• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • EPF ನೊಂದಿಗೆ ನಿಮ್ಮ ಎಲ್ಲಾ ವ್ಯವಹಾರಗಳನ್ನು ಸುಲಭವಾಗಿ ರಿಜಿಸ್ಟರ್​ ಮಾಡಿಕೊಳ್ಳಲು ಈ ಮೆತಡ್​ಗಳನ್ನು ಫಾಲೋ ಮಾಡಿ! 

EPF ನೊಂದಿಗೆ ನಿಮ್ಮ ಎಲ್ಲಾ ವ್ಯವಹಾರಗಳನ್ನು ಸುಲಭವಾಗಿ ರಿಜಿಸ್ಟರ್​ ಮಾಡಿಕೊಳ್ಳಲು ಈ ಮೆತಡ್​ಗಳನ್ನು ಫಾಲೋ ಮಾಡಿ! 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉದ್ಯೋಗಿಗಳ ಭವಿಷ್ಯ ನಿಧಿಯು ಅವರಿಗೆ ನಿವೃತ್ತಿಯ ಸಮಯದಲ್ಲಿ ಅಥವಾ ಅನಾರೋಗ್ಯ, ಮಕ್ಕಳ ಉನ್ನತ ಶಿಕ್ಷಣ, ಅವರ ಮದುವೆ ಮುಂತಾದ ಸಮಯದಲ್ಲಿ ಉಪಯೋಗಕ್ಕೆ ಬರುತ್ತದೆ.

  • Share this:
  • published by :

ಇಪಿಎಫ್ (EPF)‌ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ ಅನ್ನೋದು ಅನೇಕ ಉದ್ಯೋಗಿಗಳಿಗೆ ವರದಾನವಾಗಿದೆ. ಅಲ್ಲದೇ ಕಾರ್ಮಿಕರ ಭವಿಷ್ಯ ನಿಧಿಗಳು ಮತ್ತು ಇತರ ನಿಬಂಧನೆಗಳ ಕಾಯಿದೆ, 1952 ರ ಅಡಿಯಲ್ಲಿ ಇದು ಕಡ್ಡಾಯ ಕೂಡ. ಸರ್ಕಾರದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಿಂದ (Organisation) ನಿಯಂತ್ರಿಸಲ್ಪಡುವ ಇಪಿಎಫ್‌, 20 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಎಲ್ಲಾ ಕಂಪನಿಗಳಿಗೆ ಅನ್ವಯವಾಗುತ್ತದೆ. ಉದ್ಯೋಗಿಗಳ (Employee) ಭವಿಷ್ಯ ನಿಧಿಯು ಅವರಿಗೆ ನಿವೃತ್ತಿಯ ಸಮಯದಲ್ಲಿ ಅಥವಾ ಅನಾರೋಗ್ಯ, ಮಕ್ಕಳ ಉನ್ನತ ಶಿಕ್ಷಣ, ಅವರ ಮದುವೆ ಮುಂತಾದ ಸಮಯದಲ್ಲಿ ಉಪಯೋಗಕ್ಕೆ ಬರುತ್ತದೆ. ಅಂತಹ ಸಂದರ್ಭಗಳಲ್ಲಿ ನೌಕರರು ಸಂಚಿತ ನಿಧಿಯಿಂದ ಲಾಭ ಪಡೆಯಬಹುದು.


ಇಪಿಎಫ್‌ಗಾಗಿ ಉದ್ಯೋಗದಾತರು ಪ್ರತಿ ತಿಂಗಳು 3.67 ಪ್ರತಿಶತ ಸಂಬಳವನ್ನು ನೀಡಬೇಕಾಗುತ್ತದೆ. ಆದರೆ ಉದ್ಯೋಗಿಗಳು ತಮ್ಮ ಮೂಲ ಸಂಬಳದ 12% ರಷ್ಟು ಕೊಡುಗೆ ನೀಡಬೇಕಾಗುತ್ತದೆ. ಪ್ರತಿ ತಿಂಗಳು, ಉದ್ಯೋಗಿಯ PF ಕೊಡುಗೆಯನ್ನು ಉದ್ಯೋಗಿಯ PF ಖಾತೆಗೆ ಜಮಾ ಮಾಡಲಾಗುತ್ತದೆ. ಹಾಗೆಯೇ ಪ್ರತಿ ಹಣಕಾಸು ವರ್ಷದ ಮಾರ್ಚ್ 31 ರಂದು, ಉತ್ಪತ್ತಿಯಾಗುವ ಬಡ್ಡಿಯನ್ನು ಅಲ್ಲಿ ಹಾಕಲಾಗುತ್ತದೆ.


ಅಂದಹಾಗೆ 20 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಎಲ್ಲಾ ಕಂಪನಿಗಳಿಗೂ ಇಪಿಎಫ್‌ ಅನ್ವಯವಾಗುವ ಕಾರಣದಿಂದ ಇದರ ನೋಂದಣಿ ಕೂಡ ಮಹತ್ವದ್ದು. EPF ನೋಂದಣಿಗಾಗಿ ಕಂಪನಿಯು ಅಗತ್ಯವುರುವಂಥ ದಾಖಲಾತಿಗಳನ್ನು ಒದಗಿಸಬೇಕು. ಇದು ಮುಖ್ಯವಾಗಿ ಕಂಪನಿಯ ಹೆಸರು, PAN, ಅದರ ಬ್ಯಾಂಕ್ ಚೆಕ್‌ನ ಪ್ರತಿ, ವಿಳಾಸ ಪರಿಶೀಲನೆ, ನಿರ್ದೇಶಕರು, ಉದ್ಯೋಗಿ ಗುರುತಿನ ದಾಖಲೆಗಳು ಮತ್ತು ಅದರ ಪಾಲುದಾರರು ಮತ್ತು ನಿರ್ದೇಶಕರ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತದೆ.


ಇಪಿಫ್‌ನೊಂದಿಗೆ ನೋಂದಾಯಿಸಲು ಈ ಹಂತಗಳನ್ನು ಅನುಸರಿಸಿ


*EPF ವೆಬ್‌ಸೈಟ್‌ಗೆ ಭೇಟಿ ನೀಡಿ, ನಂತರ "ಸ್ಥಾಪನೆ ನೋಂದಣಿ" ಆಯ್ಕೆಮಾಡಿ.


*ಆಗ ನಿಮಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಶ್ರಮ ಸುವಿಧಾ ಪೋರ್ಟಲ್ ಕಾಣಿಸುತ್ತದೆ. ಪೋರ್ಟಲ್‌ಗೆ ನೋಂದಾಯಿಸಿದ ನಂತರ, ಲಾಗ್ಇನ್ ಮಾಡಿ.


ಇದನ್ನೂ ಓದಿ: ವೀಕೆಂಡ್‌ನಲ್ಲಿ ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಎಷ್ಟಿದೆ? ಇಲ್ಲಿದೆ ವಿವರ


*ಎಡಭಾಗದಲ್ಲಿ "EPFO-ESIC ಗಾಗಿ ನೋಂದಣಿ" ಆಯ್ಕೆಮಾಡಿ. ಮತ್ತು ಸ್ಕ್ರೀನ್‌ನ ಬಲಭಾಗದಲ್ಲಿ, "ಹೊಸ ನೋಂದಣಿಗಾಗಿ ಅಪ್ಲಿಕೇಶನ್" ಆಯ್ಕೆಮಾಡಿ.


*ಸ್ಕ್ರೀನ್‌ ಮೇಲೆ ಕಾಣುವ ಎರಡನೇ ಭವಿಷ್ಯ ನಿಧಿ ಆಯ್ಕೆ "ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನೆ ಕಾಯಿದೆ, 1952" ಯನ್ನು ಕ್ಲಿಕ್‌ ಮಾಡಿ. ತದನಂತರ ಸಬ್ಮಿಟ್‌ ಅಥವಾ ಸಲ್ಲಿಸು ಕ್ಲಿಕ್‌ ಮಾಡಿ.


*ನೋಂದಣಿ ಫಾರ್ಮ್ ವಿಂಡೋ ತೆರೆದಾಗ ಸ್ಥಾಪನೆ ಮಾಹಿತಿ, ಇ-ಸಂಪರ್ಕಗಳು, ಸಂಪರ್ಕ ಜನರು, ಗುರುತಿಸುವಿಕೆಗಳು, ಉದ್ಯೋಗದ ವಿವರಗಳು, ಶಾಖೆ/ವಿಭಾಗ, ಚಟುವಟಿಕೆಗಳು ಮತ್ತು ಲಗತ್ತುಗಳು ಸೇರಿದಂತೆ ಹಲವಾರು ಟ್ಯಾಬ್‌ಗಳು ಗೋಚರಿಸುತ್ತವೆ.


*ಐಡೆಂಟಿಫೈಯರ್ಸ್ ಟ್ಯಾಬ್, ಎಲ್ಲಾ ಟ್ಯಾಬ್‌ಗಳು ಸ್ವಯಂ ವಿವರಣಾತ್ಮಕವಾಗಿದ್ದರೂ, CLRA (ಗುತ್ತಿಗೆ ಕಾರ್ಮಿಕ ನೋಂದಣಿ ಕಾಯ್ದೆ) ಪರವಾನಗಿಯಂತಹ ಪರವಾನಗಿ ಮಾಹಿತಿಯನ್ನು ಹುಡುಕುತ್ತದೆ.


ಇದನ್ನೂ ಓದಿ: ಈ ಟಿಪ್ಸ್ ಫಾಲೋ ಮಾಡಿದ್ರೆ ಬ್ಯುಸಿನೆಸ್​ನಲ್ಲಿ ನಷ್ಟ ಅನ್ನೋದು ಇರಲ್ಲ!


*"ಲಗತ್ತು" ಪರದೆಯಲ್ಲಿ ಅಗತ್ಯ ಮಾಹಿತಿಯನ್ನು ನಮೂದಿಸಿ. ನಂತರ "ಉಳಿಸು" ಕ್ಲಿಕ್ ಮಾಡಿ. *ನಂತರ ನೀವು ನೋಂದಣಿ ಫಾರ್ಮ್ ಅನ್ನು ನೋಡುತ್ತೀರಿ. ಮಾಹಿತಿಯನ್ನು ಪರಿಶೀಲಿಸಿದ ನಂತರ "ಸಲ್ಲಿಸು" ಕ್ಲಿಕ್ ಮಾಡಿ.


*ಡಿಎಸ್‌ಸಿಗೆ ನೋಂದಾಯಿಸುವುದು ಹೇಗೆಂದರೆ "ಡಿಜಿಟಲ್ ಸಿಗ್ನೇಚರ್" ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ (ಡಿಎಸ್‌ಸಿ) ಲಗತ್ತಿಸಿ.




*DSC ಅನ್ನು ಅಪ್‌ಲೋಡ್ ಮಾಡಿದ ನಂತರ, ಶ್ರಮ್ ಸುವಿಧಾ ಪೋರ್ಟಲ್‌ನಿಂದ ಇಮೇಲ್ ಜೊತೆಗೆ ನೋಂದಣಿ ಯಶಸ್ಸನ್ನು ಸೂಚಿಸುವ ಸೂಚನೆಯು ಕಾಣಿಸಿಕೊಳ್ಳುತ್ತದೆ.


*ಅಂದಹಾಗೆ ಹೊಸ ವ್ಯವಹಾರಗಳಿಗೆ ಆನ್‌ಲೈನ್ ನೋಂದಣಿ ವೆಚ್ಚ-ಮುಕ್ತವಾಗಿದೆ.

First published: