Salary: ಭಾರತದಲ್ಲಿ ನೌಕರರ ಸಂಬಳ 50 ಸಾವಿರಕ್ಕಿಂತ ಕಡಿಮೆ! ಪಾಕಿಸ್ತಾನ, ಚೀನಾದಲ್ಲಿ ಎಷ್ಟಿದೆ ಗೊತ್ತಾ?

ಈ ಸಂಬಳದ ವಿಷ್ಯದಲ್ಲಿ ಸೂಪರ್ ಪವರ್ ಚೀನಾ 44ನೇ ಸ್ಥಾನದಲ್ಲಿದೆ. ಚೀನಾದಲ್ಲಿನ ನೌಕರರು ಅಂದಾಜು 87,528 ಸಾವಿರ ಸಂಬಳ ಪಡೀತಾರೆ.

ಈ ಸಂಬಳದ ವಿಷ್ಯದಲ್ಲಿ ಸೂಪರ್ ಪವರ್ ಚೀನಾ 44ನೇ ಸ್ಥಾನದಲ್ಲಿದೆ. ಚೀನಾದಲ್ಲಿನ ನೌಕರರು ಅಂದಾಜು 87,528 ಸಾವಿರ ಸಂಬಳ ಪಡೀತಾರೆ.

ಈ ಸಂಬಳದ ವಿಷ್ಯದಲ್ಲಿ ಸೂಪರ್ ಪವರ್ ಚೀನಾ 44ನೇ ಸ್ಥಾನದಲ್ಲಿದೆ. ಚೀನಾದಲ್ಲಿನ ನೌಕರರು ಅಂದಾಜು 87,528 ಸಾವಿರ ಸಂಬಳ ಪಡೀತಾರೆ.

  • Trending Desk
  • 2-MIN READ
  • Last Updated :
  • New Delhi, India
  • Share this:

ಯಾವುದೇ ದೇಶದ (Country) ದುಡಿಯುವ ವರ್ಗ ಆ ದೇಶದ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಮಹತ್ತರ ಸೇವೆ ನೀಡುತ್ತದೆ. ದಿನವಿಡೀ ದುಡಿದು ಬದುಕು ನಡೆಸುವ ಕೈಗಳಿಗೆ ಮಾಸಿಕವಾಗಿ ಸಿಗುವ ವೇತನವು(Monthly Salary) ಮಹತ್ವವಾಗಿದ್ದು, ಅದರಿಂದಲೇ ಅವರ ಗುಣಾತ್ಮಕ ಬದುಕು ನಿರ್ಧರಿತವಾಗುತ್ತದೆ ಎಂದರೆ ತಪ್ಪಾಗಲಾರದು.a


ಸಾಮಾನ್ಯವಾಗಿ ಭಾರತವನ್ನು ಇತರೆ ಕೆಲವು ಮುಂದುವರೆದ ರಾಷ್ಟ್ರಗಳೊಂದಿಗೆ ಹೋಲಿಸಿದಾಗ ಇಲ್ಲಿ ಜನರು ಸರಾಸರಿ ಮಾಸಿಕವಾಗಿ ಪಡೆಯುವ ವೇತನದ ಮೊತ್ತ ಮಿಕ್ಕ ಆ ರಾಷ್ಟ್ರದ ಜನರಿಗಿಂತ ಕಡಿಮೆಯಿದೆ ಎಂದೆನಿಸಬಹುದು. ಹೌದು, ಇದು ನಿಜಕ್ಕೂ ಬಲು ಕಡಿಮೆಯಾಗಿದ್ದು, ಈ ಬಗ್ಗೆ ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ಅಂಕಿ-ಅಂಶಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಇದನ್ನೊಮ್ಮೆ ಗಮನಿಸಿದರೆ ಸಾಕು ನಮ್ಮ ಭಾರತದ ವೃತ್ತಿಪರರು ಒಟ್ಟಾರೆಯಾಗಿ ಸರಾಸರಿ ಪಡೆಯುವ ವೇತನ ಎಷ್ಟಿದೆ ಎಂದು ಗೊತ್ತಾಗುತ್ತದೆ.


ವಿಶ್ವಸಂಖ್ಯಾಶಾಸ್ತ್ರದ ದತ್ತಾಂಶದ ಪ್ರಕಾರ ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ದುಡಿಯುವ ವೃತ್ತಿಪರ ನೌಕರರು ತಿಂಗಳಿಗೆ ಅಂದಾಜು 4.99 ಲಕ್ಷ ಸಂಬಳ ಪಡೀತಾರೆ.


ಅಚ್ಚರಿ ಅನಿಸಿದ್ರೂ ಇದು ಸತ್ಯ.. ದೇಶದಲ್ಲಿ ತಿಂಗಳಿಗೆ ಐದು, ಹತ್ತು ಸಾವಿರ ಸಂಬಳ ಪಡೆಯುವ ಸಾವಿರಾರು ಜನರಿದ್ದಾರೆ.. ಆದರೆ ನಮ್ಮ ದೇಶದ ನೌಕರರ ವರ್ಗವನ್ನ ಒಟ್ಟಾರೆಯಾಗಿ ಲೆಕ್ಕ ಹಾಕಿದ್ರೆ, ತಿಂಗಳಿಗೆ ಸುಮಾರು 46,916 ರೂಪಾಯಿ ಸಂಬಳ ಗಳಿಸ್ತಿದ್ದಾರೆ.


ಇದು ಜಾಸ್ತಿಯೇ ಇದ್ಯಲ್ಲ ಅಂತ ನಿಮಗೆ ಅನಿಸಬಹುದು. ಆದರೆ, ವಿಶ್ವದ ಇತರೆ ದೇಶಗಳಿಗೆ ಹೋಲಿಸಿದ್ರೆ ಇದು ಕಡಿಮೆಯೇ ಆಗಿದೆ. ಹೌದು, ಕಾರ್ಮಿಕರ ದಿನದ ಅಂಗವಾಗಿ ಟ್ವಿಟರ್‌ನಲ್ಲಿ ಈ ದತ್ತಾಂಶವನ್ನ ಪ್ರಕಟಿಸಲಾಗಿದೆ. ಇದ್ರಲ್ಲಿ ಯಾವ ದೇಶದಲ್ಲಿ ನೌಕರರು ಎಷ್ಟೆಷ್ಟು ಸಂಬಳ ಪಡೀತಾರೆ ಅನ್ನೋದು ಬಹಿರಂಗವಾಗಿದೆ.


ನೌಕರರನ್ನು ಸಾಮೂಹಿಕವಾಗಿ ವಜಾಗೊಳಿಸುವ ತಂತ್ರ ಅನುಸರಿಸುತ್ತಿರುವ ಟೆಕ್ ಕಂಪನಿಗಳು


ಈ ಅಂಕಿ-ಅಂಶಗಳ ಪ್ರಕಾರ ಸ್ವಿಡ್ಜರ್‌ಲೆಂಡ್‌ನಲ್ಲಿ ದುಡಿಯುವ ನೌಕರರೇ ಶ್ರೀಮಂತರು. ಯಾಕಂದ್ರೆ, ಸ್ವಿಡ್ಜರ್‌ಲೆಂಡ್‌ನ ವೃತ್ತಿಪರ ನೌಕರರ ಸಂಬಳ ತಿಂಗಳಿಗೆ 4.99 ಲಕ್ಷ ಇದೆ.


ಯೂರೋಪ್‌ನ ಲಕ್ಸೆಂಬರ್ಗ್ ನಲ್ಲಿನ ನೌಕರರು ತಿಂಗಳಿಗೆ 4.10 ಲಕ್ಷ ದುಡೀತಾರೆ. ಸಿಂಗಾಪುರ್‌ನಲ್ಲಿ ದುಡಿಯೋರಿಗೆ 4.08 ಲಕ್ಷ ಸಿಗುತ್ತೆ. ಅಮೆರಿಕಾದಲ್ಲಿ 3.47 ಲಕ್ಷ, ಐಲೆಂಡ್‌ನಲ್ಲಿ 3.28 ಲಕ್ಷ ರೂಪಾಯಿ ಸಂಬಳ ಪಡೀತಾರೆ. ಈ ಐದು ದೇಶಗಳ ನೌಕರರು ಅತಿ ಹೆಚ್ಚು ಸಂಬಳ ಪಡೀತಾರೆ.




ಅಂದಹಾಗೇ ಭರ್ಜರಿ ಸ್ಯಾಲರಿ ಪಡೆಯುವ ಟಾಪ್ 10 ದೇಶಗಳ ನೌಕರರ ಪಟ್ಟಿಯಲ್ಲಿ ಏಷ್ಯಾದ ಎರಡು ದೇಶಗಳು ಮಾತ್ರ ಇವೆ. ಕತ್ತಾರ್‌ನಲ್ಲಿ ದುಡಿಯೋರು ತಿಂಗಳಿಗೆ 3.26 ಲಕ್ಷ ಪಡೆದ್ರೆ, ಯುನೈಟೆಡ್ ಅರಬ್ ಎಮಿರೈಟ್ಸ್ನಲ್ಲಿ ಕೆಲಸ ಮಾಡೋರು ಅಂದಾಜು 2.81 ಲಕ್ಷ ಸಂಬಳ ತೆಗೆದುಕೊಳ್ಳುತ್ತಾರೆ.


ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ಎಂಬ ಟ್ವಿಟರ್ ಹ್ಯಾಂಡಲ್ ಮೂಲಕ ಜಗತ್ತಿನಲ್ಲಿ ಅತಿ ಹೆಚ್ಚು ನಿವ್ವಳ ಮಾಸಿಕ ವೇತನ ಪಡೆಯುವ ಜನರ ದೇಶಗಳ ಹೆಸರುಗಳನ್ನು ಹಂಚಿಕೊಳ್ಳಲಾಗಿದ್ದು ಅದರಲ್ಲಿ ಭಾರತ 65ನೇ ಸ್ಥಾನದಲ್ಲಿದೆ.


ಈ ಸಂಬಳದ ವಿಷ್ಯದಲ್ಲಿ ಸೂಪರ್ ಪವರ್ ಚೀನಾ 44ನೇ ಸ್ಥಾನದಲ್ಲಿದೆ. ಚೀನಾದಲ್ಲಿನ ನೌಕರರು ಅಂದಾಜು 87,528 ಸಾವಿರ ಸಂಬಳ ಪಡೀತಾರೆ. ರಷ್ಯಾದ ನೌಕರರ ತಲಾ ಆದಾಯ 52,812 ರೂಪಾಯಿ ಇದೆ.. ಅತಿ ಹೆಚ್ಚು ಸಂಬಳ ಪಡೆಯೋರು ಪಟ್ಟಿಯಲ್ಲಿ ರಷ್ಯನ್ನಿಗರು 59 ನೇ ಸ್ಥಾನದಲ್ಲಿ ಇದ್ದಾರೆ.


ಸದ್ಯ ಭಾರತದ ನೌಕರರು ತಿಂಗಳಿಗೆ 46,918 ರೂಪಾಯಿ ಸಂಬಳ ಪಡೀತಿದ್ದು, ವಿಶ್ವದಲ್ಲಿ 65ನೇ ಸ್ಥಾನದಲ್ಲಿ ಇದ್ದಾರೆ.. ನೆರೆಯ ಪಾಕಿಸ್ತಾನ ಈ ಪಟ್ಟಿಯಲ್ಲಿ 104 ನೇ ಸ್ಥಾನದಲ್ಲಿದೆ.


ಪಾಕಿಸ್ತಾನದಲ್ಲಿ ಅಂದಾಜು ಸಂಬಳ 11,872 ರೂಪಾಯಿ ಇದೆ. ಭಾರತಕ್ಕಿಂತ ಅತಿ ಕಡಿಮೆ ಸಂಬಳ ಪಡೆಯುವ ಲಿಸ್ಟಿನಲ್ಲಿ, ಬ್ರೆಜಿಲ್, ಟರ್ಕಿ, ಅರ್ಜೆಂಟೀನಾ, ಇಂಡೋನೇಷ್ಯಾ, ಕೊಲಂಬಿಯಾ, ವೆನೆಜುವೆಲಾ, ಕೊಲಂಬಿಯಾ ದೇಶಗಳಿವೆ.


ಮೊದಲ ಹತ್ತು ದೇಶಗಳು ಮತ್ತು ಅಲ್ಲಿನ ನೌಕರರು ಪಡೆಯುವ ಅಂದಾಜು ಸಂಬಳದ ಪಟ್ಟಿ ಇಂತಿದೆ.


1. ಸ್ವಿಡ್ಜರ್‌ಲೆಂಡ್: 4.99 ಲಕ್ಷ


2. ಲುಕ್ಸುಂರ‍್ಗ್: 4.10 ಲಕ್ಷ


3. ಸಿಂಗಾಪುರ: 4.08 ಲಕ್ಷ


4. ಯುಎಸ್‌ಎ: 3.47 ಲಕ್ಷ


5. ಐಲೆಂಡ್: 3.28ಲಕ್ಷ


6. ಕತ್ತಾರ್: 3.26 ಲಕ್ಷ


7. ಡೆನ್ಮಾರ್ಕ್: 2.89 ಲಕ್ಷ


8. ಯುಎಇ: 2.86 ಲಕ್ಷ


9. ನೆದರ್‌ಲೆಂಡ್: 2.86 ಲಕ್ಷ


10. ಆಸ್ಟ್ರೇಲಿಯಾ: 2.77 ಲಕ್ಷ

top videos
    First published: