• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Pension ಪಡೆಯಲು ಕುರ್ಚಿಯನ್ನ ಹಿಡಿದುಕೊಂಡು ಬರಿಗಾಲಿನಲ್ಲಿ ನಡೆದ ವೃದ್ಧೆ! ಇದನ್ನು ನೋಡಿ ಏನಂದ್ರು ನಿರ್ಮಲಾ ಸೀತಾರಾಮನ್?

Pension ಪಡೆಯಲು ಕುರ್ಚಿಯನ್ನ ಹಿಡಿದುಕೊಂಡು ಬರಿಗಾಲಿನಲ್ಲಿ ನಡೆದ ವೃದ್ಧೆ! ಇದನ್ನು ನೋಡಿ ಏನಂದ್ರು ನಿರ್ಮಲಾ ಸೀತಾರಾಮನ್?

ಪಿಂಚಣಿ ಕೊಂಡುಕೊಳ್ಳಲು ಹೋದ ವೃದ್ಧೆ!

ಪಿಂಚಣಿ ಕೊಂಡುಕೊಳ್ಳಲು ಹೋದ ವೃದ್ಧೆ!

ಇಷ್ಟೇ ಅಲ್ಲದೆ ಅನೇಕ ಹಣದ ಸಂಬಂಧಿತ ಕೆಲಸಗಳನ್ನು ಮಾಡಿಕೊಳ್ಳಲು ಅವರು ಸ್ವತಃ ಬ್ಯಾಂಕಿಗೆ ಹೋಗುತ್ತಾರೆ. ಇಲ್ಲಿಯೂ ಒಬ್ಬ ವೃದ್ದೆ ತಮ್ಮ ಪಿಂಚಣಿ ಹಣ ಪಡೆಯೋದಕ್ಕೆ ಬ್ಯಾಂಕಿಗೆ ಕುರ್ಚಿಯನ್ನು ಹಿಡಿದುಕೊಂಡು ನಡೆದುಕೊಂಡು ಹೋಗಿದ್ದಾರೆ ನೋಡಿ.

  • Share this:

ಈಗೆಲ್ಲಾ ಬ್ಯಾಂಕುಗಳಲ್ಲಿ (Bank) ಹಣ ತೆಗೆದುಕೊಳ್ಳಲು ಮತ್ತು ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲು ಹೋಗುವವರ ಸಂಖ್ಯೆ ಹಿಂದೆಗಿಂತ ಕಡಿಮೆಯಾಗಿದೆ. ಏಕೆಂದರೆ ಈಗೆಲ್ಲಾ ಆನ್‌ಲೈನ್ ವ್ಯವಸ್ಥೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹುತೇಕ ಹಣದ ವಹಿವಾಟನ್ನು ತುಂಬಾನೇ ಸುಲಭಗೊಳಿಸಿದೆ. ಆದರೆ ಈ ಆಧುನಿಕತೆ ಮತ್ತು ತಂತ್ರಜ್ಞಾನ (Technology)ಇದೆಲ್ಲವೂ ಹಿರಿಯ ಜೀವಿಗಳಿಗೆ ಎಂದರೆ ಸೀನಿಯರ್ ಸಿಟಿಜನ್ ಗಳಿಗೆ ಇನ್ನೂ ಕಬ್ಬಿಣದ ಕಡಲೆ ಇದ್ದಂತೆ. ಅನೇಕ ವೃದ್ದರು ಇಂದಿಗೂ ತಮ್ಮ ಪಿಂಚಣಿ ಪಡೆಯಲು ಬ್ಯಾಂಕಿಗೆ ಹೋಗುತ್ತಾರೆ. ಇಷ್ಟೇ ಅಲ್ಲದೆ ಅನೇಕ ಹಣದ ಸಂಬಂಧಿತ ಕೆಲಸಗಳನ್ನು (Work) ಮಾಡಿಕೊಳ್ಳಲು ಅವರು ಸ್ವತಃ ಬ್ಯಾಂಕಿಗೆ ಹೋಗುತ್ತಾರೆ. ಇಲ್ಲಿಯೂ ಒಬ್ಬ ವೃದ್ದೆ ತಮ್ಮ ಪಿಂಚಣಿ ಹಣ ಪಡೆಯೋದಕ್ಕೆ ಬ್ಯಾಂಕಿಗೆ ಕುರ್ಚಿಯನ್ನು ಹಿಡಿದುಕೊಂಡು ನಡೆದುಕೊಂಡು ಹೋಗಿದ್ದಾರೆ ನೋಡಿ.


ಪಿಂಚಣಿ ಹಣ ಪಡೆಯೋದಕ್ಕೆ ಬ್ಯಾಂಕಿಗೆ ಬರಿಗಾಲಿನಲ್ಲಿ ಹೋದ ವೃದ್ದೆ


ಒಡಿಶಾದ ಝರಿಗಾಂವ್ ನ ಬ್ಯಾಂಕ್ ನಲ್ಲಿ ಪಿಂಚಣಿ ಪಡೆಯಲು ಹಿರಿಯ ವೃದ್ದೆಯೊಬ್ಬರು ಮುರಿದ ಕುರ್ಚಿಯ ಬೆಂಬಲದೊಂದಿಗೆ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿರುವ ಹೃದಯ ವಿದ್ರಾವಕ ದೃಶ್ಯವನ್ನು ತೋರಿಸುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


ಮಹಿಳೆಯನ್ನು ಸೂರ್ಯ ಹರಿಜನ್ ಎಂದು ಗುರುತಿಸಲಾಗಿದ್ದು, ಬೆರಳುಗಳು ಮುರಿದಿದ್ದರಿಂದ ಹಣವನ್ನು ಹಿಂಪಡೆಯಲು ಈ ವೃದ್ದೆ ಹೆಣಗಾಡುತ್ತಿದ್ದಳು ಅಂತ ಹೇಳಲಾಗುತ್ತಿದೆ. ಸುದ್ದಿ ಸಂಸ್ಥೆ ಎಎನ್ಐ ಈ ವಿಡಿಯೋವನ್ನು ಹಂಚಿಕೊಂಡ ನಂತರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕೂಡಲೇ ಪ್ರತಿಕ್ರಿಯಿಸಿ ಪಿಂಚಣಿದಾರರಿಗೆ ಪಿಂಚಣಿಯನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿತು.


ಇದನ್ನೂ ಓದಿ: ಈ ಚರಂಡಿಯಲ್ಲಿ ತೇಲಿ ಬಂದಿದ್ದು ಕೊಳಚೆ ನೀರಲ್ಲ, ಕೋಟಿ ಬೆಲೆಬಾಳುವ ವಸ್ತುಗಳು: ನೀವ್ ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ


ಹತ್ತಿರದ ಲಿಂಕ್ ಶಾಖೆಯಾದ ಎಸ್‌ಬಿಐ ಝರಿಗಾಂವ್, ಒಡಿಶಾ ತಕ್ಷಣವೇ ತನ್ನ ಖಾತೆಯಿಂದ ಹಣವನ್ನು ಹಸ್ತಚಾಲಿತವಾಗಿ ಡೆಬಿಟ್ ಮಾಡುವ ಮೂಲಕ ಪಿಂಚಣಿ ಮೊತ್ತವನ್ನು ಆ ವೃದ್ದೆಗೆ ತಲುಪಿಸಿದೆ.


#WATCH | A senior citizen, Surya Harijan walks many kilometers barefoot with the support of a broken chair to reach a bank to collect her pension in Odisha's Jharigaon



ಬ್ಯಾಂಕ್ ಸಿಬ್ಬಂದಿಗಳು ಏನ್ ಹೇಳ್ತಾರೆ ಈ ವಿಡಿಯೋ ಬಗ್ಗೆ


ಎಸ್‌ಬಿಐ ಝರಿಗಾಂವ್ ನ ಶಾಖಾ ವ್ಯವಸ್ಥಾಪಕರು ಸೂರ್ಯ ಹರಿಜನ್ ಪ್ರತಿ ತಿಂಗಳು ತನ್ನ ಗ್ರಾಮದಲ್ಲಿರುವ ಸಿಎಸ್‌ಪಿ ಪಾಯಿಂಟ್ ನಿಂದ ತನ್ನ ವೃದ್ಧಾಪ್ಯ ಪಿಂಚಣಿಯನ್ನು ತೆಗೆದು ಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.


ಆದಾಗ್ಯೂ, ಅವರ ವೃದ್ಧಾಪ್ಯದಿಂದಾಗಿ, ಅವಳ ಬೆರಳಚ್ಚುಗಳು ಸಿಎಸ್‌ಪಿ ಪಾಯಿಂಟ್ ನಲ್ಲಿ ಹೊಂದಿಕೆಯಾಗುತ್ತಿರಲಿಲ್ಲ. ಅವರು ತಮ್ಮ ಸಂಬಂಧಿಯೊಂದಿಗೆ ಝರಿಗಾಂವ್ ಶಾಖೆಗೆ ಭೇಟಿ ನೀಡಿದ್ದಾರೆ ಮತ್ತು ಶಾಖಾ ವ್ಯವಸ್ಥಾಪಕರು ಅವರ ಖಾತೆಯನ್ನು ಹಸ್ತಚಾಲಿತವಾಗಿ ಡೆಬಿಟ್ ಮಾಡುವ ಮೂಲಕ ಮೊತ್ತವನ್ನು ಪಾವತಿಸಿದರು. ವೃದ್ಧ ಮಹಿಳೆಗೆ ಗಾಲಿ ಕುರ್ಚಿಯನ್ನು ಹಸ್ತಾಂತರಿಸಲು ಅವರು ನಿರ್ಧರಿಸಿದ್ದಾರೆ.


ವಿಷಯ ತಿಳಿದು  ಕಳವಳ ವ್ಯಕ್ತಪಡಿಸಿದ ನಿರ್ಮಲಾ ಸೀತಾರಾಮನ್


ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಡಿಯೋವನ್ನು ಟ್ವೀಟ್ ಮಾಡಿ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಮಾನವೀಯವಾಗಿ ವರ್ತಿಸಬೇಕು ಮತ್ತು ವೃದ್ಧ ಮಹಿಳೆಗೆ ಸಹಾಯ ಮಾಡಬೇಕೆಂದು ಅವರು ಒತ್ತಾಯಿಸಿದರು.


ಇದನ್ನೂ ಓದಿ: ನಿಮ್ಮ ನಗರದಲ್ಲಿ ಇಂದು ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ? ಇಲ್ಲಿದೆ ವಿವರ


ಎಸ್‌ಬಿಐ ಬ್ಯಾಂಕ್ ನವರು ಸಹ ಸಚಿವರ ಟ್ವೀಟ್ ಗೆ ಪ್ರತಿಕ್ರಿಯಿಸಿ, ವಿಡಿಯೋವನ್ನು ನೋಡಿ ತಮಗೂ ನೋವಾಗಿದೆ ಮತ್ತು ಅವರ ಪಿಂಚಣಿ ಮತ್ತು ಗಾಲಿ ಕುರ್ಚಿಯನ್ನು ಮನೆ ಬಾಗಿಲಿಗೆ ತಲುಪಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಿದ್ದೇವೆ ಎಂದು ಹೇಳಿದರು.


"ಇಂತಹ ಸಂದರ್ಭಗಳನ್ನು ಪರಿಹರಿಸಲು ಅಗತ್ಯ ಪ್ರೋಟೋಕಾಲ್ ಗಳು ಈಗಾಗಲೇ ಜಾರಿಯಲ್ಲಿದ್ದರೂ, ನಾವು ಈ ವಿಷಯವನ್ನು ಮತ್ತಷ್ಟು ಅರಿತುಕೊಂಡಿದ್ದೇವೆ ಮತ್ತು ನಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸುವಲ್ಲಿ ಅವರು ಎದುರಿಸುತ್ತಿರುವ ಯಾವುದೇ ಸಮಸ್ಯೆಗಳ ಸಂದರ್ಭದಲ್ಲಿ ತಮ್ಮ ಲಿಂಕ್ ಶಾಖೆಗಳನ್ನು ಸಂಪರ್ಕಿಸಲು ಪ್ರಾರಂಭಿಸಿದ್ದೇವೆ.




ನಮ್ಮ ಹಿರಿಯ ಪಿಂಚಣಿದಾರರು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ನಮ್ಮ ಬ್ಯಾಂಕ್ ಮಿತ್ರ ಚಾನೆಲ್ ಗಳಲ್ಲಿ ಐರಿಸ್ ಸ್ಕ್ಯಾನರ್ ಗಳನ್ನು ಸ್ಥಾಪಿಸುವ ಆಯ್ಕೆಗಳನ್ನು ಬ್ಯಾಂಕ್ ಪರಿಶೀಲಿಸುತ್ತಿದೆ" ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.

First published: