• Home
 • »
 • News
 • »
 • business
 • »
 • Elon Musk: ಟ್ವಿಟರ್ ಕಚೇರಿಯಲ್ಲಿ ಎಲಾನ್ ಮಸ್ಕ್​ ಮಗನ ತುಂಟಾಟ, ಮೀಟಿಂಗ್ ರೂಂನಲ್ಲೂ ಕಲರವ!

Elon Musk: ಟ್ವಿಟರ್ ಕಚೇರಿಯಲ್ಲಿ ಎಲಾನ್ ಮಸ್ಕ್​ ಮಗನ ತುಂಟಾಟ, ಮೀಟಿಂಗ್ ರೂಂನಲ್ಲೂ ಕಲರವ!

ಎಲಾನ್ ಮಸ್ಕ್​ ಮತ್ತು ಅವರ ಮಗ

ಎಲಾನ್ ಮಸ್ಕ್​ ಮತ್ತು ಅವರ ಮಗ

ಮಸ್ಕ್ ಅವರ ಪುತ್ರ X AE A-Xii ಆ ದಿನದಂದು ಹ್ಯಾಲೋವಿನ ಪಾರ್ಟಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಕಚೇರಿಯ ಸಿಬ್ಬಂದಿಗಳು ತಮ್ಮ ಮಕ್ಕಳನ್ನು ಈ ಪಾರ್ಟಿಗೆ ಕರೆತರುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ

 • Trending Desk
 • 2-MIN READ
 • Last Updated :
 • Share this:

  ಎಲಾನ್ ಮಸ್ಕ್(Elon Musk) ಟ್ವಿಟರ್‌(Twitter)ನ ಸ್ವಾಧೀನಪಡಿಸುವಿಕೆ ಅನೇಕ ರೀತಿಯ ಗೊಂದಲಗಳು ಹಾಗೂ ವಿವಾದಗಳಿಗೆ ಕಾರಣವಾಯಿತು. ಉದ್ಯೋಗಿಗಳನ್ನು ವಜಾಗೊಳಿಸುವುದರಿಂದ ಹಿಡಿದು ಟ್ವಿಟರ್‌ನ ಮಾರ್ಪಾಡುಗೊಳಿಸುವಿಕೆ ಹೀಗೆ ಮಸ್ಕ್ ಬೃಹತ್ ಮಟ್ಟದ ಕೂಲಂಕುಷ ಪರೀಕ್ಷೆಗೆ ಸಜ್ಜಾಗಿರುವಂತೆ ಕಂಡುಬಂದಿದೆ.


  ಇದೀಗ ಮಸ್ಕ್ ಹತ್ತು ಮಕ್ಕಳಲ್ಲಿ ಒಬ್ಬರಾದ ಎರಡು ವರ್ಷ ಮಗ X AE A-Xii ಟ್ವಿಟರ್ ಪ್ರಧಾನ ಕಚೇರಿಗೆ ಬಂದಿದ್ದು, ಮಗುವಿನ ಆಟಗಳು, ಕೇಕೆ, ನಗುವಿನಿಂದ ಯುದ್ಧದ ಮೈದಾನವಾಗಿದ್ದ ಟ್ವಿಟರ್ ಕಚೇರಿ ಕೊಂಚ ಕಲರವದಿಂದ ಕೂಡಿದಂತೆ ಕಂಡುಬರುತ್ತಿದೆ.


  ಮೀಟಿಂಗ್ ರೂಮ್‌ನಲ್ಲಿ ಮಗುವಿನ ಕೇಕೆ ಕಲರವ


  ಟ್ವಿಟರ್‌ನ ಮೀಟಿಂಗ್ ಕೊಠಡಿ ಇದೀಗ ಡೇಟಾ ಚಾರ್ಟ್‌ಗಳು, ವರದಿಗಳು ತುಂಬಿದ ವೈಟ್ ಬೋರ್ಡ್‌ನ ಬದಲಿಗೆ ಆಟಿಕೆಗಳಿಂದ ತುಂಬಿದೆ. ಮಸ್ಕ್‌ನ 2 ವರ್ಷದ ಮಗು ಆಟಿಕೆಗಳನ್ನು ನೆಲದ ಮೇಲೆ ಹರಡಿತ್ತು. ಹೀಗೆ ಟ್ವಿಟರ್ ಕಚೇರಿ ಮಗುವಿನ ಆಟಪಾಠಗಳ ಕಲರವದಿಂದ ಹೊಸ ಕಳೆಯಲ್ಲಿ ಮಿಂದೆದ್ದಿತು.


  ಟ್ವಿಟರ್ ಮಾಲೀಕತ್ವವನ್ನು ಎಲಾನ್ ಮಸ್ಕ್ ಪಡೆದಾಗ ಅವರು ತಮ್ಮ ಮಗ X AE A-Xii ಅನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಕಂಪನಿಯ ಪ್ರಧಾನ ಕಚೇರಿಯಲ್ಲಿ ಮಾತುಕತೆಗೆ ಕರೆತಂದರು ಎಂದು ವರದಿಯೊಂದು ತಿಳಿಸಿದೆ. ಅಕ್ಟೋಬರ್ 27 ರಂದು ಎಲೋನ್ ಮಸ್ಕ್ ಮತ್ತು ಅವರ ತಂಡವು ಟ್ವಿಟರ್‌ನ ಟ್ರಸ್ಟ್ ಮತ್ತು ಸುರಕ್ಷತಾ ಅಧಿಕಾರಿ ಯೊಯೆಲ್ ರಾತ್ ಅವರನ್ನು ಕಾನ್ಫರೆನ್ಸ್ ಕೊಠಡಿಯಲ್ಲಿ ಭೇಟಿಯಾದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.


  ಇದನ್ನೂ ಓದಿ: PM Narendra Modi: ಮೋದಿಯನ್ನು ಟೀಕಿಸಿದ ಅಮೆರಿಕ ಅಧಿಕಾರಿ, ಅಸಮಾಧಾನ ವ್ಯಕ್ತಪಡಿಸಿದ ಭಾರತ!


  ಹ್ಯಾಲೊವಿನ ಪಾರ್ಟಿಗೆ ಆಗಮಿಸಿರುವ ಮಸ್ಕ್ ಪುತ್ರ


  ಬ್ರೆಜಿಲ್‌ನಲ್ಲಿ ಉದ್ಭವಿಸಬಹುದಾದ ಸಮಸ್ಯೆ ಪರಿಹಾರಕ್ಕಾಗಿ ರೋತ್ ಯೋಜನೆ ರೂಪಿಸಿದಾಗ ಎಲೋನ್ ಮಸ್ಕ್ ಕಂದಮ್ಮ ಕೂಡ ಕೊಠಡಿಯಲ್ಲಿ ಓಡಾಡುತ್ತಿದ್ದುದು ಕಂಡುಬರುತ್ತಿತ್ತು.


  ಮಸ್ಕ್ ಅವರ ಪುತ್ರ X AE A-Xii ಆ ದಿನದಂದು ಹ್ಯಾಲೋವಿನ ಪಾರ್ಟಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಕಚೇರಿಯ ಸಿಬ್ಬಂದಿಗಳು ತಮ್ಮ ಮಕ್ಕಳನ್ನು ಈ ಪಾರ್ಟಿಗೆ ಕರೆತರುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ. ಮಸ್ಕ್ ಅವರ  ಪುತ್ರ 2020 ರಲ್ಲಿ ಜನಿಸಿದ್ದು , ಇದು ಮಸ್ಕ್ ಅವರ ವಿಚ್ಛೇದಿತ ಪತ್ನಿ ಗ್ರಿಮ್ಸ್ ಹಾಗೂ ಎಲೋನ್‌ರ ಮೊದಲ ಮಗುವಾಗಿದೆ. ಸಪ್ಟೆಂಬರ್ 2021 ರಲ್ಲಿ ಈ ಜೋಡಿ ಬೇರ್ಪಟ್ಟಿತು.


  ಟ್ವಿಟರ್ ಸಮೀಕ್ಷೆ


  ಮಸ್ಕ್ ಟ್ವಿಟರ್‌ನ ಪ್ರಧಾನ ಕಚೇರಿಯಲ್ಲಿ ತಮ್ಮ ಹೊಸ ತಂಡದೊಂದಿಗೆ ಎರಡನೇ ಮಹಡಿಯ ಕಾನ್ಫರೆನ್ಸ್ ಕೊಠಡಿಯಲ್ಲಿ ಸೇರಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಯ ಭವಿಷ್ಯದ ಕುರಿತು ಚರ್ಚಿಸಿದ್ದಾರೆ ಎಂದು ವರದಿ ಹೇಳಿದೆ. ಸಭೆಯ ಎರಡು ವಾರಗಳ ನಂತರ, ಸಮಸ್ಯೆಗಳ ಕುರಿತು ಎಲೋನ್ ಮಸ್ಕ್ ಅವರೊಂದಿಗಿನ ಘರ್ಷಣೆಯ ನಂತರ ಯೊಯೆಲ್ ರಾತ್ ಟ್ವಿಟರ್ ತೊರೆದರು ಎಂದು ವರದಿಯಾಗಿದೆ.


  ಯಾವುದೇ ಕಾನೂನನ್ನು ಉಲ್ಲಂಘಿಸದ ಅಥವಾ ಸ್ಪ್ಯಾಮ್‌ನಲ್ಲಿ ಭಾಗಿಯಾಗಿದೇ ಇರುವ ಬಳಕೆದಾರರಿಗೆ ಅನುಮತಿ ನೀಡಬೇಕೇ ಎಂಬುದರ ಕುರಿತು ಟ್ವಿಟರ್‌ನಲ್ಲಿ ಸಮೀಕ್ಷೆಯನ್ನು ಕೈಗೊಂಡ ನಂತರ, ಈ ಹಿಂದೆ ಅಮಾನತುಗೊಂಡ ಖಾತೆಗಳಿಗೆ ಸಾಮಾಜಿಕ ತಾಣ ಸಾಮಾನ್ಯ ಕ್ಷಮಾದಾನ ನೀಡಲಿದೆ ಎಂದು ಎಲಾನ್ ಮಸ್ಕ್ ಇಂದು ಮುಂಚಿತವಾಗಿ ಘೋಷಿಸಿದ್ದರು.


  ಇದನ್ನೂ ಓದಿ: Elon Musk: ಎಲಾನ್​ ಮಸ್ಕ್​ ತಲೆ ಸರಿ ಇಲ್ಲ, ಹುಚ್ಚನ ರೀತಿ ಕೆಲಸ ಕೊಡ್ತಿದ್ದಾರೆ ಎಂದ ಟ್ವಿಟರ್​ ಉದ್ಯೋಗಿ!


  ಸಾಲ ಹಾಗೂ ಒತ್ತಡದಲ್ಲಿರುವ ಟ್ವಿಟರ್


  ಸಾಲ ಹಾಗೂ ಆರ್ಥಿಕ ಕುಸಿತದ ಒತ್ತಡದಲ್ಲಿರುವ ಟ್ವಿಟರ್ ಒಂದು ತಿಂಗಳ ಹಿಂದಿನದಕ್ಕೆ ಹೋಲಿಸಿದರೆ ಇದೀಗ ಗುರುತಿಸಲಾಗದೇ ಇರುವ ಸಮಸ್ಯೆಗಳಿಂದ ಸಿಲುಕಿಕೊಂಡಿದೆ. ಮಸ್ಕ್ ಕಂಪನಿಯ 7500 ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ 50% ಉದ್ಯೋಗಿ ಸಮೂಹವನ್ನು ಮನೆಗೆ ಕಳುಹಿಸಿದರು. ಕಾರ್ಯನಿರ್ವಾಹಕರ ರಾಜೀನಾಮೆಗಳು ಇನ್ನೂ ಮುಂದುವರಿಯುತ್ತಲೇ ಇವೆ. ಚಂದಾದಾರಿಕೆಗಳಿಂದ ಆದಾಯವನ್ನು ವಿಸ್ತರಿಸುವ ಪ್ರಮುಖ ಪ್ರಾಜೆಕ್ಟ್‌ಗಳು ಹೊಡೆತ ಕಂಡಿವೆ ಇದರೊಂದಿಗೆ ಕೆಲವು ಪ್ರಮುಖ ಜಾಹೀರಾತುದಾರರು ಗಾಬರಿಗೊಳಗಾಗಿದ್ದಾರೆ.

  Published by:Latha CG
  First published: