Ritesh Agarwal: ಭಾರೀ ಏರಿಕೆ ಕಂಡ ಓಯೋ ಆದಾಯ, ಸಂಭಾವನೆ ಹೆಚ್ಚಿಸಿಕೊಂಡ ಸಿಇಒ ರಿತೇಶ್‌!

ರಿತೇಶ್ ಅಗರ್ವಾಲ್

ರಿತೇಶ್ ಅಗರ್ವಾಲ್

ಓಯೋ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿತೇಶ್ ಅಗರ್ವಾಲ್ ಎಫ್‌ವೈ 22 ರಲ್ಲಿ 5.6 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ ಎಂದು SEBI ಗೆ ಈ ಕಂಪನಿಯ ಇತ್ತೀಚಿನ ವರದಿಯಲ್ಲಿ ಕಂಡು ಬಂದಿದೆ. ಇದು ಎಫ್‌ವೈ 21 ರಲ್ಲಿದ್ದ 1.6 ರೂ. ಕೋಟಿಯಿಂದ 250% ರಷ್ಟು ಹೆಚ್ಚಾಗಿದೆ. ಎಫ್‌ವೈ20 ಗೆ ಅವರ ಪರಿಹಾರ ಧನವು 21.5 ಲಕ್ಷ ರೂ ಆಗಿತ್ತು ಎಂದು ಕಂಪನಿಯ ಮೂಲಾಧಾರಗಳು ತಿಳಿಸಿವೆ.

ಮುಂದೆ ಓದಿ ...
  • Share this:

ಓಯೋ ಕಂಪನಿಯು ಮಾರುಕಟ್ಟೆ ನಿಯಂತ್ರಕ SEBI ಗೆ ಸಲ್ಲಿಸಿದ ವರದಿ ಪ್ರಕಾರ, ಕಂಪನಿಯು ಸಂಬಳ ಮತ್ತು ಬೋನಸ್ ವೆಚ್ಚಗಳನ್ನು (Salary and Bonus Expense) ಗಣನೀಯವಾಗಿ ಇಳಿಸಿದ ಸಮಯದಲ್ಲಿ ಆನ್‌ಲೈನ್ ಹೋಟೆಲ್ ಅಗ್ರಿಗೇಟರ್ ಓಯೋ ಕಂಪನಿ ಅವರ ಉದ್ಯೋಗಿ ಸ್ಟಾಕ್ ಆಯ್ಕೆ ( ESOP) ವೆಚ್ಚಗಳು ಎಫ್‌ವೈ 21 ರಲ್ಲಿ ರೂ. 153 ಕೋಟಿಗಳಿಂದ ಎಫ್‌ವೈ 22 ರಲ್ಲಿ ರೂ.680 ಕೋಟಿಗಳಿಗೆ ಅಂದರೆ 344% ರಷ್ಟು ಏರಿಕೆ (Hike) ಕಂಡಿದೆ ಎಂದು ತಿಳಿದು ಬಂದಿದೆ. ಜೂನ್ ತ್ರೈಮಾಸಿಕದಲ್ಲಿ, ಓಯೋ ಕಂಪನಿ (Oyo Company), 260 ಕೋಟಿ ರೂ.ಗಳ ಷೇರು ಆಧಾರಿತ ಪಾವತಿ ವೆಚ್ಚಗಳನ್ನು ದಾಖಲಿಸಿದೆ.


ಎಫ್‌ವೈ 22 ರಲ್ಲಿ 5.6 ಕೋಟಿ ರೂ. ಸಂಭಾವನೆ
ಓಯೋ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿತೇಶ್ ಅಗರ್ವಾಲ್ ಎಫ್‌ವೈ 22 ರಲ್ಲಿ 5.6 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ ಎಂದು SEBI ಗೆ ಈ ಕಂಪನಿಯ ಇತ್ತೀಚಿನ ವರದಿಯಲ್ಲಿ ಕಂಡು ಬಂದಿದೆ. ಇದು ಎಫ್‌ವೈ 21 ರಲ್ಲಿದ್ದ 1.6 ರೂ. ಕೋಟಿಯಿಂದ 250% ರಷ್ಟು ಹೆಚ್ಚಾಗಿದೆ. ಎಫ್‌ವೈ20 ಗೆ ಅವರ ಪರಿಹಾರ ಧನವು 21.5 ಲಕ್ಷ ರೂ ಆಗಿತ್ತು ಎಂದು ಕಂಪನಿಯ ಮೂಲಾಧಾರಗಳು ತಿಳಿಸಿವೆ.


ESOP ವೆಚ್ಚದಲ್ಲಿ ಕಡಿತಗೊಂಡ ಏರಿಕೆಯ ಹೊರತಾಗಿಯೂ, ಎಫ್‌ವೈ 22 ರಲ್ಲಿ ಹೋಟೆಲ್ ಅಗ್ರಿಗೇಟರ್‌ನ ಉದ್ಯೋಗಿ ವೆಚ್ಚಗಳು ಕೇವಲ 7 % ರಷ್ಟು ಬೆಳೆದು 1,862 ಕೋಟಿ ರೂ.ಗೆ ತಲುಪಿದೆ. ಏಕೆಂದರೆ ಸಂಬಳ, ವೇತನ ಮತ್ತು ಬೋನಸ್‌ಗಳ ಖಾತೆಯಲ್ಲಿನ ವೆಚ್ಚಗಳು ಎಫ್‌ವೈ 21 ರಲ್ಲಿ 1,520 ಕೋಟಿ ರೂ. ಗಳಿಂದ ಎಫ್‌ವೈ 2022 ರಲ್ಲಿ 1,117 ಕೋಟಿ ರೂ. ಕಡಿಮೆ ಆಗಿದೆ. ಅಂದ್ರೆ 27% ಕಡಿಮೆಯಾಗಿದೆ.


18% ರಷ್ಟು  ಆದಾಯ ಏರಿಕೆ
ಹಿಂದಿನ ವರ್ಷಕ್ಕಿಂತ ಎಫ್‌ವೈ 22 ರಲ್ಲಿ ಓಯೊನ ಕಾರ್ಯಾಚರಣಾ ಆದಾಯವು 18% ರಷ್ಟು ಏರಿಕೆಯಾಗಿ 4,905 ಕೋಟಿ ರೂ. ಗಳಿಗೆ ತಲುಪಿದೆ ಎಂದು ಮನಿಕಂಟ್ರೊಲ್‌ ಈ ಹಿಂದೆ ವರದಿ ಮಾಡಿತ್ತು. ಆದರೆ ನಿವ್ವಳ ನಷ್ಟವು 45% ರಷ್ಟು ಕಡಿಮೆ ಆಗಿದ್ದು, 1,851 ಕೋಟಿ ರೂ. ಗಳಿಗೆ ತಲುಪಿದೆ ಎಂದು ಹೆಚ್ಚುವರಿ IPO ಸಲ್ಲಿಸುವಲ್ಲಿ ಈ ಓಯೋ ಸ್ಟಾರ್ಟ್ಅಪ್ ಕಂಪನಿ ಮಾರುಕಟ್ಟೆ ನಿಯಂತ್ರಕಕ್ಕೆ ವರದಿ ಸಲ್ಲಿಸಿದೆ.


ಇದನ್ನೂ ಓದಿ: Richest Person: ಒಂದೇ ದಿನ 80,000 ಕೋಟಿ ಕಳೆದುಕೊಂಡ ಜೆಫ್ ಬೆಜೋಸ್; ಗೌತಮ್ ಅದಾನಿ ವಿಶ್ವದ 2 ನೇ ಶ್ರೀಮಂತ ವ್ಯಕ್ತಿಯಾಗುವ ಸಾಧ್ಯತೆ


ಸಾಫ್ಟ್‌ಬ್ಯಾಂಕ್-ಬೆಂಬಲಿತ ಕಂಪನಿಯು ಎಫ್‌ವೈ20 ರಲ್ಲಿ ಅದರ ಪೂರ್ವ ಕೋವಿಡ್ ವಾರ್ಷಿಕ ಕಾರ್ಯಾಚರಣೆಯ ಆದಾಯ 13,413 ಕೋಟಿ ರೂ. ಆಗಿತ್ತು. ತದನಂತರ ಅದು ಕರೋನವೈರಸ್ ಸಾಂಕ್ರಾಮಿಕ ರೋಗ ಮುಕ್ತಾಯದ ನಂತರ 10,419 ಕೋಟಿ ರೂ.ಗಳ ನಿವ್ವಳ ನಷ್ಟವನ್ನು ದಾಖಲಿಸಿತ್ತು.


ಇನ್ನು ಓಯೋದ, ಜೂನ್ ತ್ರೈಮಾಸಿಕದಲ್ಲಿ EBITDA ( ಅರ್ನಿಂಗ್‌ ಬಿಫೋರ್‌ ಇಂಟ್ರೆಸ್ಟ್‌ ಟ್ಯಾಕ್ಸ್‌ ಡಿಪ್ರೆಷಿಯೇಷನ್‌ ಆಂಡ್‌ ಅಮರ್‌ಟೈಜೇಷನ್‌ ) ಮಟ್ಟದ ಲಾಭವು 10.6 ಕೋಟಿ ರೂ. ಆಗಿತ್ತು. SEBI ಯೊಂದಿಗಿನ ಅದರ ಕರಡು ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್‌ಗೆ ಅನುಬಂಧದಲ್ಲಿ, ಸಂಸ್ಥೆಯು ಎಫ್‌ವೈ23 ರ ಜೂನ್ ತ್ರೈಮಾಸಿಕದಲ್ಲಿ 1,505 ಕೋಟಿ ರೂ.ಗಳ ಕಾರ್ಯಾಚರಣೆಯ ಆದಾಯವನ್ನು ದಾಖಲಿಸಿದೆ ಎಂದು ಹೇಳಿದೆ. ಈ ಅವಧಿಯಲ್ಲಿ ರೂ. 548 ಕೋಟಿ ನಿವ್ವಳ ನಷ್ಟವನ್ನು ಅನುಭವಿಸಿದೆ.


ಈ ಬಗ್ಗೆ ಹಣಕಾಸು ತಜ್ಞರು ಏನು ಹೇಳಿದ್ದಾರೆ 
ಕಳೆದ ಒಂದು ವರ್ಷದಲ್ಲಿ, ಹೊಸದಾಗಿ ಪಟ್ಟಿ ಮಾಡಲಾದ ಹಲವಾರು ಟೆಕ್ ಕಂಪನಿಗಳು ತಮ್ಮ ಲಾಭದಾಯಕತೆಯನ್ನು ಕಡಿಮೆಗೊಳಿಸಿದ ದೊಡ್ಡ ಷೇರು-ಆಧಾರಿತ ಪಾವತಿಗಳಿಗಳನ್ನು ಮಾಡಿರುವುದರಿಂದ ಇವರ ಈ ನಿರ್ಧಾರವನ್ನು ಅನೇಕ ಹಣಕಾಸು ತಜ್ಞರು ವಿಮರ್ಶೆ ಮಾಡಿದ್ದಾರೆ.


ಉದಾಹರಣೆಗೆ, ಪಾಲಿಸಿಬಜಾರ್‌ನ ಮೂವರು ಉನ್ನತ ಕಾರ್ಯನಿರ್ವಾಹಕರು - ಅಧ್ಯಕ್ಷ ಮತ್ತು ಸಂಸ್ಥಾಪಕ ಯಶಿಶ್ ದಹಿಯಾ, ಮುಖ್ಯ ಹಣಕಾಸು ಅಧಿಕಾರಿ ಅಲೋಕ್ ಬನ್ಸಾಲ್ ಮತ್ತು ಸಿಇಒ ಸರ್ಬ್ವೀರ್ ಸಿಂಗ್ ಅವರಿಗೆ - ಎಫ್‌ವೈ22 ರಲ್ಲಿ ಕಂಪನಿಯು 1,044 ರೂ. ಕೋಟಿಗಿಂತ ಹೆಚ್ಚು ಮೌಲ್ಯದ ಉದ್ಯೋಗಿ ಸ್ಟಾಕ್ ಆಯ್ಕೆಗಳನ್ನು (ESOPs) ನೀಡಲಾಯಿತು.


ಇದನ್ನೂ ಓದಿ:  Truly Desi: ತಾಯಿ ಸಾಧನೆಗೆ ಕಾರಣವಾಯ್ತು ಮಗಳ ಅಲರ್ಜಿ! ಸ್ಟಾರ್ಟ್‌ ಅಪ್ ಶುರು ಮಾಡಿ 2 ಕೋಟಿ ವಹಿವಾಟು!


ಅದೇ ರೀತಿ, ಝೊಮಾಟೊದಲ್ಲಿ, ಕಂಪನಿಯ ಮೂರು ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಗೆ (ಕೆಎಂಪಿ) ಇಂತಹ ಪ್ರತಿಫಲಗಳ ಖಾತೆಯಲ್ಲಿ ಸಂಚಿತ ESOP ವೆಚ್ಚವು ಎಫ್‌ವೈ 22 ರಲ್ಲಿ 779 ಕೋಟಿ ರೂ. ನೀಡಲಾಯಿತು.

First published: