ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಜಂಟಿ ಆಯ್ಕೆಗಳು ಹಾಗೂ ಹೆಚ್ಚುವರಿ ಪಿಂಚಣಿಗಳ (Additional Pension) ಮೌಲ್ಯಮಾಪನಕ್ಕಾಗಿ ಸದಸ್ಯರು ಹೇಗೆ ಅರ್ಜಿ (Application) ಸಲ್ಲಿಸಬಹುದು ಎಂಬುದನ್ನು ತಿಳಿಸುವ ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಅರ್ಹ ಉದ್ಯೋಗಿಗಳಿಗೆ (Employees) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಸುಮಾರು ಎರಡು ತಿಂಗಳ ನಂತರ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಜಂಟಿ ಅರ್ಜಿ ನಮೂನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಪಷ್ಟಪಡಿಸಿದೆ.
ಹೆಚ್ಚುವರಿ ಪಿಂಚಣಿಗೆ ಅರ್ಜಿ ಸಲ್ಲಿಸಲು ಮೇ 3 ಕೊನೆಯ ದಿನಾಂಕ!
ಉದ್ಯೋಗಿಗಳ ಹಾಗೂ ಉದ್ಯೋಗದಾತ ಸಲ್ಲಿಸಿದ ವೇತನ ವಿವರ ಹಾಗೂ ಮಾಹಿತಿಯನ್ನು ಪರಿಶೀಲಿಸುವ ವಿಧಾನವನ್ನು ಸಹ ಒಳಗೊಂಡಿದೆ. ಹೆಚ್ಚುವರಿ ಪಿಂಚಣಿಗೆ ಅರ್ಜಿ ಸಲ್ಲಿಸಲು ಮೇ 3 ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿದೆ.
ಏಪ್ರಿಲ್ 23 ರಂದು ಹೊರಡಿಸಲಾದ ಸುತ್ತೋಲೆಯ ಪ್ರಕಾರ, ಜಂಟಿ ಆಯ್ಕೆಗಳು ಮತ್ತು ಹೆಚ್ಚುವರಿ ಪಿಂಚಣಿಗಳಿಗಾಗಿ ಕ್ಷೇತ್ರ ಕಚೇರಿಯು ಅರ್ಜಿಗಳನ್ನು ಪರಿಶೀಲಿಸುತ್ತದೆ ಎಂದು ಇಪಿಎಫ್‌ಒ ಹೇಳಿದೆ. ಅರ್ಜಿ ಅವಶ್ಯಕತೆಗಳು ಪೂರ್ಣಗೊಂಡರೆ ಉದ್ಯೋಗದಾತರು ಸಲ್ಲಿಸಿದ ಮಾಹಿತಿಯನ್ನು ಕ್ಷೇತ್ರ ಕಚೇರಿಯಿಂದ ಪರಿಶೀಲಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಆನ್‌ಲೈನ್ ವ್ಯವಸ್ಥೆ ಸ್ಥಾಪನೆ!
ಸೆಪ್ಟೆಂಬರ್ 1, 2014 ರಂದು ಅಥವಾ ಅದಕ್ಕೂ ಮೊದಲು ನಿವೃತ್ತರಾದ ಉದ್ಯೋಗಿಗಳಿಂದ ಅರ್ಜಿಗಳನ್ನು ಸ್ವೀಕರಿಸಲು EPFO ಆನ್‌ಲೈನ್ ವ್ಯವಸ್ಥೆಯನ್ನು ಸಹ ಸ್ಥಾಪಿಸಿದೆ. ಆನ್‌ಲೈನ್ ವ್ಯವಸ್ಥೆಯು ಮೇ 3 ರವರೆಗೆ ಮಾನ್ಯವಾಗಿರುತ್ತದೆ.
ಕುಂದು ಕೊರತೆ ಪರಿಹಾರ ವಿಧಾನ
ಕುಂದು ಕೊರತೆ ಪರಿಹಾರ ವಿಧಾನವನ್ನು ಕೂಡ ಇಪಿಎಫ್‌ಒ ಒದಗಿಸಿದ್ದು ಅರ್ಜಿದಾರರು ಯಾವುದೇ ದೂರನ್ನು ಸಂಸ್ಥೆಯ EPFIGMS (EPF i- ಕುಂದುಕೊರತೆ ನಿರ್ವಹಣಾ ವ್ಯವಸ್ಥೆ) ಕುಂದುಕೊರತೆ ನಿರ್ವಹಣಾ ವ್ಯವಸ್ಥೆಯಲ್ಲಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: EPFO ವೆಬ್ಸೈಟ್ ಡೌನ್, ಹೀಗೆ ಮಾಡಿ ನಿಮ್ಮ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಿ!
ದೂರುಗಳ ನೋಂದಾವಣೆ ಹಾಗೂ ವಿಲೇವಾರಿ
ನವೆಂಬರ್ 4, 2022 ರ ದಿನಾಂಕದ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲೇಖದೊಂದಿಗೆ, ಹೆಚ್ಚುವರಿ ಪಿಂಚಣಿಯ ನಿರ್ದಿಷ್ಟ ವರ್ಗದ ಅಡಿಯಲ್ಲಿ ದೂರುಗಳನ್ನು ನೋಂದಾಯಿಸಲಾಗುತ್ತದೆ. EPFO ಪ್ರಕಾರ, ಅಂತಹ ಎಲ್ಲಾ ದೂರುಗಳನ್ನು ನಾಮನಿರ್ದೇಶಿತ ಅಧಿಕಾರಿಯ ಮಟ್ಟದಲ್ಲಿ ವಿಲೇವಾರಿ ಮಾಡಬೇಕು ಎಂಬುದು ಉಲ್ಲೇಖಗೊಂಡಿದೆ.
ವಿವರಗಳ ಹೊಂದಾಣಿಕೆ ಹಾಗೂ ವಿಲೇವಾರಿ
ವಿವರಗಳು ಹೊಂದಿಕೆಯಾಗದಿದ್ದರೆ, ಸಹಾಯಕ ಭವಿಷ್ಯ ನಿಧಿ ಆಯುಕ್ತರು (APFC) / ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು (RPFC)-II ಒಂದು ತಿಂಗಳೊಳಗೆ ಪಿಂಚಣಿದಾರರಿಗೆ ಸೂಚನೆಯಡಿಯಲ್ಲಿ ಉದ್ಯೋಗದಾತರಿಂದ ವಿವರಗಳನ್ನು ಕೇಳುತ್ತಾರೆ. ಸಂಪೂರ್ಣ ಮಾಹಿತಿ ದೊರೆತ ನಂತರ , ಸಂಸ್ಥೆಯು ಅದಕ್ಕೆ ಅನುಗುಣವಾಗಿ ಬಾಕಿ ವಿವರಗಳನ್ನು ಪ್ರಕ್ರಿಯೆಗೊಳಿಸುತ್ತದೆ. ವಿವರಗಳನ್ನು ಸ್ವೀಕರಿಸದಿದ್ದರೆ, ಆದೇಶವನ್ನು ಅರ್ಹತೆಯ ಮೇಲೆ ರವಾನಿಸಲಾಗುತ್ತದೆ.
ಪಿಂಚಣಿದಾರರಿಗೆ ಒಂದು ತಿಂಗಳ ಕಾಲಾವಕಾಶ
ಎಫ್‌ಒ ವಿವರಗಳು ಮತ್ತು ಉದ್ಯೋಗದಾತರ ವಿವರಗಳು ಹೊಂದಿಕೆಯಾಗುವ ಸಂಭವಗಳು, ಬಾಕಿ ವಿವರಗಳನ್ನು ಲೆಕ್ಕಹಾಕಲಾಗುತ್ತದೆ ಮತ್ತು ಬಾಕಿಗಳನ್ನು ಠೇವಣಿ ಮಾಡಲು/ವರ್ಗಾವಣೆ ಮಾಡಲು APFC/RPFC-II/ RPFC-I ಮೂಲಕ ಆದೇಶವನ್ನು ರವಾನಿಸಲಾಗುತ್ತದೆ. ಹೊಂದಾಣಿಕೆಯಾಗಿಲ್ಲದಿದ್ದರೆ ಅಂತಹ ಸಂದರ್ಭಗಳಲ್ಲಿ, APFC/RPFC-II ಮೂಲಕ ಉದ್ಯೋಗದಾತರಿಗೆ ಮತ್ತು ಉದ್ಯೋಗಿ/ಪಿಂಚಣಿದಾರರಿಗೆ ತಿಳಿಸಲಾಗುತ್ತದೆ. ಮಾಹಿತಿಯನ್ನು ಪೂರ್ಣಗೊಳಿಸಲು ಅವರಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು ಎಂದು ಇಪಿಎಫ್‌ಒ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.
ಉದ್ಯೋಗದಾತರಿಗೆ ಅವಕಾಶ
ಹೆಚ್ಚುವರಿ ಪಿಂಚಣಿ/ಜಂಟಿ ಆಯ್ಕೆಗಳ ಅರ್ಜಿಯನ್ನು ಯಾವುದೇ ಕಾರಣಕ್ಕೂ ಅನುಮೋದಿಸದಿದ್ದರೆ, ಹೆಚ್ಚುವರಿ ಮಾಹಿತಿಯನ್ನು ಒದಗಿಸಲು ಅಥವಾ ಪಿಂಚಣಿದಾರರು ಮಾಡಿದ ವಿವರಗಳನ್ನು ಒಳಗೊಂಡಂತೆ ಯಾವುದೇ ವಿವರಗಳನ್ನು ಸರಿಪಡಿಸಲು ಉದ್ಯೋಗದಾತರಿಗೆ ಅವಕಾಶ ನೀಡಲಾಗುತ್ತದೆ. ವಿಂಡೋ ಒಂದು ತಿಂಗಳವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‌ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ