Home Loan ಇಎಂಐ ಹೇಗೆ ಕಡಿಮೆ ಮಾಡೋದು? ಇಲ್ಲಿವೆ ಸಿಂಪಲ್ ಸಲಹೆ

ಹೋಮ್​ ಲೋನ್​

ಹೋಮ್​ ಲೋನ್​

ಆದಾಗ್ಯೂ, ಈ ಹೆಚ್ಚಳದ ಪರಿಣಾಮವು ಎಲ್ಲಾ ಗೃಹ ಸಾಲದ ಸಾಲಗಾರರಿಗೆ ಏಕರೂಪವಾಗಿಲ್ಲ ಎಂಬುದು ಇಲ್ಲಿ ಗಮನಾರ್ಹವಾದ ಅಂಶವಾಗಿದೆ.

  • Share this:

ಗೃಹಸಾಲಗಳ ಮೇಲಿನ ಬಡ್ಡಿದರಗಳು ಈ ಹಿಂದಿನಂತಿಲ್ಲ ಏಕೆಂದರೆ ಗೃಹಸಾಲದ ಸಾಲಗಾರರು ಕಳೆದ ಎರಡು ದಶಕಗಳಲ್ಲಿ ಕಡಿಮೆ ಬಡ್ಡಿದರಗಳಲ್ಲಿ ಲೋನ್ (Loan) ಪಾವತಿ  ಮಾಡುತ್ತಿದ್ದರು ಆದರೆ ಕಳೆದ ಒಂದು ವರ್ಷದಲ್ಲಿ ಬಡ್ಡಿದರಗಳಲ್ಲಿ ಹೆಚ್ಚಳವಾಗಿದ್ದು ಇದರಿಂದ ಸಾಲಗಾರರು ಇನ್ನಷ್ಟು ಸಂಕಷ್ಟಕ್ಕೊಳಗಾಗಿದ್ದಾರೆ. ಬಡ್ಡಿದರಗಳು 7% ರಿಂದ 9.5% ಕ್ಕೆ ಏರಿದ್ದರಿಂದ 20 ವರ್ಷಗಳ ಹೆಚ್ಚು ಜನಪ್ರಿಯ ಅವಧಿಯ ಸಾಲಗಳು 22% ನಷ್ಟು ಇಎಮ್‌ಐ (EMI) ಏರಿಕೆಯನ್ನು ಕಂಡಿವೆ. ಆದಾಗ್ಯೂ, ಈ ಹೆಚ್ಚಳದ ಪರಿಣಾಮವು ಎಲ್ಲಾ ಗೃಹ ಸಾಲದ ಸಾಲಗಾರರಿಗೆ ಏಕರೂಪವಾಗಿಲ್ಲ ಎಂಬುದು ಇಲ್ಲಿ ಗಮನಾರ್ಹವಾದ ಅಂಶವಾಗಿದೆ.


ರೆಪೊ ದರ ಹೆಚ್ಚಳ


ದರ ಏರಿಕೆಯ ಆವರ್ತನದಲ್ಲಿನ ತಡೆಯುವ ಕ್ರಮವು ಕೇಂದ್ರ ಬ್ಯಾಂಕ್ ರೆಪೊ ದರವನ್ನು ಹೆಚ್ಚಿಸುವ ಪ್ರಮುಖ ಭಾಗವಾಗಿದೆ ಎಂದು ಸೂಚಿಸುತ್ತದೆ ಅಂತೆಯೇ ಗೃಹ ಸಾಲದ ಮೇಲೆ ಕಡಿಮೆ ಬಡ್ಡಿದರಗಳನ್ನು ಹೇಗೆ ಪಡೆಯಬಹುದು ಎಂಬುದನ್ನು ಈ ಸಮಯದಲ್ಲಿ ಕಂಡುಕೊಳ್ಳಬಹುದು.


ಹಳೆಯ ಸಾಲಗಾರರು ಹೊಸ ಸಾಲಗಳಿಗಿಂತ ಹೆಚ್ಚಿನ ಇಎಮ್‌ಐಗಳನ್ನು ಏಕೆ ಪಾವತಿಸುತ್ತಿದ್ದಾರೆ


ವರ್ಷಗಳ ಹಿಂದೆ ಬಡ್ಡಿದರಗಳು ಕನಿಷ್ಠ ಪ್ರಮಾಣದಲ್ಲಿದ್ದಾಗ ಸಾಲಗಾರರಿಗೆ ಗೃಹ ಸಾಲಗಳನ್ನು ವಿಸ್ತರಿಸುವಾಗ ಸಾಲದಾತರು ಇದರ ಮೇಲೆ ದೊಡ್ಡ ಪ್ರಮಾಣದ ಶುಲ್ಕವನ್ನು ವಿಧಿಸುತ್ತಿದ್ದರು.


ಗೃಹ ಸಾಲಗಳ ಮೇಲಿನ ಬಡ್ಡಿ ದರಗಳು, ಅವುಗಳಲ್ಲಿ ಹೆಚ್ಚಿನವು ರೆಪೊ ದರಕ್ಕೆ ಲಿಂಕ್ ಮಾಡಲಾಗಿದೆ ಹಾಗಾಗಿ ರೆಪೋ ದರ ಹೆಚ್ಚಾದಂತೆ ಬಡ್ಡಿದರವನ್ನೂ ಹೆಚ್ಚಿಸಬೇಕು. ಆದರೆ ಇಲ್ಲಿ ಹೊಸ ಸಾಲಗಾರರು ಹಳೆಯ ಸಾಲಗಾರಗಿಂತ ಕಡಿಮೆ ಬಡ್ಡಿದರಗಳನ್ನು ಪಾವತಿಸುತ್ತಿದ್ದಾರೆ. ಹೊಸ ಮತ್ತು ಹಳೆಯ ಗೃಹ ಸಾಲದ ದರಗಳ ನಡುವೆ ಭಾರಿ ವ್ಯತ್ಯಾಸವಿದೆ ಎಂದು ಬ್ಯಾಂಕ್‌ಬಜಾರ್‌ನ ಸಿಇಒ ಅಧಿಲ್ ಶೆಟ್ಟಿ ತಿಳಿಸುತ್ತಾರೆ.


ಹಳೆಯ ಸಾಲಗಾರರು ಹೆಚ್ಚಿನ ಇಎಮ್‌ಐಗಳನ್ನು ಏಕೆ ಪಾವತಿಸಬೇಕಾಗಿದೆ


ಒಂದೇ ಆಡಳಿತದ ಅಡಿಯಲ್ಲಿ ಒಂದೇ ನಿಯಮಗಳಿಗೆ ಬದ್ಧರಾಗಿರುವ ಸಾಲಗಾರರು ಇಎಮ್‌ಐಗಳಲ್ಲಿ ಏರಿಕೆ ಇಳಿಕೆಯನ್ನು ಕಂಡುಕೊಳ್ಳುತ್ತಾರೆ. ಸಾಲದಾತರು ಹೊಸ ಸಾಲಗಾರರನ್ನು ಆಕರ್ಷಿಸಲು ತಮ್ಮ ಬಡ್ಡಿದರಗಳಲ್ಲಿ ಇಳಿಕೆಯನ್ನು ಮಾಡುತ್ತಿರುತ್ತಾರೆ. ಇದರಿಂದಾಗಿಯೇ ಹೊಸ ಸಾಲಗಾರರಿಗೆ ಬಡ್ಡಿದರಗಳ ಕಡಿಮೆ ಇರುತ್ತವೆ.


ಇದನ್ನೂ ಓದಿ: ಪಿಂಚಣಿ ಬಗ್ಗೆ ಸರ್ಕಾರ ಕೈಗೊಂಡಿದೆ ಈ ಮಹತ್ವದ ನಿರ್ಧಾರ!


ಪೈಸಾಬಜಾರ್‌ನ ಗೃಹ ಸಾಲದ ಮುಖ್ಯಸ್ಥ ರತನ್ ಚೌಧರಿ ತಿಳಿಸುವಂತೆ ಸಾಲದಾತರು ವಿಧಿಸುವ ಗೃಹ ಸಾಲದ ಬಡ್ಡಿದರಗಳು ಅವರ ಬೆಂಚ್‌ಮಾರ್ಕ್ ಬಡ್ಡಿ ದರಗಳು, ಸ್ಪ್ರೆಡ್ ಮತ್ತು ಕ್ರೆಡಿಟ್ ರಿಸ್ಕ್ ಪ್ರೀಮಿಯಂ (CRP) ಮೊತ್ತವಾಗಿದೆ ಎಂದು ಹೇಳುತ್ತಾರೆ.


ಹೋಮ್ ಲೋನ್‌ಗಳು ಬೆಂಚ್‌ಮಾರ್ಕ್ ದರಗಳಲ್ಲಿನ ಯಾವುದೇ ಬದಲಾವಣೆಗಳಿಂದ ತ್ವರಿತವಾಗಿ ಪರಿಣಾಮ ಬೀರುತ್ತವೆ ಏಕೆಂದರೆ ಅವುಗಳಲ್ಲಿ ಹೆಚ್ಚಿನವು ರೆಪೋ ದರಕ್ಕೆ ಲಿಂಕ್ ಆಗಿರುತ್ತವೆ.


ಹೊಸ ಸಾಲಗಾರರನ್ನು ಆಕರ್ಷಿಸುವ ಬ್ಯಾಂಕ್‌ಗಳು


ಹೊಸ ಸಾಲಗಾರರನ್ನು ಆಕರ್ಷಿಸಲು ಸಾಲದಾತರಿಗೆ ಹೆಚ್ಚಿನ ಬಡ್ಡಿದರವು ಬ್ಯಾಂಕ್‌ಗಳಿಗೆ ಅಡ್ಡಿಯನ್ನುಂಟುಮಾಡುತ್ತವೆ. ಹಾಗಾಗಿಯೇ ಹೊಸ ಸಾಲಗಾರರನ್ನು ಆಕರ್ಷಿಸಲು ಬ್ಯಾಂಕ್‌ಗಳು ಕಡಿಮೆ ಬಡ್ಡಿದರಗಳನ್ನು ಲೋನ್‌ಗಳ ಮೇಲಿರಿಸುತ್ತವೆ.




ಸಾಲಗಾರರಿಗೆ ರಿಫೈನಾನ್ಸಿಂಗ್ ಹೇಗೆ ಸಹಾಯಕವಾಗಿದೆ?


ಇದೇ ಸಮಯದಲ್ಲಿ ಪ್ರಸ್ತುತ ಲೋನ್ ಪಾವತಿಸುತ್ತಿರುವ ಸಾಲಗಾರರು ಲೋನ್‌ಗಳನ್ನು ಮುಕ್ತಾಯಗೊಳಿಸುವುದು ಅಥವಾ ಹೊಸ ಸಾಲದ ಪದ್ಧತಿಗೆ ನಿಮ್ಮ ಲೋನ್ ಅನ್ನು ಮಾರ್ಪಡಿಸುವುದು ಮಾಡಿದರೆ ನೀವು ಕಡಿಮೆ ಬಡ್ಡಿದರಗಳನ್ನು ಪಾವತಿಸಿದರೆ ಸಾಕಾಗುತ್ತದೆ ಹಾಗೂ ಇಎಮ್‌ಐ ಕೂಡ ಕಡಿಮೆ ಇರುತ್ತದೆ ಎಂದು ಶೆಟ್ಟಿ ತಿಳಿಸುತ್ತಾರೆ.


ಇದನ್ನೂ ಓದಿ: ರಾಜ್ಯದ ಸರ್ಕಾರಿ ನೌಕರರ ಡಿಎ ಶೇ.3ರಷ್ಟು ಹೆಚ್ಚಳ!


ನಿಮ್ಮ ಸಾಲದಲ್ಲಿ 50% ಕ್ಕಿಂತ ಹೆಚ್ಚು ಪ್ರಮಾಣ ಉಳಿದಿದ್ದರೆ ರಿಫೈನಾನ್ಸಿಂಗ್ ಅನ್ನು ಅನುಸರಿಸಬಹುದು. ಈ ಸಮಯದಲ್ಲಿ ಬ್ಯಾಂಕ್ ವಿಧಿಸುವ ನಿಯಮಾವಳಿಗಳನ್ನು ಅನುಸರಿಸಿ ಹಾಗೂ ಷರತ್ತುಗಳನ್ನು ಓದಿಕೊಂಡು ನಂತರ ರಿಫೈನಾನ್ಸಿಂಗ್ ಆಯ್ಕೆಯನ್ನು ಮಾಡಿಕೊಳ್ಳಿ ಎಂದು ಶೆಟ್ಟಿ ಸಲಹೆ ನೀಡುತ್ತಾರೆ.


ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸಮಯದಲ್ಲಿ ನೆನಪಿನಲ್ಲಿಡಬೇಕಾದ ಅಂಶಗಳು


ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಆಯ್ಕೆಯಲ್ಲಿ ಪ್ರಕ್ರಿಯೆ, ಆಡಳಿತಾತ್ಮಕ ಹಾಗೂ ಇನ್ನಿತರ ಶುಲ್ಕಗಳು ಒಳಗೊಂಡಿರುತ್ತವೆ. ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸಮಯದಲ್ಲಿ ಬ್ಯಾಂಕ್‌ಗಳು ತಮ್ಮದೇ ಆದ ನೀತಿ ನಿಯಮಗಳಿಗೆ ಒಳಪಟ್ಟಿರುತ್ತವೆ. ಕೆಲವೊಂದು ಬ್ಯಾಂಕ್‌ಗಳು ಕಡಿಮೆ ಮೊತ್ತದಲ್ಲಿ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಆಯ್ಕೆಯನ್ನೊದಗಿಸುತ್ತಾರೆ.

First published: