Elon Musk: ಆ ಫೇಮಸ್​​ ಫುಟ್​ಬಾಲ್​ ಕ್ಲಬ್​ ಖರೀದಿಸ್ತೀನಿ ಎಂದಿದ್ದ ಎಲಾನ್​ ಮಸ್ಕ್​! ಇದ್ದಕಿದ್ದ ಹಾಗೆ ಜೋಕ್​ ಅಷ್ಟೇ ಎಂದಿದ್ಯಾಕೆ?

ಮಂಗಳವಾರ ಇಂಗ್ಲೆಂಡ್‌ನ ಗ್ರೇಟರ್‌ ಮ್ಯಾಂಚೆಸ್ಟರ್‌ ಮೂಲದ ಶ್ರೀಮಂತ ಫೂಟ್‌ಬಾಲ್‌ ಕ್ಲಬ್‌ ಮ್ಯಾಂಚೆಸ್ಟರ್‌ ಯುನೈಟೆಡ್‌ ಅನ್ನು ಖರೀದಿ ಮಾಡುವುದಾಗಿ ತಿಳಿಸುವ ಮೂಲಕ ಮಸ್ಕ್ ಭಾರಿ ಸುದ್ದಿಯಲ್ಲಿದ್ದರು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ಎಲೋನ್ ಮಸ್ಕ್ ಅವರ ಮಾತಿಗೆ ಉಲ್ಟಾ ಹೊಡೆದಿದ್ದು, ಇದು ತಮಾಷೆ ಅಷ್ಟೇ ಎಂದು ಹೇಳಿದ್ದಾರೆ. 

ಎಲೋನ್ ಮಸ್ಕ್

ಎಲೋನ್ ಮಸ್ಕ್

  • Share this:
ಟ್ವಿಟ್ಟರ್‌ ಖರೀದಿ ಒಪ್ಪಂದ (Twitter Purchase Agreement) ವಿಫಲವಾದ ಬಳಿಕ ಮತ್ತೊಂದು ಮಹತ್ವದ ಖರೀದಿಗೆ ಮುಂದಾಗಿರುವುದರ ಬಗ್ಗೆ  ಎಲೋನ್ ಮಸ್ಕ್ (Elon Musk) ಟ್ವೀಟ್ ಮಾಡಿದ್ದರು. ಹೌದು, ಮಂಗಳವಾರ ಇಂಗ್ಲೆಂಡ್‌ನ ಗ್ರೇಟರ್‌ ಮ್ಯಾಂಚೆಸ್ಟರ್‌ (Greater Manchester) ಮೂಲದ ಶ್ರೀಮಂತ ಫೂಟ್‌ಬಾಲ್‌ ಕ್ಲಬ್‌ (Richest Football Club) ಮ್ಯಾಂಚೆಸ್ಟರ್‌ ಯುನೈಟೆಡ್‌ ಅನ್ನು ಖರೀದಿ ಮಾಡುವುದಾಗಿ ತಿಳಿಸುವ ಮೂಲಕ ಮಸ್ಕ್ ಭಾರಿ ಸುದ್ದಿಯಲ್ಲಿದ್ದರು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ಎಲೋನ್ ಮಸ್ಕ್ ಅವರ ಮಾತಿಗೆ ಉಲ್ಟಾ ಹೊಡೆದಿದ್ದು, ಇದು ತಮಾಷೆ ಅಷ್ಟೇ ಎಂದು ಹೇಳಿದ್ದಾರೆ. ಅವರು ಮಾಡಿರುವ ಟ್ವೀಟ್ ನಲ್ಲಿ ಏನು ಹೇಳಿದ್ದಾರೆ ನೋಡಿ.

ಫೂಟ್‌ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿ ಬಗ್ಗೆ ಮಸ್ಕ್ ಟ್ವೀಟ್
ಒಂದು ಕಾಲದಲ್ಲಿ ಬಲಿಷ್ಠ ತಂಡವೆನಿಸಿಕೊಂಡಿದ್ದ ಮ್ಯಾಂಚೆಸ್ಟರ್ ಯುನೈಟೆಡ್ ಸದ್ಯ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಆಟಗಾರರಿಂದ ಹಿಡಿದು ಮಾಲೀಕರವರೆಗೆ ಬದಲಾವಣೆ ಬಯಸುತ್ತಿರುವ ತಂಡಕ್ಕೆ ಮಸ್ಕ್ ಟ್ವೀಟ್ ಸಾಕಷ್ಟು ಆಸೆಗಳನ್ನು ಮೂಡಿಸಿತ್ತು. ಜಗತ್ತಿನ ಶ್ರೀಮಂತ ವ್ಯಕ್ತಿ, ಟೆಸ್ಲಾ ಮತ್ತು ಸ್ಪೇಸ್‌-ಎಕ್ಸ್‌ ಸಂಸ್ಥೆಯ ಮಾಲೀಕ ಎಲೋನ್ ಮಸ್ಕ್, ತಾವು ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡವನ್ನು ಖರೀದಿ ಮಾಡುತ್ತಿರುವುದಾಗಿ ಟ್ವೀಟ್ ಮಾಡಿದ್ದರು. ಟ್ವೀಟ್ ನಲ್ಲಿ "ನಾನು ಮ್ಯಾಂಚೆಸ್ಟರ್ ಯುನೈಟೆಡ್‌ನ್ನು ಖರೀದಿಸುತ್ತಿದ್ದೇನೆ, ನಿಮಗೆ ಸ್ವಾಗತ,” ಎಂದಿದ್ದರು. ಮಸ್ಕ್ ಅವರ ಈ ಟ್ವೀಟ್ ಅಭಿಮಾನಿಗಳಿಗೆ ಹಬ್ಬದ ಖುಷಿ ನೀಡಿತ್ತು ಮತ್ತು ಟ್ವಿಟ್ಟರ್ನಲ್ಲೂ ಸಹ ಟ್ವೀಟ್ ಟ್ರೆಂಡಿಂಗ್ ಆಗಿತ್ತು.

ಎಲೋನ್ ಮಸ್ಕ್ ಅವರು ಸಂಬಂಧವಿಲ್ಲದ ಟ್ವೀಟ್‌ಗಳನ್ನು ಮಾಡುವ ಇತಿಹಾಸ ಹೊಂದಿದ್ದು, ಅವರು ಒಪ್ಪಂದವನ್ನು ಮುಂದುವರಿಸಲು ಯೋಜಿಸಿದ್ದಾರೆಯೇ ಎಂಬುದರ ಬಗ್ಗೆ ಹಲವಾರು ಜನ ಅನುಮಾನ ವ್ಯಕ್ತಪಡಿಸಿದ್ದರು. ಹಲವರ ಅಭಿಪ್ರಾಯದಂತೆ ಈ ಖುಷಿ ಹೆಚ್ಚು ಹೊತ್ತು ಉಳಿಯಲಿಲ್ಲ ಮತ್ತು ಸಂದೇಹವಾದಿಗಳು ನಿರೀಕ್ಷಿಸಿದಂತೆ, ಮಸ್ಕ್ ಗಂಟೆಗಳ ನಂತರ ಮತ್ತೊಂದು ಟ್ವೀಟ್‌ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿ ತಮಾಷೆ ಅಷ್ಟೇ ಎಂದು ಹೇಳುವ ಮೂಲಕ ಬದಲಾವಣೆಗಳಿಗೆ ತಣ್ಣೀರೆರಿಚ್ಚಿದ್ದಾರೆ.

ಉಲ್ಟಾ ಹೊಡೆದ ಮಸ್ಕ್.. ಇದು ತಮಾಷೆ ಎಂದು ಟ್ವೀಟ್
ಟ್ವೀಟ್‌ನಲ್ಲಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದ ಮಸ್ಕ್‌, "ನಾನು ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡವನ್ನು ಖರೀದಿಸುತ್ತೇನೆ ಎಂಬುದು ಟ್ವಿಟರ್‌ನಲ್ಲಿ ಬಹುಸಮಯದಿಂದ ಮೂಡಿರುವ ತಮಾಷೆಯ ವಿಷಯವಾಗಿದೆ. ನನಗೆ ಕ್ರೀಡಾ ಕ್ಲಬ್‌ ತಂಡಗಳನ್ನು ಖರೀದಿಸುವ ಯಾವುದೇ ಆಸಕ್ತಿ ಇಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Pear Cultivation: ವಯಸ್ಸು 74 ಆದ್ರೂ ಕುಗ್ಗದ ಉತ್ಸಾಹ, ವರ್ಷಕ್ಕೆ 25 ಲಕ್ಷ ಹಣ ಮಾಡ್ತಿದ್ದಾರೆ ಕಾಶ್ಮೀರಿ ರೈತ!

ಎಲೋನ್ ಮಸ್ಕ್ ಅವರು ತಮ್ಮ ಟ್ವಿಟರ್ ಜೋಕ್‌ಗಳು ಮತ್ತು ಮಾಧ್ಯಮವನ್ನು ಟ್ರೋಲ್ ಮಾಡುವ ವಿಷಯವಾಗಿ ಈ ಹಿಂದೆ ಕೂಡ ಸಾಕಷ್ಟು ಭಾರಿ ಕುಖ್ಯಾತರಾಗಿದ್ದಾರೆ.

ಮ್ಯಾಂಚೆಸ್ಟರ್ ಯುನೈಟೆಡ್ ಫೂಟ್‌ಬಾಲ್‌ ಕ್ಲಬ್
ಐತಿಹಾಸಿಕ ಮ್ಯಾಂಚೆಸ್ಟರ್ ಯುನೈಟೆಡ್ ಫೂಟ್‌ಬಾಲ್‌ ಕ್ಲಬ್‌ ಅಮೆರಿಕದ ಗ್ಲೇಜರ್ ಕುಟುಂಬದ ನಿಯಂತ್ರಣದಲ್ಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಮಾಡಿದ ಮನವಿಗೆ ತಂಡ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ ಎಂದು ರಾಯ್ಟರ್ಸ್‌ ಸುದ್ದಿ ಸಂಸ್ಥೆ ಹೇಳಿದೆ. ಮಂಗಳವಾರದ ವಹಿವಾಟಿನ ಮುಕ್ತಾಯದ ವೇಳೆಗೆ ಕ್ಲಬ್ 2.08 ಬಿಲಿಯನ್ ಡಾಲರ್‌ (22,180 ಕೋಟಿ ರೂ.) ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.

ಮ್ಯಾಂಚೆಸ್ಟರ್ ಯುನೈಟೆಡ್ ಅಭಿಮಾನಿಗಳು ಇತ್ತೀಚಿನ ವರ್ಷಗಳಲ್ಲಿ ಗ್ಲೇಜರ್ಸ್ ಕುಟುಂಬದ ವಿರುದ್ಧ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಕ್ಲಬ್ ಅನ್ನು 2005ರಲ್ಲಿ 955.51 ಮಿಲಿಯನ್ ಡಾಲರ್ಗೆ ಗ್ಲೇಜರ್ ಕುಟುಂಬ ಖರೀದಿಸಿತ್ತು. ಅದರಲ್ಲೂ ಕಳೆದ ವರ್ಷ ಮ್ಯಾಂಚೆಸ್ಟರ್ ಯುನೈಟೆಡ್ ಯುರೋಪಿಯನ್ ಸೂಪರ್ ಲೀಗಿಗೆ ಅರ್ಹತೆ ಪಡೆಯಲೂ ವಿಫಲವಾದಾಗ ಗ್ಲೇಜರ್ ಕುಟುಂಬದ ವಿರುದ್ಧ ಬೃಹತ್ ಆಂದೋಲನಗಳು ನಡೆದಿದ್ದವು.
ಇದೇ ರೀತಿಯ ಕ್ಲಬ್ ಖರೀದಿಗಳಲ್ಲಿ, ಟಾಡ್ ಬೋಹ್ಲಿ ನೇತೃತ್ವದ ಗುಂಪು ಇತ್ತೀಚೆಗೆ ರೋಮನ್ ಅಬ್ರಮೊವಿಚ್‌ನಿಂದ ಚೆಲ್ಸಿಯಾ ಎಫ್‌ಸಿಯನ್ನು 4.25 ಬಿಲಿಯನ್ ಯುರೋಗಳಿಗೆ (ಸುಮಾರು $5.1 ಬಿಲಿಯನ್) ಖರೀದಿಸಲು ಒಪ್ಪಿಕೊಂಡಿತು.

ಇದನ್ನೂ ಓದಿ:  Ratan Tata: ಯುವ ತಂಡದ ಬೆನ್ನಿಗೆ ನಿಂತ ರತನ್​ ಟಾಟಾ! ಈ ಕಂಪೆನಿಯಲ್ಲಿ ಇನ್ವೆಸ್ಟ್​ ಮಾಡ್ತಾರಂತೆ ದಿಗ್ಗಜ ಉದ್ಯಮಿ

ಅದೇನೇ ಆಗಲಿ ವಿಶ್ವದ ಅತ್ಯಂತ ಗಣ್ಯ ವ್ಯಕ್ತಿ ಎನಿಸಿಕೊಂಡಿರುವ ಎಲೋನ್ ಮಸ್ಕ್ ಅಭಿಮಾನಿಗಳ ಮತ್ತು ತಂಡದವರ ಮನಸ್ಸಿನ ಜೊತೆ ಈ ರೀತಿಯಾಗಿ ಆಟವಾಡಿದ್ದು ಸರಿ ಅಲ್ಲ ಎಂಬುವುದು ನೆಟ್ಟಿಗರ ಅಭಿಪ್ರಾಯ.
Published by:Ashwini Prabhu
First published: