• Home
  • »
  • News
  • »
  • business
  • »
  • Aadhaar Card: ಪ್ರತಿ ತಿಂಗಳು ನಿಮ್ಮ ಆಧಾರ್​ ಕಾರ್ಡ್ ಹಿಸ್ಟರಿ ಚೆಕ್ ಮಾಡಿ, ಕೇರ್​ಲೆಸ್​ ಮಾಡಿದ್ರೆ ನಿಮ್ಗೆ ತೊಂದ್ರೆ!

Aadhaar Card: ಪ್ರತಿ ತಿಂಗಳು ನಿಮ್ಮ ಆಧಾರ್​ ಕಾರ್ಡ್ ಹಿಸ್ಟರಿ ಚೆಕ್ ಮಾಡಿ, ಕೇರ್​ಲೆಸ್​ ಮಾಡಿದ್ರೆ ನಿಮ್ಗೆ ತೊಂದ್ರೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಧಾರ್ ಕಾರ್ಡ್ ಹೊಂದಿರುವವರು ಆಧಾರ್ ದೃಢೀಕರಣ ಇತಿಹಾಸವನ್ನು ಸುಲಭವಾಗಿ ಪರಿಶೀಲಿಸಬಹುದು. ಅಂದರೆ ತಮ್ಮ ಆಧಾರ್ ಕಾರ್ಡ್ ಅನ್ನು ಎಲ್ಲಿ ಬಳಸಲಾಗಿದೆ ಎಂದು ತಿಳಿಯಬಹುದು.

  • Share this:

ಆಧಾರ್ ಕಾರ್ಡ್ (Aadhaar Card) ಅಂದರೆ ಮೊದಲೆಲ್ಲಾ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅದು ಒಂದು ಗುರುತಿನ ಚೀಟಿ ಅಂತ ಸುಮ್ಮನಾಗಿಬಿಡುತ್ತಿದ್ದರು. ಆದರೆ ಈಗ ಹಾಗಿಲ್ಲ. ಎಲ್ಲ ಕೆಲಸಗಳಿಗೂ ಆಧಾರ್​ ಕಾರ್ಡ್ ಬೇಕೆ ಬೇಕು. ನೀವು ಸತ್ತಮೇಲೂ ನಿಮ್ಮ ಅಂತ್ಯಸಂಸ್ಕಾರ ಮಾಡೋ ವರೆಗೂ ಆಧಾರ್ ಕಾರ್ಡ್ ಬೇಕು. ಆಧಾರ್​ ಕಾರ್ಡ್ ಎಲ್ಲದ್ದಕ್ಕೂ ಕಡ್ಡಾಯವಾಗುತ್ತಿದೆ. ಐಡಿ ಪ್ರೂಫ್ (ID Proof) ಕೇವಲ ವಿಳಾಸ (Address) ಪುರಾವೆಯಂತಲ್ಲ ಪ್ರಧಾನ ಮಂತ್ರಿ ಕಿಸಾನ್ (PM Kisan Yojana) ಯೋಜನೆ ನಂತಹ ಸರ್ಕಾರಿ ಯೋಜನೆಗಳಿಂದ ಪ್ರಯೋಜನ ಪಡೆಯಲು ಆಧಾರ್ ಕಡ್ಡಾಯವಾಗಿದೆ. ಆದ್ದರಿಂದ ನಾಗರಿಕರ ಬಳಿ ಆಧಾರ್ ಕಾರ್ಡ್  ಪ್ರಮುಖ ದಾಖಲೆ (Document) ಯಾಗಿ ಮಾರ್ಪಟ್ಟಿದೆ. ಆಧಾರ್ ಕಾರ್ಡ್‌ನ ಅಗತ್ಯತೆಗಳು ಹೆಚ್ಚಾಗುತ್ತಿದ್ದಂತೆ, ಆಧಾರ್ ಕಾರ್ಡ್‌ನ ಸುತ್ತ ವಂಚನೆಗಳೂ ಹೆಚ್ಚಾಗುತ್ತಿವೆ.


ಮತ್ತೊಬ್ಬರ ಆಧಾರ್​ ಕಾರ್ಡ್ ಬಳಸಿ ವಂಚನೆ! 


ಇತರರ ಆಧಾರ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ವಂಚನೆಗಳು ನಡೆಯುತ್ತಿವೆ. ವಂಚನೆಗಳು ಮಾತ್ರವಲ್ಲದೆ ದೇಶದ್ರೋಹದ ಘಟನೆಗಳು ಹೊರಹೊಮ್ಮುತ್ತಿವೆ. ಮಂಗಳೂರಿನಲ್ಲಿ ನಡೆದ ಸ್ಫೋಟದ ಪ್ರಮುಖ ಸೂತ್ರಧಾರ ರೈಲ್ವೆ ಉದ್ಯೋಗಿಯ ಆಧಾರ್ ಕಾರ್ಡ್​ ಬಳಸಿಕೊಂಡು ಬಾಡಿಗೆ ಮನೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.ಹಾಗಾಗಿ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಆಧಾರ್ ವಿವರಗಳು ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಗಮನಿಸಬೇಕು.


ಪ್ರತಿ ತಿಂಗಳಿಗೊಮ್ಮೆ ಆಧಾರ್ ಡೀಟೆಲ್ಸ್​ ಚೆಕ್ ಮಾಡಿ!


ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ದುರ್ಬಳಕೆಯನ್ನು ತಡೆಯಲು ಕೆಲವು ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಆಧಾರ್ ಕಾರ್ಡ್ ಹೊಂದಿರುವವರು ಆಧಾರ್ ದೃಢೀಕರಣ ಇತಿಹಾಸವನ್ನು ಸುಲಭವಾಗಿ ಪರಿಶೀಲಿಸಬಹುದು. ಅಂದರೆ ತಮ್ಮ ಆಧಾರ್ ಕಾರ್ಡ್ ಅನ್ನು ಎಲ್ಲಿ ಬಳಸಲಾಗಿದೆ ಎಂದು ತಿಳಿಯಬಹುದು.


ಇದನ್ನೂ ಓದಿ: ಮನೆಯಲ್ಲೇ ಸಿಂಪಲ್ಲಾಗಿ ಈ ಬ್ಯುಸಿನೆಸ್ ಆರಂಭಿಸಿ! ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸಿ!


ಆಧಾರ್​ ಹಿಸ್ಟರಿ ಚೆಕ್ ಮಾಡೋದು ಮುಖ್ಯ!


ಉದಾಹರಣೆಗೆ, ನೀವು ಸರಕುಗಳನ್ನು ಖರೀದಿಸಲು ಪಡಿತರ ಅಂಗಡಿಗೆ ಹೋದರೆ, ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲಾಗುತ್ತೆ. ಮೊಬೈಲ್ ನಂಬರ್‌ಗೆ ಬಂದ OTP ಅನ್ನು ಅವರು ನಿಮಗೆ ತಿಳಿಸುತ್ತಾರೆ. ಅಥವಾ ನೀವುಬಯೋಮೆಟ್ರಿಕ್ ಮೂಲಕ ಸರಕುಗಳನ್ನು ಖರೀದಿಸಿದರೆ ನಿಮ್ಮ ಆಧಾರ್ ವಿವರಗಳನ್ನು ಸ್ವೀಕರಿಸಿದ ನಂತರವೇ ಸರಕುಗಳನ್ನು ನೀಡಲಾಗುತ್ತದೆ. ಆಧಾರ್ ಸಂಖ್ಯೆಯನ್ನೂ ಎಲ್ಲಿ ಬಳಸಿದರೂ, ವಿವರಗಳು ದೃಢೀಕರಣ ಇತಿಹಾಸದಲ್ಲಿ ಉಳಿಯುತ್ತವೆ. ಸರಳ ಹಂತಗಳಲ್ಲಿ ನೀವು ಆಧಾರ್ ದೃಢೀಕರಣ ಇತಿಹಾಸವನ್ನು ತಿಳಿದುಕೊಳ್ಳಬಹುದು.


ಹಂತ 1- ಮೊದಲು https://uidai.gov.in/ ವೆಬ್‌ಸೈಟ್ ತೆರೆಯಿರಿ.


ಹಂತ 2- ಮುಖಪುಟದಲ್ಲಿ ಆಧಾರ್ ಸೇವೆಗಳ ಮೇಲೆ ಕ್ಲಿಕ್ ಮಾಡಿ.


ಹಂತ 3- ಅದರ ನಂತರ ಆಧಾರ್ ದೃಢೀಕರಣ ಇತಿಹಾಸದ ಮೇಲೆ ಕ್ಲಿಕ್ ಮಾಡಿ.


ಹಂತ 4- ಹೊಸ ಪುಟ ತೆರೆಯುತ್ತದೆ. ಆಧಾರ್ ಸಂಖ್ಯೆ ಮತ್ತು ಭದ್ರತಾ ಕೋಡ್ ಅನ್ನು ನಮೂದಿಸಿ ಮತ್ತು Send OTP ಕ್ಲಿಕ್ ಮಾಡಿ.


ಹಂತ 5- ನಿಮ್ಮ ನೋಂದಾಯಿತಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಿ.


ಹಂತ 6- ಅದರ ನಂತರ ದೃಢೀಕರಣದ ಪ್ರಕಾರವನ್ನು ಆಯ್ಕೆಮಾಡಿ.


ಹಂತ 7- ನಿಮಗೆ ಆಧಾರ್ ದೃಢೀಕರಣದ ವಿವರಗಳು ಯಾವಾಗ ಮತ್ತು ಯಾವಾಗ ಬೇಕು ಎಂಬುದನ್ನು ಬಹಿರಂಗಪಡಿಸಬೇಕು.


ಹಂತ 8- ಆಧಾರ್ ದೃಢೀಕರಣ ಇತಿಹಾಸವು ಪರದೆಯ ಮೇಲೆ ಕಾಣಿಸುತ್ತದೆ. ಡೌನ್‌ಲೋಡ್ ಮಾಡಬೇಕು.


ಇದನ್ನೂ ಓದಿ: ಏನಿದು 50-30-20 ಸೇವಿಂಗ್ಸ್​ ಸೂತ್ರ? ಇದೊಂದು ಫಾಲೋ ಮಾಡಿದ್ರೆ ದುಡ್ಡಿನ ಸಮಸ್ಯೆ ಬರಲ್ಲ!


ನೀವು ಡೌನ್‌ಲೋಡ್ ಮಾಡಿದ ಡಾಕ್ಯುಮೆಂಟ್ ಅನ್ನು ತೆರೆಯಲು ಪಾಸ್‌ವರ್ಡ್ ಅಗತ್ಯವಿದೆ. ಪಾಸ್​​ವರ್ಡ್​ ಅನ್ನು ನಿಮ್ಮ ಹೆಸರಿನ ಮೊದಲ 4 ಅಕ್ಷರಗಳು ಮತ್ತು ಹುಟ್ಟಿದ ವರ್ಷವನ್ನು ನಮೂದಿಸಬೇಕು. ಉದಾಹರಣೆಗೆ, ಒಬ್ಬ ವ್ಯಕ್ತಿಯ ಹೆಸರು ರಾಜೇಶ್ ಎಂದು ಭಾವಿಸೋಣ. ಅವರು 1986 ರಲ್ಲಿ ಜನಿಸಿದರು ಎಂದು ಭಾವಿಸೋಣ. ನಂತರ ಪಾಸ್​​ವರ್ಡ್​ RAJE1986 ಅಂತ ನಮೂದಿಸಬೇಕು. ಡಾಕ್ಯುಮೆಂಟ್ ಅನ್ನು ತೆರೆದ ನಂತರ, ಆಧಾರ್ ದೃಢೀಕರಣ ಇತಿಹಾಸದಲ್ಲಿ ಎಲ್ಲಾ ವಿವರಗಳನ್ನು ಪರಿಶೀಲಿಸಿ.

Published by:ವಾಸುದೇವ್ ಎಂ
First published: