ಬಿಲಿಯನೇರ್ ಎಲಾನ್ ಮಸ್ಕ್ (Elon Musk) ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಮಸ್ಕ್ ಅವರು ವಿಶ್ವದ ಕೆಲವು ದುಬಾರಿ ವಸ್ತುಗಳು (Costly Items) ಮತ್ತು ಕಂಪನಿಗಳನ್ನು ಖರೀದಿಸುವ ಮೂಲಕ ಹೆಚ್ಚು ಸುದ್ದಿಯಲ್ಲಿರುತ್ತಾರೆ ಅಂತ ಹೇಳಬಹುದು. ಇತ್ತೀಚೆಗೆ, ಅವರು ಟ್ವಿಟರ್ (Twitter) ಅನ್ನು 44 ಬಿಲಿಯನ್ ಡಾಲರ್ ಎಂದರೆ ಅಂದಾಜು 3,61,801 ಕೋಟಿ ರೂಪಾಯಿಗೆ ಸ್ವಾಧೀನಪಡಿಸಿಕೊಂಡರು ಮತ್ತು ನೂರಾರು ಕೋಟಿ ಮೌಲ್ಯದ ಉಬರ್ (Uber) -ಐಷಾರಾಮಿ ಖಾಸಗಿ ಜೆಟ್ (Private Jet) ಅನ್ನು ಸಹ ಖರೀದಿಸಿದರು. ಹೌದು.. ಈಗ ಅವರು ಸುದ್ದಿಯಲ್ಲಿರುವುದು ಈ ದುಬಾರಿ ಮತ್ತು ಐಷಾರಾಮಿ ಜೆಟ್ ಖರೀದಿಸಿದ್ದಕ್ಕೆ ಅಂತ ಹೇಳಲಾಗುತ್ತಿದೆ.
ಬ್ಲೂಮ್‍ಬರ್ಗ್ ಪ್ರಕಾರ, ಇತಿಹಾಸದಲ್ಲಿ ತಂತ್ರಜ್ಞಾನ ಕಂಪನಿಯ ಅತಿದೊಡ್ಡ ಖರೀದಿಯಾದ ಟ್ವಿಟರ್ ಅನ್ನು ಎಲೋನ್ ಮಸ್ಕ್ ಸ್ವಾಧೀನಪಡಿಸಿಕೊಂಡಿರುವುದು ಅವರ ನಿವ್ವಳ ಮೌಲ್ಯದಲ್ಲಿ 9 ಬಿಲಿಯನ್ ಡಾಲರ್ ಎಂದರೆ ಸುಮಾರು 7,36,73 ಕೋಟಿ ರೂಪಾಯಿ ಕುಸಿತಕ್ಕೆ ಕಾರಣವಾಗಿದೆ.
ಹೇಗಿದೆ ಎಲೋನ್ ಮಸ್ಕ್ ಅವರ ಖಾಸಗಿ ಜೆಟ್?
ಪ್ರಸ್ತುತ, ಅವರು 190 ಬಿಲಿಯನ್ ಡಾಲರ್ ಎಂದರೆ ಅಂದಾಜು 1,56,02,93 ಕೋಟಿ ರೂಪಾಯಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಎಲೋನ್ ಮಸ್ಕ್ ಅವರ ಖಾಸಗಿ ಜೆಟ್ 'ಗಲ್ಫ್ ಸ್ಟ್ರೀಮ್ ಜಿ 700' ಕಂಪನಿಯ ಪ್ರಮುಖ ವಿಮಾನಗಳಲ್ಲಿ ಒಂದಾಗಿದೆ. ಇದು ಅವರ ಮೊದಲ ಖಾಸಗಿ ಜೆಟ್ ಅಲ್ಲ, ಹೊಸ ಟ್ವಿಟರ್ ಸಿಇಒ ನಾಲ್ಕು ಖಾಸಗಿ ಗಲ್ಫ್ ಸ್ಟ್ರೀಮ್ ಜೆಟ್ ಗಳನ್ನು ಹೊಂದಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ವರದಿಯ ಪ್ರಕಾರ, ಎಲ್ಲಾ ಖಾಸಗಿ ವಿಮಾನಗಳನ್ನು ಸ್ಪೇಸ್ಎಕ್ಸ್ ಮತ್ತು ಟೆಸ್ಲಾಗೆ ಸಂಪರ್ಕ ಹೊಂದಿರುವ ಎಲ್ಎಲ್‌ಸಿ ಫಾಲ್ಕನ್ ಲ್ಯಾಂಡಿಂಗ್ ಗೆ ನೋಂದಾಯಿಸಲಾಗಿದೆ.
ಈ ಖಾಸಗಿ ಜೆಟ್ ನಲ್ಲಿದೆ ಐಷಾರಾಮಿ ವ್ಯವಸ್ಥೆ!
ಐಷಾರಾಮಿ ಒಳಾಂಗಣವನ್ನು ಹೊಂದಿರುವ ಜಿ 700 ಜೆಟ್ ಐದು ಲೀವಿಂಗ್ ರೂಂಗಳು, ಎರಡು ವಿಶ್ರಾಂತಿ ಕೊಠಡಿಗಳು ಮತ್ತು 20 ಅಂಡಾಕಾರದ ಕಿಟಕಿಗಳನ್ನು ಹೊಂದಿದೆ. ಜಿ 700 ಎರಡು ರೋಲ್ಸ್ ರಾಯ್ಸ್ ಎಂಜಿನ್ ಗಳನ್ನು ಹೊಂದಿದೆ ಮತ್ತು 7,500 ನಾಟಿಕಲ್ ಮೈಲುಗಳ ವ್ಯಾಪ್ತಿಯನ್ನು ಹೊಂದಿದೆ. ಇದು ಸುರಕ್ಷಿತ ಲ್ಯಾಂಡಿಂಗ್ ಗಾಗಿ ಡ್ಯುಯಲ್ ಹೆಡ್-ಅಪ್ ಡಿಸ್ ಪ್ಲೇ ಗಳನ್ನು ಮತ್ತು ವೈ-ಫೈ ವ್ಯವಸ್ಥೆಯನ್ನು ಸಹ ಹೊಂದಿದೆ.
ಇದನ್ನೂ ಓದಿ: ಯಾರು ಈ ಮಾನ್ಸಿ ಟಾಟಾ? ಫಾರ್ಚುನರ್-ಇನೋವಾ ಕಂಪನಿ ಉಸ್ತುವಾರಿ ಆಗಿದ್ದೇಗೆ?
19 ಜನರಿಗೆ ಬೇಕಾಗುವಷ್ಟು ವಸತಿ ಸೌಕರ್ಯದೊಂದಿಗೆ, ಖಾಸಗಿ ಜೆಟ್ 51,000 ಅಡಿ ಎತ್ತರದಲ್ಲಿ ಹಾರಬಲ್ಲದು. ಮಿಂಟ್ ಪ್ರಕಾರ, ಗಲ್ಫ್ ಸ್ಟ್ರೀಮ್ ಜಿ 700 ಜೆಟ್ 78 ಮಿಲಿಯನ್ ಡಾಲರ್ ಎಂದರೆ ಅಂದಾಜು 640 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. 2018 ರಲ್ಲಿ, ಎಲೋನ್ ಮಸ್ಕ್ ತಮ್ಮ ಜಿ 650ಇಆರ್ ನಲ್ಲಿ 150,000 ಮೈಲಿಗಳಿಗಿಂತ ಹೆಚ್ಚು ಹಾರಾಟ ನಡೆಸಿದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಈ ಜೆಟ್ ಬೆಲೆ 509 ಕೋಟಿ!
ಬಿಲಿಯನೇರ್ ಟ್ವಿಟ್ಟರ್ ನ ಮಾಲೀಕರಾಗಿ ತಮ್ಮ ಮೊದಲ ವಾರದಲ್ಲಿ ಜಿ 650ಇಆರ್ ನಲ್ಲಿ ಕುಳಿತು 8,304 ಮೈಲಿ ಪ್ರಯಾಣಿಸಿದರು. ಸುದ್ದಿ ಮಾಧ್ಯಮದ ವರದಿಯ ಪ್ರಕಾರ, ಗಲ್ಫ್ ಸ್ಟ್ರೀಮ್ ಜಿ 650ಇಆರ್ ಅಂದಾಜು 66.5 ಮಿಲಿಯನ್ ಡಾಲರ್ ಎಂದರೆ 509 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.
ಅನೇಕ ಕಂಪನಿಗಳ ಒಡೆಯ ಈ ಎಲೋನ್ ಮಸ್ಕ್
ಎಲೋನ್ ಮಸ್ಕ್ ಅವರು ಸ್ಪೇಸ್ಎಕ್ಸ್ ನ ಸ್ಥಾಪಕ, ಸಿಇಒ ಮತ್ತು ಮುಖ್ಯ ಎಂಜಿನಿಯರ್ ಮತ್ತು ಟೆಸ್ಲಾ ಸಿಇಒ ಆಗಿದ್ದಾರೆ. ಅವರು ಟ್ವಿಟ್ಟರ್ ಅನ್ನು ಸಹ ಹೊಂದಿದ್ದಾರೆ ಮತ್ತು ದಿ ಬೋರಿಂಗ್ ಕಂಪನಿಯ ಸ್ಥಾಪಕರು ಮತ್ತು ನ್ಯೂರಾಲಿಂಕ್, ಓಪನ್ಎಐ ಮತ್ತು ಜಿಪ್ 2 ನ ಸಹ-ಸಂಸ್ಥಾಪಕರಾಗಿದ್ದಾರೆ.
ಪ್ರಸ್ತುತ ಸ್ಪೇಸ್ಎಕ್ಸ್ ನ ಮೌಲ್ಯ 74 ಬಿಲಿಯನ್ ಡಾಲರ್, ಬೋರಿಂಗ್ ಕಂಪನಿಯ ಮೌಲ್ಯ 5.7 ಬಿಲಿಯನ್ ಡಾಲರ್ ಮತ್ತು ಟೆಸ್ಲಾ ಮಾರುಕಟ್ಟೆ ಕ್ಯಾಪ್ ಪ್ರಸ್ತುತ 670 ಬಿಲಿಯನ್ ಡಾಲರ್ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ