Saving Account: ಹಣ ಉಳಿತಾಯ (Money Saving) ಎಂಬುದು ಪ್ರಸ್ತುತ ವಿದ್ಯಮಾನದಲ್ಲಿ ಅತ್ಯಂತ ಮಹತ್ವಪೂರ್ಣ ನಿರ್ಧಾರವಾಗಿದೆ. ನಾವು ಉಳಿತಾಯ ಮಾಡಿದ ಹಣ (Money) ನಮ್ಮನ್ನು ಕಷ್ಟದ ಸಮಯಗಳಲ್ಲಿ ಕಾಪಾಡುತ್ತದೆ. ಹೀಗಾಗಿ ಎಷ್ಟೇ ಹಣ ಖರ್ಚು ಮಾಡಿದರೂ (Expenses) ತಿಂಗಳಿನಲ್ಲಿ ಒಂದಿಷ್ಟು ಹಣವನ್ನು ಉಳಿತಾಯ ಮಾಡಬೇಕು ಎಂಬುದು ಆರ್ಥಿಕ ಚಿಂತಕರ (Economic Experts) ಅಭಿಪ್ರಾಯವಾಗಿದೆ. ಹಣದ ಅವಶ್ಯಕತೆ (Money Emergency) ಯಾವಾಗ ಹೇಗೆ ಉಂಟಾಗಬಹುದು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಹಾಗಾಗಿ ಹೆಚ್ಚಿನವರು ತಮ್ಮ ಬೇರೆ ಬೇರೆ ಉದ್ದೇಶಗಳಿಗಾಗಿ ಬೇರೆ ಬೇರೆ ಬ್ಯಾಂಕ್ಗಳಲ್ಲಿ (Banks) ಉಳಿತಾಯ ಖಾತೆಯನ್ನು ತೆರೆಯುತ್ತಾರೆ.
ಉಳಿತಾಯ ಖಾತೆಯ ವಿಷಯದಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಈ ಖಾತೆ ಬೇರೆ ಬೇರೆ ಖಾತೆಗಳಿಗಿಂತ ಭಿನ್ನವಾಗಿರುತ್ತದೆ ಏಕೆಂದರೆ ಮುಖ್ಯವಾಗಿ ಭವಿಷ್ಯದ ಭದ್ರತೆಗಾಗಿ ನಾವು ಹಣವನ್ನು ಉಳಿತಾಯ ಖಾತೆಯಲ್ಲಿ ಉಳಿತಾಯ ಮಾಡುತ್ತೇವೆ.
ಖಾತೆ ತೆರೆಯುವ ಮುನ್ನ ಕೂಲಂಕುಷ ಪರಿಶೀಲನೆ ಅಗತ್ಯ
ಹಣ ಉಳಿತಾಯ ಮಾಡುವಾಗ ಯಾವ ಬ್ಯಾಂಕ್ ಖಾತೆಯನ್ನು ಉಳಿತಾಯ ಖಾತೆಯನ್ನಾಗಿ ಆರಿಸಿಕೊಳ್ಳಬಹುದು ಎಂಬ ಗೊಂದಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ.
ಈ ಸಮಯದಲ್ಲಿ ಸರಿಯಾದ ಸಮಾಲೋಚನೆ ನಡೆಸಿ ಖಾತೆ ಆಯ್ಕೆಮಾಡಬೇಕು ಎಂಬುದು ತಜ್ಞರ ಸಲಹೆಯಾಗಿದೆ. ಹೆಚ್ಚಿನ ಲಾಭ ಪಡೆಯಲು ಒಂದಕ್ಕಿಂತ ಹೆಚ್ಚಿನ ಉಳಿತಾಯ ಖಾತೆಯನ್ನು ತೆರೆಯಬಹುದು ಎಂಬುದು ಆರ್ಥಿಕ ತಜ್ಞರ ಸಲಹೆಯಾಗಿದೆ.
ಒಂದಕ್ಕಿಂತ ಹೆಚ್ಚಿನ ಉಳಿತಾಯ ಖಾತೆ ಹೊಂದಬಹುದೇ?
SAG ಇನ್ಫೋಟೆಕ್ನ MD ಅಮಿತ್ ಗುಪ್ತಾ ಪ್ರಕಾರ, ಭಾರತದಲ್ಲಿನ ಜನರು ವಿವಿಧ ಬ್ಯಾಂಕ್ಗಳಲ್ಲಿ ಹಲವಾರು ಉಳಿತಾಯ ಖಾತೆಗಳನ್ನು ತೆರೆಯಬಹುದು ಇದರಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳುತ್ತಾರೆ.
ನೀವು ಎಷ್ಟು ಉಳಿತಾಯ ಖಾತೆಗಳನ್ನು ಬೇಕಾದರೂ ಹೊಂದಬಹುದು ಇದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂಬುದು ಅಮಿತ್ ಅವರ ಹೇಳಿಕೆಯಾಗಿದೆ.
ನಿರ್ವಹಣೆ ಸರಿಯಾಗಿರಬೇಕು
ಒಂದಕ್ಕಿಂತ ಹೆಚ್ಚಿನ ಖಾತೆಗಳಿದ್ದರೆ ಅವುಗಳ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕಾಗುತ್ತದೆ ಹಾಗಾಗಿ ಮೂರಕ್ಕಿಂತ ಹೆಚ್ಚು ಉಳಿತಾಯ ಖಾತೆಗಳನ್ನು ಹೊಂದಿರಬಾರದು ಎಂದು ಸೂಚಿಸಲಾಗುತ್ತದೆ ಎಂದು ಅಮಿತ್ ಹೇಳುತ್ತಾರೆ.
ಎಷ್ಟೇ ಖಾತೆಗಳನ್ನು ಹೊಂದಿದ್ದರೂ ಅದನ್ನು ಸರಿಯಾಗಿ ನಿರ್ವಹಿಸಲು ತಿಳಿದಿರಬೇಕು ಎಂಬುದು ಅಮಿತ್ ಅಭಿಪ್ರಾಯವಾಗಿದೆ.
ಬ್ಯಾಂಕ್ಗಳಲ್ಲಿ ನಿರ್ಬಂಧವಿಲ್ಲ
ಯಾವುದೇ ಬ್ಯಾಂಕ್ ಇಷ್ಟೇ ಸೇವಿಂಗ್ ಖಾತೆಗಳನ್ನು ಹೊಂದಿರಬೇಕು ಎಂಬ ನಿಯಮ ರೂಪಿಸಿಲ್ಲ ಹಾಗಾಗಿ ಹಣಕಾಸಿನ ಉದ್ದೇಶಕ್ಕೆ ಅನುಸಾರವಾಗಿ ಹೆಚ್ಚು ಖಾತೆಗಳನ್ನು ಹೊಂದಬಹುದು ಎಂಬುದು ಅಮಿತ್ ಸಲಹೆಯಾಗಿದೆ.
ಆದರೆ ಹೆಚ್ಚು ಖಾತೆಗಳ ನಿರ್ವಹಣೆ ಚೆನ್ನಾಗಿ ಅರಿತಿರಬೇಕು ಎಂದೂ ಸೂಚಿಸುತ್ತಾರೆ. ಹಾಗಿದ್ದರೆ ಹೆಚ್ಚಿನ ಖಾತೆಗಳನ್ನು ಸುಲಭವಾಗಿ ಹೇಗೆ ನಿರ್ವಹಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ
ಪರಿಣಾಮಕಾರಿ ಆರ್ಥಿಕ ನಿರ್ವಹಣೆ
ನಿಮ್ಮ ಮಗುವಿನ ಶಿಕ್ಷಣಕ್ಕಾಗಿ, ತುರ್ತು ಅಗತ್ಯಗಳಿಗೆ ಅಥವಾ ದೈನಂದಿನ ಖರ್ಚು ವೆಚ್ಚಕ್ಕೆ ನೀವು ಹಣ ಉಳಿತಾಯ ಮಾಡುತ್ತಿರಿ ಈ ಸಮಯದಲ್ಲಿ ನಿಮ್ಮ ಬೇರೆ ಬೇರೆ ಉದ್ದೇಶಗಳಿಗಾಗಿ ಬೇರೆ ಬೇರೆ ಖಾತೆ ಹೊಂದುವುದು ನಿರ್ವಹಣೆಗೆ ಸುಲಭವಾಗಿರುತ್ತದೆ. ಹಣ ನಷ್ಟವಾಗುವುದನ್ನು ತಡೆಯುತ್ತದೆ.
ಉದ್ದೇಶಗಳಿಗಾಗಿ ಸ್ವಯಂಚಾಲಿತ ಸೇವಿಂಗ್
ಪ್ರತಿಯೊಂದು ಉದ್ದೇಶಗಳಿಗಾಗಿ ಬೇರೆ ಬೇರೆ ಖಾತೆಗಳನ್ನು ತೆರೆದ ನಂತರ ನಿಮ್ಮ ಪ್ರಾಥಮಿಕ ಖಾತೆಯಿಂದ ಇತರ ಖಾತೆಗಳಿಗೆ ಸ್ವಯಂಚಾಲಿತ ಹಣ ವರ್ಗಾವಣೆಯನ್ನು ಮಾಡಬಹುದಾಗಿದೆ. ನೀವು ಉಳಿತಾಯಕ್ಕೆ ಇರಿಸುವ ಹಣವನ್ನು ಖರ್ಚುಮಾಡದಿರಿ.
ಬೇರೆ ಬೇರೆ ಉದ್ದೇಶಗಳಿಗಾಗಿ ಹಣ ಉಳಿಸಿದಂತೆ ಅದನ್ನು ನಿರ್ವಹಿಸುವುದು ಸುಲಭವಾಗಿರುತ್ತದೆ ಹಾಗೂ ನಿಮ್ಮ ಆರ್ಥಿಕತೆಯ ಮೇಲೆ ನಿಗಾ ಇರಿಸುವುದು ಸರಳವಾಗಿರುತ್ತದೆ.
ಇದನ್ನೂ ಓದಿ: Aadhaar: ದೊಡ್ಡ ಸಮಸ್ಯೆಗೆ ಮುಕ್ತಿ ನೀಡಿದ ಆಧಾರ್; ಮನೆಯಿಂದಲೇ ಸಿಗಲಿದೆ ಸೌಲಭ್ಯ
ತುರ್ತು ಸಂದರ್ಭದಲ್ಲಿ ಹಣ ಹಿಂಪಡೆಯುವುದು
ಡೆಬಿಟ್ ಕಾರ್ಡ್ನಲ್ಲಿ ಹಣ ಹಿಂಪಡೆಯಲು ಮಿತಿಗಳನ್ನು ಹೊಂದಿಸಲಾಗಿದೆ ನೀವು ಒಂದೇ ಬ್ಯಾಂಕ್ನ ಡೆಬಿಟ್ ಕಾರ್ಟ್ ಹೊಂದಿದ್ದರೆ ತುರ್ತು ಸಂದರ್ಭದಲ್ಲಿ ಹೆಚ್ಚು ಹಣವನ್ನು ತೆಗೆಯಲು ನಿಮಗೆ ಸಾಧ್ಯವಾಗದೇ ಇರಬಹುದು.
ಆದರೆ ಬೇರೆ ಬೇರೆ ಖಾತೆಗಳ ಡೆಬಿಟ್ ಕಾರ್ಡ್ಗಳಿಂದ ಒಂದಿಷ್ಟು ನಿರ್ದಿಷ್ಟ ಮೊತ್ತವನ್ನು ಪಡೆಯಬಹುದಾಗಿದೆ ಹೀಗೆ ಪಡೆದ ಹಣವನ್ನು ತುರ್ತು ಸಮಯಗಳಲ್ಲಿ ಬಳಸಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ