Elon Musk: 14 ವರ್ಷದ ಎಲಾನ್ ಮಸ್ಕ್ ತಮ್ಮ ತಾಯಿಗೆ ನೀಡಿದ ಸಲಹೆ ಬ್ರೋಕರ್​ಗಳನ್ನೇ ಬೆಚ್ಚಿ ಬೀಳಿಸಿತ್ತು!

ಇಲ್ನೋಡಿ ಅವರ ತಾಯಿಯೇ ಎಲಾನ್ ಮಸ್ಕ್ ಬಾಲ್ಯದಲ್ಲಿ ಷೇರು ಪೇಟೆಯಲ್ಲಿ ಹಣ ಹೂಡಿಕೆಯ ಬಗ್ಗೆ ಏನಂದಿದ್ದರು ಅಂತ ಹೇಳಿದ್ದಾರೆ.

ಮಾಯೆ ಮಸ್ಕ್ ಮತ್ತು ಎಲಾನ್ ಮಸ್ಕ್

ಮಾಯೆ ಮಸ್ಕ್ ಮತ್ತು ಎಲಾನ್ ಮಸ್ಕ್

  • Share this:
ಎಲಾನ್ ಮಸ್ಕ್ ಇಂದು ವಿಶ್ವ ಪ್ರಸಿದ್ಧಿ ಪಡೆದ ಉದ್ಯಮಿ. ಹಣ ಗಳಿಸೋದು ಹೇಗೆ? ಕೈಯಲ್ಲಿರುವ ಹಣವನ್ನು ಹೂಡಿಕೆ ಮಾಡಿ ಇನ್ನಷ್ಟು ಗಳಿಸೋದು ಹೇಗೆ? ಇತ್ಯಾದಿ ಪ್ರಶ್ನೆಗಳಿಗೆ ಎಲಾನ್ ಮಸ್ಕ್  (Elon Musk) ಉತ್ತರಕ್ಕಾಗಿ ಜಗತ್ತೇ ಕಾದು ಕೂರುತ್ತದೆ. ಎಲಾನ್ ಮಸ್ಕ್ ಎಲ್ಲಿ ಹಣ ಹೂಡಿಕೆ (Investment) ಮಾಡುತ್ತಾರೆ? ಎಲಾನ್ ಮಸ್ಕ್ ಯಾವ ಕಂಪನಿ ಖರೀದಿ ಮಾಡುತ್ತಾರೆ? ಕುತೂಹಲದಿಂದ ಕಾಯುತ್ತಿರುತ್ತದೆ ಷೇರು ಪೇಟೆ. ಇಂಥಾ ಎಲಾನ್ ಮಸ್ಕ್ ಬಾಲ್ಯದಲ್ಲಿ ಹೇಗಿದ್ದರು? ಚಿಕ್ಕವರಿರುವಾಗಿನಿಂದಲೇ ಅವರಿಗೆ ಷೇರು ಪೇಟೆಯ ಕುರಿತು ಆಸಕ್ತಿ ಇತ್ತೇ? ಇಲ್ನೋಡಿ ಅವರ ತಾಯಿಯೇ (Maye Musk) ಎಲಾನ್ ಮಸ್ಕ್ ಬಾಲ್ಯದಲ್ಲಿ ಷೇರು ಪೇಟೆಯಲ್ಲಿ (Elon Musk about Share Market) ಹಣ ಹೂಡಿಕೆಯ ಬಗ್ಗೆ ಏನಂದಿದ್ದರು ಅಂತ ಹೇಳಿದ್ದಾರೆ.

ಎಲಾನ್ ಮಸ್ಕ್ ಅವರ ತಾಯಿ ಮಾಯೆ ಮಸ್ಕ್ ಅವರು ಇತ್ತೀಚಿಗೆ ತಮ್ಮ ಮಗನ ಸಲಹೆಗಳನ್ನು ಮರುಟ್ವೀಟ್ ಮಾಡಿದ್ದಾರೆ.  14 ವರ್ಷ ಇದ್ದಾಗ ಎಲಾನ್ ಮಸ್ಕ್ ಹಣಕಾಸಿನ ಸಲಹೆ ನೀಡಿದ ಕಥೆಯನ್ನುಅವರು ಹಂಚಿಕೊಂಡಿದ್ದಾರೆ.

ಎಲಾನ್ ಮಸ್ಕ್ ಹೇಳಿದ್ದಕ್ಕೆ ಬ್ರೋಕರ್ ಒಪ್ಪಿರಲಿಲ್ಲ!
"ದಕ್ಷಿಣ ಆಫ್ರಿಕಾದಲ್ಲಿ ನೀವು 14 ವರ್ಷದವರಾಗಿದ್ದಾಗ ನಿಜವಾಗಿಯೂ ನಂಬಿರುವ ಕಂಪನಿಯ ಷೇರುಗಳನ್ನು ಖರೀದಿಸಲು ನನಗೆ ಹೇಳಿದ್ದೆ. ನನ್ನ ಸ್ಟಾಕ್ ಬ್ರೋಕರ್ ಸ್ನೇಹಿತ ಇದು ಕೆಟ್ಟ ಕಲ್ಪನೆ ಎಂದು ಹೇಳಿದರು. ಹಾಗಾಗಿ ನಾನು ಅಂದಿನ ಸಮಯದಲ್ಲಿ ಸುಮಾರು 1000 ಡಾಲರ್ ಮೌಲ್ಯದ ಷೇರುಗಳನ್ನು ಮಾತ್ರ ಖರೀದಿಸಿದೆ. ಎಲಾನ್ ಮಸ್ಕ್ ಹೇಳಿದ ಕಂಪನಿಯ ಷೇರುಗಳನ್ನು ಇನ್ನೂ ಹೆಚ್ಚು ಖರ್ಚು ಮಾಡಿ ಖರೀದಿ ಮಾಡಲು ನಾನು ಸಿದ್ಧನಿರಲಿಲ್ಲ.  ಏಕೆಂದರೆ ಅದಕ್ಕಿಂತ ಹೆಚ್ಚು ಹಣವನ್ನು ಕಳೆದುಕೊಳ್ಳಲು ಆಗ ನಾನಂತೂ ಸಿದ್ಧನಿರಲಿಲ್ಲ’ ಎಂದು ಅವರು ನೆನೆಸಿಕೊಂಡಿದ್ದಾರೆ.

ಒಂದೇ ಸಲಕ್ಕೆ ಏರಿಕೆಯಾಗಿತ್ತು
ಆದರೆ ಎಲಾನ್ ಮಸ್ಕ್ ಸೂಚಿಸಿದ ಕಂಪನಿಯ ಷೇರುಗಳು ತ್ವರಿತವಾಗಿ 3000 ರೂಪಾಯಿಗೆ ಏರಿತು. ನನ್ನ ಸ್ಟಾಕ್ ಬ್ರೋಕರ್ ಸ್ನೇಹಿತ ಗಾಬರಿಯಾಗಿ ನಾನು ಆಕ್ಷಣವೇ ಎಲ್ಲ ಷೇರುಗಳನ್ನು ಮಾರಾಟ ಮಾಡಬೇಕೆಂದು ಹೇಳಿದರು. ಹಾಗಾಗಿ ನಾನು ಕೂಡ ಗಾಬರಿಯಾಗಿ ಮಾರಾಟ ಮಾಡಿದೆ ಎಂದು ಅವರು ವಿವರಿಸಿದ್ದಾರೆ.





ಇದನ್ನೂ ಓದಿ: Top Salary Courses: ಪಿಯು ಆದ್ಮೇಲೆ ಮುಂದೇನು? ಭರ್ಜರಿ ಸಂಬಳ ಬರೋ ಕೋರ್ಸ್​ ಇಲ್ಲಿದೆ!

ಆದರೆ ಷೇರುಗಳನ್ನು ಮಾರಾಟ ಮಾಡಿದ್ದು ಎಲಾನ್ ಮಸ್ಕ್​ಗೆ ಖುಷಿ ತರಲಿಲ್ಲ. ಏಕೆಂದರೆ ಆ ಷೇರುಗಳು ಇನ್ನಷ್ಟು ಎತ್ತರಕ್ಕೆ ಹೋಗುತ್ತಲೇ ಇದ್ದವು ಎಂದು ಮಾಯೆ ಮಸ್ಕ್ ಹಳೆಯ ನೆನೆಪುಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Military Spender: ವಿಶ್ವದಲ್ಲೇ ಅತಿ ಹೆಚ್ಚು ಸೇನಾ ವೆಚ್ಚ ಮಾಡುವ 3ನೇ ದೇಶ ಭಾರತ: ಮಿಲಿಟರಿ ಖರ್ಚು ಎಷ್ಟು ಗೊತ್ತಾ?

ಅಷ್ಟೇ ಅಲ್ಲದೇ ಮಾಯೆ ಮಸ್ಕ್ ಮುಂದುವರೆದು, ತಮ್ಮ ಮಕ್ಕಳಾದ ಎಲಾನ್, ಕಿಂಬಾಲ್ ಮತ್ತು ಟೋಸ್ಕಾ ಮಸ್ಕ್ ಬಳಿ ಆಗ ನಾನು ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಮಾಯೆ ಮಸ್ಕ್ 74 ವರ್ಷ ವಯಸ್ಸಿನವರು. ಮಾಡೆಲ್ ಮತ್ತು ಡಯೆಟಿಷಿಯನ್ ಆಗಿ ಅವರು ತಮ್ಮ ವೃತ್ತಿಜೀವನ ನಡೆಸಿದ್ದಾರೆ.

ಯಾವ ಷೇರುಗಳನ್ನು ಖರೀದಿ ಮಾಡಬೇಕು?
"ನನಗೆ ಬಹಳಷ್ಟು ಜನರು ಕೇಳಿದ್ದರಿಂದ ಹೇಳುತ್ತಿದ್ದೇನೆ. ನೀವು ನಂಬುವ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವ ಕಂಪನಿಗಳ ಷೇರು ಖರೀದಿ ಮಾಡಿ. ಆದರೆ ಮಾರುಕಟ್ಟೆಯಲ್ಲಿ ಕೊಂಚ ಏರುಪೇರು ಆದರೆ ಹೆದರಿಕೊಳ್ಳಬೇಡಿ. ಅಥವಾ ಷೇರುಗಳನ್ನು ಮಾರಬೇಡಿ. ಆ ಕಂಪನಿಗಳ ಉತ್ಪನ್ನಗಳು ಮತ್ತು ಸೇವೆಗಳು ಕೆಟ್ಟದಾಗಿವೆ ಎಂದು ನೀವು ಭಾವಿಸಿದರೆ ಮಾತ್ರ ಮಾರಾಟ ಮಾಡಿ. ಇದು ನಿಮಗೆ ದೀರ್ಘಾವಧಿಯ ಲಾಭ ತಂದುಕೊಡುತ್ತದೆ” ಎಂದು 50 ವರ್ಷದ ವಿಶ್ವದ ದೈತ್ಯ ಉದ್ಯಮಿ ಸಲಹೆ ನೀಡಿದ್ದಾರೆ.
Published by:guruganesh bhat
First published: