ಆರು ತಿಂಗಳಿಗಿಂತ ಕಡಿಮೆ ಸೇವಾ ಅವಧಿಯನ್ನು (Service) ಹೊಂದಿರುವ ಉದ್ಯೋಗಿಗಳು (Employees) ಇದೀಗ ತಮ್ಮ ಪಿಂಚಣಿ ಮೊತ್ತವನ್ನು (Pension Amount) ಹಿಂಪಡೆದುಕೊಳ್ಳಬಹುದಾಗಿದೆ ಎಂದು EPFO ಘೋಷಿಸಿದೆ. ಉದ್ಯೋಗಿ ಪಿಂಚಣಿ ಯೋಜನೆ 1995 (EPS-95) ಯಲ್ಲಿರುವ (Employees Pension Scheme 1995) ಪಿಂಚಣಿ ಮೊತ್ತವನ್ನು ಆರು ತಿಂಗಳಿಗಿಂತ ಕಡಿಮೆ ಸೇವಾ ಅವಧಿಯನ್ನು ಹೊಂದಿರುವ ಉದ್ಯೋಗಿಗಳಿಗೆ ಪಡೆದುಕೊಳ್ಳಲು ಅನುಮತಿಸಲಾಗಿದೆ ಎಂದು ಉದ್ಯೋಗಿಗಳ ಪಿಂಚಣಿ ನಿಧಿ ಸಂಸ್ಥೆ ಘೋಷಣೆ ಮಾಡಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.
ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಸ್ನಿಂದ ಶಿಫಾರಸು
ಕಾರ್ಮಿಕ ಸಚಿವಾಲಯದ ಹೇಳಿಕೆಯ ಪ್ರಕಾರ ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ನೇತೃತ್ವದ 232 ನೇ ಸಭೆಯಲ್ಲಿ EPFO ದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಸ್ (CBT) ಈ ಕ್ರಮವನ್ನು ಶಿಫಾರಸು ಮಾಡಿದೆ.
ಪಿಂಚಣಿ ಪ್ರಯೋಜನಗಳ ವಿಸ್ತರಣೆ
EPS-95 ಯೋಜನೆಗೆ ಕೆಲವೊಂದು ಮಾರ್ಪಾಡುಗಳನ್ನು ಶಿಫಾರಸು ಮಾಡಿರುವ ಸಂಸ್ಥೆ, ಸಂಸ್ಥೆಗಳಲ್ಲಿ ಆರು ತಿಂಗಳಿಗಿಂತ ಕಡಿಮೆ ಸೇವಾ ಅವಧಿಯನ್ನು ಹೊಂದಿರುವ ಉದ್ಯೋಗಿಗಳು ತಮ್ಮ ಇಪಿಎಸ್ ಖಾತೆಗಳಿಂದ ಪಿಂಚಣಿ ಮೊತ್ತವನ್ನು ವಿದ್ಡ್ರಾ ಮಾಡಲು ಅವಕಾಶ ನೀಡಬೇಕು ಎಂದು CBT ತಿಳಿಸಿದೆ.
34 ವರ್ಷಗಳವರೆಗೆ ಯೋಜನೆಯ ಸದಸ್ಯರಾಗಿರುವವರಿಗೆ ಅನುಪಾತದ ಪಿಂಚಣಿ ಪ್ರಯೋಜನಗಳನ್ನು ವಿಸ್ತರಿಸುವುದನ್ನು ಶಿಫಾರಸುಗಳಲ್ಲಿ ಸೇರಿಸಲಾಗಿದೆ ಎಂದು ವರದಿ ತಿಳಿಸಿದೆ.
69 ನೇ ವಾರ್ಷಿಕ ವರದಿ ಮಂಡನೆ
ಕಾರ್ಮಿಕ ಸಚಿವಾಲಯ ತಿಳಿಸಿರುವಂತೆ EPS-95 ಯೋಜನೆಯಿಂದ ವಿನಾಯಿತಿ ಅಥವಾ ರದ್ದುಗೊಳಿಸುವ ಸಂದರ್ಭದಲ್ಲಿ ವರ್ಗಾವಣೆ ಮೌಲ್ಯ ಲೆಕ್ಕಾಚಾರವನ್ನು ಸಮಾನಗೊಳಿಸಲು ಮಂಡಳಿಯು ಶಿಫಾರಸು ಮಾಡಿದೆ.
ಇದಲ್ಲದೆ ಎಕ್ಸ್ಚೇಂಜ್ ಟ್ರೇಡ್ ಫಂಡ್ ಯುನಿಟ್ಗಳಲ್ಲಿ (ETF) ಹೂಡಿಕೆಗಾಗಿ ಉಳಿತಾಯ ನೀತಿಯನ್ನು ಮಂಡಳಿಯು ಅನುಮೋದಿಸಿದೆ ಎಂಬುದಾಗಿ ವರದಿಯಾಗಿದೆ.
2022-23ರ ಅವಧಿಯ ಬಡ್ಡಿ ದರವನ್ನು ಲೆಕ್ಕಾಚಾರ ಮಾಡುವ ಉದ್ದೇಶದಿಂದ ಬಂಡವಾಳ ಲಾಭಗಳನ್ನು ಕಾಯ್ದಿರಿಸಲು 2018 ಕ್ಯಾಲೆಂಡರ್ ವರ್ಷದಲ್ಲಿ ಖರೀದಿಸಿದ ಇಟಿಎಫ್ ಘಟಕಗಳ ಉಳಿತಾಯವನ್ನು CBT ಅನುಮೋದಿಸಿದೆ ಎಂದು ವರದಿ ತಿಳಿಸಿದೆ.
EPFO ನ ಮಾಹಿತಿ ಭದ್ರತಾ ನೀತಿ
ಇದಲ್ಲದೆ, 2021-22 ರ ಇಪಿಎಫ್ಒ ಕಾರ್ಯನಿರ್ವಹಣೆಯ 69 ನೇ ವಾರ್ಷಿಕ ವರದಿಗೆ ಮಂಡಳಿಯು ತನ್ನ ಒಪ್ಪಿಗೆ ನೀಡಿದೆ. ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು.
ಸಂಗ್ರಹಣೆಗಾಗಿ ಐಟಿ ಹಾರ್ಡ್ವೇರ್ ಖರೀದಿ ಮತ್ತು ಡೇಟಾಬೇಸ್ ಪರವಾನಗಿಗಳು ಮತ್ತು ಸರ್ವರ್ ಡೇಟಾಬೇಸ್ಗಳ ಖರೀದಿಗೆ ಜೆನೆರಿಕ್ ನೀತಿಯೊಂದಿಗೆ EPFO ನ ಮಾಹಿತಿ ಭದ್ರತಾ ನೀತಿಯನ್ನು CBT ತೆರವುಗೊಳಿಸಿದೆ.
ಇದನ್ನೂ ಓದಿ: EPFO: ಪಿಂಚಣಿದಾರರು ಈಗ ಯಾವಾಗ ಬೇಕಾದರೂ ಜೀವನ್ ಪ್ರಮಾಣಪತ್ರ ಸಲ್ಲಿಸಬಹುದು!
ಹೆಚ್ಚಿನ ಪಿಂಚಣಿ ಪಡೆಯುವ ಅವಕಾಶ
ಪ್ರಸ್ತುತ ನಿಯಮಗಳ ಪ್ರಕಾರ ಆರು ತಿಂಗಳಿಗಿಂತ ಕಡಿಮೆ ಸೇವಾ ಸಮಯವನ್ನು ಹೊಂದಿರುವ ಉದ್ಯೋಗಿಗಳು ಮಾತ್ರವೇ ತಮ್ಮ ಭವಿಷ್ಯ ನಿಧಿ ಖಾತೆಯಿಂದ ಪಿಂಚಣಿ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ.
EPS-95 ಗಾಗಿ ಇದೀಗ ವಿದ್ಡ್ರಾ ನಿಯಮಗಳನ್ನು ಸಡಿಲಿಸಿರುವುದರಿಂದ ನಿವೃತ್ತಿ ಪ್ರಯೋಜನವನ್ನು ನಿಗದಿಪಡಿಸುವ ಸಮಯದಲ್ಲಿ ಹೆಚ್ಚಿನ ಪಿಂಚಣಿ ಪಡೆಯಲು ಉದ್ಯೋಗಿಗಳಿಗೆ ಸಹಾಯ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಶೀಘ್ರದಲ್ಲೇ EPFO ನಿವೃತ್ತಿ ವಯಸ್ಸು ಹೆಚ್ಚಳ; ಪಿಂಚಣಿ ವ್ಯವಸ್ಥೆ ಇನ್ನಷ್ಟು ಸುಭದ್ರ
ಪಿಂಚಣಿ ಮೊತ್ತವನ್ನು ಆನ್ಲೈನ್ ಮೂಲಕ ಪಡೆದುಕೊಳ್ಳುವುದು ಹೇಗೆ?
ಆನ್ಲೈನ್ನಲ್ಲಿ ಪಿಂಚಣಿ ಮೊತ್ತವನ್ನು ಪಡೆದುಕೊಳ್ಳಬಹುದಾಗಿದ್ದು ಇದಕ್ಕಾಗಿ ಉದ್ಯೋಗಿಗಳು EPFO ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ತಮ್ಮ ಯೂನಿವರ್ಸಲ್ ಖಾತೆ ಸಂಖ್ಯೆ ಬಳಸಿಕೊಂಡು ಲಾಗಿನ್ ಮಾಡಬೇಕು
ತದನಂತರ ಆನ್ಲೈನ್ ಸರ್ವೀಸ್ ಟ್ಯಾಬ್ಗೆ ಹೋಗಿ ಮೆನುವಿನಿಂದ ಅನ್ವಯಿಸುವ ಫಾರ್ಮ್ ಅನ್ನು ಭರ್ತಿಮಾಡಬೇಕು
ನಿಮ್ಮ ಉದ್ಯೋಗ ಸ್ಥಿತಿ, ವಿವರಗಳು ಹಾಗೂ ಇತರ ಕೆವೈಸಿ ಮಾಹಿತಿಗಳನ್ನು ಪರಿಶೀಲಿಸಿ
ನಿಮ್ಮ ಬ್ಯಾಂಕ್ನ 4 ಅಂಕೆಯ ಖಾತೆ ಸಂಖ್ಯೆಯನ್ನು ನಮೂದಿಸಿ ಹಾಗೂ ಸಹಿ ಹಾಕಬೇಕು
ನಿಮಗೆ ಬೇಕಾದ ರೀತಿಯಲ್ಲಿ ಪಿಂಚಣಿ ಹಿಂಪಡೆಯುವ ಆಯ್ಕೆಯನ್ನು ಆರಿಸಿ
ಆಧಾರ್ ಒಟಿಪಿ ಆಯ್ಕೆ ಆರಿಸಿ
ನಿಮ್ಮ ಆಧಾರ್ನೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಬಂದಿರುವ ಒಟಿಪಿ ನಮೂದಿಸಿ
ಒಟಿಪಿ ಪರಿಶೀಲಿಸಿ ಹಾಗೂ ಫಾರ್ಮ್ ಕ್ಲೈಮ್ ಮಾಡಿ ಆಯ್ಕೆಮಾಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ