ಕೆಲ ವರ್ಷಗಳ ಮೊದಲು ಬಹುತೇಕ ಸರ್ಕಾರಿ ಸೇವೆಗಳನ್ನ ಪಡೆಯಲು ಕಚೇರಿಗಳಿಗೆ ಅಲೆಯುವ ಪರಿಸ್ಥಿತಿ ಇತ್ತು. ಆದರೆ ಈಗ ಅಂಥ ಸ್ಥಿತಿ ಇಲ್ಲ. ಎಲ್ಲದಕ್ಕೂ ಕಚೇರಿಯನ್ನೇ ಅವಲಂಬಿಸುವ ಅಗತ್ಯ ಇಲ್ಲ. ಬಹುತೇಕ ಸೇವೆಗಳನ್ನ ಡಿಜಿಟಲೈಸ್ ಮಾಡಲಾಗಿದೆ. ಮನೆಯಲ್ಲೇ ಕೂತು ಅಥವಾ ನೀವಿದ್ದ ಸ್ಥಳದಿಂದ ಮೊಬೈಲ್ನಿಂದಲೇ ಎಲ್ಲಾ ಮಾಹಿತಿ ಪಡೆಯಬಹುದು, ಅಪ್ಡೇಟ್ ಮಾಡಬಹುದು. ಇದರಿಂದ ಸರ್ಕಾರೀ ವೆಚ್ಚ, ನಿಮ್ಮ ವೆಚ್ಚ, ಪರಿಶ್ರಮ ಎಲ್ಲವೂ ಉಳಿಯುತ್ತದೆ. ಇಂಥ ಡಿಜಿಟಲೀಕರಣ (Digitalisation) ಆದ ಸೇವೆಗಳಲ್ಲಿ ಪಿಂಚಣಿ ನಿಧಿಯೂ (Employee Provident Fund) ಒಂದು.
ಯೂನಿವರ್ಸಲ್ ಅಕೌಂಟ್ ನಂಬರ್ (UAN- Universal Account Number) ಅಳವಡಿಕೆ ನಂತರ
ಪಿಎಫ್ ವ್ಯವಸ್ಥೆ ಬಹಳಷ್ಟು ಸರಳಗೊಂಡಿದೆ, ಸುಲಭಗೊಂಡಿದೆ. ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಮೊತ್ತ ಇದೆ ಎಂಬುದನ್ನು ತಿಳಿದುಕೊಳ್ಳಬಹುದು. ಮತ್ತೊಂದು ಉದ್ಯೋಗಕ್ಕೆ ಬದಲಾದರೆ ಇದೇ ಯುಎಎನ್ ನಂಬರ್ ಅನ್ನು ಮುಂದುವರಿಸಿ ನಿಮ್ಮ ಪಿಎಫ್ ಖಾತೆಯನ್ನ ಮುಂದುವರಿಸಬಹುದು. ನಿಮಗೆ ಬೇಕಾದಾಗ ಪಿಎಫ್ ಹಣವನ್ನೂ ವಿತ್ಡ್ರಾ ಮಾಡಬಹುದು. ಪಿಎಫ್ ಅಕೌಂಟ್ನಲ್ಲಿ ನಿಮ್ಮ ಬ್ಯಾಂಕ್ ವಿವರ (Bank account details) ಇತ್ಯಾದಿಯನ್ನೂ ಅಪ್ಡೇಟ್ ಮಾಡಬಹುದು.
ಪಿಎಫ್ ಖಾತೆಯಲ್ಲಿ ಬ್ಯಾಂಕ್ ವಿವರ ಅಪ್ಡೇಟ್ ಮಾಡುವ ಹಂತ ಹಂತದ ವಿವರ ಇಲ್ಲಿದೆ:
* ಇಪಿಎಫ್ಒ ಮೆಂಬರ್ ವೆಬ್ಸೈಟ್ಗೆ ಹೋಗಿ ಸೈನ್ ಇನ್ ಆಗಿ.
* ಪೋರ್ಟಲ್ನಲ್ಲಿರುವ ಟಾಪ್ ಮೆನುನಲ್ಲಿ ಕಾಣುವ Manage ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
* ಅಲ್ಲಿ ತೆರೆದುಕೊಳ್ಳುವ ಡ್ರಾಪ್ ಡೌನ್ ಮೆನುನಲ್ಲಿ ಕೆವೈಸಿ ಅನ್ನು ಆಯ್ದುಕೊಳ್ಳಿ. ಬಳಿಕ ಡಾಕ್ಯುಮೆಂಟ್ ಟೈಪ್ ಯಾವುದೆಂದು ಕೇಳಿದಾಗ ‘Bank’ ಆಪ್ಷನ್ ಆಯ್ದುಕೊಳ್ಳಿ.
* ಅಲ್ಲಿ ನಿಮ್ಮ ಬ್ಯಾಂಕ್ ಖಾತೆ ನಂಬರ್, ಐಎಫ್ಎಸ್ಸಿ ಕೋಡ್ ಇತ್ಯಾದಿ ಅಕೌಂಟ್ ಮಾಹಿತಿಯನ್ನ ಅಪ್ಡೇಟ್ ಮಾಡಿ ಸೇವ್ ಮಾಡಿ.
* ನೀವು ಸೇವ್ ಮಾಡಿದರೆ ಆ ಮಾಹಿತಿ ಕೆವೈಸಿಯ ಪೆಂಡಿಂಗ್ ಅಪ್ರೂವಲ್ ಆಪ್ಷನ್ನಲ್ಲಿ ಕಾಣುತ್ತದೆ.
* ಮುಂದಿನ ನಡೆಯಲ್ಲಿ ನೀವು ನಿಮ್ಮ ದಾಖಲೆಯನ್ನ ಎಂಪ್ಲಾಯರ್ಸ್ಗೆ ಸಬ್ಮಿಟ್ ಮಾಡಿ.
* ಆನ್ಲೈನ್ ವೆರಿಫಿಕೇಶನ್ ಯಶಸ್ವಿಯಾದ ಬಳಿಕ ಕೆವೈಸಿಯಲ್ಲಿ ನಿಮ್ಮ ಬ್ಯಾಂಕ್ ಮಾಹಿತಿ ಅಪ್ರೂವಲ್ ಆಗಿರುವುದು ಕಂಡುಬರುತ್ತದೆ.
* ಆನ್ಲೈನ್ ವೆರಿಫಿಕೇಶನ್ ಯಶಸ್ವಿಯಾದ ಬಳಿಕ ನಿಮಗೆ ಮೆಸೇಜ್ ಬರುತ್ತದೆ.
ಇದನ್ನೂ ಓದಿ: FD Interest Rates: ಈ 5 ಖಾಸಗಿ ಬ್ಯಾಂಕ್ಗಳಲ್ಲಿ FD ಮೇಲೆ 7%ವರೆಗೆ ಬಡ್ಡಿ.. ಸಂಪೂರ್ಣ ಮಾಹಿತಿ ಇಲ್ಲಿದೆ
ಯುಎಎನ್ ನಂಬರ್ ಮರೆತುಹೋದರೆ?
ನಮ್ಮ ಇಪಿಎಫ್ಒನ ಬಹುತೇಕ ಸೇವೆಗಳನ್ನ ಆನ್ಲೈನ್ನಲ್ಲಿ ಪಡೆಯಲು ನಮಗೆ ಆಧಾರವಾಗಿರುವುದು ಯೂನಿವರ್ಸಲ್ ಅಕೌಂಟ್ ನಂಬರ್ (UAN – Universal Account Number). ನಾವು ಯುಎಎನ್ ನಂಬರ್ ಸಕ್ರಿಯಗೊಳಿಸಿದರೆ ಆನ್ಲೈನ್ನಲ್ಲಿ ಪಿಎಫ್ ಅಕೌಂಟ್ನ ಎಲ್ಲಾ ಮಾಹಿತಿ ಸಿಗುತ್ತದೆ. ಅಕಸ್ಮಾತ್ ನಿಮ್ಮ ಯುಎಎನ್ ನಂಬರ್ ಮರೆತೇ ಹೋದರೆ?
ನಿಮ್ಮ ಯುಎಎನ್ ನಂಬರ್ ಅನ್ನು ಎರಡು ಮಾರ್ಗಗಳಿಂದ ಪತ್ತೆ ಹಚ್ಚಬಹುದು. ನೀವು ಉದ್ಯೋಗ ಮಾಡುವ ಕಂಪನಿಯ ಸಂಬಂಧಿಸಿದ ಅಧಿಕಾರಿಯಿಂದ ಆ ನಂಬರ್ ಪಡೆಯಬಹುದು. ಅಥವಾ ಇಪಿಎಫ್ಒ ಪೋರ್ಟಲ್ಗೆ ಹೋಗಿ ಅಲ್ಲಿಂದಲೂ ನಿಮ್ಮ ಯುಎಎನ್ ನಂಬರ್ ಪತ್ತೆ ಹಚ್ಚಬಹುದು. ಇದು ನೀವು ಈ ಮೊದಲೇ ಯುಎಎನ್ ನಂಬರ್ ಆ್ಯಕ್ಟಿವೇಟ್ ಮಾಡಿದ್ದರೆ ಮಾತ್ರ ಈ ಅವಕಾಶ ಇರುತ್ತದೆ.
ನೀವು ಇಪಿಎಫ್ಒ ಪೋರ್ಟಲ್ಗೆ ಲಾಗಿನ್ ಆದರೆ ಅಲ್ಲಿ “Know your UAN” ಎಂಬ ಲಿಂಕ್ ಕಾಣುತ್ತದೆ. ಅಲ್ಲಿ ನೀವು ನಿಮ್ಮ ಆಧಾರ್, ಪಾನ್ ಮತ್ತು ಪಿಎಫ್ ಮೆಂಬರ್ ಐಡಿ ಈ ಮೂರು ವಿವರಗಳನ್ನ ಅಪ್ಡೇಟ್ ಮಾಡಬೇಕು. ನಂತರ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ಗೆ ಓಟಿಪಿ ಬರುತ್ತದೆ. ಅದನ್ನ ನಮೂದಿಸಿ ನಿಮ್ಮ ಗುರುತನ್ನ ಖಚಿತಗೊಳಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ