• Home
  • »
  • News
  • »
  • business
  • »
  • Deepavali: ದೀಪಾವಳಿ ಹಬ್ಬದ ಸೀಸನ್​ಗೆ ಚಿನ್ನಕ್ಕೆ ಭಾರೀ ಡಿಮ್ಯಾಂಡ್!

Deepavali: ದೀಪಾವಳಿ ಹಬ್ಬದ ಸೀಸನ್​ಗೆ ಚಿನ್ನಕ್ಕೆ ಭಾರೀ ಡಿಮ್ಯಾಂಡ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಿಂದೂಗಳ ಪಾಲಿಗೆ ದಸರಾ (Dasara) , ದೀಪಾವಳಿ (Deepavali) ದೊಡ್ಡ ಹಬ್ಬಗಳು (Festival). ಸಂಭ್ರಮದಿಂದ ಆಚರಿಸೋ ಈ ಹಬ್ಬಗಳಲ್ಲಿ ಖರೀದಿಯೂ ಬಲು ಜೋರು.

  • Share this:

ಹಿಂದೂಗಳ ಪಾಲಿಗೆ ದಸರಾ (Dasara) , ದೀಪಾವಳಿ (Deepavali) ದೊಡ್ಡ ಹಬ್ಬಗಳು (Festival). ಸಂಭ್ರಮದಿಂದ ಆಚರಿಸೋ ಈ ಹಬ್ಬಗಳಲ್ಲಿ ಖರೀದಿಯೂ ಬಲು ಜೋರು. ಬಟ್ಟೆ (Cloth) , ಬಂಗಾರ (Gold) , ಪಟಾಕಿ (Crackers) , ವಾಹನ ಖರೀದಿ ಸೇರಿದಂತೆ ಬೇರೆ ಬೇರೆ ವಸ್ತುಗಳ ಖರೀದಿ ಜೋರಾಗಿಯೇ ಇರುತ್ತೆ. ಬಹಳಷ್ಟು ಕಡೆಗಳಲ್ಲಿ ರಿಯಾಯಿತಿ ಮಾರಾಟಗಳೂ ಇರೋದ್ರಿಂದ ಜನರು ಖರೀದಿಗಾಗಿ ಮುಗಿಬೀಳ್ತಾರೆ. ಹೀಗಾಗಿ ಈ ಹಬ್ಬ ಕೇವಲ ಧಾರ್ಮಿಕ ಅಥವಾ ಸಾಂಸ್ಕೃತಿಕ ಹಬ್ಬ ಮಾತ್ರವಲ್ಲ, ಬದಲಾಗಿ ಇದು ನಮ್ಮ ಆರ್ಥಿಕತೆಯ ಮೇಲೂ ಭಾರೀ ಪ್ರಭಾವ ಬೀರುತ್ತದೆ.


ಹೌದು, ಹಬ್ಬದ ಋತುವು ಆರ್ಥಿಕ ವರ್ಷ (ಏಪ್ರಿಲ್ ನಿಂದ ಮಾರ್ಚ್) ದ ಮೇಲೆ ಪ್ರಭಾವ ಬೀರುತ್ತದೆ. ಈ ಹಬ್ಬದ ಋತು ಪ್ರಸ್ತುತ ಆರ್ಥಿಕ ಸ್ಥಿತಿಯ ಬಗ್ಗೆ ಸುಳಿವು ನೀಡುವುದಲ್ಲದೆ ಉಳಿದ ಆರ್ಥಿಕ ವರ್ಷದ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ಹಬ್ಬದ ಋತುವಿನ ಮಾರಾಟದ ಬಗ್ಗೆ ಉದ್ಯಮದ ದೃಷ್ಟಿಕೋನವನ್ನು ಏನಿದೆ ಅನ್ನೋದು ಮುಖ್ಯವಾಗುತ್ತೆ.


1.5 ಲಕ್ಷ ಕೋಟಿ ಚಿಲ್ಲರೆ ವ್ಯಾಪಾರ!


ಹೌದು.. ಹಬ್ಬದ ಋತುವಿನ ಚಿಲ್ಲರೆ ವ್ಯಾಪಾರವು 1.5 ಲಕ್ಷ ಕೋಟಿ ತಲುಪಬಹುದು. ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ ಸಿ ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀ ಪ್ರವೀಣ್ ಖಂಡೇಲ್ವಾಲ್ ಹೇಳುವ ಪ್ರಕಾರ, ಮೊದಲ ನವರಾತ್ರಿಯಿಂದ (ಸೆಪ್ಟೆಂಬರ್ 26) ಧಂತೇರಸ್ ವರೆಗೆ ದೇಶಾದ್ಯಂತ 1.25 ಲಕ್ಷ ಕೋಟಿ ಚಿಲ್ಲರೆ ವ್ಯಾಪಾರ ನಡೆದಿದೆ. ದೆಹಲಿಯೊಂದರಲ್ಲೇ 25,000 ಕೋಟಿಗೂ ಅಧಿಕ ವ್ಯವಹಾರ ನಡೆದಿದೆ. ಇನ್ನೂ, ಹಬ್ಬದ ಸೀಸನ್‌ಗೆ 10 ದಿನಗಳು ಉಳಿದಿವೆ, ಆದ್ದರಿಂದ ಚಿಲ್ಲರೆ ವ್ಯಾಪಾರವು ಈ ವರ್ಷ 1.5 ಲಕ್ಷ ಕೋಟಿಗಳ ಗಡಿಯನ್ನು ಮೀರಬಹುದು ಎಂದಿದ್ದಾರೆ.


ಇದನ್ನೂ ಓದಿ: 30 ಸಾವಿರ ರೂಪಾಯಿಯ ಸ್ಮಾರ್ಟ್​ ಟಿವಿ 8 ಸಾವಿರಕ್ಕೆ ಖರೀದಿಸಿ; ಇಲ್ಲಿದೆ ಸೂಪರ್ ಆಫರ್


ವೈಯಕ್ತಿಕ ವಾಹನ ವಿಭಾಗದಲ್ಲಿ ನಿರೀಕ್ಷಿತ ದಶಕದ ದಾಖಲೆ ಮಾರಾಟ!


ದೇಶದ ಉತ್ಪಾದನಾ GDP ಯ 49% ರಷ್ಟು ಆಟೋಮೊಬೈಲ್ ಕ್ಷೇತ್ರದಿಂದ ಬರುವುದರಿಂದ ಆಟೋ ಕ್ಷೇತ್ರವು ನಮ್ಮ ಆರ್ಥಿಕತೆಯ ಬಲವಾದ ಆಧಾರ ಸ್ತಂಭವಾಗಿದೆ. ಈ ವರ್ಷದ ದಾಖಲೆಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ವಾಹನ ಮಾರಾಟದ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ.


ಪ್ರಸ್ತುತ ವರ್ಷ ದೊಡ್ಡ ವಾಹನ ಕಂಪನಿಗಳು ಅನೇಕ ಹೊಸ ಮಾದರಿಗಳನ್ನು ಬಿಡುಗಡೆ ಮಾಡಿವೆ. ಭಾರತೀಯ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ (ಎಫ್‌ಎಡಿಎ) ಅಧ್ಯಕ್ಷ ಮನೀಶ್ ರಾಜ್ ಸಿಂಘಾನಿಯಾ, "ನವರಾತ್ರಿ, ಧನ್‌ ತೇರಸ್ ಮತ್ತು ದೀಪಾವಳಿ ವ್ಯಾಪಾರಕ್ಕೆ ಉತ್ತಮ ಅವಧಿಗಳಾಗಿವೆ. ಗಮನಾರ್ಹವಾದ ಹಬ್ಬದ ಋತು ಮತ್ತು ದೃಢವಾದ ಬುಕಿಂಗ್ ಲಾಗ್ ಅನ್ನು ಪರಿಗಣಿಸಿ, ನಾವು ವಿಶ್ವಾಸ ಹೊಂದಿದ್ದೇವೆ. ಇದು ಒಂದು ದಶಕದಲ್ಲಿಯೇ ಅತ್ಯುತ್ತಮ ಹಬ್ಬದ ವರ್ಷವಾಗಿದೆ. ದ್ವಿಚಕ್ರ ವಾಹನಗ ಮಾರಾಟವೂ ಹೆಚ್ಚಳವಾಗಬಹುದು ಎಂದು ಅವರು ಹೇಳಿದ್ದಾರೆ.


ಕಳೆದ 4 ವರ್ಷಗಳಲ್ಲಿ ಅತಿಹೆಚ್ಚು ಚಿನ್ನ ಮಾರಾಟ!


ಸಾಂಪ್ರದಾಯಿಕವಾಗಿ ಜನರು ದಸರಾದಲ್ಲಿ ಚಿನ್ನವನ್ನು ಖರೀದಿಸುತ್ತಾರೆ. ಈ ವರ್ಷ ಚಿನ್ನಾಭರಣ ಅಂಗಡಿಗಳಲ್ಲಿ ಏರಿಕೆ ಕಂಡಿದೆ. ಕೋವಿಡ್ ಭಯ ಕಡಿಮೆಯಾದ ಹಿನ್ನೆಲೆಯಲ್ಲಿ ಹಬ್ಬದ ಖರೀದಿ ಜೋರಾಗಿ ನಡೆಯುತ್ತಿದೆ. ಇದರಿಂದ ಚಿನ್ನಾಭರಣ ಗಳನ್ನೂ ಜನರು ಹೆಚ್ಚು ಹೆಚ್ಚು ಖರೀದಿ ಮಾಡುತ್ತಿದ್ದಾರೆ.


ಇದನ್ನೂ ಓದಿ: ವ್ಹಾವ್​, ಜಸ್ಟ್​ 3 ಲಕ್ಷಕ್ಕೆ ಸಿಗುತ್ತೆ ಮಹೀಂದ್ರಾ ಎಲೆಕ್ಟ್ರಿಕ್​ ಕಾರ್​! ಏನ್​ ಲುಕ್​ ಅಂತೀರಾ? ನೀವೇ ನೋಡಿ


ವಜ್ರ ಮತ್ತು ಆಭರಣ ಉದ್ಯಮ ಸಂಘದ ಪ್ರಧಾನ ಕಾರ್ಯದರ್ಶಿ ಗುರ್ಮೀತ್ ಅರೋರಾ, "ಕಳೆದ ವರ್ಷಕ್ಕಿಂತ ನಮ್ಮ ವ್ಯಾಪಾರವು ಬೆಳೆಯುತ್ತಿದೆ. ಏಕೆಂದರೆ ವ್ಯಾಪಾರದಲ್ಲಿ ಸುಮಾರು 15 ರಿಂದ 20 ಪ್ರತಿಶತದಷ್ಟು ಹೆಚ್ಚಾಗಿರುವುದನ್ನು ನಾವು ನೋಡುತ್ತಿದ್ದೇವೆ. ಕಳೆದ ವರ್ಷದ ಚಿನ್ನದ ದರವನ್ನು ಹೋಲಿಸಿದರೆ 2500 ರಷ್ಟು ಏರಿಕೆಯಾಗಿದೆ. ಪ್ರತಿ 10ಗ್ರಾಂ ಚಿನ್ನದ ದರ ಕಳೆದ ವರ್ಷ 49500 ಆಗಿತ್ತು ಮತ್ತು ಈ ವರ್ಷ ಸುಮಾರು 52000 ದರ ಇದೆ ಎಂದಿದ್ದಾರೆ.


ಒಟ್ಟಾರೆ, ಹಬ್ಬ ಹರಿದಿನಗಳ ಖರೀದಿ ಕೇವಲ ಖುಷಿಯನ್ನಷ್ಟೇ ಹೆಚ್ಚು ಮಾಡುವುದಲ್ಲದೇ ದೇಶದ ಆರ್ಥಿಕತೆಗೂ ಕೊಡುಗೆ ನೀಡುತ್ತದೆ.

Published by:ವಾಸುದೇವ್ ಎಂ
First published: