• Home
  • »
  • News
  • »
  • business
  • »
  • Intel: ಸಾವಿರಾರು ಉದ್ಯೋಗಿಗಳ ವಜಾಕ್ಕೆ ಮುಂದಾದ ಐಟಿ ದಿಗ್ಗಜ; ಕಾರಣ ಇಷ್ಟೇ

Intel: ಸಾವಿರಾರು ಉದ್ಯೋಗಿಗಳ ವಜಾಕ್ಕೆ ಮುಂದಾದ ಐಟಿ ದಿಗ್ಗಜ; ಕಾರಣ ಇಷ್ಟೇ

intel

intel

ಚಿಪ್ ತಯಾರಕ ಕಂಪನಿಯು ತನ್ನ ಪ್ರಸ್ತುತ ಮಾರುಕಟ್ಟೆ ಪಾಲು ಶೇಕಡಾವಾರು ಉಳಿಸಿಕೊಳ್ಳಲು ಹೆಣಗಾಡುತ್ತಿದೆ ಎಂದು ವರದಿ ಹೇಳುತ್ತದೆ.

  • Share this:

    ಈಗಂತೂ ಈ ಖಾಸಗಿ ಕಂಪನಿಗಳಲ್ಲಿರುವ ಕೆಲಸಗಳು ನೀರಿನ ಮೇಲೆ ಇರುವ ಗುಳ್ಳೆಯಂತಾಗಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ ನೋಡಿ. ನೀರಿನ ಮೇಲಿನ ಗುಳ್ಳೆ ಯಾವಾಗ ಒಡೆದು ಹೋಗುತ್ತದೆಯೋ ಅಂತ ಊಹಿಸಲು ಸಾಧ್ಯವಿಲ್ಲವೋ, ಹಾಗೆಯೇ ಖಾಸಗಿ ಕಂಪನಿಗಳ ಕೆಲಸ ಯಾವಾಗ ಹೋಗುತ್ತದೆ ಅನ್ನೋದನ್ನು ಸಹ ಊಹಿಸಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಈ ಕೋವಿಡ್-19 (Covid-19) ಸಾಂಕ್ರಾಮಿಕ ರೋಗದ ಹಾವಳಿಯ ನಂತರದಲ್ಲಿ ಅನೇಕ ಕಂಪನಿಗಳು ತಮ್ಮಲ್ಲಿ ಕೆಲಸ ಮಾಡುವ ಅನೇಕ ಉದ್ಯೋಗಿಗಳನ್ನು(Employees) ಕೆಲಸದಿಂದ ವಜಾಗೊಳಿಸಿರುವ ಸುದ್ದಿಗಳನ್ನು ನಾವು ಓದುತ್ತಲೇ ಬಂದಿದ್ದೇವೆ ಅಂತ ಹೇಳಬಹುದು.


    ಇಂಟೆಲ್ ಕಂಪನಿ ಸಾವಿರಾರು ಉದ್ಯೋಗಿಗಳನ್ನು ತೆಗೆದುಹಾಕಲಿದೆಯಂತೆ!


    ಈಗ ಇಲ್ಲಿ ಇನ್ನೊಂದು ಕಂಪನಿ ತನ್ನ ಉದ್ಯೋಗಿಗಳಿಗೆ ಈ ಆಘಾತಕಾರಿ ಸುದ್ದಿ ತಿಳಿಸಲಿದೆ ಅಂತ ವರದಿಯೊಂದು ತಿಳಿಸಿದೆ. ಹೌದು.. ಇಂಟೆಲ್ ಕಂಪನಿ ಈಗ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಯೋಜಿಸುತ್ತಿದೆ.


    ಇದು ಹಲವಾರು ದೊಡ್ಡ ಟೆಕ್ ಕಂಪನಿಗಳು ಪುನರ್ರಚನಾ ತಂಡಗಳ ಹೆಸರಿನಲ್ಲಿ ಸಾಕಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿರುವುದರಿಂದ ಈ ಸುದ್ದಿ ಅಷ್ಟೇನೂ ಆಶ್ಚರ್ಯ ತರುವಂತದ್ದಲ್ಲ ಅಂತ ಹೇಳಬಹುದು.


    ಈಗ, ಬ್ಲೂಮ್‌ಬರ್ಗ್ ನ ಒಂದು ವರದಿಯು ಇಂಟೆಲ್ ಮುಂಬರುವ ವಾರಗಳಲ್ಲಿ ಇದಕ್ಕೆ ಸಂಬಂಧಿಸಿದ ಪ್ರಕಟಣೆಯನ್ನು ಬಹಿರಂಗಪಡಿಸುತ್ತದೆ ಎಂದು ಹೇಳುತ್ತಿದೆ.


    ಅಕ್ಟೋಬರ್ 27ಕ್ಕೆ ಈ ವಿಷಯ ತಿಳಿಸಲಿದೆಯಂತೆ ಇಂಟೆಲ್


    ಚಿಪ್ ತಯಾರಕ ಕಂಪನಿಯಾದ ಇಂಟೆಲ್ ಅಕ್ಟೋಬರ್ 27 ರಂದು ಮೂರನೇ ತ್ರೈಮಾಸಿಕ ಗಳಿಕೆಯ ವರದಿಯನ್ನು ಬಿಡುಗಡೆ ಮಾಡುವ ಸಮಯದಲ್ಲಿಯೇ ಸಭೆಯೊಂದರಲ್ಲಿ ಈ ಉದ್ಯೋಗ ಕಡಿತವನ್ನು ಘೋಷಿಸುತ್ತಾರೆ ಎಂದು ಹೇಳಲಾಗುತ್ತಿದೆ.


    ಇಂಟೆಲ್ ಕಂಪನಿಯು ಸಹ ಅನೇಕ ಕಂಪನಿಗಳ ಹಾಗೆ ವೆಚ್ಚಗಳನ್ನು ಕಡಿತಗೊಳಿಸುವ ಕ್ರಮದ ಭಾಗವಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.


    ಇದನ್ನು ಓದಿ: ಸಹಾಯಕ ಸಬ್​ ಇನ್ಸ್​ಪೆಕ್ಟರ್ ಹುದ್ದೆ ನೇಮಕಾತಿ


    ಇಂಟೆಲ್ ಪ್ರಸ್ತುತ ಪಿಸಿ ಪ್ರೊಸೆಸರ್ ಗಳ ವಿಷಯದಲ್ಲಿ ಹೆಚ್ಚಿನ ಬೇಡಿಕೆಯನ್ನು ಕಾಣುತ್ತಿಲ್ಲ ಎಂದು ಮೂಲಗಳು ವರದಿ ಮಾಡಿವೆ, ಇದು ಅದರ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿದೆ ಅಂತ ಹೇಳಲಾಗುತ್ತಿದೆ.


    ಸದ್ಯ ಮಾರುಕಟ್ಟೆಯಲ್ಲಿ ಇಂಟೆಲ್ ಸ್ಥಿತಿ ಹೇಗಿದೆ ಗೊತ್ತೇ?


    ಸುಧಾರಿತ ಮೈಕ್ರೋ ಡಿವೈಸ್ ಗಳಂತಹ ಪ್ರತಿಸ್ಪರ್ಧಿಗಳು ಕಠಿಣ ಸ್ಪರ್ಧೆಯನ್ನು ನೀಡುತ್ತಿರುವುದನ್ನು ಪರಿಗಣಿಸಿ ಚಿಪ್ ತಯಾರಕ ಕಂಪನಿಯು ತನ್ನ ಪ್ರಸ್ತುತ ಮಾರುಕಟ್ಟೆ ಪಾಲು ಶೇಕಡಾವಾರು ಉಳಿಸಿಕೊಳ್ಳಲು ಹೆಣಗಾಡುತ್ತಿದೆ ಎಂದು ವರದಿ ಹೇಳುತ್ತದೆ. ಈ ವರ್ಷದ ಜುಲೈನಲ್ಲಿ, ಇಂಟೆಲ್ 2022 ರ ಮಾರಾಟವು ಹಿಂದಿನದಕ್ಕಿಂತ ಸುಮಾರು 11 ಬಿಲಿಯನ್ ಡಾಲರ್ ವಹಿವಾಟು ಕಡಿಮೆ ಇರಬಹುದು ಎಂದು ಎಚ್ಚರಿಕೆ ನೀಡಿತ್ತು.


    ಈ ವರ್ಷದ ಆರಂಭದಲ್ಲಿ, ಎರಡನೇ ತ್ರೈಮಾಸಿಕ ಗಳಿಕೆ ವರದಿ ಬಿಡುಗಡೆಯ ಸಮಯದಲ್ಲಿ ಇಂಟೆಲ್ ಭವಿಷ್ಯದಲ್ಲಿ ತನ್ನ ಲಾಭವನ್ನು ಸುಧಾರಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಘೋಷಿಸಿತ್ತು.


    ವೆಚ್ಚ ಕಡಿತಕ್ಕೆ ಕ್ರಮ


    "2022 ರಲ್ಲಿ ನಾವು ಪ್ರಮುಖ ವೆಚ್ಚಗಳನ್ನು ಕಡಿಮೆ ಮಾಡುತ್ತಿದ್ದೇವೆ. ವರ್ಷದ ದ್ವಿತೀಯಾರ್ಧದಲ್ಲಿ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಲು ನೋಡುತ್ತೇವೆ" ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ಯಾಟ್ ಗೆಲ್ಸಿಂಗರ್ ಕೆಲವು ತಿಂಗಳ ಹಿಂದೆ ಹೇಳಿದ್ದರು.


    ಇದನ್ನು ಓದಿ: ಡಿಗ್ರಿ ಆದವರಿಗೆ ಯುಕೋ ಬ್ಯಾಂಕ್​ನಲ್ಲಿದೆ ಉದ್ಯೋಗಾವಕಾಶ


    ಕಂಪನಿಯು ಈಗ ಆ ವೆಚ್ಚಗಳನ್ನು ಸರಿದೂಗಿಸಲು ಉದ್ಯೋಗಿಗಳನ್ನು ಕಡಿಮೆ ಮಾಡುತ್ತಿದೆ ಎಂದು ತೋರುತ್ತದೆ. ಮಾರಾಟ ಮತ್ತು ಮಾರ್ಕೆಟಿಂಗ್ ವಿಭಾಗದಲ್ಲಿನ ಉದ್ಯೋಗಿಗಳನ್ನು ತೆಗೆದು ಹಾಕಲಾಗುವುದು ಎಂದು ವರದಿಯು ಹೇಳುತ್ತಿದೆ.


    ಈ ಕ್ರಮವು ಸುಮಾರು 20 ಪ್ರತಿಶತದಷ್ಟು ಸಿಬ್ಬಂದಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಾಗಿದೆ. ಉಲ್ಲೇಖಿಸಿದ ಮೂಲವು ಕಂಪನಿಯು ಇಂಟೆಲ್ ನ ಸ್ಥಿರ ವೆಚ್ಚಗಳಲ್ಲಿ 15 ಪ್ರತಿಶತದಷ್ಟು ಕಡಿತಗೊಳಿಸಲು ನೋಡುತ್ತಿದೆ ಎಂದು ಸೂಚಿಸುತ್ತಿದೆ.


    ಬರೀ ಇಂಟೆಲ್ ಅಷ್ಟೇ ಬೇಡಿಕೆಯಲ್ಲಿ ತೀವ್ರ ಕುಸಿತವನ್ನು ಎದುರಿಸುತ್ತಿದೆ ಅಂತ ನೀವು ತಿಳಿದುಕೊಳ್ಳಬೇಡಿ. ಇನ್ನಿತರೆ ಪಿಸಿ ತಯಾರಕ ಕಂಪನಿಗಳಾದ ಲೆನೊವೊ, ಡೆಲ್ ಮತ್ತು ಎಚ್‌ಪಿ ಸಹ ಬೇಡಿಕೆಯಲ್ಲಿ ಕುಸಿತವನ್ನು ಎದುರಿಸುತ್ತಿವೆ ಅಂತ ಹೇಳಲಾಗುತ್ತಿದೆ.

    Published by:Seema R
    First published: