• Home
  • »
  • News
  • »
  • business
  • »
  • Twitter: ಟ್ವಿಟರ್​ನಲ್ಲಿ ಬರೀ ಎಲಾನ್​ ಮಸ್ಕ್​ ಹಣ ಮಾತ್ರ ಇಲ್ಲ, ಇವ್ರೆಲ್ಲಾ ಇಲ್ಲಿ ಹೂಡಿಕೆ ಮಾಡಿದ್ದಾರೆ!

Twitter: ಟ್ವಿಟರ್​ನಲ್ಲಿ ಬರೀ ಎಲಾನ್​ ಮಸ್ಕ್​ ಹಣ ಮಾತ್ರ ಇಲ್ಲ, ಇವ್ರೆಲ್ಲಾ ಇಲ್ಲಿ ಹೂಡಿಕೆ ಮಾಡಿದ್ದಾರೆ!

ಎಲಾನ್​ ಮಸ್ಕ್​

ಎಲಾನ್​ ಮಸ್ಕ್​

ಟ್ವಿಟ್ಟರ್ (Twitter) ಸಂಸ್ಥೆಯಲ್ಲಿ ದೊಡ್ಡ ಬದಲಾವಣೆಯಾಗಿದ್ದು, ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್​ ಮಸ್ಕ್‌ (Elon Musk) ಅವರ ಹತೋಟಿಗೆ ಬಂದಿದೆ.

  • Share this:

ಹಲವು ದಿನಗಳಿಂದ ಇದ್ದ ಊಹಾಪೂಹ, ಕಾನೂನು ಸಮರ ಎಲ್ಲವೂ ಅಂತ್ಯ ಕಂಡಿತ್ತು. ಟ್ವಿಟ್ಟರ್ (Twitter) ಸಂಸ್ಥೆಯಲ್ಲಿ ದೊಡ್ಡ ಬದಲಾವಣೆಯಾಗಿದ್ದು, ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್​ ಮಸ್ಕ್‌ (Elon Musk) ಅವರ ಹತೋಟಿಗೆ ಬಂದಿದೆ. ಷೇರುದಾರರ ಸಹಾಯದಿಂದ ಎಲಾನ್​ ಮಸ್ಕ್ ಕಳೆದ ತಿಂಗಳು $44 ಬಿಲಿಯನ್‌ಗೆ ಟ್ವಿಟ್ಟರ್‌ ಅನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ವಾಲ್ ಸ್ಟ್ರೀಟ್ ಬ್ಯಾಂಕ್ (Wall Street Bank) ಸಾಲಗಳು ಮತ್ತು ಹೊಸ ಖಾಸಗಿ ಕಂಪನಿಯ ಪಾಲಿನ ಬದಲಾಗಿ ಸಾಮಾಜಿಕ ಮಾಧ್ಯಮ (Social Media) ಸೇವೆಯಲ್ಲಿ ತಮ್ಮ ಆಸಕ್ತಿ ಇರುವ ಎಲ್ಲಾ ಷೇರುದಾರರು ಟ್ವಿಟ್ಟರ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಹಾಗಾದರೆ ಎಲಾನ್ ಮಸ್ಕ್ ಅವರ ಟ್ವಿಟ್ಟರ್ ಹೂಡಿಕೆದಾರರಲ್ಲಿ ಯಾರೆಲ್ಲಾ ಇದ್ದಾರೆ ಎಂದು ನೋಡೋಣ ಬನ್ನಿ


1)  ರಾಜಕುಮಾರ ಅಲ್ವಲೀದ್ ಬಿನ್ ತಲಾಲ್!


ಕಿಂಗ್ಡಮ್ ಹೋಲ್ಡಿಂಗ್ ಕಂಪನಿಯ ಮೂಲಕ ಪ್ರತಿ ಷೇರಿನ ಮಾರಾಟದ ಬೆಲೆಗೆ $54.20 ರಂತೆ ಸುಮಾರು $1.9 ಶತಕೋಟಿ ಮೌಲ್ಯದ ಸುಮಾರು 35 ಮಿಲಿಯನ್ ಷೇರುಗಳನ್ನು ತೆಗೆದುಕೊಂಡ ನಂತರ ಸೌದಿ ರಾಜಕುಮಾರ ಅಲ್ವಲೀದ್ ಬಿನ್ ತಲಾಲ್ ತನ್ನ ಟ್ವಿಟರ್ ಪಾಲನ್ನು ಉಳಿಸಿಕೊಂಡರು. ಈ ಮೂಲಕ ಟ್ವಿಟ್ಟರ್‌ನ ಎರಡನೇ-ದೊಡ್ಡ ಹೂಡಿಕೆದಾರರಾಗಿದ್ದಾರೆ ಅಲ್ವಲೀದ್ ಬಿನ್ ತಲಾಲ್.


ಅಲ್ವಲೀದ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮಸ್ಕ್ ಅವರ ಯೋಜನೆಯನ್ನು ಬಹುಬೇಗ ಅನುಮೋದಿಸಿದರು. ಮೇ ತಿಂಗಳಲ್ಲಿ ಮಸ್ಕ್ ಅವರನ್ನು ತಲಾಲ್ ಸಾಮಾಜಿಕ ಮಾಧ್ಯಮ ಕಂಪನಿಗೆ "ಅತ್ಯುತ್ತಮ ನಾಯಕ" ಎಂದು ಹೊಗಳಿದ್ದರು.


2) ಜ್ಯಾಕ್ ಡಾರ್ಸೆ


ಟ್ವಿಟ್ಟರ್‌ನ ಸಹ-ಸಂಸ್ಥಾಪಕ ಮತ್ತು ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೇವಲ 18 ಮಿಲಿಯನ್‌ಗಿಂತಲೂ ಹೆಚ್ಚು ಷೇರುಗಳನ್ನು ಅಂದರೆ ಸಾರ್ವಜನಿಕ ಕಂಪನಿಯ ಸುಮಾರು 2.4% ರಷ್ಟು ವಿಲೀನ ಬೆಲೆಯಲ್ಲಿ ಸುಮಾರು $978 ಮಿಲಿಯನ್ ಮೌಲ್ಯವನ್ನು ಪಡೆದಿದ್ದಾರೆ.ಜ್ಯಾಕ್ ಡಾರ್ಸೆಗೆ ಟ್ವಿಟ್ಟರ್‌ ಅನ್ನು ನಿಯಂತ್ರಿಸುವ ಮಸ್ಕ್‌ನ X ಹೋಲ್ಡಿಂಗ್ಸ್ ಐ ಇಂಕ್ ಷೇರುಗಳನ್ನು ನೀಡಿದೆ.


ಏಪ್ರಿಲ್‌ನಲ್ಲಿ ಮಸ್ಕ್ ಮೊದಲು ಟ್ವಿಟ್ಟರ್ ಖರೀದಿಸಲು ಒಪ್ಪಿಕೊಂಡ ನಂತರ ಮಸ್ಕ್‌ ನಿರ್ಧಾರವನ್ನು ಶ್ಲಾಘಿಸಿದ್ದರು. ಕಂಪನಿಯು ವಾಲ್ ಸ್ಟ್ರೀಟ್‌ನಿಂದ ಮಾಲೀಕತ್ವದಲ್ಲಿದೆ ಎಂದು ವಿಷಾದ ವ್ಯಕ್ತಪಡಿಸಿದ ಡಾರ್ಸೆ ಅದನ್ನು ಖಾಸಗಿಯಾಗಿ ತೆಗೆದುಕೊಳ್ಳುವುದು ಸರಿಯಾದ ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದ್ದರು.


3) ಕತಾರ್ ಹೂಡಿಕೆ ಪ್ರಾಧಿಕಾರ


ಕತಾರ್‌ನ ಸಾರ್ವಭೌಮ ಸಂಪತ್ತಿನ ನಿಧಿಯ ಅಂಗಸಂಸ್ಥೆಯು ಮಸ್ಕ್‌ನ ಹಿಡುವಳಿ ಕಂಪನಿಯ ಷೇರುಗಳಿಗೆ ಬದಲಾಗಿ $375 ಮಿಲಿಯನ್ ಕೊಡುಗೆ ನೀಡಿದೆ.


ಟ್ವಿಟ್ಟರ್‌ ಮಸ್ಕ್‌ ತೆಕ್ಕೆಗೆ ಸೇರಿದ್ದು ಹೇಗೆ?


ಎಲೋನ್ ಮಸ್ಕ್ ಈ ವರ್ಷದ ಏಪ್ರಿಲ್ 13 ರಂದು ಟ್ವಿಟ್ಟರ್ ಖರೀದಿಸಿರುವುದಾಗಿ ಘೋಷಿಸಿದ್ದರು. ಪ್ರತಿ ಷೇರಿಗೆ $54.2 ದರದಲ್ಲಿ $44 ಶತಕೋಟಿಗೆ ಸೋಶಿಯಲ್ ಮೀಡಿಯಾ ಪ್ಲಾಟ್​ಫಾರಂನ್ನು ಖರೀದಿಸಲು ಅವರು ಪ್ರಸ್ತಾಪಿಸಿದ್ದರು. ಆದರೆ ಮುಂದೆ ನಡೆದ ಕೆಲ ಸ್ಪ್ಯಾಮ್ ಮತ್ತು ನಕಲಿ ಖಾತೆಗಳ ಘಟನೆಯ ಕಾರಣ, ಅವರು ಆ ಒಪ್ಪಂದವನ್ನು ಸ್ಥಗಿತಗೊಳಿಸಿದ್ದರು.


ಇದನ್ನೂ ಓದಿ: ಭಾರತದಲ್ಲಿರುವ ಎಲಾನ್ ಮಸ್ಕ್ ಬೆಸ್ಟ್ ಫ್ರೆಂಡ್ ಯಾರು? ಇಲ್ಲಿದೆ ವಿವರ


ಇದಾದ ಬಳಿಕ ಜುಲೈ 8 ರಂದು, ಮಸ್ಕ್ ಒಪ್ಪಂದವನ್ನು ಮುರಿಯಲು ನಿರ್ಧರಿಸಿದರು. ಇದರ ವಿರುದ್ಧ ಟ್ವಿಟ್ಟರ್ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಅಕ್ಟೋಬರ್ ಆರಂಭದಲ್ಲಿ, ಮಸ್ಕ್ ತಮ್ಮ ನಿಲುವನ್ನು ಬದಲಿಸಿ ಒಪ್ಪಂದವನ್ನು ಮತ್ತೆ ಪೂರ್ಣಗೊಳಿಸಲು ಒಪ್ಪಿಕೊಂಡರು.


ಟ್ವಿಟರ್​ ತನ್ನ ತೆಕ್ಕೆಗೆ ಬರ್ತಿದ್ದಂತೆ ಮಸ್ಕ್​ ಹಾರಾಟ!


ಇನ್ನೂ ಟ್ವಿಟ್ಟರ್‌ ಅನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ ಅದರ ಸಿಇಒ ಪರಾಗ್ ಅಗರ್ವಾಲ್ , ಸಿಎಫ್‌ಒ ನೆಡ್ ಸೆಗಲ್ ಮತ್ತು ಕಾನೂನು ವ್ಯವಹಾರ-ನೀತಿ ಮುಖ್ಯಸ್ಥ ವಿಜಯ ಗಡ್ಡೆ ಅವರಿಗೆ ಸಂಸ್ಥೆಯಿಂದ ವಜಾಗೊಳಿಸಲಾಯಿತು.


ಇದನ್ನೂ ಓದಿ: ಟ್ವಿಟರ್​ನಲ್ಲಿ ಮುಳುಗಿ, ಟೆಸ್ಲಾ ಮರೆತ್ರಾ ಎಲಾನ್​ ಮಸ್ಕ್​? ಹೂಡಿಕೆದಾರರಿಗೆ ಟೆನ್ಶನ್​!


ಪ್ರಸ್ತುತ ಸಿಇಒ ಹುದ್ದೆ ಖಾಲಿ ಇದ್ದು, ಯಾರು ಮುಂದಿನ ಸಾರಥಿ ಎಂಬ ಪ್ರಶ್ನೆ ಉದ್ಭವವಾಗಿದೆ. ಕೆಲ ಮೂಲಗಳು ಸ್ವಲ್ಪ ದಿನ ಎಲೋನ್‌ ಮಸ್ಕ್‌ ಅವರೇ ಮುನ್ನೆಡೆಸುತ್ತಾರೆ ಎಂದಿವೆ. ಇನ್ನೂ ಕೆಲ ಬಲ್ಲ ಮೂಲಗಳು ಭಾರತೀಯ ಮೂಲದ ಶ್ರೀರಾಮ್ ಕೃಷ್ಣನ್ ಸೇರಿ ಕೆಲವರ ಹೆಸರನ್ನು ಸೂಚಿಸಿವೆ.

Published by:ವಾಸುದೇವ್ ಎಂ
First published: