Survey: ಈ ಬಾರಿ ಬಜೆಟ್ ಮೇಲೆ Work From Home ಉದ್ಯೋಗಿಗಳ ನಿರೀಕ್ಷೆಗಳೇನು? ಹೊಸ ಯೋಜನೆಗಳು ಘೋಷಣೆ ಆಗುತ್ತಾ?

ಮುಂದಿನ ತಿಂಗಳು ಮಂಡಿಸಲಿರುವ ಸಾಮಾನ್ಯ ಬಜೆಟ್‌ನಲ್ಲಿ (Union Budget 2022) ತೆರಿಗೆದಾರರಿಗೆ (Tax Payers) ಸರ್ಕಾರ ವಿನಾಯ್ತಿ ನೀಡಬಹುದು ಎಂದು ಹೇಳಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮುಂದಿನ ತಿಂಗಳು ಮಂಡಿಸಲಿರುವ ಸಾಮಾನ್ಯ ಬಜೆಟ್‌ನಲ್ಲಿ (Union Budget 2022) ತೆರಿಗೆದಾರರಿಗೆ (Tax Payers) ಸರ್ಕಾರ ವಿನಾಯ್ತಿ ನೀಡಬಹುದು ಎಂದು ಹೇಳಲಾಗುತ್ತಿದೆ. ಕೊರೊನಾ ಮತ್ತು ಓಮೈಕ್ರಾನ್ ಸಾಂಕ್ರಾಮಿಕ (Corona, Omicron Pandemic) ರೋಗದಿಂದಾಗಿ ಮನೆಯಿಂದ ಕೆಲಸ (Work From Home) ಮಾಡುವ ವರ್ಗಕ್ಕೆ ಸರ್ಕಾರ ಕೆಲವೊಂದು ತೆರಿಗೆ ವಿನಾಯ್ತಿಗಳ (Tax Benefits) ಜೊತೆ ಕೆಲ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಗಳಿವೆ. ಮನೆಯಿಂದಲೇ ಕೆಲಸ ಮಾಡುವುದರಿಂದ ಉದ್ಯೋಗಿಗಳ ಇಂಟರ್ನೆಟ್(Internet), ವಿದ್ಯುತ್ ಬಿಲ್ (Electricity Bill) ಮತ್ತು ಪೀಠೋಪಕರಣಗಳ ಖರ್ಚಗಳು ಸೇರಿದಂತೆ  ಇತ್ಯಾದಿಗಳು ಹೆಚ್ಚಿವೆ ಎಂದು ಉದ್ಯಮವು ಹೇಳುತ್ತಿದೆ. ಈ ಹಿನ್ನೆಲೆ ಬಜೆಟ್‌(Budget)ನಲ್ಲಿ ಈ ಬಗ್ಗೆ ಗಮನಹರಿಸುವ ಸಾಧ್ಯತೆಗಳು ಸಹ ದಟ್ಟವಾಗಿದೆ.

KPMG ಇಂಡಿಯಾ ನಡೆಸಿದ ಸಮೀಕ್ಷೆ( KPMG in India's pre-budget survey 2021-22) ಯಲ್ಲಿ, ಬಹುತೇಕ ಜನರು ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ. 2022-23ರ ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2.50 ಲಕ್ಷ ರೂ.ಗಳಷ್ಟು ಹೆಚ್ಚಿಸಬಹುದು ಎಂದು ಸಮೀಕ್ಷೆಯಲ್ಲಿ ಭಾಗಿಯಾದ ಶೇ.64 ರಷ್ಟು ಜನರು ಆಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  Union Budget 2022: ಈ ಬಾರಿಯ ಕೇಂದ್ರ ಬಜೆಟ್​ ಮೇಲೆ ಜನಸಾಮಾನ್ಯರ ನಿರೀಕ್ಷೆಗಳೇನು?

ಶೇ.36 ರಷ್ಟು ಜನರು ಫೆಬ್ರವರಿ 1, 2022 ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಕಡಿತದ ಮಿತಿಯನ್ನು 1.50 ಲಕ್ಷದಿಂದ ಹೆಚ್ಚಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಸಂಬಳದಲ್ಲಿ ಕಡಿತದ ಮಿತಿ ಹೆಚ್ಚಳದ ನಿರೀಕ್ಷೆ!

ಸಮೀಕ್ಷೆಯ ಪ್ರಕಾರ, ಶೇ.19 ರಷ್ಟು ಜನರು ವೇತನದಾರರಿಗೆ ಅಸ್ತಿತ್ವದಲ್ಲಿರುವ ಪ್ರಮಾಣಿತ ಕಡಿತದ (Standard Deduction on salary) ಮಿತಿಯನ್ನು 50,000 ರೂ.ಗಳಿಂತ ಹೆಚ್ಚಿಸಬಹುದು ಎಂದು ಹೇಳಿದ್ದಾರೆ. ಶೇ.16 ರಷ್ಟು ಬಜೆಟ್‌ನಲ್ಲಿ ವೇತನದಾರರಿಗೆ ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ತೆರಿಗೆ ಮುಕ್ತ ಭತ್ಯೆ / ಇತರ ಪ್ರಯೋಜನಗಳನ್ನು ನೀಡಬಹುದು ಎಂದು ಹೇಳುತ್ತಾರೆ.

ಇಂಟರ್ನೆಟ್ ಸಂಪರ್ಕ, ಪೀಠೋಪಕರಣಗಳು ಮತ್ತು ಇಯರ್‌ಫೋನ್‌ಗಳನ್ನು ರಿಯಾಯ್ತಿ ದರದಲ್ಲಿ ಒದಗಿಸುವ ನಿರೀಕ್ಷೆಯನ್ನು ಸಹ ಹೊಂದಿದ್ದಾರೆ. ಈ ಸಮೀಕ್ಷೆಯಲ್ಲಿ ಕೇವಲ ವೃತ್ತಿಪರ ಮತ್ತು ಹಣಕಾಸಿನ ವಿಷಯಗಳ ಕುರಿತು ಮಾತ್ರ ಮಾಹಿತಿ ಪಡೆದುಕೊಳ್ಳಲಾಗಿದೆ.

ಕಾರ್ಪೊರೇಟ್ ತೆರಿಗೆಯಲ್ಲಿನ ವ್ಯತ್ಯಾಸವನ್ನು ಕಡಿಮೆ ಮಾಡುತ್ತಾ ಸರ್ಕಾರ?

ಸಮೀಕ್ಷೆಯ ಪ್ರಕಾರ, ವಿದೇಶಿ ಮತ್ತು ಭಾರತೀಯ ಕಂಪನಿಗಳಿಗೆ ಅನ್ವಯವಾಗುವ ಕಾರ್ಪೊರೇಟ್ ತೆರಿಗೆ ದರದ ನಡುವಿನ ಅಂತರವು ವಿಸ್ತರಿಸಿದೆ. ಸರ್ಕಾರವು 2019-20 ರಿಂದ ದೇಶೀಯ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆಯನ್ನು 22% ರಿಂದ 30% ಕ್ಕೆ ಹೆಚ್ಚಿಸಿದೆ.

ಇದನ್ನೂ ಓದಿ:  PM Kisan: ನಿಯಮ ಬದಲಿಸಿದ ಸರ್ಕಾರ: ಮುಂದಿನ ಕಂತು ಸಿಗಬೇಕಾದ್ರೆ ಮೊದಲು ಈ ಕೆಲಸ ಮಾಡಿ

ಪ್ರಸ್ತುತ, ವಿದೇಶಿ ಕಂಪನಿಗಳ ಭಾರತೀಯ ಶಾಖೆಗಳಿಗೆ 40% ತೆರಿಗೆ ವಿಧಿಸಲಾಗುತ್ತದೆ. 2019 ರಲ್ಲಿ ತೆರಿಗೆ ಕಡಿತದ ನಂತರ ಭಾರತೀಯ ಶಾಖೆಗಳಿಗೆ ಅನ್ವಯವಾಗುವ ದರವನ್ನು ಕಡಿಮೆ ಮಾಡುವ ಅವಶ್ಯಕತೆಯಿದೆ ಎಂದು ಪ್ರತಿಕ್ರಿಯಿಸಿದವರು ಹೇಳಿದ್ದಾರೆ. ಇದು ಭಾರತವು ಉತ್ತಮ ಹೂಡಿಕೆ (Investment) ತಾಣವಾಗಿ ಉಳಿಯಲು ಸಹಾಯ ಮಾಡುತ್ತದೆ.

ಫೆಬ್ರವರಿ 1 ರಂದು ಬಜೆಟ್ ಮಂಡನೆ ಮಾಡಲಿರುವ ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Finance Minister Nirmala Sitharaman)​ ಫೆಬ್ರವರಿ 1, 2022ರಂದು 2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಕಳೆದ ವರ್ಷದ ಬಜೆಟ್​ನಲ್ಲಿ ಸರ್ಕಾರದ ಮುಖ್ಯ ಗಮನ ಆರೋಗ್ಯ ಕ್ಷೇತ್ರ ಮತ್ತು ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಮೇಲೆ ಕೇಂದ್ರೀಕೃತವಾಗಿತ್ತು.

ಈ ವರ್ಷವೂ ಕೂಡ ಸರ್ಕಾರವು ಆರ್ಥಿಕತೆಯನ್ನು ಬಲಪಡಿಸಲು ಮತ್ತು ಸಾಮಾನ್ಯ ಜನರನ್ನು ಸಬಲೀಕರಣಗೊಳಿಸಲು ಹಲವು ಪ್ರಮುಖ ಘೋಷಣೆಗಳನ್ನು ಮಾಡಬಹುದು. ಆದರೆ ಕೋವಿಡ್​-19 ಮತ್ತು ಓಮೈಕ್ರಾನ್ ಆತಂಕ ಹೆಚ್ಚಾಗಿರುವುದರಿಂದ ಆರ್ಥಿಕ ಚೇತರಿಕೆ ಬಗ್ಗೆ ಕಳವಳ ಸೃಷ್ಟಿಯಾಗಿದೆ.
Published by:Mahmadrafik K
First published: