Earning Tips: ಮನೆಯಲ್ಲೇ ಕೂತು SBIನಿಂದ ತಿಂಗಳಿಗೆ 60-80 ಸಾವಿರ ಹಣ ಗಳಿಸಬಹುದು..! ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

ಟಾಟಾ ಇಂಡಿಕ್ಯಾಶ್, ಮುತ್ತೂಟ್ ಎಟಿಎಂ ಮತ್ತು ಇಂಡಿಯಾ ಒನ್ ಎಟಿಎಂನಂತಹ ಎಟಿಎಂ ಫ್ರಾಂಚೈಸ್​​ ಸೇವೆಗಳನ್ನು ಒದಗಿಸುವ ವಿವಿಧ ಕಂಪನಿಗಳ ಮೂಲಕ ವ್ಯಕ್ತಿಯು ಎಸ್​ಬಿಐ ಎಟಿಎಂ ಫ್ರಾಂಚೈಸಿಗೆ ಅರ್ಜಿ ಸಲ್ಲಿಸಬಹುದು.

SBI

SBI

  • Share this:
ಮನೆಯಲ್ಲೇ ಕೂತು ಲಕ್ಷ-ಲಕ್ಷ ಹಣ ಗಳಿಸುವ ಅವಕಾಶವನ್ನು ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾ(State Bank of India) ನಿಮಗೆ ನೀಡುತ್ತಿದೆ. ಒಂದು ಬಾರಿ ಹೂಡಿಕೆ(One-time Investment) ಮಾಡಿ ಮನೆಯಲ್ಲೇ ಕುಳಿತು ತಿಂಗಳಿಗೆ ಸಾವಿರಗಟ್ಟಲೇ ಹಣ ಗಳಿಸಬಹುದು. ಹೌದು, ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ(State Bank of India) ಜನರಿಗೆ ತಮ್ಮದೇ ಆದ ಎಸ್​ಬಿಐ ಎಟಿಎಂ ಫ್ರಾಂಚೈಸ್​​(SBI ATM Franchise)ಅನ್ನು ಹೊಂದಲು ಅವಕಾಶ ನೀಡುತ್ತಿದೆ. ಆದರೆ ಎಸ್​ಬಿಐ(SBI) ಈ ಎಟಿಎಂ(ATM)ನ್ನು ಇನ್​ಸ್ಟಾಲ್(Install)​ ಮಾಡಿಕೊಡುವುದಿಲ್ಲ. ಬದಲಾಗಿ ಮೂರನೇ ವ್ಯಕ್ತಿಯ(3rd Party) ಮುಖಾಂತರ ಈ ಎಟಿಎಂ ಫ್ರಾಂಚೈಸ್(ATM Franchise)ಅನ್ನು ಸ್ಥಾಪಿಸಬೇಕು.



SBI ATM ಫ್ರಾಂಚೈಸ್​​ ಅನ್ನು ಸ್ಥಾಪಿಸಲು ನಿಮಗೆ ಅಗತ್ಯವಿರುವ ಮಾಹಿತಿ ಇಲ್ಲಿದೆ.

  • ನೀವು ಇತರೆ ಎಟಿಎಂ ಕೌಂಟರ್​​​ಗಳಿಂದ 100 ಮೀಟರ್​ಗಿಂತ ಹೆಚ್ಚು ದೂರದಲ್ಲಿ 50-80 ಚದರ ಅಡಿ ಜಾಗವನ್ನು ಹೊಂದಿರಬೇಕು.

  • ನೆಲಮಹಡಿಯಲ್ಲಿ ಸ್ಥಳಾವಕಾಶ ಇರಬೇಕು.

  • ಸ್ಥಳಕ್ಕೆ 24/7 ಗಂಟೆಗಳ ವಿದ್ಯುತ್​ ಪೂರೈಕೆ ಇರಬೇಕು. ಜೊತೆಗೆ 1KW ವಿದ್ಯುತ್ ಸಂಪರ್ಕವನ್ನು ಹೊಂದಿರಬೇಕು.

  • ಎಟಿಎಂ ದಿನಕ್ಕೆ 300 ವಹಿವಾಟುಗಳ ಸಾಮರ್ಥ್ಯವನ್ನು ಹೊಂದಿರಬೇಕು.

  • ಎಟಿಎಂ ಫ್ರಾಂಚೈಸ್​​ ಸ್ಥಾಪನೆ​ ಮಾಡಲು ನಿಗದಿತ ಜಾಗವು ಯಾವುದೇ ಆಕ್ಷೇಪಣೆ ಹೊಂದಿಲ್ಲ ಎಂಬ ಪ್ರಮಾಣಪತ್ರ ಬೇಕು.


ಇದನ್ನೂ ಓದಿ: Education Loan ಮೇಲಿನ ತೆರಿಗೆ ಪ್ರಯೋಜನಗಳೇನು? ನೀವು ತಿಳಿದುಕೊಳ್ಳಬೇಕಿರುವ 3 ಅಂಶಗಳು ಇಲ್ಲಿವೆ..!

ಎಟಿಎಂ ಫ್ರಾಂಚೈಸ್​ ಆರಂಭಿಸಲು ಬೇಕಾದ ಅಗತ್ಯ ದಾಖಲಾತಿಗಳೇನು?

  • ವಿಳಾಸ ದಾಖಲೆ(ರೇಷನ್ ಕಾರ್ಡ್​, ಎಲೆಕ್ಟ್ರಿಸಿಟಿ ಬಿಲ್)

  • ಗುರುತಿನ ದಾಖಲೆ (ಆಧಾರ್​​ ಕಾರ್ಡ್​, ಪಾನ್​ ಕಾರ್ಡ್, ವೋಟರ್ ಐಡಿ)

  • ಬ್ಯಾಂಕ್​ ಅಕೌಂಟ್​​ & ಪಾಸ್​ಬುಕ್

  • ಫೋಟೋ

  • ಇ-ಮೇಲ್​ ಐಡಿ

  • ಫೋನ್​ ನಂಬರ್

  • ಜಿಎಸ್​ಟಿ ನಂಬರ್

  • ಹಣಕಾಸಿನ ದಾಖಲೆಗಳು




ಎಸ್​ಬಿಐ ಎಟಿಎಂ ಫ್ರಾಂಚೈಸ್​ಗೆ ಅರ್ಜಿ ಸಲ್ಲಿಸುವುದು ಹೇಗೆ?

ಟಾಟಾ ಇಂಡಿಕ್ಯಾಶ್, ಮುತ್ತೂಟ್ ಎಟಿಎಂ ಮತ್ತು ಇಂಡಿಯಾ ಒನ್ ಎಟಿಎಂನಂತಹ ಎಟಿಎಂ ಫ್ರಾಂಚೈಸ್​​ ಸೇವೆಗಳನ್ನು ಒದಗಿಸುವ ವಿವಿಧ ಕಂಪನಿಗಳ ಮೂಲಕ ವ್ಯಕ್ತಿಯು ಎಸ್​ಬಿಐ ಎಟಿಎಂ ಫ್ರಾಂಚೈಸ್​​ಗೆ ಅರ್ಜಿ ಸಲ್ಲಿಸಬಹುದು.

ಎಸ್​ಬಿಐ ಎಟಿಎಂ ಫ್ರಾಂಚೈಸ್​​ನಿಂದ ನೀವು ಎಷ್ಟು ಹಣ ಗಳಿಸಬಹುದು?

ಎಸ್​ಬಿಐ ಎಟಿಎಂ ಫ್ರಾಂಚೈಸ್​ ಸ್ಥಾಪಿಸಿದ ವ್ಯಕ್ತಿಯು ಪ್ರತಿ ನಗದು ವಹಿವಾಟಿನ ಮೇಲೆ 8 ರೂ. ಮತ್ತು ನಗದುರಹಿತ ವಹಿವಾಟಿನ ಮೇಲೆ 2 ರೂ. ಪಡೆಯುತ್ತಾನೆ. ಹೂಡಿಕೆಯ ಮೇಲಿನ ಆದಾಯವು ವಾರ್ಷಿಕ ಆಧಾರದ ಮೇಲೆ 33-50% ವರೆಗೆ ಇರುತ್ತದೆ.

ಇದನ್ನೂ ಓದಿ: Ombudsman Scheme: RBI ಹೊಸ ಒಂಬುಡ್ಸ್‌ಮನ್ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು? ಇದರಲ್ಲಿ ದೂರು ಸಲ್ಲಿಸುವುದು ಹೇಗೆ?

ಎಟಿಎಂ ಫ್ರಾಂಚೈಸ್​ನಿಂದ ತಿಂಗಳಿಗೆ ಸಿಗುವ ಲಾಭವೆಷ್ಟು?

ಎಟಿಎಂ ದಿನಕ್ಕೆ 250 ವಹಿವಾಟುಗಳನ್ನು ನಡೆಸಿದರೆ, ಅಂದರೆ ಅದರಲ್ಲಿ ಶೇಕಡಾ 65 ರಷ್ಟು ನಗದು ವ್ಯವಹಾರ ಮತ್ತು ಶೇಕಡಾ 35 ರಷ್ಟು ನಗದು ರಹಿತ ವ್ಯವಹಾರ ನಡೆಸಿದರೆ, ಆಗ ತಿಂಗಳ ಆದಾಯ 45 ಸಾವಿರ ರೂಪಾಯಿಗಳ ಹತ್ತಿರ ಇರುತ್ತದೆ. ಅದೇ ವೇಳೆಗೆ ನಿತ್ಯ 500 ವಹಿವಾಟು ನಡೆದರೆ ಸುಮಾರು 88-90 ಸಾವಿರ ಹಣ ಕಮಿಷನ್ ಸಿಗಲಿದೆ.
Published by:Latha CG
First published: