ಎಲಾನ್ ಮಸ್ಕ್ (Elon Musk) ಟ್ವಿಟರ್ (Twitter) ಅನ್ನು ವಶಪಡಿಸಿಕೊಂಡ ನಂತರ ಸಂಸ್ಥೆಯ 7,500 ಉದ್ಯೋಗಿಗಳಲ್ಲಿ ಅರ್ಧಕ್ಕಿಂತ ಜನರನ್ನು ಉದ್ಯೋಗಿ (Employee) ವಜಾಗೊಳಿಸುವಿಕೆಯ ಹೆಸರಿನಲ್ಲಿ ಕೈಬಿಟ್ಟಿತ್ತು ಇದೀಗ ವಜಾಗೊಳಿಸುವಿಕೆಯ ಪರಿಣಾಮಕ್ಕೊಳಗಾದ ಹೆಚ್ಚಿನ ಉದ್ಯೋಗಿಗಳು ಸ್ಪೇಸ್ ಎಕ್ಸ್ (Space X) ಹಾಗೂ ಟೆಸ್ಲಾ (Tesla) ಮುಖ್ಯಸ್ಥನ ಮೇಲೆ ದೂರು ನೀಡಿದ್ದು ತಮಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸುವಂತೆ ವಿನಂತಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ಕೂಡಲೇ ಉದ್ಯೋಗಿಗಳನ್ನು ವಜಾಗೊಳಿಸುವುದಕ್ಕೆ ಮುಂದಾದ ಎಲಾನ್ ಮಸ್ಕ್, ಇದೀಗ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದು ಸಿಬ್ಬಂದಿಗಳು ಮಲಗಲು ಅನುಕೂಲಕರವಾಗಿರುವಂತೆ ಸ್ಯಾನ್ ಫ್ರಾನ್ಸಿಸ್ಕೊದ ಕಚೇರಿ ಸ್ಥಳವನ್ನು ಕಾನೂನು ಬಾಹಿರವಾಗಿ ಬೆಡ್ ರೂಮ್ ಆಗಿ ಎಲಾನ್ ಪರಿವರ್ತಿಸಿದ್ದು ಈ ಕುರಿತು ಇವರ ಮೇಲೆ ಕೇಸು ದಾಖಲಿಸಲಾಗಿದೆ.
ಎಲಾನ್ ಮಸ್ಕ್ ಮೇಲೆ ಕೇಸುಗಳ ಸುರಿಮಳೆ!
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಎಲಾನ್ ಉದ್ಯೋಗಿ ಹಕ್ಕುಗಳೆಲ್ಲವನ್ನೂ ತನ್ನಿಷ್ಟಕ್ಕೆ ಬಂದಂತೆ ಬಳಸಬಹುದೆಂದು ಭಾವಿಸಿದ್ದು ತಾನು ಕಾನೂನನ್ನು ಅನುಸರಿಸಬೇಕಾಗಿಲ್ಲ ಎಂಬ ಧೋರಣೆಯನ್ನು ತಾಳಿದ್ದಾರೆ. ಹಾಗಾಗಿ ಎಲೋನ್ರನ್ನು ಹೊಣೆಗಾರರನ್ನಾಗಿ ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ವಕೀಲ ಶಾನನ್ ಲಿಸ್-ರಿಯೊರ್ಡಾನ್ ತಿಳಿಸಿದ್ದಾರೆ.
ವಜಾಗೊಂಡ ಉದ್ಯೋಗಿಗಳಿಗೆ ಪರಿಹಾರ ಧನ ಇನ್ನೂ ದೊರೆತಿಲ್ಲ
ಪ್ರಸ್ತುತ ಲಿಸ್ ರಿಯೊರ್ಡಾನ್ ಟ್ವಿಟರ್ ವಿರುದ್ಧ ದಾಖಲಾಗಿರುವ ಪ್ರಕರಣವೊಂದನ್ನು ಮುನ್ನಡೆಸುತ್ತಿದ್ದು ಸಂಸ್ಥೆಯಿಂದ ವಜಾಗೊಂಡಿರುವ ಉದ್ಯೋಗಿಗಳಿಗೆ ಇನ್ನೂ ಪರಿಹಾರ ವೇತನ ದೊರೆತಿಲ್ಲ ಹಾಗೂ ಮಸ್ಕ್ ಇವರ ಉದ್ಯೋಗವನ್ನು ಕಸಿದುಕೊಳ್ಳುವ ಮೂಲಕ ಉದ್ಯೋಗಿಗಳಿಗೆ ಅನ್ಯಾಯವೆಸಗಿದ್ದಾರೆ ಎಂದು ರಿಯೊರ್ಡಾನ್ ವಾದಿಸಿದ್ದಾರೆ.
ಬೋನಸ್ಗಳು ಹಾಗೂ ಸ್ಟಾಕ್ ಆಯ್ಕೆಗಳನ್ನೊಳಗೊಂಡಿದ್ದ ಈ ಭರವಸೆಗಳನ್ನು ಉದ್ಯೋಗಿಗಳನ್ನು ಟ್ವಿಟರ್ನಲ್ಲಿ ಇರಿಸಿಕೊಳ್ಳುವ ನಿಟ್ಟಿನಲ್ಲಿ ಮಾಡಲಾಗಿದ್ದು, ಮಸ್ಕ್ ಆಗಮಿಸುತ್ತಿದ್ದಂತೆ ಉದ್ಯೋಗಿಗಳನ್ನು ಸಂಸ್ಥೆಯಿಂದ ಹೊರಹಾಕುವ ನಿರ್ಗಮನ ಪ್ಯಾಕೇಜ್ನಂತೆ ಮಾರ್ಪಡಿಸಲಾಯಿತು ಎಂಬುದನ್ನು ಖಾತ್ರಿಪಡಿಸಿದೆ ಎಂದು ವಕೀಲರು ವಾದಿಸಿದ್ದಾರೆ.
ಉದ್ಯೋಗಿಗಳೊಂದಿಗೆ ಕಠಿಣವಾಗಿ ವ್ಯವಹರಿಸುತ್ತಿರುವ ಮಸ್ಕ್
ಮಸ್ಕ್ ಅವರ ಕಠುವಾದ ನಿರ್ಧಾರಗಳು ಹಾಗೂ ಹಠಾತ್ ನಿಶ್ಚಯಗಳ ಧೋರಣೆಗಳನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡಿರುವ ಇತರ ಪ್ರಕರಣಗಳು, ಮಸ್ಕ್ ತಮ್ಮ ಬೇಡಿಕೆಗೆ ಅನುಸಾರವಾಗಿ ಉದ್ಯೋಗಿಗಳನ್ನು ಹೆಚ್ಚಿನ ಸಮಯ ದುಡಿಸಿಕೊಳ್ಳುತ್ತಿದ್ದು, ಇವರ ಕೆಲಸದ ನೀತಿಗೆ ಅಂಗೀಕರಿಸದವರು ಮೂರು ತಿಂಗಳ ಸಂಬಳವನ್ನು ತೆಗೆದುಕೊಂಡು ಕಂಪನಿಯನ್ನು ತ್ಯಜಿಸಬಹುದೆಂಬ ಆಯ್ಕೆಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಡೆಲಿವರಿ ಮಾಡುವ ವ್ಯಕ್ತಿ ಹೆಚ್ಚುವರಿ ಹಣ ಕೇಳ್ತಿದ್ದಾರಾ? ಇಲ್ಲಿ ದೂರು ನೀಡಿ
ಕಾನೂನಿನ ಅನ್ವಯ ಕಾರ್ಮಿಕರಿಗೆ ಅಗತ್ಯವಿರುವ ಪರಿಹಾರ ಧನ ಹಾಗೂ 60 ದಿನಗಳ ಎಚ್ಚರಿಕೆ ಸಮಯವನ್ನು ಪಾಲಿಸದೆಯೇ ಕ್ಯಾಲಿಫೋರ್ನಿಯಾ ಕಾನೂನಿನ ಪಾಲನ್ನು ನಿರ್ಲಕ್ಷಿಸಿ ಮಸ್ಕ್ ಅವರು ಉದ್ಯೋಗಿ ವಜಾಗೊಳಿಸುವಿಕೆ ಪ್ರಕ್ರಿಯೆಯನ್ನು ಜಾರಿಗೆ ತಂದಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.
ಉದ್ಯೋಗಿಗಳ ಮೇಲೆ ನಿರ್ಲಕ್ಷ್ಯ ಭಾವ
ವಿಕಲಾಂಗ ಉದ್ಯೋಗಿಗಳು ಹಾಗೂ ಅನಾರೋಗ್ಯವಿರುವ ಉದ್ಯೋಗಿಗಳು ಕಚೇರಿಗೆ ಮರಳಬೇಕೆಂಬ ಮಸ್ಕ್ ಆದೇಶವು ಬಿಲಿಯಾಧಿಪತಿಯ ತಾರತಮ್ಯ ಧೋರಣೆಯಾಗಿದೆ ಎಂದು ತಿಳಿಸಿರುವ ವಕೀಲರು ಮನೆಯಿಂದ ಕೆಲಸ ಮಾಡುವ ಉದ್ಯೋಗ ನೀತಿಯನ್ನು ಎಲೋನ್ ತಿರಸ್ಕರಿಸಿದ್ದಾರೆ ಎಂದು ವಾದಿಸಿದೆ.
ಉದ್ಯೋಗಿಗಳ ವೈಯಕ್ತಿಕ ವೈದ್ಯಕೀಯ ಸಮಸ್ಯೆಗಳನ್ನು ಸಂಸ್ಥೆಯ ಮುಖ್ಯಸ್ಥ ನಿರ್ಲಕ್ಷಿಸಿದ್ದಾರೆ ಹಾಗೂ ಮಸ್ಕ್ ಸಾರ್ವಜನಿಕವಾಗಿ ಮಾಜಿ ಉದ್ಯೋಗಿಗಳನ್ನು ನಿಂದಿಸಿದ್ದಾರೆ ಎಂದು ಸಂಸ್ಥೆಯ ಹಿರಿಯ ಉದ್ಯೋಗಿ ಅಮೀರ್ ಶೇವತ್ ತಿಳಿಸಿದ್ದಾರೆ.
ಟ್ವಿಟರ್ ಹಾಗೂ ಮಸ್ಕ್ ಮೇಲೆ ಪರಿಣಾಮ ಬೀರಲಿರುವ ಪ್ರಕರಣಗಳು
ಲಾಸ್ ಏಂಜಲೀಸ್ನ ಉನ್ನತ ವಕೀಲರಾದ ಲೀಸಾ ಬ್ಲೂಮ್ ಶೇವತ್ ಹಾಗೂ ಟ್ವಿಟರ್ನ ಇತರ ಉದ್ಯೋಗಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದಿಸುತ್ತಿದ್ದಾರೆ. ಟ್ವಿಟರ್ ಉದ್ಯೋಗಿಗಳು ಕಂಪನಿಗೆ ಸೇರಿದಾಗ ನ್ಯಾಯಾಲಯದಲ್ಲಿ ತಮ್ಮ ದುರವಸ್ಥೆಯ ವಿರುದ್ಧ ಹೋರಾಡುವ ಹಕ್ಕಿಗೆ ಸಹಿ ಹಾಕಿದ್ದಾರೆ. ಈ ಹಕ್ಕುಗಳನ್ನು ಒಂದೊಂದಾಗಿ ನ್ಯಾಯಾಲಯದಲ್ಲಿ ಸಲ್ಲಿಸುವುದಾಗಿ ತಿಳಿಸಿರುವ ಬ್ಲೂಮ್, ಇದಿಷ್ಟು ಸಾಕ್ಷ್ಯಗಳೊಂದಿಗೆ ಟ್ವಿಟರ್ನ ಬುಡವನ್ನೇ ಅಲ್ಲಾಡಿಸಲಿದ್ದೇವೆ ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕ್ರಿಸ್ಮಸ್ಗೆ ಬೆಸ್ಟ್ ಬ್ಯುಸಿನೆಸ್ ಇದು, 1 ಲಕ್ಷ ಇದ್ರೆ ಸಾಕು ಡಬಲ್ ಪ್ರಾಫಿಟ್ ಮಾಡ್ಬಹುದು!
ನೌಕರರಿಗೆ ತಮ್ಮ ಪಾಲಿನ ಹಕ್ಕು ದೊರೆಯುವವರೆಗೆ ಇದಕ್ಕೂ ಹೆಚ್ಚಿನ ಮಧ್ಯಸ್ಥಿಕೆ ಹಕ್ಕುಗಳನ್ನು ತರಲು ನಾವು ಸಿದ್ಧ ಎಂದು ತಿಳಿಸಿರುವ ಬ್ಲೂಮ್, ಟ್ವಿಟರ್ ಹಾಗೂ ಎಲೋನ್ ಮಸ್ಕ್ಗೆ ಇದು ತೀವ್ರ ಪರಿಣಾಮವನ್ನುಂಟು ಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ