ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್ಒ) ನಿವೃತ್ತಿ (Retainment) ಉಳಿತಾಯ (Saving) ಯೋಜನೆಗಾಗಿ ಸರ್ಕಾರ (Government) ಶೀಘ್ರದಲ್ಲೇ ಪಿಂಚಣಿ ವೇತನ (Pension pay) ಮಿತಿಯನ್ನು ಪರಿಷ್ಕರಿಸುವ ಸಾಧ್ಯತೆಯಿದೆ. ಹೌದು, ಇಪಿಎಫ್ಒ (IPFO) ನಿಯಮಗಳಲ್ಲಿ (Rules) ಬದಲಾವಣೆ ತರುವ ಉದ್ದೇಶದಿಂದ ಪಿಂಚಣಿ ವೇತನ ಮಿತಿ ಹೆಚ್ಚಿಸಲು ಕೇಂದ್ರ ಸರ್ಕಾರ ಪ್ಲ್ಯಾನ್ ಮಾಡುತ್ತಿದೆ. ಕೇಂದ್ರದ ಈ ಕ್ರಮದಿಂದಾಗಿ ನೌಕರರು ಮತ್ತು ಕಂಪನಿಗಳ (Company) ಕಡ್ಡಾಯ ಕೊಡುಗೆ ಮೊತ್ತ ಏರಿಕೆಯಾಗಲಿದ್ದು, ಕಾರ್ಮಿಕರು ತಮ್ಮ ನಿವೃತ್ತಿಗಾಗಿ ಹೆಚ್ಚು ಹಣವನ್ನು ಉಳಿತಾಯ ಮಾಡಲು ಅನುವು ಮಾಡಿಕೊಡಲಿದೆ. ಅಲ್ಲದೇ ಈ ಹೆಚ್ಚಳದಿಂದಾಗಿ ಇಪಿಎಫ್ಒದ ಸಾಮಾಜಿಕ ಭದ್ರತೆ ಯೋಜನೆಯ ಅಡಿಗೆ ಹೆಚ್ಚಿನ ಕಾರ್ಮಿಕರೂ ಬರಲಿದ್ದಾರೆ.
ಪ್ರಸ್ತುತ ವೇತನ ಮಿತಿ 15,000 ರೂ
ಪ್ರಸ್ತುತ, EPFO ನ ಉದ್ಯೋಗಿಗಳ ಭವಿಷ್ಯ ನಿಧಿ (EPF) ಯೋಜನೆಯಡಿಯಲ್ಲಿ ವೇತನದ ಮಿತಿಯು ತಿಂಗಳಿಗೆ 15,000 ರೂ ಆಗಿದ್ದು, 2014ಕ್ಕೂ ಮುನ್ನ 6,500 ರೂ. ಇತ್ತು. ತದನಂತರ ನಡೆದ ಪರಿಷ್ಕರಣೆಯಿಂದಾಗಿ ಈ ಮೊತ್ತ 15,000 ರೂ.ಗೆ ಏರಿಕೆ ಕಂಡಿತ್ತು. 20 ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಉದ್ಯಮಗಳಿಗೆ ಮಾತ್ರ ಈ ಯೋಜನೆ ಲಭ್ಯವಿದೆ.
ವೇತನದ ಮಿತಿ ನಿರ್ಧರಿಸಲು ಶೀಘ್ರದಲ್ಲೇ ತಜ್ಞರ ಸಮಿತಿ
ಹೆಚ್ಚಿನ ವೇತನದ ಮಿತಿಯನ್ನು ನಿರ್ಧರಿಸಲು ತಜ್ಞರ ಸಮಿತಿಯನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು. ಎಲ್ಲೆಡೆ ನಡೆಯುತ್ತಿರುವ ಹಣದುಬ್ಬರದ ಸೂಚ್ಯಂಕವನ್ನು ಲೆಕ್ಕ ಹಾಕಿ ಮುಂದೆ ಹೊಸ ಮಿತಿಯನ್ನು ನಿರ್ಧಾರ ಮಾಡಲಾಗುವುದು ಮತ್ತು EPFO ಅಡಿಯಲ್ಲಿ ವ್ಯಾಪ್ತಿಗೆ ನಿಯತಕಾಲಿಕವಾಗಿ ಪರಿಶೀಲಿಸಲ್ಪಡುತ್ತದೆ ಎಂದು ಈ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ಎಕನಾಮಿಕ್ ಟೈಮ್ಸ್ಗೆ ತಿಳಿಸಿದ್ದಾರೆ.
ಅಧಿಕಾರಿ ಹೇಳಿರುವ ಪ್ರಕಾರ ಪಿಂಚಣಿ ವೇತನದ ಮಿತಿಯನ್ನು ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐ)ದ ಅಡಿಯಲ್ಲಿ ಇರುವಂತೆ ತಿಂಗಳಿಗೆ 21,000 ರೂ.ಗಳಿಗೆ ನಿಗದಿ ಮಾಡಲಾಗುತ್ತದೆ ಎನ್ನಲಾಗಿದೆ.
ಬದಲಾವಣೆ ಹಿಂದಿದೆ ಮಹತ್ವದ ಉದ್ದೇಶ
ಸರ್ಕಾರದ ಈ ಬದಲಾವಣೆ ಹಿಂದೆ ಎರಡು ಉದ್ದೇಶ ಇದೆ. ಒಂದು, ತಿಂಗಳಿಗೆ 15,000 ರೂ.ಗಿಂತ ಕಡಿಮೆ ಸಂಬಳ ಪಡೆಯುವ ಸಂಘಟಿತ ವಲಯದ ಕಾರ್ಮಿಕರು ಕಡ್ಡಾಯವಾಗಿ ಇಪಿಎಫ್ನ ಸದಸ್ಯರಾಗಬೇಕು ಎಂಬುವುದು ಮತ್ತು ಎರಡನೇಯದಾಗಿ ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರೂ ನಿಗದಿತ 15,000 ರೂ. ಗರಿಷ್ಠ ವೇತನದಲ್ಲಿ ಶೇ. 12ರ ದರದಲ್ಲಿ ಇಪಿಎಫ್ಗೆ ಕಡ್ಡಾಯವಾಗಿ ಹಣ ಪಾವತಿ ಮಾಡಬೇಕು.
ಉದ್ಯೋಗಿ ಹೆಚ್ಚಿನ ದರದಲ್ಲಿ ಪಾವತಿಸಬಹುದು ಆದರೆ ಅಂತಹ ಹೆಚ್ಚಿನ ದರದಲ್ಲಿ ಪಾವತಿಸಲು ಉದ್ಯೋಗದಾತನು ಯಾವುದೇ ನಿಂಬಧನೆ ಹೊಂದಿರುವುದಿಲ್ಲ.
ಇದನ್ನೂ ಓದಿ: Aadhar Card Jobs: ಡಿಗ್ರಿ ಪಾಸಾಗಿದ್ರೆ ಆಧಾರ್ ಕಾರ್ಡ್ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ-ಬೆಂಗಳೂರಿನಲ್ಲಿ ಕೆಲಸ
ಇಪಿಎಫ್ಒ ವ್ಯಾಪ್ತಿಗೆ ಬರಲಿದ್ದಾರೆ 75 ಲಕ್ಷ ಉದ್ಯೋಗಿಗಳು
ಒಂದು ಅಂದಾಜಿನ ಪ್ರಕಾರ ಮಾಸಿಕ ವೇತನ ಮಿತಿಯನ್ನು 21,000 ರೂ.ಗೆ ಏರಿಕೆ ಮಾಡಿದಲ್ಲಿ ಹೊಸ ನಿಯಮಗಳಿಂದಾಗಿ ಸರಿಸುಮಾರು 7.5 ಮಿಲಿಯನ್ ಹೊಸ ಉದ್ಯೋಗಿಗಳು ಇಪಿಎಫ್ಒ ವ್ಯಾಪ್ತಿಗೆ ಬರಲಿದ್ದಾರೆ.
ಸಂಸ್ಥೆ ಪ್ರಸ್ತುತ 68 ಲಕ್ಷ ಉದ್ಯೋಗಿಗಳನ್ನು ನಿರ್ವಹಿಸುತ್ತಿದೆ. ಇಪಿಎಫ್ಒ ಚಂದಾದಾರರು ಪಿಂಚಣಿ ಮತ್ತು ವಿಮಾ ಪ್ರಯೋಜನಗಳನ್ನು ಯೋಜನೆಯಡಿಯಲ್ಲಿ ಪಡೆಯುವುದಲ್ಲದೇ ಭವಿಷ್ಯ ನಿಧಿ ಪ್ರಯೋಜನಗಳ ಮೇಲೆ ಹೆಚ್ಚಿನದನ್ನು ಪಡೆಯುತ್ತಾರೆ.
ಆದಾಗ್ಯೂ, ಈ ಕ್ರಮವು ಉದ್ಯೋಗದಾತರಿಗೆ ವಾರ್ಷಿಕ ವೇತನ ವೆಚ್ಚವನ್ನು ಹೆಚ್ಚಿಸಬಹುದು.
EPFO ಈ ವರ್ಷದ ಆರಂಭದಲ್ಲಿ ಉದ್ಯೋಗಿಗಳ ಮಿತಿ ಮತ್ತು ವೇತನದ ಮಿತಿಯನ್ನು ಯೋಜನೆಯಡಿಯಲ್ಲಿ ತೆಗೆದುಹಾಕಲು ಯೋಜಿಸಿತ್ತು, ಇದರಿಂದಾಗಿ ಔಪಚಾರಿಕ ಕೆಲಸಗಾರರು ಮಾತ್ರವಲ್ಲದೆ ಸ್ವಯಂ ಉದ್ಯೋಗಿಗಳೂ ಸಹ ಸಾಮಾಜಿಕ ಭದ್ರತಾ ಯೋಜನೆಯಡಿ ದಾಖಲಾಗಬಹುದು.
ಆದಾಗ್ಯೂ, ಈ ಪ್ರಸ್ತಾಪಕ್ಕೆ ಕಂಪನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರ ನಂತರ, EPFO ವ್ಯಾಪ್ತಿಯನ್ನು ವಿಸ್ತರಿಸಲು ವೇತನದ ಮಿತಿಗೆ ನಿಯತಕಾಲಿಕ ಪರಿಷ್ಕರಣೆಗಳೊಂದಿಗೆ EPFO ನ ಮೂಲ ರಚನೆಯನ್ನು ಉಳಿಸಿಕೊಳ್ಳಲು ಸರ್ಕಾರ ನಿರ್ಧರಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ