• Home
  • »
  • News
  • »
  • business
  • »
  • Elon Musk: ಟೆಸ್ಲಾ ಷೇರು ಖರೀದಿಸೋರಿಲ್ಲ, ಎಲಾನ್​ ಮಸ್ಕ್​ಗೂ ಶುರುವಾಯ್ತು ಡವ ಡವ!

Elon Musk: ಟೆಸ್ಲಾ ಷೇರು ಖರೀದಿಸೋರಿಲ್ಲ, ಎಲಾನ್​ ಮಸ್ಕ್​ಗೂ ಶುರುವಾಯ್ತು ಡವ ಡವ!

ಎಲಾನ್ ಮಸ್ಕ್

ಎಲಾನ್ ಮಸ್ಕ್

ಬರ್ನಾಲ್ಡ್ ಅವರ ನಿವ್ವಳ ಆಸ್ತಿ ಮೌಲ್ಯ 185.3 ಬಿಲಿಯನ್ ಡಾಲರ್ ಆಗಿದೆ. ಮತ್ತೆ ಚೇತರಿಸಿಕೊಂಡ ಮಸ್ಕ್ ಅವರ ವೈಯಕ್ತಿಕ ಆಸ್ತಿ ಮೌಲ್ಯವು 185.7 ಬಿಲಿಯನ್ ಡಾಲರ್ ಆಗಿದೆ.

  • Share this:

ಸದ್ಯ ಬಂದಿರುವ ಮಾಧ್ಯಮ ವರದಿಯೊಂದರ ಪ್ರಕಾರ, ಜಗತ್ತಿನ ಮೊದಲ ಕ್ರಮಾಂಕದಲ್ಲಿದ್ದ ಅತಿ ಶ್ರೀಮಂತ ವ್ಯಕ್ತಿ (World Richest Person) ಎಂಬ ಹೆಗ್ಗಳಿಕೆಯ ಎಲಾನ್​ ಮಸ್ಕ್ (Elon Musk) ಅವರು ತಾತ್ಕಾಲಿಕವಾಗಿ ಆ ಪಟ್ಟದಿಂದ ಎರಡನೇ ಸ್ಥಾನಕ್ಕೆ ಕುಸಿದು ಮತ್ತೆ ಚೇತರಿಸಿಕೊಂಡಿದ್ದಾರೆ. ಜಗತ್ತಿನ ಅತಿರಥ ಮಹಾರಥ ಸಿರಿವಂತರ ಟ್ರ್ಯಾಕ್ ಅನ್ನು ಮಾನಿಟರ್ ಮಾಡುವ ಫೋರ್ಬ್ಸ್ ಮಾಧ್ಯಮ (Probes Media) ವರದಿ ಮಾಡಿರುವ ಪ್ರಕಾರ, ಟೆಸ್ಲಾ (Tesla) ಹಾಗೂ ಇತ್ತೀಚಿಗಷ್ಟೇ ಟ್ವಿಟರ್ ಒಡೆತನ ಪಡೆದಿರುವ ಎಲಾನ್​ ಮಸ್ಕ್ ತಮ್ಮ ಅತಿ ಶ್ರೀಮಂತ ಸ್ಥಾನವನ್ನು ಅಲ್ಪ ಕಾಲ ಕಳದುಕೊಂಡಿದ್ದು ಇದಕ್ಕೆ ಪ್ರಮುಖ ಕಾರಣ ಕುಸಿಯುತ್ತಿರುವ ಟೆಸ್ಲಾದ ಷೇರು ಬೆಲೆಗಳು ಹಾಗೂ ಟ್ವಿಟರ್ ಗಾಗಿ ವೆಚ್ಚ ಮಾಡಿರುವ ಖರ್ಚು ಎಂದು ಹೇಳಿದೆ.


ಎಲಾನ್​ ಮಸ್ಕ್​ ಬುಡ ಶೇಕ್​!


ಮಸ್ಕ್ ಅವರು 44 ಬಿಲಿಯನ್ ಡಾಲರ್ ವೆಚ್ಚ ಮಾಡುವ ಮೂಲಕ ಟ್ವಿಟರ್ ಸಂಸ್ಥೆಯನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ, 51ರ ಪ್ರಾಯದ ಮಸ್ಕ್ ಅವರ ಸ್ಥಾನವನ್ನು ಲೂಯಿಸ್ ವುಟ್ಟಾನ್ ಎಂಬ ಲಕ್ಸುರಿ ಬ್ರ್ಯಾಂಡಿನ ಮಾತೃ ಸಂಸ್ಥೆಯಾದ LVMH ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಬರ್ನಾಲ್ಡ್ ಅರ್ನಾಲ್ಟ್ ಅವರು ಪಡೆದುಕೊಂಡು ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅಲ್ಪ ಕಾಲ ಭಾಜನರಾಗಿದ್ದರು.


ಟೆಸ್ಲಾ ಷೇರುಗಳ  ಕುಸಿತ!


ಬರ್ನಾಲ್ಡ್ ಅವರ ನಿವ್ವಳ ಆಸ್ತಿ ಮೌಲ್ಯ 185.3 ಬಿಲಿಯನ್ ಡಾಲರ್ ಆಗಿದೆ. ಮತ್ತೆ ಚೇತರಿಸಿಕೊಂಡ ಮಸ್ಕ್ ಅವರ ವೈಯಕ್ತಿಕ ಆಸ್ತಿ ಮೌಲ್ಯವು 185.7 ಬಿಲಿಯನ್ ಡಾಲರ್ ಆಗಿದ್ದು ಕೊಂಚ ಪ್ರಮಾಣದ ಆಸ್ತಿಯ ಏರುವಿಕೆಯಿಂದಾಗಿ ಮಸ್ಕ್ ಅವರು ಮತ್ತೆ ಮೊದಲನೇ ಸಿರಿವಂತ ವ್ಯಕ್ತಿಯ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದ್ದಾರೆಂದು ಫೋರ್ಬ್ಸ್ ವರದಿ ಮಾಡಿದೆ.


2021 ರಿಂದ ಮೊದಲನೇ ಶ್ರೀಮಂತ ವ್ಯಕ್ತಿ


ಎಲಾನ್​ ಮಸ್ಕ್ ಅವರು ಜಗತ್ತಿನ ಮೊದಲನೇ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಮೊದಲ ಬಾರಿಗೆ ಅಮೆಜಾನ್ ಸಂಸ್ಥೆಯ ಜೆಫ್ ಬೆಜಾಸ್ ಅವರನ್ನು ಹಿಂದಿಕ್ಕುವ ಮೂಲಕ ಸೆಪ್ಟೆಂಬರ್ 2021ಕ್ಕೆ ಪಡೆದುಕೊಂಡಿದ್ದು ಅಂದಿನಿಂದ ಸತತವಾಗಿ ಆ ಸ್ಥಾನದಲ್ಲಿ ತಮ್ಮನ್ನು ತಾವು ಕಾಪಾಡಿಕೊಳ್ಳುತ್ತ ಬಂದಿದ್ದರು.


ಇದನ್ನೂ ಓದಿ: ಸಖತ್​ ಸ್ಟೈಲಿಶ್​ ಆಗಿದೆ ಈ ಸ್ಕೂಟರ್​, 4 ಹೊಸ ಬಣ್ಣಗಳಲ್ಲಿ ಮತ್ತೆ ಎಂಟ್ರಿ!


ಆದರೆ, ಇತ್ತೀಚೆಗೆ ಅವರ ಟೆಸ್ಲಾ ಸಂಸ್ಥೆಯ ಷೇರುಗಳು ಅಪಾರವಾಗಿ ಕುಸಿದಿದ್ದರಿಂದ ಹಾಗೂ ಜನಪ್ರೀಯ ಸಾಮಾಜಿಕ ಮಾಧ್ಯಮವಾದ ಟ್ವಿಟರ್ ಅನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು 44 ಬಿಲಿಯನ್ ಯುಎಸ್ ಡಾಲರ್ ಗಳಷ್ಟು ವೆಚ್ಚ ಮಾಡಿದ್ದರಿಂದ ಅವರ ಆಸ್ತಿಯಲ್ಲಿ ಕುಸಿತ ಉಂಟಾಗಿ ಅಲ್ಪ ಕಾಲ ಅವರು ಸಿರಿವಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದರು.


ಎರಡನೇ ಸ್ಥಾನಕ್ಕೆ ಇಳಿದಿದ್ದ ಎಲಾನ್!


ಟ್ವಿಟರ್ ಅನ್ನು ಸ್ವಾಧೀಪಡಿಸಿಕೊಂಡ ನಂತರ ಟೆಸ್ಲಾದಂತೆ ಟ್ವಿಟರ್ ಸಂಸ್ಥೆಯ ಸಿಇಒ ಆಗಿಯೂ ಕಾರ್ಯ ನಿರ್ವಹಿಸುತ್ತಿರುವ ಎಲಾನ್​ ಮಸ್ಕ್ ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ತಮ್ಮದೆ ಆದ ಸ್ಪೇಸ್ ಎಕ್ಸ್ ಎಂಬ ಸಂಸ್ಥೆಯನ್ನು ಹೊಂದಿದ್ದಾರೆ. ಇವುಗಳಲ್ಲದೆ, ಕಂಪ್ಯೂಟರ್ ಗಳನ್ನು ಮನುಷ್ಯನ ಮೆದುಳಿಗೆ ಸಂಪರ್ಕ ಕಲ್ಪಿಸುವಂತಹ ಅಲ್ಟ್ರಾ ಹೈ ಬ್ಯಾಂಡ್ ವಿಡ್ಥ್ ಇಂಟರ್ ಫೇಸುಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿಕೊಂಡಿರುವ ಸ್ಟಾರ್ಟಪ್ ಆದ ನ್ಯೂರಾಲಿಂಕ್ಸ್ ಎಂಬ ಸಂಸ್ಥೆಯನ್ನೂ ಸಹ ಮಸ್ಕ್ ಅವರು ಮುನ್ನಡೆಸುತ್ತಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು.


ಅವರ ಟೆಸ್ಲಾ ಸಂಸ್ಥೆಯು ಸದ್ಯ ಸಾಕಷ್ಟು ವೇಗವಾಗಿ ಬೆಳೆಯುತ್ತಿರುವ ಇಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿರುವ ಸಂಸ್ಥೆಯಾಗಿದ್ದು ಅಮೆರಿಕದಾಚೆ ಚೈನಾದಲ್ಲಿ ಹೆಚ್ಚಿನ ಮಾರುಕಟ್ಟೆಯನ್ನು ಹೊಂದಿದೆ.


ಇದನ್ನೂ ಓದಿ: ಈ ವರ್ಷದ ಟಾಪ್ 10 ಪ್ರಭಾವಿ ಬ್ಯುಸಿನೆಸ್‌ ಲೀಡರ್ಸ್‌ ಇವರೇ ನೋಡಿ


ಆದರೆ, ಕಳೆದ ಎರಡು ವರ್ಷಗಳಿಂದ ಕೋವಿಡ್ ಹಾವಳಿಯಿಂದಾಗಿ ಕಾರುಗಳ ತಯಾರಿಕೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ಬಿಡಿ ಭಾಗಗಳ ಅಸಮರ್ಪಕ ಪೂರೈಕೆಯಿಂದಾಗಿ ಟೆಸ್ಲಾದ ಷೇರುಗಳು ಸತತವಾಗಿ ಕುಸಿದಿದ್ದು ಇದರಿಂದಾಗಿ ಮಸ್ಕ್ ಅವರು ಸಾಕಷ್ಟು ನಷ್ಟವನ್ನು ಮಾಡಿಕೊಂಡಿರುವುದು ಅವರ ಅಲ್ಪ ಕಾಲದವರೆಗೆ ಎರಡನೇ ಶ್ರೀಮಂತ ವ್ಯಕ್ತಿ ಸ್ಥಾನಕ್ಕೆ ತಳ್ಳಲು ಪಾತ್ರವಹಿಸಿವೆ.


ಮತ್ತೆ ಮೊದಲ ಸ್ಥಾನಕ್ಕೆ ಜಿಗಿದ ಎಲಾನ್!


ಆದಾಗ್ಯೂ ಮಸ್ಕ್ ಅವರು ಕ್ಷಣ ಕಾಲ ತಮ್ಮ ಸ್ಥಾನ ಕಳೆದುಕೊಂಡು ಮತ್ತೆ ಅದೇ ಸ್ಥಾನ ಪಡೆದಿರುವುದು ಅವರಲ್ಲಿ ನೆಮ್ಮದಿ ತಂದಿರಬಹುದಾದರೂ ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಅವರಿಗೆ ಸಾಕಷ್ಟು ಪ್ರತಿಸ್ಪರ್ಧೆ ಉಂಟಾಗಲಿರುವುದಂತೂ ಖಚಿತ ಎನ್ನಬಹುದಾಗಿದೆ. ಒಟ್ಟಿನಲ್ಲಿ ಮಸ್ಕ್ ತಮ್ಮ ಮುಂದಿನ ನಡೆಗಳ ಮೂಲಕ ಮತ್ತೆ ಆಸ್ತಿಯ ದೊಡ್ಡ ಸಾಮ್ರಾಜ್ಯ ಕಟ್ಟುತ್ತಾರೋ ಅಥವಾ ಅಧಪತನಕ್ಕೆ ಕುಸಿಯುತ್ತಾರೋ ಎಂಬುದನ್ನು ಕಾಲವೇ ನಿರ್ಧರಿಸಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು