• Home
  • »
  • News
  • »
  • business
  • »
  • Elon Musk Tips: ಈ ಕಂಪನಿಗಳ ಷೇರು ಖರೀದಿಸಿದ್ರೆ ಪಕ್ಕಾ ಲಾಭ! ಎಲಾನ್ ಮಸ್ಕ್ ಸಲಹೆ ಕೊಟ್ರು ಕೇಳಿ

Elon Musk Tips: ಈ ಕಂಪನಿಗಳ ಷೇರು ಖರೀದಿಸಿದ್ರೆ ಪಕ್ಕಾ ಲಾಭ! ಎಲಾನ್ ಮಸ್ಕ್ ಸಲಹೆ ಕೊಟ್ರು ಕೇಳಿ

ಎಲಾನ್ ಮಸ್ಕ್

ಎಲಾನ್ ಮಸ್ಕ್

ಮಾರುಕಟ್ಟೆಯಲ್ಲಿ ಕೊಂಚ ಏರುಪೇರು ಆದರೆ ಹೆದರಿಕೊಳ್ಳಬೇಡಿ. ಅಥವಾ ಷೇರುಗಳನ್ನು ಮಾರಬೇಡಿ ಎಂದು ಎಲಾನ್ ಮಸ್ಕ್ ಹೇಳಿದ್ದು ಏಕೆ?

  • Share this:

ಯಾವ ಕಂಪನಿಯ ಷೇರು ಖರೀದಿಸಬೇಕು? ಯಾವ ಕಂಪನಿಯ ಷೇರನ್ನು ಖರೀದಿ ಮಾಡಬಾರದು? ಈ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯೋದು ಅಷ್ಟು ಸುಲಭವಲ್ಲ. ಇಂದು ಸರಿ ಅಂದುಕೊಂಡಿದ್ದು ನಾಳೆ ತಪ್ಪು ಆಗಬಲ್ಲದು. ಯಾವ ಕಂಪನಿಯ ಷೇರನ್ನು (Share) ಖರೀದಿ ಮಾಡುವುದಿಲ್ಲವೊ ಅದೇ ನಾಳೆ ಒಂದಕ್ಕೆ ಎರಡು ಲಾಭ ತಂದಿರಬಹುದು. ಆದರೆ ಈ ಪ್ರಶ್ನೆಗಳಿಗೆ ಫುಲ್ ಸ್ಟಾಪ್ ಇಡುವಂತೆ ವಿಶ್ವದ ಅತ್ಯಂತ ಶ್ರೀಮಂತ ಎಲಾನ್ ಮಸ್ಕ್ (Elon Musk) ಉತ್ತರ ನೀಡಿದ್ದಾರೆ. ಅವರು ಷೇರುಗಳ ಖರೀದಿ ಮತ್ತು ಮಾರಾಟದ ಕುರಿತು ಅತ್ಯಂತ ಮಹತ್ವದ  ಒಂದಿಷ್ಟು ಸಲಹೆಗಳನ್ನು (Elon Musk Tips)  ಹಂಚಿಕೊಂಡಿದ್ದಾರೆ. ನೀವೂ ಆ ಸಲಹೆಗಳನ್ನು ತಿಳಿದುಕೊಳ್ಳುವಂತವರಾಗಿ!


"ನನಗೆ ಬಹಳಷ್ಟು ಜನರು ಕೇಳಿದ್ದರಿಂದ ಹೇಳುತ್ತಿದ್ದೇನೆ. ನೀವು ನಂಬುವ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವ ಕಂಪನಿಗಳ ಷೇರು ಖರೀದಿ ಮಾಡಿ. ಆದರೆ ಮಾರುಕಟ್ಟೆಯಲ್ಲಿ ಕೊಂಚ ಏರುಪೇರು ಆದರೆ ಹೆದರಿಕೊಳ್ಳಬೇಡಿ. ಅಥವಾ ಷೇರುಗಳನ್ನು ಮಾರಬೇಡಿ. ಆ ಕಂಪನಿಗಳ ಉತ್ಪನ್ನಗಳು ಮತ್ತು ಸೇವೆಗಳು ಕೆಟ್ಟದಾಗಿವೆ ಎಂದು ನೀವು ಭಾವಿಸಿದರೆ ಮಾತ್ರ ಮಾರಾಟ ಮಾಡಿ.  ಇದು ನಿಮಗೆ ದೀರ್ಘಾವಧಿಯ ಲಾಭ ತಂದುಕೊಡುತ್ತದೆ” ಎಂದು 50 ವರ್ಷದ ವಿಶ್ವದ ದೈತ್ಯ ಉದ್ಯಮಿ ಸಲಹೆ ನೀಡಿದ್ದಾರೆ.



ಸದ್ಯ ಎಲಾನ್ ಮಸ್ಕ್ ಟ್ವಿಟರ್ ಕಂಪನಿಯನ್ನು ತಮ್ಮ ಸ್ವಾಧಿನಕ್ಕೆ ಪಡೆದುಕೊಂಡಿದ್ದಾರೆ. ಈ ಸ್ವಾಧೀನವನ್ನು ಪೂರ್ಣಗೊಳಿಸುವುದರೊಂದಿಗೆ ಟ್ವಿಟರ್ ಖಾಸಗಿ ಒಡೆತನದ ಸಂಸ್ಥೆಯಾಗಲಿದೆ.  ಈ ವರ್ಷದ ಅಂತ್ಯದ ವೇಳೆಗೆ ಟ್ವಿಟರ್ ಸಂಪೂರ್ಣ ಖಾಸಗಿ ಒಡೆತನಕ್ಕೆ ಸೇರಿರುವ ಘೋಷಣೆ ಮಾಡುವ ಬಗ್ಗೆ ನಿರೀಕ್ಷೆಗಳಿವೆ. ಟ್ವಿಟರ್​ನಲ್ಲಿ ಎಲಾನ್ ಮಸ್ಕ್ ಏನೆಲ್ಲ ಬದಲಾವಣೆ ಮಾಡುತ್ತಾರೆ ಕಾದು ನೋಡಬೇಕಿದೆ.


ಇದನ್ನೂ ಓದಿ: Jesus Of Bitcoin: ಬಿಟ್​ಕಾಯಿನ್ ಜೀಸಸ್ ರೋಜರ್ ವೆರ್ ಯಾರು? ಅವರ ಆಸ್ತಿ ಎಷ್ಟು?


ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಎಲಾನ್ ಮಸ್ಕ್ ಎಂಬ ಬಿಲಿಯನೇರ್ ಅನೇಕ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತು ಅವರ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳು ರಿಯಾಲಿಟಿ ಆಗುವ ಮೊದಲು ಮೂರು ದಶಕಗಳ ಅವಧಿಯಲ್ಲಿ - ಅವರ ವೈಫಲ್ಯಗಳು ಮತ್ತು ಯಶಸ್ಸಿನ ಪಾಲನ್ನು ಕಂಡಿದ್ದಾರೆ.


ಭಾರತದಲ್ಲಿ ತಯಾರಿಸಿದ್ರೆ ಮಾತ್ರ ಟೆಸ್ಲಾ ಕಾರು ಮಾರಾಟ:
ಎಲಾನ್ ಮಸ್ಕ್ ಅವರು ಭಾರತದಲ್ಲೇ ಟೆಸ್ಲಾ ಕಾರುಗಳನ್ನು ತಯಾರಿಸಿದರೆ ಮಾತ್ರ ದೇಶದಲ್ಲಿ ಮಾರಾಟ ಮಾಡಬಹುದು ಎಂದು ಹೇಳಿದರು. ಅದನ್ನು ಬಿಟ್ಟು, ಅವರು ಭಾರತದಲ್ಲಿ ಮಾರಾಟ ಮಾಡಲು ಚೀನಾದಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ ಎಂದೂ ನಿತಿನ್‌ ಗಡ್ಕರಿ ಹೇಳಿದ್ದಾರೆ.


Rat Snake Poison: ಕೇರೆ ಹಾವಿಗೆ ಬಾಲದಲ್ಲಿ ವಿಷ ಇದೆಯೇ? ನಾಗರ ಹಾವಿಗೂ ಕೇರೆ ಹಾವಿಗೂ ಏನು ಸಂಬಂಧ?


ಇತ್ತೀಚಿನ ತಿಂಗಳುಗಳಲ್ಲಿ, ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಪಂಜಾಬ್ ಮತ್ತು ತಮಿಳುನಾಡು ಸೇರಿದಂತೆ ಹಲವಾರು ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ಸ್ಥಾವರವನ್ನು ಸ್ಥಾಪಿಸಲು ಟೆಸ್ಲಾ ಕಂಪನಿಯನ್ನು ಆಹ್ವಾನಿಸಿದ್ದನ್ನು ನಾವಿಲ್ಲಿ ಗಮನಿಸಬಹುದು.

Published by:ಗುರುಗಣೇಶ ಡಬ್ಗುಳಿ
First published: