ನೀವು ಭಾರತದಲ್ಲಿ(India) ಸಂಬಳ(Salary) ಪಡೆಯುವ ಉದ್ಯೋಗಿಯಾಗಿದ್ದರೆ(Employee), ನೀವು ಉದ್ಯೋಗಿಗಳ ಭವಿಷ್ಯ ನಿಧಿ(EPFO) ಸಂಸ್ಥೆಯಲ್ಲಿ ಖಾತೆಯನ್ನು(Account) ಹೊಂದಬಹುದು. ಭವಿಷ್ಯ ನಿಧಿ ಖಾತೆಯನ್ನು ಇರುವುದು ಎಲ್ಲಾ ಉದ್ಯೋಗಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. ಈಗಾಗಲೇ ಹಲವು ಬಾರಿ ಖಾತೆದಾರರಿಗೆ ಸಿಹಿಸುದ್ದಿ ನೀಡಿರುವ ಇಪಿಎಫ್ಇ(EPFO) ಈಗ ಮತ್ತೊಮ್ಮೆ ಖಾತೆದಾರರಿಗೆ ಸಿಹಿ ಸುದ್ದಿ ನೀಡಿದೆ..ನೌಕರರ ಭವಿಷ್ಯ ನಿಧಿ ಖಾತೆಯಲ್ಲಿರುವ ಹಣದಿಂದ ಉದ್ಯೋಗಿಗಳು ಇನ್ನು ಮುಂದೆ ತಮ್ಮ ಎಲ್ಐಸಿ ವಿಮೆಯ ಪ್ರೀಮಿಯಂ ಪಾವತಿಸಬಹುದು.ಇಂಥದ್ದೊಂದು ಸೌಲಭ್ಯವನ್ನು ಇಪಿಎಫ್ ಸಂಸ್ಥೆ ಕಲ್ಪಿಸಿದೆ.
7 ಲಕ್ಷದವರೆಗೆ ಜೀವ ವಿಮಾ ಪ್ರಯೋಜನ
ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮೆ ಯೋಜನೆ ಅಡಿಯಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಖಾತೆದಾರರು ಪ್ರೀಮಿಯಂ ಆಗಿ ಯಾವುದೇ ಮೊತ್ತವನ್ನು ಪಾವತಿ ಮಾಡದೆಯೇ ರೂ 7 ಲಕ್ಷದವರೆಗೆ ಜೀವ ವಿಮೆಯನ್ನು ಪಡೆಯಲು ಅರ್ಹರಾಗಿದ್ದಾರೆ. ಉದ್ಯೋಗಿಗಳ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಅಥವಾ EDLI ಯೋಜನೆ, 1976 ರ ಅಡಿಯಲ್ಲಿ, ಭವಿಷ್ಯ ನಿಧಿ ಖಾತೆದಾರರು ಯಾವುದೇ ಪ್ರೀಮಿಯಂ ಅನ್ನು ಪಾವತಿಸದೆಯೇ ರೂ 7 ಲಕ್ಷದವರೆಗೆ ಜೀವ ವಿಮಾ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ನಿರ್ವಹಿಸುವ ಈ ಸೌಲಭ್ಯವು ಪ್ರತಿಯೊಬ್ಬ ಪಿಎಫ್ ಖಾತೆದಾರರಿಗೂ ಲಭ್ಯವಿದೆ. EDLI ಯೋಜನೆಯಡಿ ಸೌಲಭ್ಯಗಳು ಕೇವಲ ವಿಮಾ ಪ್ರಯೋಜನಗಳಿಗೆ ಸೀಮಿತವಾಗಿಲ್ಲ ಆದರೆ ವಿವಿಧ ಇತರ ಪ್ರಯೋಜನಳಿಗೂ ಬರುತ್ತದೆ.
ಹೀಗಾಗಿಯೇ ಇಪಿಎಫ್ಒ ಇತ್ತೀಚೆಗೆ ತನ್ನ ಟ್ವಿಟ್ಟರ್ ಟೈಮ್ಲೈನ್ನಲ್ಲಿ EDLI ಲಿಂಕ್ಡ್ ವಿಮಾ ಯೋಜನೆಯ ಪ್ರಯೋಜನಗಳನ್ನು ಹೈಲೈಟ್ ಮಾಡುವ ವೀಡಿಯೊವನ್ನು ಹಂಚಿಕೊಂಡಿದೆ.
ಇದನ್ನೂ ಓದಿ: PF ಖಾತೆದಾರರಿಗೆ ಸಿಗಲಿದೆ ₹ 1 ಲಕ್ಷದ ನೆರವು: ಹಣ ಹಿಂಪಡೆಯುವ ವಿಧಾನ ಇಲ್ಲಿದೆ
ಗರಿಷ್ಠ ವಿಮಾ ಯೋಜನೆ
ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮೆ ಯೋಜನೆ ಅಡಿಯಲ್ಲಿ ಇಪಿಎಫ್ ಸದಸ್ಯರಾಗಿರುವ ಸಂಬಳ ಪಡೆಯುವ ಉದ್ಯೋಗಿಗಳ ಮರಣದ ಸಂದರ್ಭದಲ್ಲಿ ಪಿಎಫ್ ಖಾತೆದಾರರ ಕಾನೂನುಬದ್ಧ ವಾರಸುದಾರರು ರೂಪಾಯಿ 7 ಲಕ್ಷದವರೆಗೆ ಹಣವನ್ನು ಪಡೆಯಲು ಸಾಧ್ಯವಾಗಲಿದೆ.
ಈ ವರ್ಷದ ಏಪ್ರಿಲ್ನಲ್ಲಿ ಇದರ ಮಿತಿಯನ್ನು 6 ಲಕ್ಷದಿಂದ ಏಳು ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮೆ ಯೋಜನೆ ಅಡಿಯಲ್ಲಿ ಇಪಿಎಫ್ ಸದಸ್ಯರು ಇನ್ನು ಹಲವಾರು ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಲಿದೆ.
ಇಪಿಎಫ್ ಸದಸ್ಯರಾಗಿರುವ ಸಂಬಳ ಪಡೆಯುವ ಉದ್ಯೋಗಿಗಳು ಮರಣದ ನಂತರ ಪಿಎಫ್ ಖಾತೆದಾರರ ಕಾನೂನುಬದ್ಧ ವಾರಸುದಾರರು ರೂಪಾಯಿ 7 ಲಕ್ಷದವರೆಗೆ ಪಡೆಯಬಹುದು. ಉದ್ಯೋಗಿಯು ಮರಣದ ಹಿಂದಿನ 12 ತಿಂಗಳುಗಳಲ್ಲಿ ನಿರಂತರ ಸೇವೆಯಲ್ಲಿದ್ದರೆ ಕನಿಷ್ಠ 2.5 ಲಕ್ಷ ರೂಪಾಯಿಯನ್ನು ಪಿಎಫ್ ಖಾತೆದಾರರ ಕಾನೂನುಬದ್ಧ ವಾರಸುದಾರರು ಪಡೆಯಬಹುದು.
7 ಲಕ್ಷದವರೆಗೆ ಉಚಿತ ಪ್ರಯೋಜನಗಳು
ವಿಮಾ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಉದ್ಯೋಗಿಗಳು ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ ಮತ್ತು EPF/PF ಖಾತೆದಾರರಿಗೆ ಇದು ಉಚಿತವಾಗಿದೆ.
ಈ ವಿಮಾ ಯೋಜನೆಯ ಪ್ರೀಮಿಯಂ ಅನ್ನು ಉದ್ಯೋಗದಾತರು ಪಾವತಿಸುತ್ತಾರೆ ಕನಿಷ್ಠ 15,000 ಸಂಬಳವನ್ನು ಹೊಂದಿರುವ ಉದ್ಯೋಗಿಗಳು ಮಾಸಿಕ ವೇತನದ ಶೇಕಡಾ 0.50 ರಷ್ಟಿರುವ ಪ್ರೀಮಿಯಂ ಪಾವತಿಸುತ್ತಾರೆ..
ಸ್ವಯಂ-ನೋಂದಣಿ
EPFO ಸದಸ್ಯರು ಹೆಚ್ಚುವರಿಯಾಗಿ ಈ ಯೋಜನೆಗೆ ಸೈನ್ ಅಪ್ ಮಾಡುವ ಅಗತ್ಯವಿಲ್ಲ. ಸದಸ್ಯರು EPFO ಸದಸ್ಯರು ಅಥವಾ ಚಂದಾದಾರರಾದ ನಂತರ EDLI ಯೋಜನೆಯ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ.
ಇದನ್ನೂ ಓದಿ: ಇನ್ನು ಮುಂದೆ ಉದ್ಯೋಗವನ್ನು ಬದಲಾಯಿಸಿದ್ರು EPF ಖಾತೆದಾರರಿಗೆ ಚಿಂತೆ ಇಲ್ಲ
ನೇರ ವರ್ಗವಾಣೆ
ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮೆ ಯೋಜನೆ ಅಡಿಯಲ್ಲಿ ಪಡೆಯುವ ಪ್ರಯೋಜನವು ಇಪಿಎಫ್ಒ ಚಂದಾದಾರರ ಮರಣದ ನಂತರ ನಾಮಿನಿಯ ಬ್ಯಾಂಕ್ ಖಾತೆಗೆ ಅಥವಾ ಪಿಎಫ್ ಖಾತೆದಾರರ ಕಾನೂನುಬದ್ಧ ವಾರಸುದಾರರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ.
ಈ ಯೋಜನೆಯಲ್ಲಿ ಉದ್ಯೋಗಿಯ ಕಾನೂನು ವಾರಸುದಾರರ ಬ್ಯಾಂಕ್ ಖಾತೆಯು ಕೂಡಾ ಲಿಂಕ್ ಆಗಿರಲಿದೆ. ಈ ಹಿನ್ನೆಲೆ ಇಪಿಎಫ್ಒ ಚಂದಾದಾರರ ಮರಣದ ನಂತರ ನಾಮಿನಿಯ ಖಾತೆಗೆ ನೇರವಾಗಿ ಹಣವು ವರ್ಗಾವಣೆ ಮಾಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ