Layoff ಆದ್ರೂ ಶೇಕಡ 30ರಷ್ಟು ಜಾಸ್ತಿ ಸಂಬಳದ ಕೆಲಸ ಗಿಟ್ಟಿಸಿಕೊಂಡ ಅಮೆಜಾನ್‌ ಎಂಜಿನಿಯರ್!

ಉದ್ಯೋಗಿ!

ಉದ್ಯೋಗಿ!

ಪಾಡ್‌ಕ್ಯಾಸ್ಟರ್ ರಿದ್ಧಿ ದತ್ತಾ ಅವರೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ ಲೇಆಫ್‌ಗೆ ತಾನು ಮಾನಸಿಕವಾಗಿ ಸಿದ್ಧನಾಗಿದ್ದೆ ಎಂಬ ಗುಟ್ಟನ್ನು ಹಂಚಿಕೊಂಡಿದ್ದಾರೆ.

  • Share this:

ಫೇಸ್‌ಬುಕ್ (Facebook), ಟ್ವಿಟರ್ (Twitter), ಮೈಕ್ರೋಸಾಫ್ಟ್ (Microsoft) ತನ್ನ ಉದ್ಯೋಗಿಗಳನ್ನು ವಜಾಗೊಳಿಸಿರುವ ವಿಷಯ ಗೊತ್ತೇ ಇದೆ. ಇದಾದ ನಂತರ ಅಮೆಜಾನ್ (Amazon) ಕೂಡ ತನ್ನ 18,000 ಉದ್ಯೋಗಿಗಳನ್ನು ಲೇ ಆಫ್‌ ಮಾಡಿ ವೆಚ್ಚ ಕಡಿತದ ಕ್ರಮಕ್ಕೆ ಮುಂದಾಗಿತ್ತು. ಅಮೆಜಾನ್‌ನಿಂದ ವಜಾಗೊಂಡ ಉದ್ಯೋಗಿಗಳಲ್ಲಿ ಅರಿದೀಪ್ ದತ್ತಾ ಕೂಡ ಒಬ್ಬರು. ಲೇಆಫ್ ಆದ ನಂತರ ಹೆಚ್ಚಿನ ಆಘಾತ ಹೊಂದಿದ್ದ ಅರಿದೀಪ್ ಧೃತಿಗೆಡಲಿಲ್ಲ. ಅಮೆಜಾನ್‌ನಲ್ಲಿ ಪಡೆಯುತ್ತಿದ್ದ ಸಂಬಳಕ್ಕಿಂತಲೂ ಹೆಚ್ಚಿನ ಸಂಬಳ ಗಿಟ್ಟಿಸುವ ಉದ್ಯೋಗವನ್ನು ಹೊಂದುವಲ್ಲಿ ಸಫಲರಾಗಿದ್ದಾರೆ. ಇದೀಗ ಸಾಫ್ಟ್‌ವೇರ್ ಎಂಜಿನಿಯರ್ ಅರಿದೀಪ್ ತಮ್ಮ ಉದ್ಯೋಗ ಹುಡುಕಾಟದ ಪ್ರಯಾಣವನ್ನು ಹಂಚಿಕೊಂಡಿದ್ದು ಹೆಚ್ಚು ವೇತನದ ಉದ್ಯೋಗ ಗಿಟ್ಟಿಸುವಲ್ಲಿ ಹೇಗೆ ಪ್ರಯತ್ನ ನಡೆಸಿದರು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


ಪಾಡ್‌ಕ್ಯಾಸ್ಟರ್ ರಿದ್ಧಿ ದತ್ತಾ ಅವರೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ ಲೇಆಫ್‌ಗೆ ತಾನು ಮಾನಸಿಕವಾಗಿ ಸಿದ್ಧನಾಗಿದ್ದೆ ಎಂಬ ಗುಟ್ಟನ್ನು ಹಂಚಿಕೊಂಡಿದ್ದಾರೆ. ಈ ಸುದ್ದಿ ಬಹಳ ಕೆಟ್ಟದ್ದಾಗಿದ್ದರೂ ಸಂದರ್ಶನಗಳಿಗೆ ತಯಾರಿ ನಡೆಸಲು ಹಾಗೂ ಹೆಚ್ಚು ವೇತನ ಪಡೆಯಲು ನೆರವಾಗಿರುವ ತಂತ್ರಗಳನ್ನು ಹೇಗೆ ಸಿದ್ಧಪಡಿಸಿದ್ದಾರೆ ಎಂಬ ವಿವರನ್ನು ಹಂಚಿಕೊಂಡಿದ್ದಾರೆ.


ಅರಿದೀಪ್ ಪಾಲಿಸಿದ ಸೂಚನೆಗಳು ಹಾಗೂ ಅನುಸರಿಸಿದ ಸಲಹೆಗಳು


ಅಮೆಜಾನ್‌ನಿಂದ ವಜಾಗೊಂಡ ನಂತರ ಉದ್ಯೋಗ ಹುಡುಕಾಟಕ್ಕೂ ಮುನ್ನ ಬೆಂಗಳೂರಿನಲ್ಲಿ ನಡೆಯುವ ಸಂಬಂಧಿ ವಿವಾಹದಲ್ಲಿ ಪಾಲ್ಗೊಳ್ಳಲು ಸ್ವಲ್ಪ ಕಾಲ ವಿರಾಮ ತೆಗೆದುಕೊಂಡೆ ಎಂಬ ಅಂಶವನ್ನು ಹಂಚಿಕೊಂಡಿದ್ದಾರೆ. ವಿವಾಹದಿಂದ ಹಿಂತಿರುಗಿದ ಕೂಡಲೇ ಉದ್ಯೋಗ ಬೇಟೆಯನ್ನು ಆರಂಭಿಸಿದ ಅರಿದೀಪ್ ಹೇಗೆ ತಂತ್ರ ರಚಿಸಿದರು ಎಂಬುದನ್ನು ವಿವರಿಸಿದ್ದಾರೆ.


ಅಮೆಜಾನ್‌ಗೆ ಸೇರ್ಪಡೆಗೊಳ್ಳುವ ಮೊದಲು ಟಿಸಿಎಸ್‌ನಲ್ಲಿ ಒಂದು ವರ್ಷ ಉದ್ಯೋಗ ಪೂರೈಸಿದ್ದ ಅರಿದೀಪ್ ಲಿಂಕ್ಡ್‌ಇನ್‌ನಲ್ಲಿ ವಜಾಗೊಂಡಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Google Pay-Phone Pay, Paytm ಗೆ ಇನ್ಮುಂದೆ ಕೆಲಸ ಇಲ್ಲ!


ಅಂತೆಯೇ ಕೆಲವೊಂದು ಸಂದರ್ಶನಗಳಿಗೆ ಹಾಜರಾಗಿದ್ದೆ ಎಂಬ ಮಾಹಿತಿ ತಿಳಿಸಿದ್ದಾರೆ. ಹಲವಾರು ಕಂಪನಿಗಳಿಗೆ ಅರ್ಜಿ ಸಲ್ಲಿಸಿದ್ದ ಅರಿದೀಪ್ ಅಮೆಜಾನ್‌ನಿಂದ ವಜಾಗೊಂಡಿರುವ ಸುದ್ದಿ ಅರಿತೊಡನೆ ಅವರನ್ನು ನೇಮಕಗೊಳಿಸಲು ಹಿಂದೇಟು ಹಾಕಿದ್ದವು ಎಂಬುದನ್ನು ತಿಳಿಸಿದ್ದಾರೆ.


ಕೆಲವೊಂದು ಕಂಪನಿಗಳು ವಜಾಗೊಂಡ ಸುದ್ದಿಯನ್ನೇ ದಾಳವಾಗಿಸಿಕೊಂಡು ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತವೆ ಎಂಬ ಅನುಭವಗಳನ್ನು ಅರಿದೀಪ್ ಹಂಚಿಕೊಂಡಿದ್ದಾರೆ.


ಸ್ಟಾರ್ಟಪ್‌ಗಳಿಂದ ಕೂಡ ಆಫರ್ ಬಂದಿತ್ತು


ತಾವು ಸೇರ್ಪಡೆಯಾಗಬೇಕಿದ್ದ ಸಂಸ್ಥೆಯಲ್ಲಿ ಅಮೆಜಾನ್‌ನಷ್ಟೇ ವೇತನ ಪಡೆಯಬೇಕು ಇಲ್ಲವೇ ಅದಕ್ಕಿಂತ ಹೆಚ್ಚಿನ ಗಳಿಕೆಯನ್ನು ಸಂಪಾದಿಸಬೇಕೆಂಬ ಗುರಿಯಲ್ಲಿ ಅರಿದೀಪ್ ಬದ್ಧರಾಗಿದ್ದರು.


ಅನೇಕ ಸ್ಟಾರ್ಟಪ್‌ಗಳು ಅಂತೆಯೇ ಫ್ಲಿಪ್‌ಕಾರ್ಟ್‌ಗಳಂತಹ ಕಂಪನಿಗಳಿಂದ ಕೂಡ ಅನೇಕ ಆಫರ್‌ಗಳನ್ನು ಪಡೆದಿದ್ದಾರೆ ಎಂದು ಅರಿದೀಪ್ ತಿಳಿಸಿದ್ದಾರೆ.


ಅಮೆಜಾನ್‌ನಲ್ಲಿ ಸೇರ್ಪಡೆಯಾಗುವುದು ನನ್ನ ಕನಸಾಗಿತ್ತು ಹಾಗೆಯೇ ನಾನು ಅಮೆಜಾನ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡೆ. ಆದರೆ ಅಮೆಜಾನ್ ಕಂಪನಿ ನನ್ನನ್ನು ಸೇರಿ 18,000 ಉದ್ಯೋಗಿಗಳನ್ನು ವಜಾಗೊಳಿಸಿತು.


ಇದೊಂದು ರೀತಿಯ ಶಾಕಿಂಗ್ ಅನುಭವವಾಗಿತ್ತು ಎಂದು ಅರಿದೀಪ್ ತಿಳಿಸಿದ್ದಾರೆ. ಆದರೆ ಲೇಆಫ್‌ಗೊಂಡೆ ಎಂದು ನಾನು ದುಃಖಿಸಲಿಲ್ಲ ಇನ್ನಷ್ಟು ಹುರುಪಿನಿಂದ ಹಲವಾರು ಕಂಪನಿಗಳಿಗೆ ಅಪ್ಲೈ ಮಾಡಿದೆ ಹಾಗೂ ಫ್ಲಿಪ್‌ಕಾರ್ಟ್ ಮೊದಲಾದ ಕಂಪನಿಗಳಿಂದ ಹೆಚ್ಚಿನ ಆಫರ್‌ಗಳನ್ನು ಸ್ವೀಕರಿಸಿರುವೆ ಎಂದು ಅರಿದೀಪ್ ತಿಳಿಸಿದ್ದಾರೆ.


ಫ್ರೆಶರ್‌ಗಳಿಗೆ ಸಂದರ್ಶನದ ಟ್ರಿಕ್ಸ್ ತಿಳಿಸಿರುವ ಅರಿದೀಪ್


ಉದ್ಯೋಗ ಮಾರುಕಟ್ಟೆಯ ಪ್ರಸ್ತುತ ಸ್ಥಿತಿಗತಿಗಳು ಹಾಗೂ ಫ್ರೆಶರ್‌ಗಳು ಉದ್ಯೋಗ ಹುಡುಕಾಟವನ್ನು ಹೇಗೆ ನಡೆಸಬೇಕು ಎಂಬ ಸಲಹೆಯನ್ನು ಅರಿದೀಪ್ ಪೋಡ್‌ಕಾಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Loan Foreclosure Charge ಏನು? ಇದ್ರಿಂದ ತಪ್ಪಿಸಿಕೊಳ್ಳೋದು ಹೇಗೆ ಅಂತ ಇಲ್ಲಿದೆ ನೋಡಿ!


ಪ್ರಸ್ತುತ ಸನ್ನಿವೇಶದಲ್ಲಿ ನೀವು ವಜಾಗೊಳ್ಳುವುದಿಲ್ಲ ಎಂಬುದಕ್ಕೆ ಯಾವುದೇ ಖಾತ್ರಿ ಇಲ್ಲ. ಗೂಗಲ್, ಅಮೆಜಾನ್, ಮೈಕ್ರೋಸಾಫ್ಟ್‌ನಂತಹ ಕಂಪನಿಗಳೇ ವಜಾಗೊಳಿಸಲು ಮುಂದಾದರೆ ಇನ್ನಿತರ ಕಂಪನಿಗಳಿಂದ ಕೂಡ ಇದನ್ನೇ ನಿರೀಕ್ಷಿಸಬೇಕಾಗುತ್ತದೆ ಎಂದು ಅರಿದೀಪ್ ತಿಳಿಸಿದ್ದಾರೆ.


ಜಾಯಿನ್ ಆಗುವ ಕಂಪನಿ ಬಗ್ಗೆ ಮಾಹಿತಿ ಕಲೆಹಾಕಿ


ಸ್ಟಾರ್ಟಪ್‌ಗೆ ನೀವು ಸೇರಿಕೊಳ್ಳುತ್ತಿದ್ದರೆ ಆ ಸ್ಟಾರ್ಟಪ್ ಕುರಿತು ಸ್ವಲ್ಪ ವಿಮರ್ಶೆ ಮಾಡಿ ಹಾಗೂ ಅನ್ವೇಷಣೆ ನಡೆಸಿ. ಹೂಡಿಕೆದಾರರ ಬಗ್ಗೆ ಮಾಹಿತಿ ಸಂಗ್ರಹಿಸಿ ಸ್ಟಾರ್ಟಪ್ ಯಾವ ಹಂತದಲ್ಲಿದೆ ಎಂಬುದನ್ನು ಕಂಡುಕೊಳ್ಳಿ.


top videos



    ಕಂಪನಿಯ ಭವಿಷ್ಯದ ಗುರಿಗಳೇನು ಎಂಬುದನ್ನು ಅನ್ವೇಷಿಸಿ ಎಂಬುದಾಗಿ ಸಲಹೆ ನೀಡಿದ್ದಾರೆ. ಈ ರೀತಿ ಮಾಡುವ ಮೂಲಕ ನೀವು ಸೇರುವ ಕಂಪನಿ ಸುರಕ್ಷಿತವಾಗಿದೆಯೇ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಬಹುದು ಎಂದು ಅರಿದೀಪ್ ಸಲಹೆ ನೀಡಿದ್ದಾರೆ.

    First published: