Fact Check- ಗಾಂಧಿ ಫೋಟೋ ಬಳಿ ಹಸಿರು ಗೆರೆ ಇರುವ ನೋಟು ನಕಲಿಯಾ? ಇದು ಸರ್ಕಾರದ ಸ್ಪಷ್ಟನೆ

Fact Check on Fake Note Rumor- ಮಹಾತ್ಮ ಗಾಂಧಿ ಫೋಟೋ ಬಳಿ ಗ್ರೀನ್ ಸ್ಟ್ರಿಪ್ ಇದ್ದರೆ ಅಥವಾ ಆರ್​ಬಿಐ ಗವರ್ನರ್ ಸಿಗ್ನೇಚರ್ ಬಳಿ ಗ್ರೀನ್ ಸ್ಟ್ರಿಪ್ ಇದ್ದರೆ ಆ ನೋಟು ನಕಲಿ ಎಂಬ ಸುದ್ದಿ ಚಲಾವಣೆಯಲ್ಲಿದೆ. ಇದು ನಿಜವಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
    ಬೆಂಗಳೂರು: ದೇಶದಲ್ಲಿ ನಾನಾ ರೀತಿಯಲ್ಲಿ ನಕಲಿ ನೋಟುಗಳು ಚಲಾವಣೆಯಲ್ಲಿವೆ. ಒರಿಜಿನಲ್ ನೋಟು ಬಹಳ ಅಚ್ಚುಕಟ್ಟಾಗಿ ಮುದ್ರಿತವಾಗಿದ್ದು, ಹಲವು ವಿಶೇಷ ಅಂಶಗಳನ್ನ ಒಳಗೊಂಡಿರುತ್ತದೆ. ಅದನ್ನ ನಕಲು ಮಾಡುವುದು ಬಹಳ ಕಷ್ಟ. ಎಷ್ಟೇ ಪ್ರಯತ್ನಿಸಿದರೂ ಏನಾದರೊಂದು ಅಂಶದ ಕೊರತೆ ಇದ್ದೇ ಇರುತ್ತದೆ. ನೋಟ್ ಬ್ಯಾನ್ ಮಾಡುವ ಮುನ್ನ 500 ರೂ ಮತ್ತು 1000 ರೂ ಮುಖಬೆಲೆಯ ನಕಲಿ ನೋಟುಗಳು ಬಹಳ ಚಲಾವಣೆಯಲ್ಲಿದ್ದವು. ಒರಿಜಿನಲ್ ನೋಟಿನಂತೆಯೇ ಬಣ್ಣ ನಿಖರವಾಗಿರುವುದರಿಂದ ಜನರೊಳಗೆ ಸುಲಭವಾಗಿ ಕೈಬದಲಾವಣೆ ಆಗುತ್ತಿದ್ದವು. ಈಗಲೂ 500 ರೂ ಮುಖಬೆಲೆಯ ನಕಲಿ ನೋಟುಗಳು ಚಲಾವಣೆಯಲ್ಲಿ ಇವೆ ಎಂದು ಆಗಾಗ ಸುದ್ದಿ ಬರುತ್ತಿರುತ್ತದೆ. ಇದೀಗ ಮಹಾತ್ಮ ಗಾಂಧಿ ಫೋಟೋ ಬಳಿ ಹಸಿರು ಗೆರೆ ಹಾಕಿದ ಹಾಗೂ ಆರ್​ಬಿಐ ಗವರ್ನರ್ ಹಸ್ತಾಕ್ಷರ ಇಲ್ಲದ 500 ರೂ ಮುಖಬೆಲೆಯ ನಕಲಿ ನೋಟು ಬಂದಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗಿದೆ.

    ಇಂಥ ಬಹಳಷ್ಟು ನೋಟುಗಳು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿವೆ. ಈ ಸುದ್ದಿಯಿಂದ ಬಹಳಷ್ಟು ಮಂದಿ ಕಂಗಾಲಾಗಿದ್ದು ಹೌದು. ಅದರಲ್ಲೂ ದಿನಕ್ಕೆ ಸಾವಿರಾರು ನೋಟುಗಳನ್ನ ಕಾಣುವ ವ್ಯಾಪಾರಿಗಳು ಪ್ರತಿಯೊಂದು ನೋಟನ್ನೂ ಗಮನಿಸುವಷ್ಟರಲ್ಲಿ ಸಾಕಾಗಿ ಹೋಗುವಂತಾಯಿತು.

    ಆದರೆ ವದಂತಿ ತೀವ್ರವಾಗಿ ಹಬ್ಬುತ್ತಿರುವಂತೆಯೇ ಸರ್ಕಾರದ ಸಾರ್ವಜನಿಕ ಮಾಹಿತಿ ದಳ (ಪಿಐಬಿ) ಮಧ್ಯಪ್ರವೇಶಿಸಿ ಸಾರ್ವಜನಿಕರಿಗೆ ಸಮಜಾಯಿಷಿ ನೀಡಬೇಕಾಯಿತು. ಈಗ ಹರಿದಾಡುತ್ತಿರುವ ವದಂತಿಯಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಪಿಐಬಿ ರಿಯಾಲಿಟಿ ಚೆಕ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟಪಡಿಸಿದೆ.

    ಇದನ್ನೂ ಓದಿ: RBI Rates- ರೆಪೋ ದರದಲ್ಲಿ ಇಲ್ಲ ಬದಲಾವಣೆ; ಸತತ 9ನೇ ಬಾರಿ ಯಥಾಸ್ಥಿತಿ ಮುಂದುವರಿಕೆ

    ನೋಟಿನಲ್ಲಿ ಮಹಾತ್ಮ ಗಾಂಧಿ ಫೋಟೋ ಬಳಿ ಹಸಿರು ಗೆರೆ ಇರುವ ನೋಟು ನಕಲಿ ಅಲ್ಲ. ಹಾಗೆಯೇ, ಆರ್​ಬಿಐ ಗವರ್ನರ್ ಹಸ್ತಾಕ್ಷರ ಬಳಿ ಹಸಿರು ಗೆರೆ ಇರುವ ನೋಟು ಕೂಡ ನಕಲಿ ಅಲ್ಲ. ಆ ಎರಡನ್ನೂ ಚಲಾವಣೆ ಮಾಡಬಹುದು ಎಂದು ಪಿಐಬಿ ಅಕೌಂಟ್​ನಿಂದ ವಿಡಿಯೋ ಸಮೇತ ಸ್ಪಷ್ಟೀಕರಣ ಬಂದಿತು.




    10 ರೂ ನಾಣ್ಯದ ವದಂತಿ:

    ಆದರೆ, ಜನರು ವದಂತಿಗಳಿಗೆ ಬಹಳ ಬೇಗ ಕಿವಿಗೊಡುತ್ತಾರೆ. ನೀವು ನಂಬುತ್ತೀರೋ ಇಲ್ಲವೋ ಕೆಲ ವರ್ಷಗಳ ಹಿಂದೆ 10 ರೂ ಮುಖಬೆಲೆಯ ನಾಣ್ಯದ ಚಲಾವಣೆ ರದ್ದಾಗಿದೆ ಎಂಬ ವದಂತಿ ಹಬ್ಬಿತ್ತು. ಅದು ಸುಳ್ಳು ಎಂದು ಆರ್​ಬಿಐ ಅದಾಗಲೇ ಸ್ಪಷ್ಟಪಡಿಸಿತ್ತು. ಮಾಧ್ಯಮಗಳಲ್ಲಿ ಅನೇಕ ಬಾರಿ ಸ್ಪಷ್ಟೀಕರಣ ಬಂದಿದೆ. ಆದರೆ, ಶೇ. 90ರಷ್ಟು ಭಾಗದಲ್ಲಿ ಜನರು ಈಗಲೂ 10 ರೂ ನಾಣ್ಯವನ್ನು ಸ್ವೀಕರಿಸುವುದಿಲ್ಲ.
    Published by:Vijayasarthy SN
    First published: