ಮೈಕ್ರೋ ಬ್ಲಾಗಿಂಗ್ ವೇದಿಕೆ ಟ್ವಿಟರ್ ಅನ್ನು ಖರೀದಿರುವ ಟೆಸ್ಲಾ CEO ಎಲೋನ್ ಮಸ್ಕ್ (Elon Musk) ಈಗ ಹೊಸದೊಂದು ಘೋಷಣೆ ಮಾಡಿದ್ದಾರೆ. ಟ್ವಿಟರ್ (Twitter) ನಂತರ ಅವರು ಪಾನೀಯ ಉತ್ಪಾದಕ ಕಂಪನಿ ಕೋಕಾ-ಕೋಲಾವನ್ನು (Coca-Cola) ಖರೀದಿಸಲು ಬಯಸುವುದಾಗಿ ತಿಳಿಸಿದ್ದಾರೆ. ಮುಂದೆ ಕೋಕಾಕೋಲಾವನ್ನು ಖರೀದಿಸಿ ಕೊಕೇನ್ ಅನ್ನು ಮತ್ತೆ ಅದರಲ್ಲಿ ಹಾಕುವುದಾಗಿ ಟ್ವೀಟ್ ಮಾಡಿದ್ದಾರೆ ಟೆಸ್ಲಾ (Tesla) ಸ್ಪೇಸ್ ಎಕ್ಸ್ ನಂತಹ ದೈತ್ಯ ಟೆಕ್ ಕಂಪನಿಗಳ ಮುಖ್ಯಸ್ಥ ಎಲಾನ್ ಮಸ್ಕ್. ಆದರೆ ಅವರು ತಮಾಷೆಗೆ ಹೀಗಂದಿದ್ದಾರೆ ಎಂದೇ ಹೇಳಲಾಗಿದ್ದು, ಖರೀದಿಸಲೇಬೇಕು ಎಂಬ ಹಠಕ್ಕೆ ಬಿದ್ದರೆ ಕೋಕಾ ಕೋಲಾ ಸಹ ಎಲಾನ್ ಮಸ್ಕ್ ತೆಕ್ಕೆಗೆ ಸೇರುವ ಸಾಧ್ಯತೆಯನ್ನೂ ಅಲ್ಲಗಳೆಯುಂವತಿಲ್ಲ. ಈ ಬೆನ್ನಲ್ಲೇ ನೆಟ್ಟಿಗರು ಅವರಿಗೆ ಪಾಕಿಸ್ತಾನ ಖರೀದಿಸುವಂತೆಯೂ ಆಪರ್ ನೀಡಿದ್ದಾರೆ!
ಅವರು ಕೊಕೇನ್ ಅನ್ನು ಪುನಃ ಕೋಕಾ ಕೋಲಾದಲ್ಲಿ ಸೇರಿಸಲು ಬಯಸಿದ ಹಿಂದೆ ಕಾರಣವೊಂದಿದೆ. 1886 ರಲ್ಲಿ ವಿವಿಧ ಕಾಯಿಲೆಗಳಿಗೆ ಟಾನಿಕ್ ಆಗಿ ಕೋಕಾ ಕೋಲಾ ಆರಂಭವಾಗಿತ್ತು. ಆನಂತರದಲ್ಲಿ ಕೊಖರೀದಿಸಿ ಕೊಕೇನ್ ಅನ್ನು ಸೇರಿಸುವುದಾಗಿ ಎಲಾನ್ ಮಸ್ಕ್ ತಮಾಷೆಗೆ ಎಂಬಂತೆ ಹೇಳಿದ್ದಾರೆ.
ಟ್ವೀಟ್ ಫುಲ್ ವೈರಲ್
ಟ್ವಿಟರ್ ಡೀಲ್ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಒತ್ತು ನೀಡಿದ ನಂತರ ಎಲಾನ್ ಮಸ್ಕ್ ಅವರ ಇತ್ತೀಚಿನ ಟ್ವೀಟ್ಗಳು ಈಗ ತುಂಬಾನೇ ವೈರಲ್ ಆಗುತ್ತಿದೆ. ಎರಡು ಗಂಟೆಗಳಲ್ಲಿ ಕೋಕಾ ಕೋಲಾ ಖರೀದಿ ಟ್ವೀಟ್, ಟ್ವೀಟ್ 1 ಮಿಲಿಯನ್ ಲೈಕ್ಗಳು, 200K ರಿಟ್ವೀಟ್ಗಳು ಮತ್ತು 60K ಕೋಟ್ ಟ್ವೀಟ್ಗಳನ್ನು ದಾಟಿದೆ.
Next I’m buying Coca-Cola to put the cocaine back in
— Elon Musk (@elonmusk) April 28, 2022
Listen, I can’t do miracles ok pic.twitter.com/z7dvLMUXy8
— Elon Musk (@elonmusk) April 28, 2022
Can you buy Indonesia?
Make it fast! Because the price will go up in Monday.
— Duke of Condet (@LordCondet) April 28, 2022
Please buy Pakistan and fix it 🙏
— Amana Begam Ansari (@Amana_Ansari) April 28, 2022
Yes, buying Pakistan would certainly cost Elon Musk cheaper than what he spent for buying Twitter 😂 good investment go for it
— Swapnil Pandey (@swapy6) April 28, 2022
ಜೊತೆಗೆ ಹಲವರು ಪಾಕಿಸ್ತಾನ, ಇಂಡೋನೇಷ್ಯಾ ಮುಂತಾದ ದೇಶಗಳನ್ನು ಖರೀದಿಸಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಿ ಎಂದೂ ಕಾಲೆಳೆದಿದ್ದಾರೆ.
ಇದನ್ನೂ ಓದಿ: Bank Holidays in May 2022: ಮೇ ತಿಂಗಳಲ್ಲಿ ಬ್ಯಾಂಕ್ಗಳು ಎಷ್ಟು ದಿನ ಬಂದ್ ಆಗಿರಲಿವೆ ತಿಳಿಯಿರಿ
2017 ರಲ್ಲಿ ಹಾಸ್ಯನಟ ಡೇವ್ ಸ್ಮಿತ್ ಅವರೊಂದಿಗೆ ಪ್ಲಾಟ್ಫಾರ್ಮ್ನಲ್ಲಿ ನಡೆದ ವಿನಿಮಯದಲ್ಲಿ ಅವರು ಟ್ವಿಟರ್ ಅನ್ನು ಖರೀದಿಸುವ ಬಗ್ಗೆ ಮೊದಲು ತಮಾಷೆ ಮಾಡಿದ್ದರು. ಮತ್ತು 5 ವರ್ಷಗಳ ಒಳಗೆ ಅವರು ಟ್ವಿಟರ್ ಕಂಪನಿಯಲ್ಲಿ 100% ಪಾಲನ್ನು ಖರೀದಿಸಲು ಪ್ರಸ್ತಾಪ ಮುಂದಿಟ್ಟು ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
ಪ್ರತಿ ಷೇರಿಗೆ 54.20 ಡಾಲರ್
ಇನ್ನು, ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡಿದ್ದು, ಈ ಹಿನ್ನೆಲೆ ಪ್ರಸ್ತುತ ಟ್ವಿಟ್ಟರ್ ಷೇರು ಹೊಂದಿರುವವರು ಪ್ರತಿ ಷೇರಿಗೆ 54.20 ಡಾಲರ್ ನಗದು ಹಣ ಪಡೆಯುತ್ತಾರೆ. ಇದು ಏಪ್ರಿಲ್ 1, 2022 ರಂದು Twitter ನ ಮುಕ್ತಾಯದ ಸ್ಟಾಕ್ ಬೆಲೆಗೆ 38% ಪ್ರೀಮಿಯಂ ಆಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Parag Agrawal: ಟ್ವಿಟರ್ ಸಿಇಒ ಸ್ಥಾನದಿಂದ ತೆಗೆದರೆ ಪರಾಗ್ ಅಗ್ರವಾಲ್ಗೆ ಎಷ್ಟು ಹಣ ಕೊಡಬೇಕು ಗೊತ್ತಾ?
ಟ್ವಿಟರ್ ಖರೀದಿಸಿದ ಬಗ್ಗೆ ವಿಶ್ವದ ನಂ. 1 ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ " ಟ್ವಿಟರ್ ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುವ ಉದ್ದೇಶ ಮತ್ತು ಪ್ರಸ್ತುತತೆಯನ್ನು ಹೊಂದಿದೆ. ನಾನು ನಮ್ಮ ತಂಡಗಳ ಬಗ್ಗೆ ತುಂಬ ಹೆಮ್ಮೆ ಹೊಂದಿದ್ದೇನೆ, ಮತ್ತು ಅವರ ಕೆಲಸದಿಂದ ಸ್ಪೂರ್ತಿ ಹೊಂದಿದ್ದೇನೆ. ವಾಕ್ ಸ್ವಾತಂತ್ರ್ಯವು ಕಾರ್ಯನಿರ್ವಹಿಸುವ ಪ್ರಜಾಪ್ರಭುತ್ವದ ತಳಹದಿಯಾಗಿದೆ ಮತ್ತು ಟ್ವಿಟರ್ ಡಿಜಿಟಲ್ ಟೌನ್ ಸ್ಕ್ವೇರ್ ಆಗಿದ್ದು, ಅಲ್ಲಿ ಮಾನವೀಯತೆಯ ಭವಿಷ್ಯಕ್ಕೆ ಪ್ರಮುಖ ವಿಷಯಗಳು ಚರ್ಚೆಯಾಗುತ್ತವೆ" ಎಂದು ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ