ಕೆಲವೊಂದು ಬಾರಿ ನಾವು ಜೀವನದಲ್ಲಿ (Life) ಏನೋ ಆಗಬೇಕು ಅಂತ ಹೊರಟಿರುತ್ತೇವೆ, ಆದರೆ ಜೀವನ ನಮ್ಮ ಕೈಯಿಂದ ಇನ್ನೆನೋ ಮಾಡಿಸಿರುತ್ತದೆ. ಎಂದರೆ ನಾವು ಯಾವುದಾದರೊಂದು ಕೆಲಸದಲ್ಲಿ ಪರಿಣತಿಯನ್ನು ಪಡೆಯಬೇಕು ಅಂತ ಅಂದುಕೊಂಡಿರುತ್ತೇವೆ, ಆದರೆ ಯಾವುದೋ ಒಂದು ಕಾರಣದಿಂದಾಗಿ ನಾವು ಬೇರೆ ಇನ್ಯಾವುದೋ ಕೆಲಸ ಮಾಡಿರುತ್ತೇವೆ ಅಂತ ಹೇಳಬಹುದು. ಇಂತಹ ಸಂದರ್ಭದಲ್ಲಿ ಹಲವರು ತಮಗಿಷ್ಟವಿಲ್ಲದ ಕೆಲಸವನ್ನೂ (Work) ಸಹ ಶ್ರಮವಹಿಸಿ ಮಾಡುತ್ತ ಉತ್ತಮ ಹೆಸರು (Name), ಯಶಸ್ಸು ಪಡೆಯುತ್ತಾರೆ. ಆದರೆ ಕೆಲ ಜನರು (People) ತಾವು ಮಾಡುವ ಕೆಲಸದಲ್ಲಿ ಅಷ್ಟೊಂದು ನೆಮ್ಮದಿ ಪಡೆಯುವುದಿಲ್ಲ.
ಇಲ್ಲೊಬ್ಬ ಮಹಿಳೆ ಇದ್ದು, ಅವರು ಈ ಮೇಲೆ ಹೇಳಿದ ಮಾತಿಗೆ ಸರಿಯಾದ ಉದಾಹರಣೆ ಆಗಿದ್ದಾರೆ ನೋಡಿ.
ಡಾಕ್ಟರ್ ಆಗಬೇಕೆಂದಿದ್ದ ಸನಾ ನಂತರ ಓದಿದ್ದು ಎಂಜಿನಿಯರಿಂಗ್..
ಉತ್ತರ ಪ್ರದೇಶದ ಮೀರತ್ ಮೂಲದ ಸನಾ ಖಾನ್ ಅವರು ಎರೆಹುಳು ಗೊಬ್ಬರ (ಎರೆಹುಳುಗಳ ಬಳಕೆಯಿಂದ ತಯಾರಿಸಿದ ಸಮೃದ್ಧ ಮಿಶ್ರಗೊಬ್ಬರ) ತಯಾರಿಸುವ ಮೂಲಕ 1 ಕೋಟಿ ರೂಪಾಯಿ ಸಂಪಾದಿಸಿದ್ದಾರೆ. ಆದರೆ ಸನಾ ಅವರು ಯಾವಾಗಲೂ ವೈದ್ಯರಾಗಲು ಬಯಸಿದ್ದರಂತೆ, ಆದರೆ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವಿಫಲಳಾಗಿದ್ದೆ ಎಂದು ಅವರೇ ಖುದ್ದು ಅವರೇ ಹೇಳುತ್ತಾರೆ.
ನಂತರ ಎಂಜಿನಿಯರಿಂಗ್ ಕೋರ್ಸ್ ಅನ್ನು ಆರಿಸಿಕೊಂಡ ಸನಾ ಅವರು ತಮ್ಮ ಅಂತಿಮ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ ಸಮಯದಲ್ಲಿ ಅವರಿಗೆ ಎರೆಹುಳು ಗೊಬ್ಬರ ಯೋಜನೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು.
ಇದನ್ನೂ ಓದಿ: Money Mantra: ಇದು ಹೃದಯಗಳ ವಿಷಯ, ಈ ರಾಶಿಯವರಿಗೆ ಸಂಗಾತಿ ಕೊಡ್ತಾರೆ ಲೈಫ್ ಟೈಮ್ ಗಿಫ್ಟ್!
ಎರೆಹುಳು ಗೊಬ್ಬರವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಯೋಚಿಸಿದ್ರಂತೆ..
"ಎರೆಹುಳು ಗೊಬ್ಬರ ತಯಾರಿಸುವ ಯೋಜನೆಯ ಸಮಯದಲ್ಲಿ, ನಾನು ಆ ಹುಳುಗಳಿಂದ ಆಕರ್ಷಿತಳಾದೆ ಮತ್ತು ಅವುಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕೆಂದು ಬಯಸಿದೆ. ಎಂದು ಹೇಳಿದ್ದಾರೆ.
ಈ ಯೋಜನೆಯನ್ನು ದೊಡ್ಡ ಪ್ರಮಾಣದಲ್ಲಿ ಏಕೆ ಕಾರ್ಯಗತಗೊಳಿಸಬಾರದು? ಎಂದು ನನಗೆ ಯೋಚನೆ ಬಂತು. ಈ ಹುಳುಗಳ ಸಂತಾನೋತ್ಪತ್ತಿ ಮಾಡಲು ಪ್ರಾರಂಭಿಸಿದರು ಮತ್ತು ಈ ಉತ್ಪನ್ನವನ್ನು ವಾಣಿಜ್ಯೀಕರಿಸಲು ಪ್ರಾರಂಭಿಸಿದರು ಈ ಬಗ್ಗೆ ಅವರೇ ಹೇಳಿದ್ದಾರೆ. ಆದ್ದರಿಂದ 2014 ರಲ್ಲಿ, ತನ್ನ ಸಹೋದರನ ಧನಸಹಾಯದೊಂದಿಗೆ, ಅವರು ಎಸ್ ಜೆ ಆರ್ಗಾನಿಕ್ಸ್ ಎರೆಹುಳು ಗೊಬ್ಬರ ಕಂಪನಿಯೊಂದನ್ನು ಸ್ಥಾಪಿಸಿದರು.
ಮಿಶ್ರಗೊಬ್ಬರಗಳನ್ನು ಕಸ್ಟಮೈಸ್ ಮಾಡುತ್ತಾರೆ.
ಅವರ ಮೊದಲ ವ್ಯವಹಾರ ಅಷ್ಟಾಗಿ ಕೆಲಸ ಮಾಡದಿದ್ದರೂ, ಅವರು ಪರ್ಯಾಯವನ್ನು ಕಂಡು ಹಿಡಿದರು ಮತ್ತು ಡೈರಿ ಮತ್ತು ಜೈವಿಕ ವಿಘಟನೀಯ ಗೃಹ ತ್ಯಾಜ್ಯವನ್ನು ತರಲು ಗುತ್ತಿಗೆದಾರರನ್ನು ನೇಮಿಸಿಕೊಂಡರು. ಪ್ರಮಾಣೀಕರಣ ಮಾನದಂಡಗಳನ್ನು ಪೂರೈಸಲು ಎಸ್ ಜೆ ಆರ್ಗಾನಿಕ್ಸ್ ನಲ್ಲಿ ಪ್ರತಿ ಬ್ಯಾಚ್ ಎರೆಗೊಬ್ಬರವನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತದೆ. ಕಂಪನಿಯು ಮಣ್ಣಿನ ಅವಶ್ಯಕತೆಗಳಿಗೆ ಅನುಗುಣವಾಗಿ ಮಿಶ್ರಗೊಬ್ಬರಗಳನ್ನು ಕಸ್ಟಮೈಸ್ ಮಾಡುತ್ತದೆ.
ಎರೆಹುಳು ಗೊಬ್ಬರ ತಯಾರಿಸಿ ಕೋಟಿ ಸಂಪಾದಿಸಿದ ಯುಪಿ ಮಹಿಳೆ
2020 ರ ಹೊತ್ತಿಗೆ, ಕಂಪನಿಯು 500 ಟನ್ ತ್ಯಾಜ್ಯವನ್ನು ಸ್ವೀಕರಿಸಿತು ಮತ್ತು ತಿಂಗಳಿಗೆ 150 ಟನ್ ಎರೆಗೊಬ್ಬರವನ್ನು ಉತ್ಪಾದಿಸಿದ್ದಾರೆ. ಇಂದು, ಇದು ವರ್ಷಕ್ಕೆ 1 ಕೋಟಿ ರೂಪಾಯಿಗಳ ವಾರ್ಷಿಕ ವಹಿವಾಟು ಹೊಂದಿದೆ ಮತ್ತು 30ಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಸಹ ಒದಗಿಸಿದೆ. ಎಸ್ ಜೆ ಆರ್ಗಾನಿಕ್ಸ್ ಕನ್ಸಲ್ಟೆನ್ಸಿ ಅಡಿಯಲ್ಲಿ, ಮೀರತ್ ನ 100ಕ್ಕೂ ಹೆಚ್ಚು ಶಾಲೆಗಳು ಈಗ ಎರೆಹುಳು ಗೊಬ್ಬರ ತಾಣಗಳನ್ನು ಸ್ಥಾಪಿಸಿವೆ. ಅವರು ಉದ್ಯಮಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಸಹ ನಡೆಸುತ್ತಾರೆ.
ಎರೆಹುಳು ಗೊಬ್ಬರದ ಬಗ್ಗೆ ತನ್ನ ಜ್ಞಾನವನ್ನು ಹಂಚಿಕೊಳ್ಳುವ ಮೂಲಕ, ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಸಾವಯವ ಕೃಷಿ ವಿಧಾನಗಳನ್ನು ಜನಪ್ರಿಯಗೊಳಿಸಬಹುದು ಎಂದು ಸನಾ ಆಶಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ