲ್ಲಿ ತೆಂಗಿನ್ ಸ್ಟಾರ್ಟಪ್ ಮೂಲಕ ಆರಂಭಿಸಿದರು. ಇದಕ್ಕೂ ಮುನ್ನ ಎಂಟು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿ ಅನುಭವ ಗಳಿಸಿದರು.
ನೈಸರ್ಗಿಕ, ಸಮರ್ಥನೀಯ ಮತ್ತು ತ್ಯಾಜ್ಯ ಮುಕ್ತ
ಮಧು ಕೃಷಿ ಮಾಡುವುದು ಅವರ ಹೆತ್ತವರಿಗೆ ಇಷ್ಟವಿರಲಿಲ್ಲ ಎಂದು ಹೇಳುವ ಅವರು ನಾನು ರೈತನಾಗುವುದು ಅವರಿಗೆ ಇಷ್ಟವಿರಲಿಲ್ಲ, ಅದು ಅಲ್ಲದೆ ಸಾಫ್ಟ್‌ವೇರ್ ಇಂಜಿನಿಯರ್ ವೃತ್ತಿಯನ್ನೇ ಮುಂದುವರಿಸಲು ಸಲಹೆ ನೀಡಿದರು ಎಂದು ಮಧು ಹೇಳುತ್ತಾರೆ.
ಕೃಷಿಯು ವಿಶ್ವದ ಅತ್ಯಂತ ಕಷ್ಟಕರವಾದ ಕೆಲಸಗಳಲ್ಲಿ ಒಂದಾಗಿದೆ ಮತ್ತು ರೈತರಿಗೆ ಸಾಕಷ್ಟು ಹಣ ಅಥವಾ ಗೌರವ ಇದರಲ್ಲಿ ದೊರೆಯುವುದಿಲ್ಲ ಎಂಬುದೇ ಅವರ ಭಾವನೆಯಾಗಿದೆ ಎಂದು ಮಧು ಹೇಳುತ್ತಾರೆ.
ಮನೆಯವರ ವಿರೋಧವಿದ್ದರೂ ಮಧು ತನ್ನ ಪೋಷಕರ ಮನವೊಲಿಸಿದರು. ತನ್ನ ಹಳ್ಳಿಯಲ್ಲಿ ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸಲು, ಅವರು ಬಹು ಬೆಳೆಗಳೊಂದಿಗೆ ಶೂನ್ಯ-ಬಜೆಟ್ ನೈಸರ್ಗಿಕ ಕೃಷಿ ಎಂಬ ಕೃಷಿ ವಿಧಾನವನ್ನು ಕಂಡುಕೊಂಡರು.
ನನ್ನ ಹಳ್ಳಿಯಲ್ಲಿನ ಹೆಚ್ಚಿನ ಹಳ್ಳಿಗರು ಏಕ ಕೃಷಿ ಅಥವಾ ಏಕಬೆಳೆ ಬೇಸಾಯವನ್ನು ಅಭ್ಯಾಸ ಮಾಡುತ್ತಾರೆ, ಆದರೆ ಇನ್ನೊಂದು ವಿಧಾನದಲ್ಲಿ, ನೀವು ಒಂದೇ ಸಮಯದಲ್ಲಿ ಬಹು ಬೆಳೆಗಳನ್ನು ಬೆಳೆಯುತ್ತೀರಿ.
ಇದನ್ನೂ ಓದಿ: ಹೆಚ್ಚಾಗ್ತಿದೆ ಟಿಕೆಟ್ ಆಕಾಂಕ್ಷಿಗಳ ಎದೆ ಬಡಿತ; ಅಭ್ಯರ್ಥಿಗಳ ಆಯ್ಕೆಯ ಕಸರತ್ತು!
ಉದಾಹರಣೆಗೆ, ತೆಂಗಿನಕಾಯಿ ನಡುವೆ, ನೀವು ಅಡಿಕೆಗಳನ್ನು ನೆಡಬಹುದು, ಅಡಿಕೆ ನಡುವೆ ಬಾಳೆಹಣ್ಣುಗಳನ್ನು ಮತ್ತು ಅವುಗಳ ನಡುವೆ ಟೊಮೆಟೊಗಳನ್ನು ನೆಡಬಹುದು. ಈ ರೀತಿಯಾಗಿ ರೈತರು ಒಂದೇ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಸುತ್ತಾರೆ ಎಂದು ಮಧು ಹೇಳುತ್ತಾರೆ.
ತೆಂಗಿನ್ ಸ್ಟಾರ್ಟಪ್ ಅನ್ನು ಆರಂಭಿಸುವಾಗ ಮಧು ತಮ್ಮ ಹಳ್ಳಿಯಲ್ಲಿರುವ ಮಹಿಳಾ ಸ್ವಸಹಾಯ ಗುಂಪುಗಳ ನೆರವನ್ನು ಪಡೆದುಕೊಳ್ಳಲು ನಿರ್ಧರಿಸಿದರು.
ಹೊಸತನದ ಪ್ರಯತ್ನ ಮಾಡುತ್ತಲೇ ಇರುತ್ತೇವೆ
ಹಳ್ಳಿಗಳಲ್ಲಿ ಅನೇಕ ಸಂಘಗಳು (ಮಹಿಳಾ ಗುಂಪುಗಳು) ಇವೆ, ಅವನ್ನು ನನ್ನ ಸ್ಟಾರ್ಟಪ್‌ಗಳ ಉತ್ಪನ್ನ ತಯಾರಿಕೆಗೆ ಬಳಸಲು ನಿರ್ಧರಿಸಿದೆ. ಅವರು ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಾರೆ ಮತ್ತು ತೆಂಗಿನಕಾಯಿಯಿಂದ ಶೂನ್ಯ-ತ್ಯಾಜ್ಯವನ್ನು ಉತ್ಪಾದಿಸಲು ನಾವು ಹೊಸತನದ ಪ್ರಯತ್ನವನ್ನು ಮಾಡುತ್ತಲೇ ಇರುತ್ತೇವೆ.
ತೆಂಗಿನಕಾಯಿಯನ್ನು ನನ್ನ ಹಳ್ಳಿಯ ರೈತರಿಂದ ಮತ್ತು ಕೆಲವು ಕರ್ನಾಟಕದ ಇತರ ಜಿಲ್ಲೆಗಳಿಂದ ಪಡೆದುಕೊಂಡು ನನ್ನ ಸ್ಟಾರ್ಟಪ್‌ನಲ್ಲಿ ಉತ್ಪನ್ನಗಳನ್ನು ತಯಾರಿಸಲು ಪ್ರಾರಂಭಿಸಿದೆವು ಎಂದು ಮಧು ತಿಳಿಸಿದ್ದಾರೆ.
ಮಧು, ಕರ್ನಾಟಕ ಮತ್ತು ಗೋವಾದಲ್ಲಿ 20 ಕ್ಕೂ ಹೆಚ್ಚು ರೈತರೊಂದಿಗೆ ಕೆಲಸ ಮಾಡುತ್ತಾರೆ, ಜೊತೆಗೆ ಅವರ ಹಳ್ಳಿಯ ಎಸ್‌ಜಿಹೆಚ್‌ಗಳ ಸುಮಾರು ಎಂಟು ಮಹಿಳೆಯರೊಂದಿಗೆ ಕಾರ್ಯನಿರ್ವಹಿಸಿ ಉತ್ಪನ್ನಗಳನ್ನು ತಯಾರಿಸುತ್ತಾರೆ.
ನಾವು ರೈತರಿಂದ ನೇರವಾಗಿ ಖರೀದಿಸುತ್ತೇವೆ, ಅವರ ಕಡೆಯಿಂದ ಯಾವುದೇ ಸಾರಿಗೆ ವೆಚ್ಚವನ್ನು ಮತ್ತು ಯಾವುದೇ ಮಧ್ಯವರ್ತಿಗಳನ್ನು ನ್ಯಾಯಯುತ ಬೆಲೆಯಲ್ಲಿ ತೆಗೆದುಹಾಕುತ್ತೇವೆ, ಇದರಿಂದ ಅವರು ಹೆಚ್ಚಿನ ಲಾಭಾಂಶವನ್ನು ಪಡೆಯುತ್ತಾರೆ ಎಂದು ಮಧು ತಮ್ಮ ಬ್ಯುಸಿನೆಸ್ ಕಾರ್ಯವೈಖರಿಯನ್ನು ತಿಳಿಸುತ್ತಾರೆ.
ನಾವು ನಮ್ಮ ಉತ್ಪನ್ನಗಳೊಂದಿಗೆ ಹೊಸತನವನ್ನು ಮುಂದುವರಿಸುತ್ತಿದ್ದೇವೆ. ನಾನು ಕೇವಲ ಕಚ್ಚಾ ತೆಂಗಿನ ಎಣ್ಣೆಯಿಂದ ಉತ್ಪನ್ನಗಳ ತಯಾರಿ ಪ್ರಾರಂಭಿಸಿವುದರ ಜೊತೆಗೆ ಇದೀಗ ಸಾಬೂನುಗಳು, ಸ್ಕ್ರಬ್‌ಗಳಿಂದ ಹಿಡಿದು ಪಾತ್ರೆಗಳವರೆಗೆ ಹಲವಾರು ಇತರ ಉತ್ಪನ್ನಗಳ ತಯಾರಿಯವರೆಗೆ ಮುಂದುವರೆದಿದ್ದೇವೆ.
ದೀಪಾವಳಿಯಲ್ಲಿ ತೆಂಗಿನಕಾಯಿಯ ದೀವಟಿಗೆ, ರಕ್ಷಾ ಬಂಧನದ ವೇಳೆ ತೆಂಗಿನ ಚಿಪ್ಪಿನ ರಾಖಿಗಳನ್ನು ತಯಾರಿಸಿದ್ದೇವೆ ಎಂದು ಮಧು ಹಂಚಿಕೊಳ್ಳುತ್ತಾರೆ.
ತೆಂಗಿನ ಚಿಪ್ಪುಗಳನ್ನು ಹೆಚ್ಚಾಗಿ ಎಸೆಯಲಾಗುತ್ತದೆ, ಆದರೆ ಪ್ಲಾಸ್ಟಿಕ್ ಕಪ್‌ಗಳು ಮತ್ತು ಮಗ್‌ಗಳಿಗೆ ಬದಲಿಯಾಗಿ ಇವುಗಳನ್ನು ಬಳಸಬಹುದು ಎಂದು ಭಾವಿಸಿದೆ. ಮತ್ತೊಂದು ತ್ಯಾಜ್ಯ ಉತ್ಪನ್ನವಾದ ತೆಂಗಿನಕಾಯಿಯಿಂದ ನಾವು ಪಾತ್ರೆ ತೊಳೆಯುವ ಸ್ಕ್ರಬ್‌ಗಳನ್ನು ತಯಾರಿಸಿದ್ದೇವೆ.
ನಾವು ತೆಂಗಿನಕಾಯಿ ರೋಚರ್ ತಯಾರಿಸಲು ಎಣ್ಣೆಯನ್ನು ತೆಗೆದ ನಂತರ ಉಳಿದ ತೆಂಗಿನ ಪುಡಿಯನ್ನು ಬಳಸಿದ್ದೇವೆ, ಅದನ್ನು ಡಾರ್ಕ್ ಚಾಕೊಲೇಟ್‌ನೊಂದಿಗೆ ಬೆರೆಸುತ್ತೇವೆ, ಎಂದು ತಿಳಿಸುವ ಮಧು, ಉತ್ಪಾದನೆಯಲ್ಲಿ ಬಳಸುವ ಎಲ್ಲಾ ತೆಂಗಿನಕಾಯಿಗಳನ್ನು ನೈಸರ್ಗಿಕವಾಗಿ ಬೆಳೆಯಲಾಗುತ್ತದೆ ಎಂಬುದನ್ನು ತಿಳಿಸಲು ಮರೆಯುವುದಿಲ್ಲ
ತೆಂಗಿನ್ ಬ್ರ್ಯಾಂಡ್ ಉತ್ಪಾದಿಸುವ ಗ್ರಾಹಕರ ಅಭಿಪ್ರಾಯವೇನು?
ತೆಂಗಿನ್ ಗ್ರಾಹಕರಾಗಿರುವ ವಾಣಿ ಮೂರ್ತಿ ಇಲ್ಲಿನ ಉತ್ಪನ್ನಗಳು ಗುಣಮಟ್ಟದಲ್ಲಿ ಕೂಡ ಬೆಸ್ಟ್ ಆಗಿವೆ ಎಂದೇ ತಿಳಿಸುತ್ತಾರೆ. ತೆಂಗಿನ ಉತ್ಪನ್ನಗಳು ದಕ್ಷಿಣ ಭಾರತದಲ್ಲಿನ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ತುಂಬಾ ಅಂತರ್ಗತವಾಗಿವೆ.
ತೆಂಗಿನೆಣ್ಣೆಯನ್ನು ಅಡುಗೆಯಿಂದ ಆರಂಭಿಸಿ ಬೇರೆ ಬೇರೆ ಸಮಯಗಳಲ್ಲಿ ಬಳಸುತ್ತೇವೆ. ತೆಂಗು ನಮ್ಮ ದೈನಂದಿನ ಜೀವನದಲ್ಲಿ ಬೆರೆತು ಹೋಗಿದೆ ಎಂದು ತಿಳಿಸುವ ವಾಣಿಯವರು, ತೆಂಗಿನ್ ನನ್ನ ಮೆಚ್ಚಿನ ಬ್ರ್ಯಾಂಡ್ ಆಗಿದೆ ಎಂದೇ ಹೇಳುತ್ತಾರೆ.
ಈ ಬ್ರ್ಯಾಂಡ್ ಸ್ಥಳೀಯ ಜೀವನೋಪಾಯವನ್ನು ಸಹ ಬೆಂಬಲಿಸುತ್ತದೆ ಎಂಬುದು ಅತ್ಯಂತ ಮೆಚ್ಚಿನ ವಿಷಯವಾಗಿದೆ. ತೆಂಗಿನಕಾಯಿಯಿಂದ ಆಸಕ್ತಿದಾಯಕ ಹೊಸ ಉತ್ಪನ್ನಗಳನ್ನು ನಿರಂತರವಾಗಿ ಹೊರತರುತ್ತಿರುತ್ತಾರೆ ಎಂದು ವಾಣಿ ತೆಂಗಿನ್ ಕುರಿತು ಸದಭಿರುಚಿತ ಮಾತುಗಳನ್ನಾಡಿದ್ದಾರೆ.
ಲಾಭದಾಯಕ ಸ್ಟಾರ್ಟಪ್ ಆಗಿ ತೆಂಗಿನ್
150 ಎಮ್‌ಎಲ್‌ನಿಂದ ವರ್ಜಿನ್ ತೆಂಗಿನೆಣ್ಣೆ ತಯಾರಿಸುವ ಬ್ಯುಸಿನೆಸ್ ಇಂದಿಗೆ 500 ಲೀಟರ್‌ಗಿಂತ ಹೆಚ್ಚಿನ ಏರಿಕೆಯನ್ನು ಕಂಡಿದೆ. ಬೇಡಿಕೆ ಕೂಡ ಅತ್ಯುತ್ತಮವಾಗಿದೆ ಎನ್ನುವ ಮಧು ಕಂಪನಿ ತಿಂಗಳಿಗೆ 3 ರಿಂದ 4 ಲಕ್ಷ ಆದಾಯ ಗಳಿಸುತ್ತಿದೆ ಎಂದು ತಿಳಿಸಿದ್ದಾರೆ.
ಹೆಚ್ಚಾಗಿ ನಾವೀನ್ಯತೆ ಅಥವಾ ಕೌಶಲ್ಯದ ಬಗ್ಗೆ ಮಾತನಾಡುವಾಗ, ಯುವಕರು ಯಾವಾಗಲೂ ಐಟಿಯಂತಹ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲು ಬಯಸುತ್ತಾರೆ. ರೈತರ ಕೌಶಲವನ್ನು ಹೆಚ್ಚಿಸುವ ಮತ್ತು ಇತ್ತೀಚಿನ ತಂತ್ರಜ್ಞಾನದೊಂದಿಗೆ ಅವರನ್ನು ನವೀಕರಿಸುವ ಬಗ್ಗೆ ಅಷ್ಟೊಂದು ಚರ್ಚೆಗಳಾಗಲಿ ಪ್ರಗತಿಯಾಗಲಿ ಕಂಡುಬರುವುದಿಲ್ಲ.
ನಾವು ಈಗಾಗಲೇ ವಲಸೆ ಬಿಕ್ಕಟ್ಟಿನ ಮಧ್ಯದಲ್ಲಿದ್ದೇವೆ, ಹೆಚ್ಚಿನ ಯುವಕರು ಉತ್ತಮ ಉದ್ಯೋಗಾವಕಾಶಗಳ ಹುಡುಕಾಟದಲ್ಲಿ ಕೃಷಿಯಿಂದ ಹೊರಗುಳಿಯುತ್ತಿದ್ದಾರೆ. ನಾನು ಈ ಬ್ಯುಸಿನೆಸ್ ಪ್ರಾರಂಭಿಸುವುದರೊಂದಿಗೆ, ವೃತ್ತಿಯನ್ನು ಹೆಚ್ಚು ಲಾಭದಾಯಕವಾಗಿಸಲು ಮತ್ತು ಕೃಷಿಯನ್ನು ಮುಂದುವರಿಸಲು ಯುವಕರನ್ನು ಆಕರ್ಷಿಸಲು ನಾನು ಆಶಿಸುತ್ತೇನೆ, ಎಂದು ಮಧು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ